ಮೊದಲ ಸಲ ಚಿಕ್ಕಣ್ಣ ಚಿತ್ರಕ್ಕೆ ಸಿಗ್ತು ನ್ಯಾಷನಲ್ ಕ್ರಶ್ ಬೆಂಬಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್..... 

ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ‘ಉಪಾಧ್ಯಕ್ಷ’ ಸಿನಿಮಾ ಜ.26ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅವರಿಗೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿಯೇ ಶುಭ ಹಾರೈಸಿದ್ದಾರೆ.

ಕನ್ನಡ ಸಿನಿಮಾಗಳ ಕುರಿತು ಅಪರೂಪಕ್ಕೆ ಮಾತನಾಡುವ ರಶ್ಮಿಕಾ ಮಂದಣ್ಣ ಈ ಸಿನಿಮಾ ಕುರಿತು ಒಂದು ವಿಡಿಯೋ ಮಾಡಿ, ‘ಉಪಾಧ್ಯಕ್ಷ ಸಿನಿಮಾ ತಂಡ ಈ ಚಿತ್ರಕ್ಕಾಗಿ ತುಂಬಾ ಶ್ರಮ ಪಟ್ಟಿದೆ ಎಂದು ಗೊತ್ತಿದೆ. ಎಲ್ಲರೂ ಶುಭವಾಗಲಿ’ ಎಂದು ಹಾರೈಸಿದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶಿರುವ ಈ ಸಿನಿಮಾವನ್ನು ಉಮಾಪತಿ ನಿರ್ಮಿಸಿದ್ದಾರೆ. ‘ಅಧ್ಯಕ್ಷ’ ಸಿನಿಮಾದ ಕತೆಯ ಮುಂದುವರಿಕೆಯಂತೆ ಈ ಸಿನಿಮಾ ಇರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಚಿತ್ರದಲ್ಲಿ ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ.

ಯೋಗ್ಯತೆಗೆ ತಕ್ಕ ಹಾಗೆ ನೋಡಿಕೊಂಡೆ, ಮನಸ್ತಾಪದಿಂದ ಸಂಬಂಧ ಕಟ್ ಆಯ್ತು; ಬ್ರೇಕಪ್‌ ಬಗ್ಗೆ ಬಾಯಿ ಬಿಟ್ಟ ಚಿಕ್ಕಣ್ಣ

ನಾನು ಈ ಸಿನಿಮಾ ಮಾಡುವಾಗ ಇವನು ಹೀರೋನಾ? ಎಂದು ಹೀಯಾಳಿಸಿದ್ರು ಎಂದು ಭಾವುಕರಾದರು. ನನ್ನ ಸಿನಿಮಾಗೆ ಗಾರೆ ಕೆಲಸದವ್ರು ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ. ನಾನು ಸಿನಿಮಾ ಹೀರೋ ಆಗ್ತೀನಿ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಕೊನೆಗೂ ನಾನು ಹೀರೋ ಆದೆ. ನನ್ನ ಜರ್ನಿಯಲ್ಲಿ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಚಿಕ್ಕಣ್ಣ. ಇದು ಟೀಸರ್ ಬಿಡುಗಡೆ ಸಮಾರಂಭ. ನಾನು ಹೆಚ್ಚು ಹೇಳುವುದೇನಿಲ್ಲ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನವೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಿಲ್ ಕುಮಾರ್. 

Upadhyaksha Movie: ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಕಾಮಿಡಿ ಕಿಲಾಡಿ ಚಿಕ್ಕಣ್ಣ..!

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ ಎಂದ ನಾಯಕಿ ಮಲೈಕ, ಅವಕಾಶ ನೀಡಿದ್ದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ಉಪಾಧ್ಯಕ್ಷ ಟೀಸರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ನೆನಪಿರಲಿ ಪ್ರೇಮ್‌, ಅಭಿಷೇಕ್‌ ಅಂಬರೀಶ್‌, ಗರುಡಾ ರಾಮ್‌, ಧನ್ವೀರ್‌, ಅದಿತಿ ಪ್ರಭುದೇವ ಹಾಗೂ ಇನ್ನಿತರರು ಹಾಜರಿದ್ದರು. ಉಫಾಧ್ಯಕ್ಷ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಈ ಮೂಲಕ ಇನ್ನಷ್ಟು ಕಳೆಕಟ್ಟಿದರು. ಉಪಾಧ್ಯಕ್ಷ ಚಿತ್ರದಲ್ಲಿ ಹಿಟ್ಲರ್‌ ಕಲ್ಯಾಣ ಖ್ಯಾತಿಯ ನಟಿ ಮಲೈಕಾ ವಸುಪಾಲ್‌ ನಟಿಸಿದ್ದಾರೆ. ಮೂಲಕ ಮಲೈಕಾ ಮೊದಲ ಬಾರಿಗೆ ಹಿರಿ ತೆರೆಯಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಹೆಬ್ಬುಲಿ ಚಿತ್ರದ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡಿ ಇದೊಂದು ಸಂಪೂರ್ಹಾಸ್ಯ ಮಯ ಚಿತ್ರ ಎಂದಿದ್ದಾರೆ. 

Scroll to load tweet…