Asianet Suvarna News Asianet Suvarna News

ಯಾವ ಚಿತ್ರ ನಿಮ್ಮನ್ನು ಸೆಳೆದಿದೆ? ಪ್ರಪಂಚದ ಕುರಿತ ನಿಮ್ಮ ನಿಲುವು ಹೇಗಿದೆ ತಿಳ್ಕೊಳಿ

ಈ ಕೆಳಗೆ ಒಂದು ಚಿತ್ರವಿದೆ. ಇದರಲ್ಲಿ ಮೂರು ಚಿತ್ರಗಳು ಅಡಕವಾಗಿವೆ. ಯಾವುದನ್ನು ನೀವು ಮೊದಲು ಗುರುತಿಸುತ್ತೀರಿ ಎನ್ನುವದರ ಮೇಲೆ ಪ್ರಪಂಚದ ಕುರಿತು ನಿಮ್ಮ ಭಾವನೆ ಹೇಗಿದೆ ಎನ್ನುವುದನ್ನು ಅರಿತುಕೊಳ್ಳಬಹುದು.
 

See this optical illusion and find your opinion about world personality test sum
Author
First Published Sep 16, 2023, 4:08 PM IST

ಪ್ರಪಂಚವನ್ನು ನಾವು ಹೇಗೆ ನೋಡುತ್ತೇವೋ ಹಾಗೆ ಜೀವನ ಇರುತ್ತದೆ ಎನ್ನಲಾಗುತ್ತದೆ. ಆದರೆ, ನಾವು ವಾಸ್ತವದ ಬದುಕನ್ನು, ಜಗತ್ತನ್ನು ಹೇಗೆ ನೋಡುತ್ತೇವೆ ಎನ್ನುವುದರ ಸ್ಪಷ್ಟ ಕಲ್ಪನೆ ಎಷ್ಟೋ ಬಾರಿ ಇರುವುದಿಲ್ಲ. ಬಹಳಷ್ಟು ಜನ ಪ್ರಪಂಚವನ್ನು ಒಂದು ಸವಾಲು ಎಂದು ಭಾವಿಸಿದರೆ, ಮತ್ತೊಬ್ಬರು ನಾವು ಹೇಗಿರುತ್ತೇವೆಯೋ ಹಾಗೆ ನಮ್ಮ ಸುತ್ತಲಿನ ಜಗತ್ತು ಇರುತ್ತದೆ ಎಂದು ಪರಿಭಾವಿಸುತ್ತಾರೆ. ಅದನ್ನು ಅರಿಯಬೇಕಾದರೆ ಇಲ್ಲೊಂದು ಚಿತ್ರ ನೋಡಿ. ಇದು ಅತ್ಯಂತ ಸಂಯುಕ್ತ ರೇಖೆಗಳುಳ್ಳ ಚಿತ್ರ. ಇದರಲ್ಲಿ ಹಲವು ಚಿತ್ರಗಳು ಅಡಕವಾಗಿವೆ. ಇವುಗಳಲ್ಲಿರುವ ಚಿತ್ರಗಳಲ್ಲಿ ಯಾವುದನ್ನು ಮೊದಲು ನೀವು ಗುರುತಿಸುತ್ತೀರೋ ಅದರಂತೆ ನೀವು ಜಗತ್ತಿನ ಕುರಿತು ನಿಮ್ಮದೇ ಧೋರಣೆ ಹೊಂದಿರುತ್ತೀರಿ. ನಿಮ್ಮದೇ ವಿಧಾನದಲ್ಲಿ ಜಗತ್ತಿನ ಕುರಿತು ವಿವರಣೆ ನೀಡುತ್ತೀರಿ. ನಿಮ್ಮಲ್ಲಿ ಆಂತರಿಕವಾಗಿರುವ ಈ ಭಾವನೆಯನ್ನು ಚಿತ್ರದ ಮೂಲಕ ಅರಿತುಕೊಂಡು ಸ್ಪಷ್ಟತೆ ಪಡೆದುಕೊಳ್ಳಿ. ಈ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಯಾವ ಚಿತ್ರ ನಿಮ್ಮನ್ನು ಮೊದಲು ಸೆಳೆಯುತ್ತದೆ ಎಂದು ನೋಡಿ. ಈ ಚಿತ್ರದಲ್ಲಿ ಬೆಕ್ಕು, ಚಿಟ್ಟೆ, ಯೋಗಿಯ ಚಿತ್ರಗಳು ಅಡಕವಾಗಿವೆ. ನಿಮ್ಮನ್ನು ಮೊದಲು ಸೆಳೆದಿದ್ದು ಯಾವುದು?

