ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ, ಜೋಕೋ, ಮೆಡ್ವೆಡೆವ್ 2ನೇ ಸುತ್ತಿಗೆ
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಜೋಕೋವಿಚ್, ಜಪಾನ್‌ನ ಯೊಶಿಹಿತೋ ನಿಶಿಯೊಕಾ ವಿರುದ್ಧ 6-3, 6-1, 6-0 ಅಂತರದಲ್ಲಿ ಗೆಲುವು ಸಾಧಿಸಿದರು. ರಷ್ಯಾದ ಮೆಡ್ವೆಡೆವ್ ಅರ್ಜೆಂಟೀನಾದ ಫಾಕುಂಡೊ ಬಾಗ್ನಿಸ್‌ರನ್ನು 6-2, 6-2, 6-2 ಸೆಟ್‌ಗಳಿಂದ ಸೋಲಿಸಿದರು.
ಪ್ಯಾರಿಸ್ (ಮೇ. 25): ಹಾಲಿ ಚಾಂಪಿಯನ್, ವಿಶ್ವ ನಂ.1 ನೋವಾಕ್ ಜೋಕೋವಿಚ್ (novak djokovic) ಹಾಗೂ ವಿಶ್ವ ನಂ.2 ಡ್ಯಾನಿಲ್ ಮೆಡ್ವೆಡೆವ್ (daniil medvedev) ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ (French Open Grand slam Tennis) ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಜೋಕೋವಿಚ್, ಜಪಾನ್‌ನ ಯೊಶಿಹಿತೋ ನಿಶಿಯೊಕಾ ವಿರುದ್ಧ 6-3, 6-1, 6-0 ಅಂತರದಲ್ಲಿ ಗೆಲುವು ಸಾಧಿಸಿದರು. ರಷ್ಯಾದ ಮೆಡ್ವೆಡೆವ್ ಅರ್ಜೆಂಟೀನಾದ ಫಾಕುಂಡೊ ಬಾಗ್ನಿಸ್‌ರನ್ನು 6-2, 6-2, 6-2 ಸೆಟ್‌ಗಳಿಂದ ಸೋಲಿಸಿದರು. ವಿಶ್ವ ನಂ.7, ರಷ್ಯಾದ ಆ್ಯಂಡ್ರೆ ರುಬ್ಲೆವ್, ದ.ಕೊರಿಯಾದ ಕ್ವೊನ್ ಸೂನ್ ವಿರುದ್ಧ ಗೆದ್ದು 2ನೇ ಸ್ತುತಿಗೆ ಲಗ್ಗೆ ಇಟ್ಟರು. ಆದರೆ ಕೆನಡಾದ ಡೆನಿಸ್ ಶಪೋವಲೋವ್, ಫ್ರಾನ್ಸ್‌ನ ಜೋ ವಿಲ್ಫರ್ಡ್ ಸೊಂಗ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಡೇನಿಯಲ್ ಕಾಲಿನ್ಸ್, ಕ್ಯಾರೊಲೀನಾ ಪ್ಲಿಸ್ಕೋವಾ 2ನೇ ಸುತ್ತಿಗೇರಿದರು.
ಬೋಪಣ್ಣ ಜೋಡಿ 2ನೇ ಸುತ್ತಿಗೆ: ಟೂರ್ನಿಯಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ನೆದರ್‌ಲೆಂಡ್‌್ಸನ ಮಿಡ್ಡೆಲ್ಕೊಪ್ ಜೋಡಿ ಶುಭಾರಂಭ ಮಾಡಿದೆ. ಮಂಗಳವಾರ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಈ ಜೋಡಿ ಫ್ರಾನ್ಸ್‌ನ ವೇಯೆನ್‌ಬಗ್‌ರ್-ಲುಕಾ ವ್ಯಾನ್ ಜೋಡಿ ವಿರುದ್ಧ 6-4, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.
ಟೆನಿಸ್‌ಗೆ ಫ್ರಾನ್ಸ್‌ನ ಸೊಂಗಾ ಗುಡ್‌ಬೈ!
