ಎಫ್‌ಐಎಚ್‌ ಕಿರಿಯ ಮಹಿಳಾ ಹಾಕಿ ವಿಶ್ವಕಪ್‌ಗೆ ಇಂದು ಚಾಲನೆ

* ಎಫ್‌ಐಎಚ್‌ ಕಿರಿಯ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿಗೆ ಇಂದು ಚಾಲನೆ

*  ಪ್ರಶಸ್ತಿ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿರುವ ಭಾರತ ಮಹಿಳಾ ಹಾಕಿ ತಂಡ 

* ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತಕ್ಕೆ ವೇಲ್ಸ್‌ ಮೊದಲ ಎದುರಾಳಿ

FIH Womens Junior World Cup India eyes best ever finish kvn

ಕೇಪ್‌ಟೌನ್‌(ಏ.01): ಎಫ್‌ಐಎಚ್‌ ಕಿರಿಯ ಮಹಿಳಾ ಹಾಕಿ ವಿಶ್ವಕಪ್‌ (FIH Womens Junior World Cup) ಶುಕ್ರವಾರ ದ.ಆಫ್ರಿಕಾದಲ್ಲಿ ಆರಂಭವಾಗಲಿದ್ದು, ಪ್ರಶಸ್ತಿ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿರುವ ಭಾರತ ತಂಡ ಶನಿವಾರ ವೇಲ್ಸ್‌ ವಿರುದ್ಧ ಅಭಿಯಾನ ಆರಂಭಿಸಲಿದೆ. ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಬಳಿಕ ಬಲಿಷ್ಠ ಜರ್ಮನಿ ವಿರುದ್ಧ ಏಪ್ರಿಲ್‌ 3ಕ್ಕೆ ಹಾಗೂ ಕೊನೆ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಏಪ್ರಿಲ್‌ 5ಕ್ಕೆ ಸೆಣಸಾಡಲಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) 4ನೇ ಸ್ಥಾನ ಪಡೆದಿದ್ದ ಭಾರತ ಹಿರಿಯ ತಂಡದಲ್ಲಿದ್ದ ಸಲೀಮಾ ಟೇಟೆ ಈ ಬಾರಿ ಕಿರಿಯರ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಜೊತೆ ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವವಿರುವ ಮಿಡ್‌ ಫೀಲ್ಡರ್‌ ಶರ್ಮಿಲಾ ದೇವಿ ಹಾಗೂ ಸ್ಟ್ರೈಕರ್‌ ಲಾಲ್ರೆಮ್ಸಾಯಾಮಿ, ಇತ್ತೀಚೆಗಷ್ಟೇ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಇಶಿಕಾ ಚೌಧರಿ, ಬಿಚು ದೇವಿ, ಅಕ್ಷತಾ ಅಬಾಸೊ, ಸಂಗೀತಾ ಕುಮಾರಿ ಕೂಡಾ ತಂಡದಲ್ಲಿದ್ದಾರೆ. ಭಾರತ ಈವರೆಗೆ 4 ಬಾರಿ ಕಿರಿಯ ಮಹಿಳೆಯರ ವಿಶ್ವಕಪ್‌ನಲ್ಲಿ ಆಡಿದ್ದು, 2013ರಲ್ಲಿ ಕಂಚಿನ ಪದಕ ಗೆದ್ದಿದ್ದು ತಂಡದ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಆದರೆ 2016ರ ಆವೃತ್ತಿಗೆ ಅರ್ಹತೆ ಪಡೆದುಕೊಳ್ಳಲು ವಿಫಲವಾಗಿತ್ತು.

