Asianet Suvarna News Asianet Suvarna News

ಇಸ್ರೋಗೆ ಮತ್ತೊಂದು ಗೆಲುವು, 5.47ರಿಂದ ವಿಕ್ರಮ್ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಆರಂಭ!

ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್‌ಗೆ  ಐತಿಹಾಸಿಕ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ ವಿಶ್ವವೇ ಕಾಯುತ್ತಿದೆ.ಇದೀಗ ಇಸ್ರೋ ಹಂತ ಹಂತವಾಗಿ ಯಶಸ್ಸಿನತ್ತ ಸಾಗುತ್ತಿದೆ. ವಿಕ್ರಮ್ ಲ್ಯಾಂಡಿಂಗ್‌ಗೆ ಇನ್ನು ಕೆಲವೇ ಕ್ಷಣಗಳು ಮಾತ್ರ ಬಾಕಿ ಇದೆ. 5.47ರಿಂದ ಇಸ್ರೋ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಆರಂಭಿಸಲಿದೆ.
 

Chandrayaan 3 Mission ISRO vikram lander soft landing will start from 5 47 PM ckm
Author
First Published Aug 23, 2023, 4:48 PM IST

ನವದೆಹಲಿ(ಆ.23) ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿರುವ ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಮಾಡಲು ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಂತ ಹಂತವಾಗಿ ಇಸ್ರೋ ಯಶಸ್ಸು ಸಾಧಿಸಿದೆ. ಚಂದ್ರನ ಕಕ್ಷೆ ಸೇರಿಕೊಂಡಿರುವ ವಿಕ್ರಮ್ ಲ್ಯಾಂಡರ್‌ನ್ನು ಇಸ್ರೋ 5.47ಕ್ಕೆ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ಆರಂಭಿಸಲಿದೆ. ಲ್ಯಾಂಡರ್ ವೇಗವನ್ನು ನಿಧಾನವಾಗಿ ತಗ್ಗಿಸುತ್ತಾ 6.04ರ ವೇಳೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲಾಗುತ್ತದೆ. ಲ್ಯಾಂಡ್ ಇಳಿಕೆ ಪ್ರಕ್ರಿಯೆ 5.47ರಿಂದ ಆರಂಭಗೊಳ್ಳಲಿದೆ ಎಂದು ಇಸ್ರೋ ಹೇಳಿದೆ. ಇಸ್ರೋ ನೇರ ಪ್ರಸಾರ 5.20ರಿಂದ ಆರಂಭಗೊಳ್ಳಲಿದೆ.

ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ವಿಕ್ರಮ್ ಲ್ಯಾಂಡರ್‌ನ್ನು 5.40ರ ಹೊತ್ತಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಇಸ್ರೋ ಪ್ರಕ್ರಿಯೆ ಆರಂಭಿಸಲಿದೆ. ಮೊದಲು ವಿಕ್ರಮ್ ಲ್ಯಾಂಡರ್‌ನ ದಿಕ್ಕನ್ನು ಚಂದ್ರನ ಮೇಲ್ಮೈನತ್ತ ತಿರುಗಿಸುವ ಪ್ರಯತ್ನ ನಡೆಯಲಿದೆ. 5.40ಕ್ಕೆ ಚಂದ್ರನ ಮೇಲ್ಮೈನತ್ತ ವಿಕ್ರಮ್ ಲ್ಯಾಂಡರ್ ತಿರುಗಿಸಲಾಗುತ್ತದೆ. 5.47ಕ್ಕೆ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.

