Asianet Suvarna News Asianet Suvarna News

ಹಿಂದೂ-ಮುಸ್ಲಿಂ ಆದ್ರೆ ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಂಡರ್‌ನಲ್ಲಿ ಬರುತ್ತಾ? ಸೋನಾಕ್ಷಿ ಮದ್ವೆ ಸೀಕ್ರೆಟ್

ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಮದುವೆ ಸದ್ಯ ಸುದ್ದಿಯಲ್ಲಿದೆ. ರಿಜಿಸ್ಟ್ರಾರ್ ಮ್ಯಾರೇಜ್ ಆಗಿರುವ ಜೋಡಿ, ಸ್ಪೆಷನ್ ಮ್ಯಾರೇಜ್ ಆಕ್ಟ್ ಅಡಿ ಮದುವೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಸ್ಪೇಷಲ್ ಮ್ಯಾರೇಜ್ ಆಕ್ಟ್ ಎಂದ್ರೇನು ಗೊತ್ತಾ?
 

Sonakshi Sinha And Iqbal Got Married Under The Special Marriage Act roo
Author
First Published Jun 24, 2024, 3:14 PM IST

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (Bollywood Actress Sonakshi Sinha and Jaheer Iqbal) ಕಾನೂನುಬದ್ಧವಾಗಿ ಪತಿ – ಪತ್ನಿಯಾಗಿದ್ದಾರೆ. ಇಬ್ಬರೂ ನಾಗರಿಕ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್, ವಿಶೇಷ ವಿವಾಹ ಕಾಯ್ದೆಯಡಿ (Special Marriage Act)  ಮದುವೆಯಾಗಿದ್ದಾರೆ. ಬಾಂದ್ರಾ ವೆಸ್ಟ್‌ನ ಸಮುದ್ರ ತೀರದಲ್ಲಿರುವ ಸೋನಾಕ್ಷಿಯ 26 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಈ ಮದುವೆ ನಡೆದಿದೆ. ವಿಶೇಷ ವಿವಾಹ ಕಾಯ್ದೆಯಡಿ ನಡೆದ ಈ ಮದುವೆಗೆ ಸೋನಾಕ್ಷಿ ಮದುವೆಗೆ ಎರಡೂ ಕಡೆಯ ಸ್ನೇಹಿತರು ಮತ್ತು ಸಂಬಂಧಿಕರು ಸಾಕ್ಷವಾಗಿದ್ದಾರೆ. ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್, ಸ್ಪೇಷಲ್ ಮ್ಯಾರೇಜ್ ಆಕ್ಟ್ ನಡಿ ಮದುವೆ ಆಗಿದ್ದೇಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಸ್ಪೆಷನ್  ಮ್ಯಾರೇಜ್ (Special Marriage) ಆಕ್ಟ್ ಎಂದರೇನು? : ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಜಹೀರ್ ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ಮದುವೆ ಆಗಿದ್ದಾರೆ. ಇಬ್ಬರು ವಯಸ್ಕರು ಧರ್ಮವನ್ನು ಬದಲಾಯಿಸದೆ ಈ ಮದುವೆ ಮಾಡಿಕೊಂಡಿದ್ದಾರೆ.

ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್

ಸ್ಪೆಷನ್ ಮ್ಯಾರೇಜ್ ಆಕ್ಟ್ 1954 ರ ಅಡಿಯಲ್ಲಿ ಮದುವೆಯ ನೋಂದಣಿ ಮಾಡಲಾಗುತ್ತದೆ. ಯಾವುದೇ ಎರಡು ಧರ್ಮ ಅಥವಾ ಜಾತಿಯ ಜನರು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಬಯಸಿದರೆ, ಅವರು ಮದುವೆಗೆ ಅರ್ಜಿ ಸಲ್ಲಿಸಬಹುದು. ಆದ್ರೆ ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ  ವಯಸ್ಕರಾಗಿರಬೇಕು. ಹುಡುಗನ ವಯಸ್ಸು 21 ವರ್ಷಕ್ಕಿಂತ ಮೇಲಿರಬೇಕು.  ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಮೇಲಿರಬೇಕು. ಈ ಕಾಯ್ದೆಯಡಿ ಮದುವೆಯಾಗ್ಬೇಕು ಎಂದುಕೊಂಡಿರುವ ಜೋಡಿ, ಈ ಹಿಂದೆ ಮದುವೆ ಆಗಿರಬಾರದು. ಅಲ್ಲದೆ ಇಬ್ಬರೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು.  ಇಲ್ಲಿ ನಿಯಮ ಉಲ್ಲಂಘನೆಯಾದ್ರೆ ಅರ್ಜಿಯನ್ನು ವಜಾ ಮಾಡಲಾಗುತ್ತದೆ.  ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವ ದಂಪತಿ ತಮ್ಮ ಪ್ರದೇಶದ ರಿಜಿಸ್ಟ್ರಾರ್ ಮುಂದೆ ಹಾಜರಾಗಿ ಮದುವೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. 