ಇಂದು ಫಿಫಾ ಫುಟ್ಬಾಲ್‌ ವಿಶ್ವಕಪ್‌ ಡ್ರಾ ಸಮಾರಂಭ

ದೋಹಾ: ವರ್ಷಾಂತ್ಯದಲ್ಲಿ ಕತಾರ್‌ನಲ್ಲಿ ನಿಗದಿಯಾಗಿರುವ ಫಿಫಾ ಪುರುಷರ ವಿಶ್ವಕಪ್‌ ಡ್ರಾ ಸಮಾರಂಭ ಶುಕ್ರವಾರ ದೋಹಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ದಾಖಲೆಯ 5 ಬಾರಿ ಚಾಂಪಿಯನ್‌ ಬ್ರೆಜಿಲ್‌, ಹಾಲಿ ಚಾಂಪಿಯನ್‌ ಫ್ರಾನ್ಸ್‌, ಆತಿಥ್ಯ ದೇಶ ಕತಾರ್‌ ಸೇರಿದಂತೆ 32 ತಂಡಗಳು ಪಾಲ್ಗೊಳ್ಳಲಿದ್ದು, ಈಗಾಗಲೇ 29 ತಂಡಗಳು ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಉಳಿದ 3 ತಂಡಗಳು ಯಾವುದೆಂದು ಜೂನ್‌ನಲ್ಲಿ ನಿರ್ಧಾರವಾಗಲಿದೆ. ಟೂರ್ನಿಯನ್ನು ತಲಾ 4 ತಂಡಗಳ 8 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನ ಅಗ್ರ 2 ತಂಡಗಳು ಅಂತಿಮ 16ರ ಘಟ್ಟಪ್ರವೇಶಿಸಲಿದೆ. ಶುಕ್ರವಾರ ಇದರ ಡ್ರಾ ನಡೆಯಲಿದ್ದು, ಯಾವ ತಂಡ ಯಾವ ಗುಂಪಿನಲ್ಲಿ ಸ್ಥಾನ ಪಡೆಯಲಿದೆ ಎಂಬುದು ಗೊತ್ತಾಗಲಿದೆ.

ಫುಟ್ಬಾಲ್‌ ವಿಶ್ವ ರ‍್ಯಾಂಕಿಂಗ್‌: 2 ಸ್ಥಾನ ಕುಸಿದ ಭಾರತ!

ಝ್ಯೂರಿಚ್‌: ಫಿಫಾ ಫುಟ್ಬಾಲ್‌ (FIFA World Cup) ವಿಶ್ವ ರ‍್ಯಾಂಕಿಂಗ್‌ನ ನೂತನ ಪಟ್ಟಿ ಪ್ರಕಟಗೊಂಡಿದ್ದು ಭಾರತ ತಂಡ 2 ಸ್ಥಾನಗಳ ಕುಸಿತ ಕಂಡಿದೆ. ಸದ್ಯ ಭಾರತ 106ನೇ ಸ್ಥಾನದಲ್ಲಿದೆ. 2021ರ ಸ್ಯಾಫ್‌ ಕಪ್‌ ಟೂರ್ನಿ ಬಳಿಕ ಭಾರತ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದೆ ಇದ್ದರೂ, ಕಳೆದ 3 ಬಾರಿ ರಾರ‍ಯಂಕಿಂಗ್‌ ಪಟ್ಟಿ ಪರಿಷ್ಕೃತಗೊಂಡಾಗಲೂ 104ನೇ ಸ್ಥಾನದಲ್ಲೇ ಉಳಿದಿತ್ತು. ಇನ್ನು 2017ರ ಜೂನ್‌ ಬಳಿಕ ಇದೇ ಮೊದಲ ಬಾರಿಗೆ ಬ್ರೆಜಿಲ್‌ ವಿಶ್ವ ನಂ.1 ಸ್ಥಾನಕ್ಕೇರಿದೆ. ಬೆಲ್ಜಿಯಂ ತಂಡವನ್ನು ಬ್ರೆಜಿಲ್‌ ಹಿಂದಿಕ್ಕಿದೆ. ಫ್ರಾನ್ಸ್‌, ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿವೆ.

ಏ.16ರಿಂದ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿ ಆರಂಭ

ನವದೆಹಲಿ: 75ನೇ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಏಪ್ರಿಲ್ 16ರಿಂದ ಆರಂಭವಾಗಲಿದ್ದು, ಕೇರಳದ ಮಲಪ್ಪುರಂನ ಎರಡು ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಪಶ್ಚಿಮ ಬೆಂಗಾಲ್‌ ಹಾಗೂ ಪಂಜಾಬ್‌ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ಮೇ 2ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿದೆ. 

FIH Pro League‌: ಭಾರತ, ಇಂಗ್ಲೆಂಡ್‌ ಮಹಿಳಾ ಹಾಕಿ ಪಂದ್ಯಗಳು ಮುಂದಕ್ಕೆ..!

ಟೂರ್ನಿಯಲ್ಲಿ ಒಟ್ಟ10 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 5 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. 4 ಬಾರಿ ಚಾಂಪಿಯನ್‌ ಕರ್ನಾಟಕ ‘ಬಿ‘ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗುಜರಾತ್‌, ಒಡಿಶಾ, ಸರ್ವಿಸಸ್‌, ಮಣಿಪುರ ತಂಡಗಳೂ ಇದೇ ಗುಂಪಿನಲ್ಲಿವೆ. ‘ಎ’ ಗುಂಪಿನಲ್ಲಿ ಮೇಘಾಲಯ, ಪಂಜಾಬ್‌, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಕೇರಳ ತಂಡಗಳಿವೆ.

Latest Videos
Follow Us:
Download App:
  • android
  • ios