Bengaluru Open 2023: ಚಂದ್ರಶೇಖರ್ -ವಿಜಯ್ ಸುಂದರ್ ಪ್ರಶಾಂತ್ ಫೈನಲ್‌ಗೆ ಲಗ್ಗೆ
ಬೆಂಗಳೂರು ಓಪನ್ ಟೆನಿಸ್ ಟೂರ್ನಿಗೆ ಅನಿರುದ್ದ್ ಚಂದ್ರಶೇಖರ್-ವಿಜಯ್ ಸುಂದರ್ ಪ್ರಶಾಂತ್ ಫೈನಲ್‌ಗೆ ಲಗ್ಗೆ
ಭಾರತದ ಜೋಡಿಯ ಎದುರೇ ಗೆಲುವು ಸಾಧಿಸಿದ ಅನಿರುದ್ಧ್-ವಿಜಯ್
ದಕ್ಷಿಣ ಕೊರಿಯಾದ ಚುಂಗ್ ಯನ್ ಸಿಯಾಂಗ್-ಚೈನೀಸ್ ತೈಪೆಯ ಯು ಸು ವಿರುದ್ಧ ಕಾದಾಟ
ಬೆಂಗಳೂರು(ಫೆ.25): 5ನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾರತದ ಡಬಲ್ಸ್ ಜೋಡಿ ಅನಿರುದ್‌್ಧ ಚಂದ್ರಶೇಖರ್ ಹಾಗೂ ವಿಜಯ್ ಸುಂದರ್ ಪ್ರಶಾಂತ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಈ ಜೋಡಿ 4ನೇ ಶ್ರೇಯಾಂಕಿತ ಭಾರತದ ಅರ್ಜುನ್ ಖಾಡೆ-ಆಸ್ಟ್ರಿಯಾದ ಮ್ಯಾಕ್ಸಿಮಿಲನ್ ವಿರುದ್ಧ 7-6, 4-6, 10-2 ಸೆಟ್ಗಳಲ್ಲಿ ಗೆಲುವು ಸಾಧಿಸಿತು. ಶನಿವಾರ ನಡೆಯಲಿರುವ ಫೈನಲ್ನಲ್ಲಿ ಭಾರತದ ಜೋಡಿ ದ.ಕೊರಿಯಾದ ಚುಂಗ್ ಯನ್ ಸಿಯಾಂಗ್-ಚೈನೀಸ್ ತೈಪೆಯ ಯು ಸು ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಇದೇ ವೇಳೆ ಪುರುಷರ ಸಿಂಗಲ್ಸ್ನಲ್ಲಿ ನಂ.1 ಶ್ರೇಯಾಂಕಿತ ಚೈನೀಸ್ ತೈಪೆಯ ಚುನ್ ಸೆಂಗ್‌ರನ್ನು ಸೋಲಿಸಿ ಕ್ರೊವೇಷಿಯಾದ ಹಮದ್ ಮೆಡ್ಜೆಡೋವಿಚ್ ಪ್ರವೇಶಿಸಿದರು. ಆಸ್ಪ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್, ಜೇಮ್ಸ್ ಡಕ್ವತ್‌ರ್ ಹಾಗೂ ಜೇಮ್ಸ್ ಮೆಕ್ಕಾಬೆ ಕೂಡಾ ಸೆಮೀಸ್ಗೇರಿದರು. ಶನಿವಾರ ಸೆಮೀಸ್ನಲ್ಲಿ ಪುರ್ಸೆಲ್ ಹಾಗೂ ಮೆಡ್ಜೆಡೋವಿಚ್, ಡಕ್ವತ್‌ರ್ ಹಾಗೂ ಮೆಕ್ಕಾಬೆ ಮುಖಾಮುಖಿಯಾಗಲಿದ್ದಾರೆ.
ಸ್ಟಾಫರ್ಡ್ ಕಪ್ ಫುಟ್ಬಾಲ್: ಬಿಎಫ್ಸಿ ಪಂದ್ಯ 1-1 ಡ್ರಾ
ಬೆಂಗಳೂರು: ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಶುಕ್ರವಾರ ಬಿಎಫ್ಸಿ ಹಾಗೂ ಹೈದರಾಬಾದ್ನ ಶ್ರೀನಿಧಿ ಡೆಕ್ಕನ್ ಎಫ್‌ಸಿ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿತು. ದಿನದ ಇನ್ನುಳಿದ 3 ಪಂದ್ಯಗಳಲ್ಲಿ ಚೆನ್ನೈಯಿನ್ ಎಫ್‌ಸಿ ಅಹಮದಾಬಾದ್‌ನ ಎಆರ್‌ಎ ಎಫ್‌ಸಿ ವಿರುದ್ಧ 1-0, ಕಿಕ್ಸ್ಟಾರ್ಚ್ ಎಫ್‌ಸಿ ತಂಡ ಕೇರಳ ಯುನೈಟೆಡ್ ವಿರುದ್ಧ 3-2, ಡೆಲ್ಲಿ ಎಫ್‌ಸಿ ತಂಡ ಕೆಂಕ್ರೆ ಎಫ್‌ಸಿ ವಿರುದ್ಧ 1-0 ಗೋಲುಗಳಿಂದ ಜಯಗಳಿಸಿತು.
