Leander Paes : ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪೇಸ್ ತಪ್ಪಿತಸ್ಥ!

ಲಿಯಾಂಡರ್ ಪೇಸ್-ರಿಯಾ ಪಿಳ್ಳೈ ಪ್ರಕರಣ

ಪೇಸ್ ಮೇಲೆ ದಾಖಲಾಗಿತ್ತು ಕೌಂಟುಂಬಿಕ ಹಿಂಸಾಚಾರ ಕೇಸ್

ದಿಗ್ಗಜ ಟೆನಿಸ್ ಆಟಗಾರ ತಪ್ಪಿತಸ್ಥ ಎಂದು ತೀರ್ಪು ನೀಡಿದ ಕೋರ್ಟ್

Ace Tennis Player Leander Paes Found Guilty Of Domestic Violence Against Partner Rhea Pillai says Court san

ಮುಂಬೈ (ಫೆ. 23): ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ (Leander Paes) ತಮ್ಮ ಮಾಜಿ ಸಂಗಾತಿ ರಿಯಾ ಪಿಳ್ಳೈ (Rhea Pilla) ಅವರ ಮೇಲೆ ಸಾಕಷ್ಟು ಕೌಂಟುಂಬಿಕ ಹಿಂಸಾಚಾರ ಪ್ರಕರಣಗಳನ್ನು ಎಸಗಿದ್ದಾರೆ ಎಂದು ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ನಟಿ ಹಾಗೂ ರೂಪದರ್ಶಿಯಾಗಿದ್ದ ರಿಯಾ ಪಿಳ್ಳೈ ಅವರು ಲಿಯಾಂಡರ್ ಪೇಸ್ ವಿರುದ್ಧ 2014 ರಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ (Domestic Violence Case) ದಾಖಲಿಸಿದ್ದರು.

ಹಾಗೇನಾದರೂ ಪೇಸ್ ಜೊತೆಯಲ್ಲಿ ವಾಸವಾಗಿರುವ ನಿವಾಸವನ್ನು ರಿಯಾ ಪಿಳ್ಳೈ ತೊರೆಯುವ ನಿರ್ಧಾರ ಮಾಡಿದಲ್ಲಿ, ತಿಂಗಳಿಗೆ ಒಂದು ಲಕ್ಷ ರೂಪಾಯಿ ಮಾಸಿಕ ನಿರ್ವಹಣೆಗಾಗಿ ಹಾಗೂ 50 ಸಾವಿರ ರೂಪಾಯಿಯನ್ನು ಬಾಡಿಗೆಯ ಕಾರಣಕ್ಕಾಗಿ ಲಿಯಾಂಡರ್ ಪೇಸ್ ನೀಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ಸಿಂಗ್ ರಜಪೂತ್ (Komalsing Rajput) ಈ ತಿಂಗಳ ಆರಂಭದಲ್ಲಿ ಆದೇಶವನ್ನು ನೀಡಿದ್ದರು, ಇದರ ಆದೇಶ ಪ್ರತಿ ಕಲೆದ ಬುಧವಾರ ಲಭ್ಯವಾಗಿದೆ.

ರಿಯಾ ಪಿಳ್ಳೈ ಅವರು 2014 ರಲ್ಲಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ (Protection of Women from Domestic Violence Act) ಪರಿಹಾರ ಮತ್ತು ರಕ್ಷಣೆ ಕೋರಿ ನ್ಯಾಯಾಲಯದ (Court) ಮೊರೆ ಹೋಗಿದ್ದರು, ಅವರು ಎಂಟು ವರ್ಷಗಳ ಕಾಲ ಲಿಯಾಂಡರ್ ಪೇಸ್ ಅವರೊಂದಿಗೆ ಮದುವೆಗೆ ಹೋಲುವ ರೀತಿಯ ಲಿವ್-ಇನ್ (Live in)ಸಂಬಂಧದಲ್ಲಿದ್ದೆವು ಎಂದು ಹೇಳಿದ್ದರು. ಲಿಯಾಂಡರ್ ಪೇಸ್ ತನ್ನ ಕಾರ್ಯಗಳು ಮತ್ತು ನಡವಳಿಕೆಯ ಮೂಲಕ "ಮೌಖಿಕ, ಭಾವನಾತ್ಮಕ ಮತ್ತು ಆರ್ಥಿಕ ನಿಂದನೆಯನ್ನು ಉಂಟುಮಾಡಿದರು, ಇದು ಭಾವನಾತ್ಮಕ ಹಿಂಸೆ ಮತ್ತು ಆಘಾತಕ್ಕೆ ಕಾರಣವಾಯಿತು" ಎಂದು ಅವರು ಹೇಳಿದ್ದರು.

IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಸ್ಥಾನ ಅಲಂಕರಿಸಿದ ಅಜಿತ್ ಅಗರ್‌ಕರ್
ಮ್ಯಾಜಿಸ್ಟ್ರೇಟ್, ತನ್ನ ಆದೇಶದಲ್ಲಿ, "ಪ್ರತಿವಾದಿಯು ವಿವಿಧ ಕೌಟುಂಬಿಕ ಹಿಂಸಾಚಾರದ ಕೃತ್ಯಗಳಿಗೆ ಕಾರಣವಾಗಿರುವುದು ಸಾಬೀತಾಗಿದೆ" ಎಂದು ಹೇಳಿದರು. ರಿಯಾ ಪಿಳ್ಳೈ ಅವರಿಗೆ ₹ 1 ಲಕ್ಷ ಮಾಸಿಕ ನಿರ್ವಹಣೆಯ ಹೊರತಾಗಿ ₹ 50,000 ಮಾಸಿಕ ಬಾಡಿಗೆಯನ್ನು ಪಾವತಿಸಲು ಲಿಯಾಂಡರ್ ಪೇಸ್‌ಗೆ ನ್ಯಾಯಾಲಯ ನಿರ್ದೇಶಿಸಿತು. ಹಾಗೇನಾದರೂ ಪೇಸ್ ಜೊತೆಗೆ ಬಾಂದ್ರಾದ (Bandra) ನಿವಾಸದಲ್ಲಿಯೇ ವಾಸ ಮಾಡಲು ನಿರ್ಧರಿಸಿದರೆ, ವಿತ್ತೀಯ ಪರಿಹಾರಕ್ಕೆ (monetary relief) ಅರ್ಹರಾಗಿರುವುದಿಲ್ಲ ಎಂದು ಕೋರ್ಟ್ ಹೇಳಿದೆ.

IPL 2022: ಮತ್ತೋರ್ವ ಕನ್ನಡಿಗನಿಗೆ ಪಂಜಾಬ್ ಕಿಂಗ್ಸ್‌ ನಾಯಕ ಪಟ್ಟ..?
ಲಿಯಾಂಡರ್ ಪೇಸ್ ಅವರ ಟೆನಿಸ್ ವೃತ್ತಿಜೀವನವು 'ಬಹುತೇಕ ಮುಗಿದಿದೆ' ಎಂದು ಮ್ಯಾಜಿಸ್ಟ್ರೇಟ್ ಹೇಳಿದರು, ಇದು ರಿಯಾ ಪಿಳ್ಳೈಗೆ ನಿರ್ವಹಣೆಯನ್ನು ಪಾವತಿಸುವಾಗ ಬಾಡಿಗೆ ಮನೆಯಲ್ಲಿ ವಾಸಿಸುವಂತೆ ಆದೇಶಿಸುವುದು 'ಗಂಭೀರ ಪೂರ್ವಾಗ್ರಹ'ವನ್ನು ಉಂಟುಮಾಡುತ್ತದೆ ಎಂದು ಹೇಳಿದರು.

ಇನ್ನೊಂದೆಡೆ ಲಿಯಾಂಡರ್ ಪೇಸ್ ಬಾಲಿವುಡ್ ನಟಿ ಕಿಮ್ ಶರ್ಮ (Actress Kim Sharma) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಬ್ಬರು ಗೋವಾದಲ್ಲಿ ವಿಹಾರಕ್ಕೆ ಹೋಗಿದ್ದರು. ಅದರ ಚಿತ್ರವನ್ನು ಗೋವಾದ ರೆಸ್ಟೋರೆಂಟ್ ಒಂದು ಪ್ರಕಟಿಸಿತ್ತು.  ರೆಸ್ಟಾರೆಂಟ್‌ನಿಂದ ಹಂಚಿಕೊಂಡಿರುವ ಪ್ರೀತಿಪಾತ್ರ ಫೋಟೋದಲ್ಲಿ ಲಿಯಾಂಡರ್ ಪೇಸ್, ಕಿಮ್ ಶರ್ಮಾ ಅವರನ್ನು ಹಿಂದಿನಿಂದ ತಬ್ಬಿಕೊಳ್ಳುತ್ತಿದ್ದಾರೆ. ಕಿಮ್ ಮತ್ತು ಲಿಯಾಂಡರ್ ಅವರು ಚಿತ್ರಕ್ಕಾಗಿ ಪೋಸ್ ನೀಡುತ್ತಿರುವಾಗ ನಗುತ್ತಲೇ ಪೋಸ್ ನೀಡಿದ್ದಾರೆ. ಈ ಜೋಡಿಯ ಸ್ನೇಹಶೀಲ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದೆ. ನಟಿ ಮತ್ತು ಟೆನಿಸ್ ಆಟಗಾರನ ಅಭಿಮಾನಿಗಳು ಕೂಡ ಈ ಚಿತ್ರವನ್ನು ನೋಡಿ ಅಚ್ಚರಿಪಟ್ಟದ್ದಾರೆ. ಈ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗೋವಾ ರೆಸ್ಟೋರೆಂಟ್ ಪೌಸಾಡಾ ಬೈ ದ ಬೀಚ್‌ ಹಂಚಿಕೊಂಡಿದೆ. 

Latest Videos
Follow Us:
Download App:
  • android
  • ios