ವಿಶೇಷ ವಿವಾಹ ಕಾಯ್ದೆಯ ತೊಡಗು : ಸಾಮಾನ್ಯವಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸುವ ಜೋಡಿ, ತಮ್ಮ ಮದುವೆಯನ್ನು ಗೌಪ್ಯವಾಗಿಡುವಂತೆ ಕೇಳಿಕೊಳ್ತಾರೆ. ಆದ್ರೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗುವ ಜೋಡಿಗೆ ಇದು ಸಾಧ್ಯವಿಲ್ಲ. ಅದ್ರ ಕಾನೂನು ಸ್ವಲ್ಪ ಭಿನ್ನವಾಗಿದೆ. ಈ ಮದುವೆಗೆ ಅರ್ಜಿ ಸಲ್ಲಿಸಿದ ನಂತ್ರ ದಂಪತಿ 30 ದಿನ ಕಾಯಬೇಕು. ಇದನ್ನು ಸಾರ್ವಜನಿಕ ಸೂಚನೆಯಲ್ಲಿ ಇಡುತ್ತಾರೆ. ಅಂದ್ರೆ ಎರಡೂ ಧರ್ಮದ ಜನರು ಮದುವೆ ಆಗ್ತಿರುವ ಕಾರಣ ಯಾರಿಗಾದ್ರೂ ಈ ಮದುವೆಯಲ್ಲಿ ಆಕ್ಷೇಪವಿದೆಯೇ ಎಂದು ಕೇಳಲಾಗುತ್ತದೆ. ಒಂದ್ವೇಳೆ ಆಕ್ಷೇಪವಿದ್ರೆ ಜನರು ಅದನ್ನು ಲಿಖಿತವಾಗಿ ರಿಜಿಸ್ಟ್ರಾರ್ ಕಚೇರಿಗೆ ತಿಳಿಸಬೇಕು. ಆಗ ಮದುವೆ ಅರ್ಜಿ ವಜಾಗೊಳ್ಳುತ್ತದೆ. ಒಂದ್ವೇಳೆ 30 ದಿನಗಳವರೆಗೆ ಯಾರೂ ಇದಕ್ಕೆ ಆಕ್ಷೇಪ ಸಲ್ಲಿಸದೆ ಹೋದಲ್ಲಿ ಕಾನೂನು ಬದ್ಧ ಮದುವೆಗೆ ಅನುಮತಿ ನೀಡಲಾಗುತ್ತದೆ.

ಈ ನಿಯಮವನ್ನು ತೆಗೆದು ಹಾಕುವಂತೆ ಅನೇಕ ಒತ್ತಡಗಳು ಕೇಳಿ ಬಂದಿವೆ. ಸುಪ್ರೀಂ ಕೋರ್ಟ್ ನಲ್ಲಿಯೂ ಸಾರ್ವಜನಿಕ ನೊಟೀಸ್ ನಿಯಮ ತೆಗೆದು ಹಾಕುವಂತೆ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಈ ನೊಟೀಸ್, ದಂಪತಿ ಸುರಕ್ಷತೆ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಈ ನಿಯಮವನ್ನು ತೆಗೆದು ಹಾಕುವಂತೆ ಒತ್ತಡ ಹೆಚ್ಚಾಗ್ತಿದೆ. 

ಮುಸ್ಲಿಂ ಗೆಳೆಯನ ಮದ್ವೆಯಾದ ಸೊನಾಕ್ಷಿ ಸಿನ್ಹಾ ಅಪ್ಪನಿಗಿತ್ತು ಅಫೇರ್, ಗೊತ್ತಿದ್ದು ಅಮ್ಮ ಸುಮ್ಮನಿದ್ದಿದ್ದೇಕೆ?

ವಿಶೇಷ ಮದುವೆ ಕಾಯ್ದೆಗೆ ಅರ್ಜಿ ಸಲ್ಲಿಸುವ ಜೋಡಿ ಏನು ಮಾಡಬೇಕು? : ಇಬ್ಬರೂ ತಮ್ಮ ಜಿಲ್ಲೆಯ ಮದುವೆ ಅಧಿಕಾರಿಗೆ ಮಾಹಿತಿ ತಿಳಿಸಬೇಕು. ಮಾಹಿತಿಯ ಜೊತೆಗೆ ಎರಡೂ ಪಾಲುದಾರರ ವಯಸ್ಸಿನ ಪುರಾವೆ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಬೇಕು. ಮದುವೆಯಾಗಲು ಉದ್ದೇಶಿಸಿರುವ ಇಬ್ಬರು ಪಾಲುದಾರರಲ್ಲಿ ಯಾರಾದರೂ ಒಬ್ಬರು, ಮದುವೆಗೆ ಅರ್ಜಿ ಸಲ್ಲಿಸುವ ಒಂದು ತಿಂಗಳ ಮೊದಲೇ ನಗರದಲ್ಲಿ ವಾಸವಾಗಿರಬೇಕು. 
 

Latest Videos
Follow Us:
Download App:
  • android
  • ios