•    ಬೆಕ್ಕು (Cat)
ಒಂದೊಮ್ಮೆ ನೀವು ಮೊಟ್ಟಮೊದಲು ಬೆಕ್ಕನ್ನು ಗುರುತಿಸಿದ್ದರೆ ಜೀವನವನ್ನು ಒಂದು ಸವಾಲು (Challenge) ಎಂದು ನೀವು ಭಾವಿಸಿದ್ದೀರಿ. ಅದರಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದುಕೊಳ್ಳುತ್ತೀರಿ. ಜೀವನವನ್ನು (Life) ಎದುರಿಸಲು ನೀವು ಪ್ರತಿದಿನವೂ ಹೊಸದೊಂದು ಶಕ್ತಿ (Energy), ನಿರ್ಧಾರದೊಂದಿಗೆ (Decision) ಸಾಗುತ್ತೀರಿ. ಯುದ್ಧಭೂಮಿಗೆ ಯೋಧ ಹೊರಟ ಮಾದರಿಯಲ್ಲಿ ನಿಮ್ಮ ಸಿದ್ಧತೆ ಇರುತ್ತದೆ. ನಿಮ್ಮಲ್ಲಿ ಅತ್ಯುತ್ಸಾಹ (Enthusiasm) ಇರುತ್ತದೆ. ಅದನ್ನು ಯಾರಿಂದಲೂ ಕುಂದಿಸಲು ಸಾಧ್ಯವಾಗುವುದಿಲ್ಲ. ಆದರೆ, ನೀವು ಜೀವನದಲ್ಲಿ ಒಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನೀವು ಎದುರಾಗುವ ಎಲ್ಲ ಸಮಸ್ಯೆಗಳನ್ನು (Problems) ತಲೆ ಎತ್ತಿಯೇ ಎದುರಿಸಬೇಕು ಎಂದೇನಿಲ್ಲ. ಕೆಲವೊಮ್ಮೆ ಸಮಸ್ಯೆ ಎದುರಿಸುವ ಬದಲು ಹಿಂದಕ್ಕೆ ಸರಿದುಕೊಳ್ಳಬಹುದು. ಅದರಿಂದ ಖಂಡಿತವಾಗಿ ನಷ್ಟವಿಲ್ಲ. ಒಮ್ಮುಖವಾಗಿ ನಡೆಯುವ ಬದಲು ಅಗತ್ಯವಿರುವ ಸಮಯದಲ್ಲಿ ಬದಲಿ ಪರಿಹಾರಗಳ ಬಗ್ಗೆ ಯೋಚಿಸಬೇಕಾಗುತ್ತದೆ. 

