ಬಾಡಿ ಬಿಲ್ಡರ್ ಶೋಧನ್‌ಗೆ ಚಿನ್ನದ ಗರಿಮೆ; ಅಮೆರಿಕಾದಲ್ಲಿ ಕೀರ್ತಿ ಪತಾಕೆ ಹಾರಿಸಿದ ಕನ್ನಡಿಗ
ಬಾಡಿ ಬಿಲ್ಡರ್ ಶೋಧನ್ ರೈ ಸಾಧನೆಗೆ ಚಿನ್ನದ ಗರಿ
ನ್ಯಾಚುರಲ್ ವರ್ಲ್ಡ್ ಕಪ್ - 2022 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕನ್ನಡಿಗ
ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆ
ವರದಿ: ರಕ್ಷಾ ಕಟ್ಟೆಬೆಳಗುಳಿ
ಬೆಂಗಳೂರು(ಡಿ.14): ಬಾಡಿ ಬಿಲ್ಡ್ ಮಾಡೋರು, ಸಿಕ್ಸ್ ಪ್ಯಾಕು ಕೂರಿಸೋರು ಇತ್ತೀಚೆಗೆ ಪ್ರೊಟೀನ್ ಸಪ್ಲಿಮೆಂಟ್ಸ್ ಸೇರಿದಂತೆ ಬಗೆ ಬಗೆಯ ಡ್ರಗ್ಸ್ ಗಳ ಮೊರೆ ಹೋಗೋದು ತೀರಾ ಸಾಮಾನ್ಯ ಆಗ್ತಿದೆ. ಸಹಜವಾಗಿ ವರ್ಕೌಟ್ ಮತ್ತು ನಿಯಮಿತ, ನಿಗದಿತ ಆಹಾರ ಸೇವನೆ ಮೂಲಕವೂ ಬಾಡಿ ಬಿಲ್ಡ್ ಮಾಡಬಹುದು. ಹೀಗೆ ನ್ಯಾಚುರಲ್ ಆಗಿ ದೇಹ ಕಟ್ಟಿಕೊಂಡಿರೋರಿಗಾಗಿ ಅಮೆರಿಕಾದಲ್ಲಿ ನಡೆದ ಚಾಂಪಿಯನ್ ಶಿಪ್ ಒಂದರಲ್ಲಿ ಕನ್ನಡಿಗ ಶೋಧನ್ ರೈ ಚಿನ್ನ ಗೆದ್ದು ಬಂದಿದ್ದಾರೆ.
ಇತ್ತೀಚೆಗೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ ದೇಹದಾರ್ಢ್ಯ ನ್ಯಾಚುರಲ್ ವರ್ಲ್ಡ್ ಕಪ್ - 2022 ಅನ್ನು ಗೆದ್ದು ತಂದಿದ್ದಾರೆ ಕನ್ನಡಿಗ ಶೋಧನ್ ರೈ. 2017ರಲ್ಲೂ ಇದೇ ಚಾಂಪಿಯನ್ ಶಿಪ್‌ನಲ್ಲಿ ಮೊದಲ ಬಾರಿಗೆ ಶೋಧನ್ ಚಿನ್ನ ಗೆದ್ದಿದ್ದರು. ಇದೀಗ ಮತ್ತೆ ಅದೇ ಟ್ರೋಫಿಯನ್ನು ಮರಳಿ ಗೆದ್ದಿದ್ದಾರೆ.
ಶೋಧನ್ ರೈ ತಂದೆ ಕೂಡ ದೇಹದಾರ್ಢ್ಯಪಟು. ತಂದೆಯಿಂದಲೇ ಸ್ಪೂರ್ತಿ ಪಡೆದು ಬಾಡಿ ಬಿಲ್ಡ್ ಶುರು ಮಾಡಿದ ಶೋಧನ್, ವರ್ಕೌಟ್ ಮತ್ತು ನಿಗದಿತ ಆಹಾರ ಕ್ರಮದಿಂದ ಜಗ ಮೆಚ್ಚುವಂತೆ ಬಾಡಿ ಬಿಲ್ಡ್ ಮಾಡಿದ್ದಾರೆ.