ಪ್ಯಾರಿಸ್: ಫ್ರಾನ್ಸ್‌ನ ಜೋ ವಿಲ್ಫರ್ಡ್ ಸೊಂಗಾ ತಮ್ಮ 18 ವರ್ಷಗಳ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲಿ ಸೋತ ಬಳಿಕ 37 ವರ್ಷದ ಸೊಂಗಾ ಕಣ್ಣೀರಿಡುತ್ತ ಅಂಕಣದಿಂದ ಹೊರನಡೆದರು. 2004ರಲ್ಲಿ ವೃತ್ತಿಪರ ಟೆನಿಸಿಗರಾಗಿದ್ದ ಸೊಂಗ, 18 ಎಟಿಪಿ ಪ್ರಶಸ್ತಿಗಳನ್ನು ಗೆದ್ದಿದ್ದು, 2012ರ ಲಂಡನ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಎಲ್ಲಾ ನಾಲ್ಕೂ ಗ್ರ್ಯಾನ್ ಸ್ಲಾಂಗಳಲ್ಲಿ ಕನಿಷ್ಠ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹಿರಿಮೆ ಸೊಂಗಾ ಅವರದ್ದು. ವಿಶ್ವ ರಾರಯಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದಿದ್ದು ಅವರ ಶ್ರೇಷ್ಠ ಸಾಧನೆ.
French Open: ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೇಜಿಕೋವಾ ಔಟ್..!
ಅಥ್ಲೆಟಿಕ್ಸ್: ವಿಜಯಕುಮಾರಿಗೆ 2ನೇ, ಮನುಗೆ 3ನೇ ಸ್ಥಾನ
ಭುವನೇಶ್ವರ: ಇಂಡಿಯನ್ ಗ್ರ್ಯಾನ್ ಪ್ರಿ-4 ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕದ ವಿಜಯ ಕುಮಾರಿ ಮತ್ತು ಮನು ಡಿ.ಪಿ. ಉತ್ತಮ ಪ್ರದರ್ಶನ ತೋರಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 400 ಮೀ. ಓಟದಲ್ಲಿ ವಿಜಯಕುಮಾರಿ 54.67 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು. ಪುರುಷರ ಜಾವೆಲಿನ್ ಥ್ರೋನಲ್ಲಿ ಮನು 77.66 ಮೀ. ದೂರಕ್ಕೆ ಎಸೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಜುಲೈನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿರುವ ಮನು ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಅವರು 80 ಮೀ. ದಾಟದೆ ನಿರಾಸೆ ಮೂಡಿಸಿದರು. ಕೂಟದಲ್ಲಿ ಕರ್ನಾಟಕದ ಒಟ್ಟು 8 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಪೂರಕ ಆಕ್ಸಿಜನ್ ಇಲ್ಲದೆ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ ಪಿಯಾಲಿ ಬಾಸಕ್!
2ನೇ ಟೆಸ್ಟ್: ಬಾಂಗ್ಲಾಕ್ಕೆ ಶ್ರೀಲಂಕಾ ತಿರುಗೇಟು
ಮೀರ್‌ಪುರ್: ಒಶಾಡ ಫೆರ್ನಾಂಡೋ(57) ಹಾಗೂ ಕರುಣಾರತ್ನೆ(ಔಟಾಗದೆ 70) ಆಕರ್ಷಕ ಅರ್ಧಶತಕಗಳ ನೆರವಿನಿಂದ 2ನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಸಿ ಶ್ರೀಲಂಕಾ ತಿರುಗೇಟು ನೀಡಿದೆ. 2ನೇ ದಿನದಂತ್ಯಕ್ಕೆ ಲಂಕಾ 2 ವಿಕೆಟ್‌ಗೆ 143 ರನ್ ಗಳಿಸಿದ್ದು, ಇನ್ನೂ 222 ರನ್ ಹಿನ್ನಡೆಯಲ್ಲಿದೆ. ಇದಕ್ಕೂ ಮೊದಲು ಮೊದಲ ದಿನ 5 ವಿಕೆಟ್‌ಗೆ 277 ರನ್ ಗಳಿಸಿದ್ದ ಬಾಂಗ್ಲಾ ಮಂಗಳವಾರ 365 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಲಿಟನ್ ದಾಸ್ 141 ರನ್ ಸಿಡಿಸಿದರೆ, 175 ರನ್ ಬಾರಿಸಿದ ಮುಷ್ಫಿಕುರ್ ರಹೀಂ ಔಟಾಗದೆ ಉಳಿದರು. ತಂಡದ 6 ಮಂದಿ ಶೂನ್ಯಕ್ಕೆ ಔಟಾಗಿದ್ದು ಗಮನಾರ್ಹ.