Optical Illusion: ಫೋಟೋ ನೋಡಿ, ಮ್ಯಾರೀಡ್ ಲೈಫ್ ಹೇಗಿರುತ್ತೆ ತಿಳ್ಕೊಳ್ಳಿ

•    ಚಿಟ್ಟೆ (Butterfly)
ನೀವು ಒಂದೊಮ್ಮೆ ಚಿಟ್ಟೆಯ ಭಾವಚಿತ್ರದ (Picture) ಬಗ್ಗೆ ಆಕರ್ಷಿತರಾಗಿದ್ದರೆ ಜಗತ್ತಿನ ಸತ್ಯಗಳ (Realm) ಹೊರತಾಗಿ ಇರುವ ಶಕ್ತಿಯನ್ನು ಹೆಚ್ಚಾಗಿ ನಂಬುತ್ತೀರಿ. ಜೀವನದ ಬಗ್ಗೆ ನಿಮ್ಮ ಧೋರಣೆ ಹೇಗಿರುತ್ತದೆ ಎಂದರೆ ಕಣ್ಣಿಗೆ ಕಾಣದ ಶಕ್ತಿಯೇ (Unseen Force) ಜೀವನವನ್ನು ನಿರ್ದೇಶನ (Direct) ಮಾಡುತ್ತದೆ ಎಂದು ಭಾವಿಸುತ್ತೀರಿ. ಹಣೆಬರಹ (Fate), ಅತೀಂದ್ರಿಯ ಶಕ್ತಿಗಳಿಂದ ಜೀವನ ಸಾಗುತ್ತದೆ ಎನ್ನುತ್ತೀರಿ. ನೀವು ಸಂಪ್ರದಾಯಗಳನ್ನು ಪಾಲಿಸುತ್ತೀರಿ. ಜೀವನದಲ್ಲಿ ಎದುರಾಗುವ ಎಲ್ಲ ಅಡೆತಡೆಗಳ ಹೊರತಾಗಿಯೂ ಪರಂಪರೆಯನ್ನು ನಂಬುತ್ತೀರಿ. ಎಲ್ಲವೂ ಅವುಗಳ ಪಾಡಿಗೆ ನಡೆಯುತ್ತಿರುತ್ತದೆ ಎನ್ನುವುದು ನಿಮ್ಮ ನಿಲುವು. ಜಗತ್ತಿನ ಆಗುಹೋಗುಗಳ ಮೇಲೆ ನಿಯಂತ್ರವಿಲ್ಲ ಎಂಬ ನಿಮ್ಮ ಭಾವನೆ ನಿಮ್ಮನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸುವುದಿಲ್ಲ.  

Personality Test: ನೀವು ಶಕ್ತಿಶಾಲಿಯೋ, ಸಹಾನುಭೂತಿಯುಳ್ಳವರೋ? ಈ ಚಿತ್ರದಿಂದ ತಿಳ್ಕೊಳಿ

•    ಯೋಗಿ (Yogi)
ಒಂದೊಮ್ಮೆ ನೀವು ಯೋಗಿ ಮುದ್ರೆಯನ್ನು ಮೊದಲು ಗುರುತಿಸಿದ್ದರೆ, ಜೀವನವನ್ನು ನಿಮ್ಮ ಪಾಡಿಗೆ ನಿರ್ವಹಣೆ ಮಾಡಲು ಇಷ್ಟಪಡುತ್ತೀರಿ. ದೊಡ್ಡ ಮಹತ್ತರ ಕಾರ್ಯಗಳಲ್ಲಿ ನಿಮ್ಮ ಪಾತ್ರದ ಕುರಿತು ಯೋಚನೆ ಮಾಡುವುದಿಲ್ಲ. ಇದರ ಅರ್ಥ ನೀವು ಸ್ವಾರ್ಥಿಗಳು (Self Centered) ಎಂದಲ್ಲ. ಸ್ವಾರ್ಥ ಕೇಂದ್ರಿತ ಚಿಂತನೆಗಳು ನಿಮ್ಮಲ್ಲಿ ಇರುವುದಿಲ್ಲ. ಆದರೆ, ನೀವು ನಿಮ್ಮ ಕ್ಷೇಮ (Well Being) ಹಾಗೂ ಯಶಸ್ಸಿನ (Success) ಬಗ್ಗೆ ಮಾತ್ರವೇ ಕೇಂದ್ರೀಕರಿಸುತ್ತೀರಿ. ಬೇರೆಯವರ ಗೊಡವೆ ನಿಮಗೆ ಬೇಕಿರುವುದಿಲ್ಲ. ವಿಸ್ತಾರವಾದ ಬೇರೆ ಸಂಗತಿಗಳ ಕಡೆಗೆ ಗಮನ ನೀಡುವುದಿಲ್ಲ. ಅವು ನಿಮ್ಮ ಖಾಸಗಿ ಜೀವನದ ಸುಖ ಹಾಗೂ ಶಾಂತಿಗೆ ನೇರವಾಗಿ ಪರಿಣಾಮ ಬೀರುವವರೆಗೂ ನೀವು ನಿಮ್ಮ ಪಾಡಿಗೆ ಇರುತ್ತೀರಿ. 
 

Follow Us:
Download App:
  • android
  • ios