ಜೋಕೋವಿಚ್ ೪೩೦ನೇ ಗ್ರ್ಯಾನ್‌ಸ್ಲಾಂ ಪಂದ್ಯವನ್ನಾಡಿ ಫೆಡರರ್ (429) ದಾಖಲೆ ಮುರಿದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಫಾರಿಯಾ ವಿರುದ್ಧ ಜಯ ಸಾಧಿಸಿದ ಜೋಕೋವಿಚ್, ಗರಿಷ್ಠ ಗ್ರ್ಯಾನ್‌ಸ್ಲಾಂ ಪಂದ್ಯಗಳ ದಾಖಲೆ ಬರೆದರು. ಆಲ್ಕರಾಜ್ ಮತ್ತು ಸಬಲೆಂಕಾ ಮೂರನೇ ಸುತ್ತಿಗೆ ಮುನ್ನಡೆದರು.
ಮೆಲ್ಬರ್ನ್: 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ತಾರಾ ಟೆನಿಸಿಗ ನೋವಾಕ್ ಜೋಕೋವಿಚ್ ಮತ್ತೊಂದು ದಾಖಲೆ ಬರೆದಿದ್ದಾರೆ. ಬುಧವಾರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಆಡುವ ಮೂಲಕ ಗ್ರಾನ್‌ಸ್ಲಾಂ ಇತಿಹಾಸದಲ್ಲೇ ಅತಿ ಹೆಚ್ಚು ಪಂದ್ಯವಾಡಿದ ವಿಶ್ವದಾಖಲೆ ಬರೆದರು.
37 ವರ್ಷದ ಜೋಕೋ ಪೋರ್ಚುಗಲ್‌ನ 21 ವರ್ಷದ ಜೇಮ್ ಫಾರಿಯಾ ವಿರುದ್ಧ 6-1, 6-7(4), 6-3, 6-2 ಸೆಟ್ ಗಳಲ್ಲಿ ಜಯಭೇರಿ ಬಾರಿಸಿದರು. ಇದು ಅವರ 430ನೇ ಗ್ರ್ಯಾನ್‌ಸ್ಲಾಂ ಪಂದ್ಯ. ಈ ಮೂಲಕ ಗರಿಷ್ಠ ಗ್ರ್ಯಾನ್‌ಸ್ಲಾಂ ಪಂದ್ಯವಾಡಿದ ಸಾಧಕರ ಪಟ್ಟಿಯಲ್ಲಿ ರೋಜರ್ ಫೆಡರರ್‌ರನ್ನು ಹಿಂದಿಕ್ಕಿ ಅಗ್ರಸ್ಥಾನ ಕ್ಕೇರಿದರು. ಸ್ಪಿಜರ್‌ಲೆಂಡ್‌ನ ಫೆಡರರ್429 ಪಂದ್ಯಗಳನ್ನಾಡಿದ್ದು, ಅಮೆರಿಕದ ಮಹಿಳಾ ಟೆನಿಸ್ ತಾರೆ ಸೆರೆನಾ ವಿಲಿಯಮ್ 423 ಪಂದ್ಯಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯನ್ ಓಪನ್ 2025: ಮೆಡ್ವೆಡೆವ್, ಎಮ್ಮಾ 2ನೇ ಸುತ್ತಿಗೆ ಲಗ್ಗೆ
ಗ್ರ್ಯಾನ್‌ಸ್ಲಾಂನಲ್ಲಿ ಗರಿಷ್ಠ ಪಂದ್ಯ ಗೆದ್ದ ದಾಖಲೆ ಈಗಾಗಲೇ ಜೋಕೋ ಹೆಸರಲ್ಲಿದೆ. ಅವರು 379 ಪಂದ್ಯ ಗೆದ್ದು, ಕೇವಲ 51ರಲ್ಲಿ ಸೋತಿದ್ದಾರೆ. 369 ಪಂದ್ಯ ಗೆದ್ದಿರುವ ಫೆಡರರ್ 2ನೇ ಸ್ಥಾನದಲ್ಲಿದ್ದಾರೆ.
ಆಲ್ಕರಜ್, ಸಬಲೆಂಕಾ ಗಾಫ್ 3ನೇ ಸುತ್ತಿಗೆ: ಸ್ಪೇನ್‌ನ ಯುವ ಸೂಪರ್‌ಸ್ಟಾರ್ ಕಾರ್ಲೊಸ್ ಆಲ್ಕರಜ್ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಜಪಾನ್‌ನ ನಿಶಿಜಕಾ ವಿರುದ್ಧ 6-0, 6-1, 6-4 ಸೆಟ್ ಗಳಲ್ಲಿ ಜಯಗಳಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ 2019, 2021ರ ಚಾಂಪಿಯನ್, ಜಪಾನ್ ನವೊಮಿ ಒಸಾಕ, ಕಳೆದೆರಡು ಬಾರಿ ಚಾಂಪಿಯನ್ ಅರೈನಾ ಸಬಲೆಂಕಾ 3ನೇ ಸುತ್ತು ಪ್ರವೇಶಿಸಿದರು.
ವಿಜಯ್ ಹಜಾರೆ ಟ್ರೋಫಿ: ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್, 5ನೇ ಬಾರಿ ಕರ್ನಾಟಕ ಫೈನಲ್‌ಗೆ!
ಬೆಂಗ್ಳೂರು ಟೆನಿಸ್: ಸಹಜಾ, ಅಂಕಿತಾಗೆ ವೈಲ್ಡ್ ಕಾರ್ಡ್
ಬೆಂಗಳೂರು: ಜ.21ರಿಂದ ಆರಂಭಗೊಳ್ಳಲಿರುವ ಐಟಿಎಫ್ ಓಪನ್ ಬೆಂಗಳೂರು ಟೆನಿಸ್ ಟೂರ್ನಿಗೆ ಭಾರತದ ಇಬ್ಬರು ಆಟಗಾರ್ತಿಯರಾದ ಅಂಕಿತಾ ರೈನಾ ಹಾಗೂ ಸಹಜಾ ಯಮಲಾಪಲ್ಲಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ. ಇತ್ತೀಚೆಗಷ್ಟೇ ಆಯೋಜಕರು ಪ್ರಧಾನ ಸುತ್ತಿನಲ್ಲಿ ಆಡುವ 20 ಟೆನಿಸಗರ ಪಟ್ಟಿಯನ್ನು ಪ್ರಕಟಗೊಳಿಸಿದ್ದರು. ಇದರಲ್ಲಿ ಯಾವುದೇ ಭಾರತೀಯರು ಇರಲಿಲ್ಲ. ಅಂಕಿತಾ, ಸಹಜಾ ಜೊತೆ ಇನ್ನೂ ಇಬ್ಬರು ಆಟಗಾರ್ತಿಯರಿಗೆ ವೈಲ್ಡ್ ಕಾರ್ಡ್ ಪ್ರವೇಶದ ಅವಕಾಶವಿದೆ. ಆಯೋಜಕರು ಶೀಘ್ರದಲ್ಲೇ ಹೆಸರು ಪ್ರಕಟಿಸಲಿದ್ದಾರೆ. ಇದರ ಹೊರತಾಗಿ ಅರ್ಹತಾ ಸುತ್ತಿನಲ್ಲಿ ಗೆಲ್ಲುವ 8 ಆಟಗಾರ್ತಿಯರು ಪ್ರಧಾನ ಸುತ್ತು ಪ್ರವೇಶಿಸಲಿದ್ದಾರೆ. ಅರ್ಹತಾ ಸುತ್ತು ಜ.19, 20ಕ್ಕೆ ನಡೆಯಲಿದೆ.