ಪ್ರತಿ ನಿತ್ಯ ಆರು ಬಾರಿ ನಿಗದಿತ, ನಿಯಮಿತ ಆಹಾರ ಸೇವನೆ ಮತ್ತು ವರ್ಕೌಟ್ ನಿಂದ ಇವರ ದೇಹ ಕಟ್ಟಿದ್ದಾರೆ. ನಿತ್ಯ ಕನಿಷ್ಠ 10 ರಿಂದ 15 ಮೊಟ್ಟೆ ಸೇವಿಸುವ ಶೋಧನ್, ಸೌತೆಕಾಯಿ, ಬ್ರೊಕಾಲಿ ಸೇರಿದಂತೆ ತರಕಾರಿಯನ್ನು ನಿತ್ಯ ಸೇವಿಸುತ್ತಾರೆ. ಪಪ್ಪಾಯ, ಸೇಬು, ಬಾಳೆಹಣ್ಣು ಹಾಗೂ ಕಿತ್ತಲೆ ಕೂಡ ಇವರದ ದೇಹ ಕಟ್ಟುವಲ್ಲಿ ಸಾಥ್ ನೀಡಿವೆ.
Pro Kabaddi: ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿ ಸೆಮಿಫೈನಲ್‌ಗೇರಿದ ಬೆಂಗಳೂರು ಬುಲ್ಸ್!
ಬೆಂಗಳೂರಿಗರಾಗಿರುವ ಶೋಧನ್, ಮೂಲತಃ ಕರಾವಳಿಯವರು. ತೊಕ್ಕೊಟ್ಟು ಸಮೀಪದ ಅಂಬ್ಲಾಮೊಗರ್‌ನವರು. ಸೆಲೆಬ್ರಿಟಿ ಫಿಟ್ನಸ್ ಟ್ರೈನರ್ ಆಗಿ ಬೆಳೆದಿರುವ ಶೋಧನ್, ಅನೇಕ ಸಿನಿಮಾ ತಾರೆಯರ ಅಚ್ಚುಮೆಚ್ಚಿನ ತರಬೇತುದಾರರು.
ಯಾವುದೇ ಅಡ್ಡ ಪರಿಣಾಮದ ಪ್ರೊಟೀನ್ ಸೇವಿಸದೆ ಚಿನ್ನ ಗೆದ್ದಿರೋ ಶೋಧನ್ ಅನೇಕ ಚಾಂಪಿಯನ್ ಶಿಪ್‌ಗಳಲ್ಲಿ ಗೆದ್ದಿದ್ದಾರೆ. ಅವುಗಳ ವಿವರ ಹೀಗಿದೆ.
1. ಚಿನ್ನ - ನ್ಯಾಚುರಲ್ ವರ್ಲ್ಡ್ ಕಪ್ 2017, ಲಾಸ್ ಏಂಜಲೀಸ್, ಅಮೆರಿಕಾ
2. ಚಿನ್ನ - ನ್ಯಾಚುರಲ್ ಯೂನಿವರ್ಸ್ 2017, ಆಕ್ ಲ್ಯಾಂಡ್, ನ್ಯೂ ಜೀಲ್ಯಾಂಡ್.
3. ಕಂಚು - ನ್ಯಾಚುರಲ್ ಒಲಂಪಿಯಾ 2017, ಲಾಸ್ ವೆಗಾಸ್, ಅಮೆರಿಕಾ.
4. ಬೆಳ್ಳಿ - ನ್ಯಾಚುರಲ್ ಯೂನಿವರ್ಸ್ 2018, ಬ್ರಿಸ್ಬೇನ್, ಆಸ್ಟ್ರೇಲಿಯಾ.
5. ಕಂಚು - ನ್ಯಾಚುರಲ್ ಒಲಂಪಿಯಾ 2018, ಲಾಸ್ ವೆಗಾಸ್, ಅಮೆರಿಕಾ.
6. ಎರಡು ಚಿನ್ನ, ಒಂದು ಬೆಳ್ಳಿ - ಬೆಸ್ಟ್ ಪೋಸರ್ - ನ್ಯಾಚುರಲ್ ವರ್ಲ್ಡ್ ಕಪ್ 2019 - ಸಿಡ್ನಿ ಆಸ್ಟ್ರೇಲಿಯಾ.
7. ಬೆಳ್ಳಿ - ನ್ಯಾಚುರಲ್ ಯೂನಿವರ್ಸ್ 2019, ಲಾಸ್ ವೆಗಾಸ್, ಅಮೆರಿಕಾ
8. ಕಂಚು - ನ್ಯಾಚುರಲ್ ಒಲಂಪಿಯಾ 2019, ಲಾಸ್ ವೆಗಾಸ್, ಅಮೆರಿಕಾ.
9. ಚಿನ್ನ - ನ್ಯಾಚುರಲ್ ವರ್ಲ್ಡ್ ಕಪ್ 2022, ಲಾಸ್ ಏಂಜಲೀಸ್, ಅಮೆರಿಕಾ