ಮತ್ತೆ ಮತ್ತೆ ಮದ್ವೆಯಾದ ಸಿರಿವಂತನಿಗೆ ಉರುಳಾಯ್ತು ಡಿವೋರ್ಸ್, ಕೋಟಿ ಕೋಟಿ ಜೀವನಾಂಶ ಕೊಟ್ಟು ಸುಸ್ತು!

ಪತಿಗೆ ಆಸ್ತಿ ಇದೆ ಎನ್ನುವ ಕಾರಣಕ್ಕೆ ನಿಮ್ಮಿಷ್ಟದಂತೆ ಜೀವನಾಂಶ ಕೇಳಲು ಸಾಧ್ಯವಿಲ್ಲ. ಅದಕ್ಕೂ ಒಂದು ನಿಯಮವಿದೆ. ಶ್ರೀಮಂತ ವ್ಯಕ್ತಿಯ ಎರಡನೇ ವಿಚ್ಛೇದನದ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 
 

Wife cannot ask for alimony on the basis of husband status

ಪತಿ (husband)ಯ ಸ್ಥಾನಮಾನ, ಕೆಲಸ, ಶ್ರೀಮಂತಿಕೆ (Richness) ಆಧಾರದ ಮೇಲೆ ಜೀವನಾಂಶ (Alimony) ಕೇಳುವುದು ಸರಿಯಲ್ಲ ಎಂಬ ಮಹತ್ವದ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ. ಅನೇಕ ಬಾರಿ ವಿಚ್ಛೇದನ ಪಡೆದ ಮಹಿಳೆಯರು ತಮ್ಮ ಅವಶ್ಯಕತೆಯನ್ನು ಪರಿಗಣಿಸದೆ ಪತಿಯ ಆಸ್ತಿಯ ಮೇಲೆ ಜೀವನಾಂಶ ಕೇಳ್ತಾರೆ. ಸುಪ್ರೀಂ ಕೋರ್ಟ್ (Supreme Court) ಈಗಿನ ತೀರ್ಪು ಇದಕ್ಕೆ ಕಠಿವಾಣ ಹಾಕುವಂತಿದೆ. 

ಶ್ರೀಮಂತ ವ್ಯಕ್ತಿಯೊಬ್ಬ ಎರಡು ಮದುವೆಯಾಗಿ ಎರಡನೇ ಪತ್ನಿಗೂ ಈಗ ವಿಚ್ಛೇದನ ನೀಡಿದ್ದಾನೆ. ಮೊದಲ ಪತ್ನಿಗೆ ಜೀವನಾಂಶದ ರೂಪದಲ್ಲಿ 500 ಕೋಟಿ ನೀಡಿದ್ದ. ಈಗ ಎರಡನೇಯವಳಿಗೆ 12 ಕೋಟಿ ಪರಿಹಾರ ನೀಡಿದ್ದಾನೆ. ಅಮೆರಿಕದಲ್ಲಿ ಐಟಿ ಕನ್ಸಲ್ಟೆನ್ಸಿ ಸೇವಾ ಕಂಪನಿಯನ್ನು ನಡೆಸುತ್ತಿರುವ ಭಾರತೀಯ-ಅಮೆರಿಕನ್ ಪ್ರಜೆ, ನವೆಂಬರ್ 2020 ರಲ್ಲಿ ತಮ್ಮ ಮೊದಲ ಹೆಂಡತಿಗೆ ಡಿವೋರ್ಸ್ ನೀಡಿದ್ದರು. ಈ ವೇಳೆ ಕೋರ್ಟ್ ಆದೇಶದಂತೆ ಜೀವನಾಂಶವಾಗಿ 500 ಕೋಟಿ ರೂಪಾಯಿಗಳನ್ನು ಪಾವತಿಸಿದ್ರು. ಈಗ ಎರಡನೇ ಪತ್ನಿಗೆ 12 ಕೋಟಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಎರಡನೇ ಪತ್ನಿ ಜೊತೆ ಕೇವಲ ಒಂದು ವರ್ಷ ಸಂಸಾರ ನಡೆಸಿದ್ದರು ಕೈಗಾರಿಕೋದ್ಯಮಿ. 