Chandrayaan 3: ಸಾಫ್ಟ್‌ ಲ್ಯಾಂಡಿಂಗ್‌ ಎಂದರೇನು? ರೋವರ್ ಕಾರ್ಯ ಹೇಗಿರಲಿದೆ, ಇಲ್ಲಿದೆ ಮಾಹಿತಿ

4.40ರಿಂದ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದಿಂದ ಚಂದ್ರಯಾನ 3 ಮಿಷನ್ ನೇರ ಪ್ರಸಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಂದ್ರಯಾನ-3 ಯೋಜನೆಯ ಸಾಫ್ಟ್ ಲ್ಯಾಂಡಿಂಗ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ಲಾಗಿ ಭಾಗಿಯಾಗಲಿದ್ದಾರೆ. ಪ್ರಸ್ತುತ 15ನೇ ಬ್ರಿಕ್ಸ್‌ ಸಮ್ಮೇಳನಕ್ಕಾಗಿ ಪ್ರಧಾನಿ ಮೋದಿ 3 ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಹಾಗಾಗಿ ಅಲ್ಲಿಂದಲೇ ಇಸ್ರೋದ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಲಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಸ್ರೋದೊಂದಿಗೆ ಸಂಪರ್ಕದಲ್ಲಿರಲಿದ್ದಾರೆ.

ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್ ಮಾಡಲು ಇಸ್ರೋ ಎಲ್ಲಾ ತಯಾರಿ ನಡೆಸಿದೆ. ಇದೀಗ ಐತಿಹಾಸಿಕ ಕ್ಷಣಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ.  ಸಾಫ್‌್ಟಲ್ಯಾಂಡಿಂಗ್‌ ಬಳಿಕ, ಲ್ಯಾಂಡಿಂಗ್‌ ಸೆನ್ಸರ್‌ಗಳಿಂದ ವಿಕ್ರಂನೊಳಗಿರುವ ಕಂಪ್ಯೂಟರ್‌ಗಳಿಗೆ ಸಂದೇಶ ರವಾನಿಸಲಾಗುತ್ತದೆ. ಈ ಮೂಲಕ ಒಳಗಿನ ವ್ಯವಸ್ಥೆ ಜಾಗೃತಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇತ್ತ ಲ್ಯಾಂಡರ್‌ ಇಳಿದ 4 ಗಂಟೆಗಳ ಬಳಿಕ ಅದರ ಬಾಗಿಲು ತೆರೆದು, ಅದರೊಳಗಿಂದ ಪ್ರಗ್ಯಾನ್‌ ರೋವರ್‌ ಹೊರಬಂದು ಚಂದ್ರನ ಮೇಲೆ ನಿಧಾನವಾಗಿ ಇಳಿಯಲಿದೆ. ಹೀಗೆ ರೋವರ್‌ ಕೆಳಗೆ ಇಳಿದ ಬಳಿಕ ರೋವರ್‌ ಮತ್ತು ಲ್ಯಾಂಡರ್‌ ಪರಸ್ಪರ ಚಿತ್ರಗಳನ್ನು ತೆಗೆದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರಕ್ಕೆ ರವಾನಿಸಲಿದೆ.

Chandrayaan 3: ಮೋದಿ ಸರ್ಕಾರದ 9 ವರ್ಷ, ಬಾಹ್ಯಾಕಾಶದಲ್ಲಿ ಇಸ್ರೋ ಹರ್ಷ

ಲ್ಯಾಂಡರ್‌ ಮತ್ತು ರೋವರ್‌ ಎರಡೂ ಸುರಕ್ಷಿತವಾಗಿದೆ ಎಂದು ಇಸ್ರೋಗೆ ಖಚಿತವಾದ ಬಳಿಕ ಅದರೊಳಗಿನ ಉಪಕರಣಗಳನ್ನು ಬಳಸಿ ಸಂಶೋಧನೆ ಆರಂಭಗೊಳ್ಳಲಿದೆ. ರೋವರ್‌ನ ಜೀವಿತಾವಧಿ 1 ಚಂದ್ರನ ದಿನ. ಅಂದರೆ ಭೂಮಿಯ ಲೆಕ್ಕಾಚಾರದಲ್ಲಿ 14 ದಿನ. ಅಷ್ಟುದಿನಗಳ ಕಾಲ ಅದು ಅಲ್ಲಿ ಸಂಶೋಧನೆ ನಡೆಸಿ ಮಾಹಿತಿ ನೀಡಲಿದೆ.

Follow Us:
Download App:
  • android
  • ios