ಜಾವೆಲಿನ್ ಪಟು ಶಿವಪಾಲ್ ಸಿಂಗ್ 4 ವರ್ಷ ಅಮಾನತು..!
ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದ ಶಿವಪಾಲ್ ಸಿಂಗ್ 4 ವರ್ಷ ಬ್ಯಾನ್
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶಿವಪಾಲ್ ಸಿಂಗ್
ಶಿವಪಾಲ್ ಸಿಂಗ್ 2025ರವರೆಗೂ ಜಾವೆಲಿನ್‌ನಿಂದ ಶಿವಪಾಲ್ ಸಿಂಗ್ ಬ್ಯಾನ್
ನವದೆಹಲಿ(ಅ.03): ಭಾರತದ ತಾರಾ ಜಾವೆಲಿನ್ ಥ್ರೋ ಪಟು ಶಿವಪಾಲ್ ಸಿಂಗ್ ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, 4 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದಾರೆ. ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅವರ ಸ್ಯಾಂಪಲ್ ಅನ್ನು ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಪರೀಕ್ಷೆಗೊಳಪಡಿಸಿತ್ತು.ನಿಷೇಧಿತ ಮದ್ದು ಸೇವಿಸಿದ್ದು ದೃಢಪಟ್ಟ ಕಾರಣ ಅವರ ಮೇಲೆ ಅಕ್ಟೋಬರ್ 21ರಂದೇ ತಾತ್ಕಾಲಿಕ ನಿಷೇಧ ಹೇರಲಾಗಿತ್ತು.
ಶಿವಪಾಲ್ ಸಿಂಗ್ ಅವರ ನಿಷೇಧ ಶಿಕ್ಷೆಯು ಅಕ್ಟೋಬರ್ 21, 2021ರಿಂದಲೇ ಜಾರಿಗೆ ಬಂದಿದ್ದು, 2025ರ ಅಕ್ಟೋಬರ್‌ವರೆಗೂ ಅವರು ಯಾವುದೇ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಪಾಲ್ ಸಿಂಗ್ 76.40 ಮೀಟರ್ ದೂರ ಜಾವೆಲಿನ್ ಎಸೆದು 27ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಉತ್ತರ ಪ್ರದೇಶ ಮೂಲದ ಶಿವಪಾಲ್ ಸಿಂಗ್, 2019ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆ ಟೂರ್ನಿಯಲ್ಲಿ ಶಿವಪಾಲ್ ಸಿಂಗ್ 86.23 ಮೀಟರ್ ದೂರ ಎಸೆದು ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ತೋರಿದ್ದರು.
ವಿಶ್ವ ಟಿಟಿ: ಭಾರತ ಪುರುಷ, ಮಹಿಳಾ ತಂಡಗಳಿಗೆ ಜಯ
ಚೆಂಗ್‌ಡು(ಚೀನಾ): ಭಾರತದ ತಾರಾ ಟಿಟಿ ಪಟು ಜಿ.ಸತ್ಯನ್ 2 ಪಂದ್ಯಗಳಲ್ಲಿ ಗೆಲ್ಲುವುದರ ಮೂಲಕ ಭಾರತ ಪುರುಷರ ತಂಡ ಐಟಿಟಿಎಫ್ ವಿಶ್ವ ತಂಡ ಚಾಂಪಿಯನ್‌ಶಿಪ್‌ನಲ್ಲಿ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ಗುಂಪು ಹಂತದ ಜರ್ಮನಿ ವಿರುದ್ಧ ಪಂದ್ಯದಲ್ಲಿ ಭಾರತ 3-1 ಗೆಲುವು ಸಾಧಿಸಿತು. ವಿಶ್ವ ನಂ.37 ಸತ್ಯನ್ 9ನೇ ಶ್ರೇಯಾಂಕಿತ ಡಾಂಗ್ ಕ್ಯೂ ಹಾಗೂ ಡುಡಾ ಬೆನೆಡಿಕ್ಟ್ ವಿರುದ್ಧ ಗೆದ್ದರು. ಮತ್ತೊಂದು ಪಂದ್ಯದಲ್ಲಿ ಹರ್ಮೀತ್ ದೇಸಾಯಿ ಜಯಗಳಿಸಿದರು. ಭಾರತ ಮುಂದಿನ ಪಂದ್ಯದಲ್ಲಿ ಸೋಮವಾರ ಕಜಕಸ್ತಾನ ವಿರುದ್ಧ ಆಡಲಿದೆ. ಇನ್ನು, ಮಹಿಳಾ ವಿಭಾಗದಲ್ಲಿ ಭಾರತ, ಚೆಕ್ ಗಣರಾಜ್ಯದ ವಿರುದ್ಧ 3-0 ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋತಿದ್ದ ಭಾರತ ಮುಂದಿನ ಪಂದ್ಯದಲ್ಲಿ ಈಜಿಫ್‌್ಟವಿರುದ್ಧ ಸೆಣಸಲಿದೆ.
