ಭಾರತೀಯ ಬಾಸ್ಕೆಟ್‌ಬಾಲ್ ಪ್ರಗತಿಗೆ ಮತ್ತಷ್ಟು ಪ್ರಯತ್ನ: ಡಾ.ಕೆ.ಗೋವಿಂದರಾಜು
ಭಾರತೀಯ ಬಾಸ್ಕೆಟ್‌ಬಾಲ್ ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತೇನೆ
ಏಷ್ಯಾ ಬಾಸ್ಕೆಟ್‌ಬಾಲ್ ಮುಖ್ಯಸ್ಥ ಸ್ಥಾನಕ್ಕೆ ಅವಿರೋಧವಾಗಿ ನಾಮನಿರ್ದೇಶನಗೊಂಡ ಡಾ.ಕೆ.ಗೋವಿಂದರಾಜು
ಈ ಹುದ್ದೆಗೇರಿದ ಮೊದಲ ಭಾರತೀಯ, ಕನ್ನಡಿಗ ಎಂಬ ಹೆಮ್ಮೆ ಇದೆ
ಬೆಂಗಳೂರು(ಫೆ.17): ಏಷ್ಯಾ ಬಾಸ್ಕೆಟ್ಬಾಲ್ಗೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಭಾರತೀಯ ಬಾಸ್ಕೆಟ್‌ಬಾಲ್ ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸಲು ಮತ್ತಷ್ಟುಪ್ರಯತ್ನಿಸುತ್ತೇನೆ ಎಂದು ಏಷ್ಯಾ ಬಾಸ್ಕೆಟ್‌ಬಾಲ್ ಮುಖ್ಯಸ್ಥ ಸ್ಥಾನಕ್ಕೆ ಅವಿರೋಧವಾಗಿ ನಾಮನಿರ್ದೇಶನಗೊಂಡ ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಡಾ.ಕೆ.ಗೋವಿಂದರಾಜು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ವಾರಗಳಲ್ಲೇ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ನೇಮಕಗೊಳ್ಳಲಿದ್ದೇನೆ. ಇದು ಬಯಸದೆ ಬಂದ ಭಾಗ್ಯ. ಈ ಹುದ್ದೆಗೇರಿದ ಮೊದಲ ಭಾರತೀಯ, ಕನ್ನಡಿಗ ಎಂಬ ಹೆಮ್ಮೆ ಇದೆ ಎಂದರು. ಅಲ್ಲದೇ, ಶೀಘ್ರದಲ್ಲೇ ಐಪಿಎಲ್ ರೀತಿ ಬಾಸ್ಕೆಟ್ಬಾಲ್ನ ವೃತ್ತಿಪರ ಲೀಗ್ ಘೋಷಣೆ ಮಾಡುತ್ತೇವೆ. ಕ್ರಿಕೆಟ್ನಂತೆ ಬಾಸ್ಕೆಟ್‌ಬಾಲ್ ಕೂಡಾ ಜನಮನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜ.24, 27ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಫಿಬಾ ವಿಶ್ವಕಪ್ಗೆ ಅರ್ಹತಾ ಪಂದ್ಯಗಳು ನಡೆಯಲಿವೆ. ಭಾರತ ಕ್ರಮವಾಗಿ ಜೊರ್ಡನ್, ಸೌದಿ ಅರೇಬಿಯಾ ವಿರುದ್ಧ ಸೆಣಸಾಡಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ ಆಗಿರುವ ಗೋವಿಂದರಾಜು ಅವರು ಈ ಹುದ್ದೆಗೇರಿದ ಭಾರತದ ಮೊದಲಿಗ ಎನಿಸಿಕೊಂಡಿದ್ದಾರೆ. 44 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಏಷ್ಯಾ ಸಂಸ್ಥೆಯಲ್ಲಿ ಸದ್ಯ ಕತಾರ್ನ ಶೇಖ್ ಸಾದ್ ಬಿನ್ ಅಲಿ ಅಲ್-ಥಾನಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2019ರಲ್ಲಿ ಈ ಹುದ್ದೆಗೇರಿದ್ದರು.
ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ತಂಡ
ದುಬೈ: ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ 'ಬಿ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಗುರುವಾರ ಗುಂಪುಹಂತದ ಕೊನೆಯ ಪಂದ್ಯದಲ್ಲಿ ಭಾರತ, ಬಲಿಷ್ಠ ಮಲೇಷ್ಯಾ ಎದುರು 4-1 ರಿಂದ ಮಣಿಸಿತು. ಸಿಂಗಲ್ಸ್‌ನಲ್ಲಿ ಪಿವಿ ಸಿಂಧು, ಎಚ್ ಎಸ್ ಪ್ರಣಯ್ , ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ, ಮಿಶ್ರ ಡಬಲ್ಸ್‌ನಲ್ಲಿ ಇಶಾನ್-ತನಿಶಾ ಜಯ ಗಳಿಸಿದರು.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪ್ರಿಯಾಂಕಾ, ಅಕ್ಷ್‌ದೀಪ್
ರಾಂಚಿ: ತಾರಾ ಅಥ್ಲೀಟ್ಗಳಾದ ಪಂಜಾಬ್‌ನ ಅಕ್‌್ಷದೀಪ್ ಸಿಂಗ್ ಹಾಗೂ ಉತ್ತರ ಪ್ರದೇಶದ ಪ್ರಿಯಾಂಕಾ ಗೋಸ್ವಾಮಿ 20 ಕಿ.ಮೀ. ವೇಗ ನಡಿಗೆಯಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಹಾಗೂ ಆಗಸ್ಟ್ನಲ್ಲಿ ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 2024ರ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ಗೆ ಅರ್ಹತೆ ಪಡೆದ ಮೊದಲಿಬ್ಬರು ಎನಿಸಿದ್ದಾರೆ.
2023ರ ಸ್ಯಾಫ್ ಫುಟ್ಬಾಲ್ ಟೂರ್ನಿಗೆ ಭಾರತ ಆತಿಥ್ಯ
ರಾಷ್ಟ್ರೀಯ ಮುಕ್ತ ವೇಗ ನಡಿಗೆ ಚಾಂಪಿಯನ್ಶಿಪ್ನಲ್ಲಿ ಇವರಿಬ್ಬರೂ ಚಿನ್ನದ ಪದಕ ಗೆದ್ದರು. ಪುರುಷರ ವಿಭಾಗದ 20 ಕಿ.ಮೀ. ಸ್ಪರ್ಧೆಯಲ್ಲಿ ಅಕ್ಷ್‌ದೀಪ್ 1 ಗಂಟೆ 19.55 ನಿಮಿಷಗಳಲ್ಲಿ ಗುರಿ ತಲುಪಿದರೆ, ಮಹಿಳಾ ವಿಭಾಗದಲ್ಲಿ ಪ್ರಿಯಾಂಕಾ 1 ಗಂಟೆ 28.50 ನಿಮಿಷಗಳಲ್ಲಿ ಕ್ರಮಿಸಿ ಬಂಗಾರಕ್ಕೆ ಮುತ್ತಿಟ್ಟರು. ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ಪುರುಷರ ವಿಭಾಗದಲ್ಲಿ 1 ಗಂಟೆ 20.10 ನಿಮಿಷ, ಮಹಿಳಾ ವಿಭಾಗದಲ್ಲಿ 1 ಗಂಟೆ 29.20 ನಿಮಿಷ ಸಮಯ ನಿಗದಿ ಮಾಡಲಾಗಿದೆ.