ರಾಧಿಕಾ ಹೊಟ್ಟೆಗೆ ಅರಿಶಿನ ಹಚ್ಚಿದ್ದ ಆಕಾಶ್‌ ಅಂಬಾನಿ, ವಿಡಿಯೋ ನೋಡಿ ನೆಟ್ಟಿಗರು ಗರಂ

ಎರಡನೇ ಮದುವೆ ಜುಲೈ 31, 2021 ರಂದು ನಡೆದಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಮದುವೆ ಮುರಿದು ಬಿದ್ದಿತ್ತು. ದಂಪತಿ ಬೇರೆ ವಾಸ ಶುರು ಮಾಡಿದ್ದರು. ನಂತ್ರ ದಂಪತಿ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಮೊದಲ ಪತ್ನಿಗೆ ನೀಡಿದ ಜೀವನಾಂಶವನ್ನೇ ತನಗೂ ನೀಡಬೇಕು ಎಂದು ಎರಡನೇ ಪತ್ನಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಗಂಡನ ಸ್ಥಾನಮಾನದ ಆಧಾರದ ಮೇಲೆ ಜೀವನಾಂಶವನ್ನು ನೀಡಲಾಗುವುದಿಲ್ಲ ಎನ್ನುತ್ತ ಸುಪ್ರೀಂ ಕೋರ್ಟ್, 73 ಪುಟಗಳ ತೀರ್ಪು ನೀಡಿದೆ. ಜೀವನಾಂಶ ನೀಡುವುದು ಮಹಿಳೆಯರ ಕಲ್ಯಾಣಕ್ಕಾಗಿಯೇ ಹೊರತು ಅದನ್ನು ಗಂಡನನ್ನು ಶಿಕ್ಷಿಸಲು, ಹೆದರಿಸಲು, ಪ್ರಾಬಲ್ಯ ಅಥವಾ ಸುಲಿಗೆ ಮಾಡಲು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.  

ಹಿಂದೂ ಮದುವೆ ಒಂದು ಪವಿತ್ರ ಆಚರಣೆ, ವ್ಯಾಪಾರವಲ್ಲ : ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಲ್ ಪೀಠ, ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ ಪೀಠ,  ಹಿಂದೂ ವಿವಾಹ  ಪವಿತ್ರ ಆಚರಣೆ, ಇದು ಕುಟುಂಬದ ಅಡಿಪಾಯ. ಇದನ್ನು ವಾಣಿಜ್ಯ ಒಪ್ಪಂದ ಮಾಡಲು ಒಪ್ಪುವುದಿಲ್ಲ ಎಂದಿದೆ.    ಮಹಿಳೆಯರ ಅನುಕೂಲಕ್ಕೆ ನೀಡಿರುವ ಈ ಕಾನೂನು, ಅವರ ಕಲ್ಯಾಣಕ್ಕಾಗಿಯೇ ವಿನಃ, ಗಂಡಂದಿರನ್ನು ಶಿಕ್ಷಿಸಲು ಅಲ್ಲ ಎಂಬುದನ್ನು ಮಹಿಳೆಯರು ಅರಿತಿರಬೇಕು ಎಂದು ಕೋರ್ಟ್ ಹೇಳಿದೆ. ಮೊದಲ ಪತ್ನಿಗೆ ಜೀವನಾಂಶ ನೀಡಿದ ನಂತ್ರ ಪತಿಯ ಆದಾಯದಲ್ಲಿ ಮಹತ್ವದ ಇಳಿಕೆಯಾಗಿದೆ. ಹಾಗೆಯೇ ಆತನ ಆಸ್ತಿ ನೋಡಿ ಜೀವನಾಂಶ ನಿರ್ಧರಿಸಲು ಸಾಧ್ಯವಿಲ್ಲ ಎಂದ ಕೋರ್ಟ್,  ಎರಡನೇ ಪತ್ನಿಗೆ ಪತಿ 12 ಕೋಟಿ ರೂಪಾಯಿಯನ್ನು ಜೀವನಾಂಶದ ರೂಪದಲ್ಲಿ ಒಂದು ತಿಂಗಳೊಳಗೆ ನೀಡಬೇಕು ಎಂದಿದೆ. 

ಬ್ರೋ.. ಬ್ರೋ.. ಎನ್ನುತ್ತಲೇ ಲವ್ ಮಾಡಿ ಮದ್ವೆಯಾದ ಕಿರುತೆರೆ ಜೋಡಿ!

ಪೊಲೀಸರ ಕ್ರಮ ಖಂಡಿಸಿದ ಕೋರ್ಟ್ : ಇದೇ ವೇಳೆ ಪೊಲೀಸ್ ಕ್ರಮವನ್ನು ಕೂಡ ಕೋರ್ಟ್ ಖಂಡಿಸಿದೆ. ಅನೇಕ ಪ್ರಕರಣದಲ್ಲಿ ಪೊಲೀಸರು ಆತುರದ ನಿರ್ಧಾರ ತೆಗೆದುಕೊಳ್ತಾರೆ. ವರದಕ್ಷಿಣೆ, ಕಿರುಕುಳ ಪ್ರಕರಣ ದಾಖಲಾದಾಗ ತರಾತುರಿಯಲ್ಲಿ ಪತಿ ಹಾಗೂ ಆತನ ಸಂಬಂಧಿಕರನ್ನು ಬಂಧಿಸುತ್ತಾರೆ. ಅತ್ತೆ ಮಾವ, ಅಜ್ಜ ಅಜ್ಜಿ ವಿರುದ್ಧವೂ ದೂರು ದಾಖಲಿಸುತ್ತಾರೆ. ಅವರ ವಿರುದ್ಧ ಎಫ್ ಐಆರ್ ಗಂಭೀರತೆಯಿಂದಾಗಿ ಅವರಿಗೆ ಜಾಮೀನು ನೀಡುವುದೂ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.  
 

Latest Videos
Follow Us:
Download App:
  • android
  • ios