ಕಿರಿಯರ ಬಾಸ್ಕೆಟ್‌ಬಾಲ್: ಭಾರತ್, ವಿಬಿಸಿಗೆ ಜಯ
ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ(ಕೆಎಸ್‌ಬಿಬಿಎ) ಆಯೋಜಿಸುತ್ತಿರುವ ರಾಜ್ಯ ಮಟ್ಟದ ಕಿರಿಯರ (ಅಂಡರ್-18) ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ 2ನೇ ದಿನ ಬಾಲಕರ ವಿಭಾಗದಲ್ಲಿ ಸಾಯ್ ಧಾರವಾಡ ತಂಡ ಮರ್ಚಂಟ್ಸ್ ಬಿಸಿ ದಾವಣಗೆರೆ ತಂಡದ ವಿರುದ್ಧ ಗೆಲುವು ಸಾಧಿಸಿತು. ವೈಎಂಎಂಎ ತಂಡ ಸೌಥರ್ನ್ ಬ್ಲೂಸ್ ವಿರುದ್ಧ, ಪಿಪಿಸಿ ತಂಡ ಯಂಗ್ ಓರಿಯನ್ಸ್ ವಿರುದ್ಧ ಜಯಗಳಿಸಿತು. ರಾಜ್‌ಮಹಲ್, ಭಾರತ್ ಎಸ್‌ಸಿ, ರೋವರ್ಸ್ ಬಿಸಿ, ವಿಬಿಸಿ ಮಂಡ್ಯ, ವಿಜಯನಗರ ಎಸ್‌ಸಿ ಮೈಸೂರು, ಐಬಿಬಿಸಿ ತಂಡಗಳು ಜಯ ದಾಖಲಿಸಿತು. ಬಾಲಕಿಯರ ವಿಭಾಗದಲ್ಲಿ ಮೌಂಟ್ಸ್ ಕ್ಲಬ್ ಹಾಗೂ ಡಿವೈಇಎಸ್ ವಿಜಯಪುರ ತಂಡಗಳು ಗೆಲುವು ಸಾಧಿಸಿತು.
ಕ್ರೀಡೆಗೆ ಒತ್ತು ನೀಡುವುದೇ ನಮ್ಮ ಮುಖ್ಯ ಧ್ಯೇಯ : ಶಾಸಕ ಕೃಷ್ಣ ಭೈರೇಗೌಡ
ವನಿತಾ ಏಷ್ಯಾಕಪ್: ಇಂದು ಭಾರತ-ಮಲೇಷ್ಯಾ ಫೈಟ್
ಸೈಲೆಟ್(ಬಾಂಗ್ಲಾದೇಶ): 2022ರ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ 6 ಬಾರಿ ಚಾಂಪಿಯನ್ ಭಾರತ, ಸೋಮವಾರ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 41 ರನ್ ಗೆಲುವು ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ಅಷ್ಟೇನೂ ಬಲಿಷ್ಠವಲ್ಲದ ಮಲೇಷ್ಯಾ ವಿರುದ್ಧ ಸುಲಭ ಜಯದ ಗುರಿಯಲ್ಲಿದೆ. ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 9 ವಿಕೆಟ್‌ಗಳಿಂದ ಪರಾಭವಗೊಂಡಿದ್ದ ಮಲೇಷ್ಯಾ ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.
ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