ಬ್ಯಾಡ್ಮಿಂಟನ್: ರಾಜ್ಯದ ಧೃತಿ, ರುಜುಲಾ ಶುಭಾರಂಭ
ಪುಣೆ: 84ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಶುಕ್ರವಾರ ಆರಂಭಗೊಂಡಿದ್ದು, ಮೊದಲ ದಿನ ಕರ್ನಾಟಕದ ಶಟ್ಲರ್ಗಳು ಯಶಸ್ಸು ಪಡೆದಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಅಭಿಷೇಕ್, ಮಹಿಳಾ ಸಿಂಗಲ್ಸ್ನಲ್ಲಿ ವಿಜೇತ ಹರೀಶ್, ಧೃತಿ ಯತೀಶ್, ರುಜುಲಾ ರಾಮು ಶುಭಾರಂಭ ಮಾಡಿದರು. ಇದೇ ವೇಳೆ ಮಹಿಳಾ ಡಬಲ್ಸ್ನಲ್ಲಿ ಶಿಖಾ ಗೌತಮ್-ಅಶ್ವಿನಿ ಭಟ್, ಮಿಶ್ರ ಡಬಲ್ಸ್ನಲ್ಲಿ ಅಪೇಕ್ಷಾ ನಾಯಕ್-ಕಿರಣ್ ಕುಮಾರ್, ಜನನಿ ಅನಂತ್ಕುಮಾರ್-ನಿತಿನ್ 2ನೇ ಸುತ್ತು ಪ್ರವೇಶಿಸಿದರು.
ಪಾಕ್ ಕ್ರಿಕೆಟರ್ ಶೋಯೆಬ್ ಮಲಿಕ್ ಜೊತೆ ಸಂಬಂಧ: ಮೌನ ಮುರಿದ ನಟಿ ಆಯೇಶಾ ಒಮರ್
ನಾಳೆಯಿಂದ ಬೆಂಗ್ಳೂರಲ್ಲಿ ಐಟಿಎಫ್ ಮಹಿಳಾ ಟೆನಿಸ್
ಬೆಂಗಳೂರು: ಐಟಿಎಫ್ ಮಹಿಳಾ 25ಕೆ ಟೆನಿಸ್ ಟೂರ್ನಿಗೆ ಬೆಂಗಳೂರಿನ ಪಡುಕೋಣೆ-ದ್ರಾವಿಡ್ ಕ್ರೀಡಾ ಕೇಂದ್ರದಲ್ಲಿ ಫೆ.26ರಂದು ಚಾಲನೆ ಸಿಗಲಿದೆ. ಫೆ.26, 27ಕ್ಕೆ ಅರ್ಹತಾ ಸುತ್ತು ನಡೆಯಲಿದ್ದು, ಫೆ.28ರಿಂದ ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ. ಅಂಕಿತಾ ರೈನಾ, ಕರ್ಮನ್ ಕೌರ್, ಸೋಹಾ ಸಾದಿಕ್ ಸೇರಿದಂತೆ ಭಾರತದ ಅಗ್ರ ಟೆನಿಸಿಗರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಮಾ.1, 2ಕ್ಕೆ ಇಂಡಿಯಾ ಓಪನ್ ಎಸೆತ, ಜಿಗಿತ ಚಾಂಪಿಯನ್‌ಶಿಪ್
ವಿಜಯನಗರ: 2ನೇ ಆವೃತ್ತಿಯ ಇಂಡಿಯಾ ಓಪನ್ ಎಸೆತ ಮತ್ತು ಜಿಗಿತ ಚಾಂಪಿಯನ್‌ಶಿಪ್ ಮಾ.1, 2ರಂದು ಹೋಸಪೇಟೆ ಬಳಿ ಇರುವ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋಟ್ಸ್‌ರ್‍ನಲ್ಲಿ ನಡೆಯಲಿದ್ದು, ತಾರಾ ಅಥ್ಲೀಟ್‌ಗಳಾದ ಅಭಿನಯ ಶೆಟ್ಟಿ, ಜೆಸ್ವಿನ್ ಆಲ್ಡಿ್ರನ್, ತೇಜಿಂದರ್ ತೂರ್ ಸೇರಿದಂತೆ ಒಟ್ಟು 195 ಮಂದಿ ಪಾಲ್ಗೊಳ್ಳಲಿದ್ದಾರೆ. ಕೂಟದಲ್ಲಿ ಶಾಟ್ಪುಟ್, ಡಿಸ್ಕಸ್, ಹ್ಯಾಮರ್, ಜಾವೆಲಿನ್ ಥ್ರೋ, ಲಾಂಗ್ಜಂಪ್, ಟ್ರಿಪಲ್ ಜಂಪ್, ಹೈಜಂಪ್ ಹಾಗೂ ಪೋಲ್ ವಾಲ್ಟ್ ಸ್ಪರ್ಧೆಗಳು ನಡೆಯಲಿವೆ.