11ನೇ ಪ್ರೊ ಕಬಡ್ಡಿ ಲೀಗ್: ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್‌ಗೆ ಗೆಲುವು
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹರ್ಯಾಣ ಸ್ಟೀಲರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಭರ್ಜರಿ ಗೆಲುವು ಸಾಧಿಸಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನೋಯ್ಡಾ: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಸೋಮವಾರ ಹರ್ಯಾಣ ಸ್ಟೀಲರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಗೆಲುವು ಸಾಧಿಸಿವೆ. ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಪಾಟ್ನಾ 40-27 ಅಂಕಗಳಿಂದ ಜಯಗಳಿಸಿತು. ಮೊದಲಾರ್ಧದಲ್ಲೇ 21-16ರಿಂದ ಮುಂದಿದ್ದ ಪಾಟ್ನಾ, ಕೊನೆವರೆಗೂ ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿ ಗೆಲುವು ತನ್ನದಾಗಿಸಿಕೊಂಡಿತು. ಪಾಟ್ನಾದ ಅಯಾನ್ 10 ಅಂಕ ಗಳಿಸಿದರು. ಪಾಟ್ನಾ 8 ಪಂದ್ಯಗಳಲ್ಲಿ 5ನೇ ಜಯ ದಾಖಲಿಸಿದರೆ, ಗುಜರಾತ್ 8ರಲ್ಲಿ 7ನೇ ಸೋಲನುಭವಿಸಿತು.
ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಹರ್ಯಾಣ 48-39 ಅಂಕಗಳಿಂದ ಜಯಗಳಿಸಿತು. ಮುಂಬಾದ ಅಜಿತ್ ಚೌಹಾಣ್(18 ಅಂಕ) ಹೋರಾಟ ವ್ಯರ್ಥವಾಯಿತು. ಹರ್ಯಾಣದ ವಿಶಾಲ್ 11, ಶಿವಂ 11, ಮೊಹಮದ್‌ರಜಾ ಶಾದ್ಲೂ 10 ಅಂಕ ಗಳಿಸಿದರು.
ಶಾರುಖ್ ಖಾನ್ ಯಾರಂದೇ ಪ್ಯಾಟ್ ಕಮಿನ್ಸ್‌ಗೆ ಗೊತ್ತಿರಲಿಲ್ಲವಂತೆ!
ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್-ಜೈಪುರ, ರಾತ್ರಿ 8ಕ್ಕೆ
ದಬಾಂಗ್ ಡೆಲ್ಲಿ-ಪುಣೇರಿ ಪಲ್ಟನ್, ರಾತ್ರಿ 9ಕ್ಕೆ
ಮೈಸೂರಲ್ಲಿ 38ನೇ ಅಂಚೆ ಇಲಾಖೆ ಬ್ಯಾಡಿಂಟನ್: ಡೆಲ್ಲಿ ತಂಡ ಚಾಂಪಿಯನ್
ಮೈಸೂರು: ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತ ಅಂಚೆ ಬ್ಯಾಡಿಂಟನ್ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಸೋಮವಾರ ನಡೆದ ಫೈನಲ್‌ನಲ್ಲಿ ಡೆಲ್ಲಿ ತಂಡದ ತೀನು ದಹಿಯಾ ಮತ್ತು ಮಯೂರಿ ಯಾದವ್ ಕೇರಳ ಜೋಡಿ ವಿರುದ್ಧ ಜಯಗಳಿಸಿತು. ಪುರುಷರ ವಿಭಾಗದಲ್ಲಿ ಕೇರಳ ಮತ್ತು ತಮಿಳುನಾಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಏಷ್ಯನ್ ಮಹಿಳಾ ಹಾಕಿ: ಭಾರತಕ್ಕೆ 4-0 ಗೆಲುವು
ರಾಜ್‌ಗಿರ್ (ಬಿಹಾರ): 8ನೇ ಆವೃತ್ತಿಯ ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಯಲ್ಲಿ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಸೋಮವಾರ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ದ ಭಾರತ ತಂಡ 4-0 ಗೆಲುವು ಸಾಧಿಸಿತು. 2 ಬಾರಿ ಚಾಂಪಿಯನ್ ಭಾರತದ ಪರ ಸಂಗೀತಾ 8 ಮತ್ತು 55ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪ್ರೀತಿ ದುಬೆ 43ನೇ ನಿಮಿಷ ಹಾಗೂ ಉದಿತಾ 44ನೇ ನಿಮಿಷದಲ್ಲಿ ಗೋಲು ದಾಖಲಿಸಿ ಭಾರತದ ಗೆಲುವಿನ ರೂವಾರಿಗಳಾದರು.
ಲಿಂಗ ಪರಿವರ್ತಿಸಿಕೊಂಡ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಮಗ: ಈಗ ಆರ್ಯನ್ ಅವನಲ್ಲ ಅವಳು!
ಭಾರತ ಮುಂದಿನ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಕೊರಿಯಾ ವಿರುದ್ಧ ಸೆಣಸಾಡಲಿದೆ. ಸೋಮವಾರದ ಮತ್ತೆರಡು ಪಂದ್ಯ ನಡೆದವು. ಜಪಾನ್-ಕೊರಿಯಾ ಪಂದ್ಯ 2-2 ಡ್ರಾಗೊಂಡರೆ, ಚೀನಾ ತಂಡ ಥಾಯ್ಲೆಂಡ್ ವಿರುದ್ಧ 15-0 ಗೆಲುವು ಸಾಧಿಸಿತು.