100 ಮೀಟರ್ ಓಟದಲ್ಲಿ ದಾಖಲೆ ಬರೆದ 105 ವರ್ಷದ ಹರಿಯಾಣ ಮಹಿಳೆ

ಸಾಧನೆಗೆ ವಯಸ್ಸು ಅಡ್ಡಿಯಾಗದು, ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಅನೇಕರು ಸಾಬೀತುಪಡಿಸಿದ್ದಾರೆ. ಹಾಗೆಯೇ ಈಗ ಹರಿಯಾಣದ  105 ವರ್ಷದ ಮಹಿಳೆಯೊಬ್ಬರು ಓಟದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಹೊಸ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

105 year old  Woman centurion from Haryana Creates Record in 100-Metre Race akb

ಸಾಧನೆಗೆ ವಯಸ್ಸು ಅಡ್ಡಿಯಾಗದು, ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಅನೇಕರು ಸಾಬೀತುಪಡಿಸಿದ್ದಾರೆ. ಹಾಗೆಯೇ ಈಗ ಹರಿಯಾಣದ  105 ವರ್ಷದ ಮಹಿಳೆಯೊಬ್ಬರು ಓಟದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಹೊಸ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಂಬಾಯಿ ಎಂಬ ಶತಾಯುಷಿ ಭಾನುವಾರ ನಡೆದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ ಓಟವನ್ನು 45.40 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದರು. 

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಈ ಓಟವನ್ನು  ಗುಜರಾತ್‌ನ ವಡೋದರಾದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರಾಂಬಾಯಿ ಏಕಾಂಗಿಯಾಗಿ ಭಾಗವಹಿಸಿದರು. ಏಕೆಂದರೆ ಅವರು 100 ಕ್ಕಿಂತ ಹೆಚ್ಚು ವಯಸ್ಸಿನವರ ಈ ಓಟದ ವಿಭಾಗದಲ್ಲಿ ಬೇರೆ ಯಾರೂ ಸ್ಪರ್ಧಿಗಳಿರಲಿಲ್ಲ. ಜೂನ್ 15 ರಂದು 100 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದ ನಂತರ ರಾಂಬಾಯಿ  ಭಾನುವಾರ 1 ನಿಮಿಷ ಮತ್ತು 52.17 ಸೆಕೆಂಡುಗಳಲ್ಲಿ 200 ಮೀ. ಓಟವನ್ನು ಕೂಡ ಪೂರ್ಣಗೊಳಿಸಿದರು. 

ಅಮ್ಮಾ..., ಕೇವಲ ಒಂದು ಶಬ್ಧವಲ್ಲ, ಶತಾಯುಷಿ ತಾಯಿಯ ಹುಟ್ಟುಹಬ್ಬದಂದು 27 ಪುಟದ ಭಾವನಾತ್ಮಕ ಪತ್ರ ಬರೆದ ಮೋದಿ!

ತಮ್ಮ ಕ್ರೀಡಾ ಸ್ಫೂರ್ತಿಯ ಜೊತೆಗೆ ರಾಂಬಾಯಿ ಅವರು ಸೇವಿಸುವ ಆಹಾರವೂ ಅವರು ಈ ಸಾಧನೆ ಮಾಡಲು ಪೂರಕ ಇಂಧನವಾಗಿದೆ. ನಾನು ಚುರ್ಮಾ, ದಹಿ (ಮೊಸರು) ಮತ್ತು ದೂಧ್ (ಹಾಲು) ಸೇವಿಸುತ್ತೇನೆ ಎಂದು ರಾಂಬಾಯಿ ಟೈಮ್ಸ್ ಆಫ್ ಇಂಡಿಯಾ ನೀಡಿದ ಸಂದರ್ಶನದಲ್ಲಿ ಹೇಳಿದರು. ರಾಂಬಾಯಿ ಅವರ ಮೊಮ್ಮಗಳು ಶರ್ಮಿಳಾ ಪ್ರಕಾರ, ಶತಾಯುಷಿ ರಾಂಬಾಯಿ ತಾವು ತಿನ್ನುವ ಆಹಾರದ ಬಗ್ಗೆ ಸಾಕಷ್ಟು ನಿರ್ದಿಷ್ಟವಾಗಿರುತ್ತಾರೆ. ರಾಂಬಾಯಿ ಶುದ್ಧ ಸಸ್ಯಾಹಾರಿಯಾಗಿದ್ದು, ಪ್ರತಿದಿನ 250 ಗ್ರಾಂ ತುಪ್ಪ ಮತ್ತು 500 ಗ್ರಾಂ ಮೊಸರನ್ನು ಸೇವಿಸುತ್ತಾರೆ  ಎಂದು ಶರ್ಮಿಳಾ ಹೇಳಿಕೊಂಡರು. ಅವಳು ದಿನಕ್ಕೆ ಎರಡು ಬಾರಿ 500 ಮಿಲಿ ಶುದ್ಧ ಹಾಲನ್ನು ಕುಡಿಯುತ್ತಾಳೆ. ಅವಳು ಬಜ್ರೆ ಕಿ ರೊಟ್ಟಿಯನ್ನು ಇಷ್ಟಪಡುತ್ತಾಳೆ ಮತ್ತು ಹೆಚ್ಚು ಅನ್ನವನ್ನು ತಿನ್ನುವುದಿಲ್ಲ ಎಂದು ಶರ್ಮಿಳಾ ಹೇಳಿದರು. 

