ನವದೆಹಲಿ(ಫೆ.20): ಬಲ್ಗೇರಿಯಾದ ಸೋಫಿಯಾದಲ್ಲಿ ಮಂಗಳವಾರ ಮುಕ್ತಾಯವಾದ ಸ್ಟ್ರ್ಯಾಂಡ್ಜಾ ಸ್ಮರಣಾರ್ಥ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತದ ನಿಖತ್‌ ಜರೀನ್‌, ಮೀನಾ ಕುಮಾರಿ ಹಾಗೂ ಅಮಿತ್‌ ಪಂಗಲ್‌ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಭಾರತ 3 ಚಿನ್ನ, 1 ಬೆಳ್ಳಿ, 3 ಕಂಚಿನೊಂದಿಗೆ 7 ಪದಕ ಗೆದ್ದಿತು. 

ಇದನ್ನೂ ಓದಿ: ಮೇರಿ ಕೋಮ್’ಗೆ ಒಲಿದ ಗೌರವ ಡಾಕ್ಟರೇಟ್

2018ರ ಆವೃತ್ತಿಯಲ್ಲಿ ಭಾರತ 2 ಚಿನ್ನದೊಂದಿಗೆ 11 ಪದಕ ಜಯಿಸಿತ್ತು. 51 ಕೆ.ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಮಾಜಿ ಕಿರಿಯರ ವಿಶ್ವ ಚಾಂಪಿಯನ್‌ ನಿಖತ್‌, ಫಿಲಿಪೈನ್ಸ್‌ನ ಐರಿಶ್‌ ಮಾಗ್ನೋ ವಿರುದ್ಧ 5-0 ಬೌಟ್‌ಗಳಲ್ಲಿ ಜಯ ಸಾಧಿಸಿದರು. 54 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಮೀನಾ ಕುಮಾರಿ, ಫಿಲಿಪೈನ್ಸ್‌ನ ಐರಾ ವಿಲೇಜಸ್‌ ಎದುರು 3-2 ಬೌಟ್‌ಗಳಲ್ಲಿ ಗೆಲುವು ಪಡೆದರು. 

ಇದನ್ನೂ ಓದಿ: 140 ಸೆಕೆಂಡ್‌ನಲ್ಲಿ 63 ಕೋಟಿ ಗೆದ್ದ ಫ್ಲಾಯ್ಡ್ ಮೇವೆದರ್

ಏಷ್ಯನ್‌ ಚಿನ್ನ ವಿಜೇತ ಅಮಿತ್‌ ಪಂಗಲ್‌, ಕಜಕಸ್ತಾನದ ಟೆಮಿರ್ಟಾಸ್‌ ಜೊಸ್ಸುಪೊವ್‌ ವಿರುದ್ಧ 5-0 ಬೌಟ್‌ಗಳಲ್ಲಿ ಗೆದ್ದರು. ಉಳಿದಂತೆ ಮಂಜು ರಾಣಿ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರೆ, ಬಸುಮಟ್ರಿ, ನೀರಜ್‌ ಹಾಗೂ ಲೊವ್ಲಿನಾ ಕಂಚು ಗೆದ್ದರು.