Asianet Suvarna News Asianet Suvarna News

ಭಾರತ ಟೆನಿಸ್ ಸಂಸ್ಥೆ ಮುಖ್ಯಸ್ಥ, ಬಿಜೆಪಿ ಸಂಸದ ಅನಿಲ್ ಜೈನ್ ವಿರುದ್ಧ8 ರಾಜ್ಯಗಳ ಅವಿಶ್ವಾಸ!

ಭಾರತ ಟೆನಿಸ್ ಸಂಸ್ಥೆ ಅಧ್ಯಕ್ಷ ಅನಿಲ್‌ ಜೈನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 8 ರಾಜ್ಯಗಳ ಟೆನಿಸ್‌ ಸಂಸ್ಥೆಗಳು ಮುಂದಾಗಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

8 State Tennis Associations Propose No Trust Motion against AITA President Anil Jain kvn
Author
First Published Sep 28, 2024, 11:00 AM IST | Last Updated Sep 28, 2024, 11:00 AM IST

ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಅಧ್ಯಕ್ಷ ಅನಿಲ್‌ ಜೈನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 8 ರಾಜ್ಯಗಳ ಟೆನಿಸ್‌ ಸಂಸ್ಥೆಗಳು ನಿರ್ಧರಿಸಿವೆ. 

ಶನಿವಾರ ನವದೆಹಲಿಯಲ್ಲಿ ನಡೆಯಬೇಕಿದ್ದ ವಾರ್ಷಿಕ ಸಾಮಾನ್ಯ ಸಭೆ ಈಗ ವಿಶೇಷ ಸಾಮಾನ್ಯ ಸಭೆಯಾಗಿ ಬದಲಾಗಿದ್ದು, ಇದರಲ್ಲಿ ಅಸ್ಸಾಂ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು ಹಾಗೂ ತ್ರಿಪುರಾ ರಾಜ್ಯಗಳ ಟೆನಿಸ್ ಸಂಸ್ಥೆಗಳು ಜೈನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದೆ.  ಒಂದು ವೇಳೆ ಅವಿಶ್ವಾಸ ನಿರ್ಣಯ ಪಾಸಾದರೆ ಎಐಟಿಎ ಇತಿಹಾಸದಲ್ಲೇ ಈ ರೀತಿ ಅಧಿಕಾರ ಕಳೆದುಕೊಳ್ಳಲಿರುವ ಮೊದಲ ಅಧ್ಯಕ್ಷ ಎನ್ನುವ ಅಪಖ್ಯಾತಿಗೆ ಅನಿಲ್ ಜೈನ್ ಗುರಿಯಾಗಲಿದ್ದಾರೆ.

ಮುಂದಿನ ಐಪಿಎಲ್‌ನಲ್ಲೂ 74 ಪಂದ್ಯ: 10 ಪಂದ್ಯ ಹೆಚ್ಚಿಸುವ ನಿರ್ಧಾರ ಕೈಬಿಟ್ಟ ಬಿಸಿಸಿಐ!

ಏಕೆ ಅವಿಶ್ವಾಸ?

ಬಿಜೆಪಿ ರಾಜ್ಯ ಸಭೆ ಸಂಸದರೂ ಆಗಿರುವ ಜೈನ್ ಎಐಟಿಎ ಅಧ್ಯಕ್ಷ ಸ್ಥಾನವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪವಿದೆ. 'ಜೈನ್ ವೈಯಕ್ತಿಕ ಅಜೆಂಡಾ ಜಾರಿ ಗೊಳಿಸಲು ಹುದ್ದೆ ದುರ್ಬಳಕೆ ಮಾಡುತ್ತಿದ್ದಾರೆ. ಎಐಟಿಎ ಹಣದಲ್ಲೇ ಹಲವು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ' ಎಂಬುದು ರಾಜ್ಯ ಸಂಸ್ಥೆಗಳ ಆರೋಪ.

ಬ್ಯಾಡ್ಮಿಂಟನ್: ಕಿದಂಬಿ ಔಟ್, ಸಾ-ಗಾಯತ್ರಿ ಸೆಮಿಫೈನಲ್ ಪ್ರವೇಶ

ಮಾಕಾವ್: ಭಾರತದತಾರಾಶಟ್ಲರ್‌ಗಳಾದ ತ್ರೀಸಾ-ಗಾಯತ್ರಿ ಗೋಪಿಚಂದ್ ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿ೦ಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೆ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಸೋತು ಹೊರಬಿದ್ದಿದ್ದಾರೆ.

ಮಹಿಳಾ ಡಬಲ್ ಕ್ವಾರ್ಟರ್ ಫೈನಲ್‌ನಲ್ಲಿ ಶುಕ್ರವಾರ ತ್ರೀಸಾ-ಗಾಯತ್ರಿ ಜೋಡಿ ಚೈನೀಸ್ ತೈಪೆಯ ಹು ಯಿನ್ ಹುಯಿ ಹಾಗೂ ಲೊನ್ ಝಿಪ್ ಯುನ್ ವಿರುದ್ಧ 21-12, 21-17ರಲ್ಲಿ ಗೆಲುವು ಸಾಧಿಸಿತು. ಸೆಮೀಸ್‌ನಲ್ಲಿ ವಿಶ್ವನಂ.23 ಭಾರತೀಯ ಜೋಡಿಗೆ ಚೈನೀಸ್ ತೈಪೆಯ ಪೀ ಶಾನ್ ಹಾಗೂ ಹುಂಗ್ ಎನ್ ತು ಸವಾಲು ಎದುರಾಗಲಿದೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್, ಹಾಂಕಾಂಗ್ ಕಾ ಲೊಂಗ್ ಆ್ಯಂಗುಸ್ ವಿರುದ್ಧ ಸೋಲನುಭವಿಸಿದರು.

ಕಾನ್ಪುರದಲ್ಲಿ ಮೊದಲ ದಿನ ಮಳೆ ಕಣ್ಣಾಮುಚ್ಚಾಲೆ; ಆಕಾಶ್‌ದೀಪ್‌ಗೆ 2 ವಿಕೆಟ್‌

ಇಂದು ಬಿಎಫ್‌ಸಿ vs ಬಗಾನ್

ಬೆಂಗಳೂರು: ಈ ಬಾರಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಬೆಂಗಳೂರು ಎಫ್‌ಸಿ ಶನಿವಾರ ಬಲಿಷ್ಠ ಮೋಹನ್ ಬಗಾನ್ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ನಗರದ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಿಎಫ್‌ಸಿ, ತವರಿನಲ್ಲೇ ಆಡಿರುವ ಮೊದಲೆರಡೂ ಪಂದ್ಯಗಳಲ್ಲಿ ಗೆದ್ದಿತತ್ತು. 
 

Latest Videos
Follow Us:
Download App:
  • android
  • ios