ಪ್ರಧಾನಿ ಮೋದಿ ತಾಯಿಗೆ ತುಂಬಿತು 100 ವರ್ಷ! ಶತಾಯುಷಿ ತಾಯಿ ಬಗ್ಗೆ ಮೋದಿ ಹೇಳಿದ ಸತ್ಯ!
ಶುಚಿಯಾದ ಆಹಾರದ ಜೊತೆಗೆ, ಶರ್ಮಿಳಾ ಅವರು ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲದೇ ಪ್ರತಿದಿನ 3-4 ಕಿಲೋಮೀಟರ್ ಓಡುವ ಮೂಲಕ ತಮ್ಮ ದೈಹಿಕ ಕ್ಷಮತೆಯನ್ನು ಕಾಯ್ದುಕೊಂಡಿದ್ದಾರೆ ಎಂದು ರಂಬಾಯಿ ಹೇಳಿದರು. 

ವಡೋದರಾದಲ್ಲಿ (Vadodara) ಹೀಗೆ ಓಟದಲ್ಲಿ ಮಿಂಚುವ ಮೊದಲು, ನವೆಂಬರ್‌ನಲ್ಲಿ  ಅವರನ್ನು ಅವರ ಮೊಮ್ಮಗಳು ಶರ್ಮಿಳಾ (Sharmila) ವಾರಣಾಸಿಗೆ (Varanasi) ಕರೆದೊಯ್ದಾಗ ಅಲ್ಲೂ ಅವರು ಓಟದಲ್ಲಿ ಸ್ಪರ್ಧಿಸಿದ್ದರು. ಅದಾದ ನಂತರ ರಾಂಬಾಯಿ ತನ್ನ ಕೌಶಲ್ಯವನ್ನು ಪ್ರದರ್ಶಿಸುವುದನ್ನು ಮುಂದುವರೆಸಿದರು ಮತ್ತು ಕರ್ನಾಟಕ (Karnataka), ಮಹಾರಾಷ್ಟ್ರ (Maharashtra) ಮತ್ತು ಕೇರಳದಲ್ಲಿ (Kerala) ಹಲವಾರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದರು. ಇಲ್ಲಿಯವರೆಗೆ, ಅವರು ಡಜನ್‌ಗಿಂದ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಜೊತೆಗೆ ಅವರು ಸಹಜವಾಗಿ ಇದ್ದಾರೆ ಎಂದು ಶರ್ಮಿಳಾ ಹೇಳಿದ್ದಾರೆ.

ತನ್ನ ಇತ್ತೀಚಿನ ಸಾಧನೆಯೊಂದಿಗೆ ರಾಂಬಾಯಿ ಅವರು 101 ವರ್ಷದ ಮನ್ ಕೌರ್ (Man Kaur)  100 ಮೀ ಓಟವನ್ನು 74 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಚಿನ್ನವನ್ನು ಗೆದ್ದುಕೊಂಡಿದ್ದ ಹಿಂದಿನ ದಾಖಲೆಯನ್ನು ಮುರಿದರು. ಇದೊಂದು ಉತ್ತಮ ಭಾವನೆ ಮತ್ತು ನಾನು ಮತ್ತೆ ಓಟದಲ್ಲಿ ಭಾಗವಹಿಸಲು ಬಯಸುತ್ತೇನೆ ಎಂದು ರಂಬಾಯಿ ಹರ್ಷ ವ್ಯಕ್ತಪಡಿಸಿದರು. ಈ ನಡುವೆ ಇದೀಗ ಅಂತಾರಾಷ್ಟ್ರೀಯ ಟೂರ್ನಿಗಳತ್ತ ದೃಷ್ಟಿ ನೆಟ್ಟಿರುವ ಈ ಶತಾಯುಷಿ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios