ಆಕೆ ಒಬ್ಬ ಉದ್ಯೋಗಿ. ಹಾಗಂತ ವರ್ಜಿನ್ ಏನಲ್ಲ. ಸೆಕ್ಸ್ ಆಕೆಗೆ ಹೊಸತೂ ಅಲ್ಲ. ಆದರೆ ಅವಳಿಗೆ ತನಗೆ ಬೀಳೋ ಸೆಕ್ಸ್ ಕನಸಿನ ಬಗ್ಗೆ ಅಚ್ಚರಿ. ಇವತ್ತು ಬೆಳಗಿನ ಜಾವ ಅವಳಿಗೊಂದು ಕನಸು ಬಿತ್ತು. ಅದರಲ್ಲಿ ಅವಳ ಎಕ್ಸ್ ಬಾಯ್ ಫ್ರೆಂಡ್ ಬಂದಿದ್ದ. ಅವನ ಜೊತೆಗೆ ಇವಳು ಸೆಕ್ಸ್ ಮಾಡುತ್ತಿದ್ದಳು. ಈ ಕನಸಲ್ಲಿ ಸೆಕ್ಸ್  ಅರ್ಧ ಭಾಗ ಕಲ್ಪನೆಗಳಿಂದ ಕೂಡಿದ್ದರೆ ಇನ್ನರ್ಧ ಭಾಗ ಅವನೊಂದಿಗೆ ಹಿಂದೆ ಲೈಂಗಿಕ ಕ್ರಿಯೆ ನಡೆಸಿದ್ದ ಅನುಭವದ ಹಿನ್ನೆಲೆಯಲ್ಲಿ ಇತ್ತು. ಆದರೆ ಒಂದಂತೂ ನಿಜ. ನಿಜವಾಗಿ ಸೆಕ್ಸ್ ಮಾಡಿದ್ದಕ್ಕಿಂತ ಹೆಚ್ಚು ಗಾಢವಾದ ಅನುಭವ ಹಾಗೂ ಆನಂದ ಈ ಕನಸಿನ ಸೆಕ್ಸ್ ನಿಂದ ಸಿಕ್ಕಿತು. 

ಅವಳಿಗೆ ಇಲ್ಲಿ ಅಚ್ಚರಿಯಾದ ಅಂಶ ಅಂದರೆ ಅವಳು ಅವನನ್ನು ಇತ್ತೀಚೆಗೆ ನೆನೆಸಿಕೊಂಡೂ ಇರಲಿಲ್ಲ. ಅವನ ನೆನಪೇ ಮನಸ್ಸಿನಿಂದ ಹಾರಿ ಹೋಗಿತ್ತು. ನೆನಪೇ ಇಲ್ಲದ ಮೇಲೆ ಅವನ ಜೊತೆಗಿನ ಸೆಕ್ಸ್‌ನ ಕಲ್ಪನೆ ಹೇಗೆ ಸಾಧ್ಯ.. ಅವಳಿಗಿದು ಅರ್ಥವೇ ಆಗಲಿಲ್ಲ. ಈ ಥರ ನಮಗೂ ಆಗುತ್ತಿರುತ್ತೆ. ನಮಗೆ ಜಸ್ಟ್ ಪರಿಚಿತರಾದವರ ಜೊತೆಗೆ ಸೆಕ್ಸ್ ಮಾಡುವ ಕನಸು ಬಿದ್ದಿರುತ್ತದೆ. ಕೆಲವೊಮ್ಮೆ ಅಂಥಾ ಆತ್ಮೀಯತೆ ಇಲ್ಲದ ವ್ಯಕ್ತಿಗಳ ಜೊತೆಗೂ ಸೆಕ್ಸ್ ಮಾಡುವ ಹಾಗೆ ಕನಸು ಬೀಳಬಹುದು. ಎಷ್ಟೋ ಸಲ ಆತ್ಮೀಯರಾಗಿದ್ದರೂ ನಾವು ಅವರ ಜೊತೆಗೆ ಸೆಕ್ಸ್ ಭಾವನೆ ಹೊಂದಿರುವುದಿಲ್ಲ. ಅಂಥವರ ಜೊತೆಗೆ ಸೆಕ್ಸ್ ಮಾಡೋ ಹಾಗೆ ಕನಸು ಬೀಳುತ್ತದೆ. ಎಕ್ಸ್ ಬಾಯ್ ಫ್ರೆಂಡ್ ಗಳು ನೆನೆಸಿಕೊಳ್ಳದೇ ಕನಸಲ್ಲಿ ಬಂದುಬಿಡುತ್ತಾರೆ. ಕೆಲವೊಮ್ಮೆ ಸಂಗಾತಿಯ ಜೊತೆಗೂ ಸೆಕ್ಸ್ ಮಾಡುವಂತೆ ಕನಸು ಬೀಳುತ್ತದೆ. ಮತ್ತೆ ಕೆಲವೊಮ್ಮೆ ನಾವು ಯಾರ ಜೊತೆಗೆ ಆ ಭಾವನೆ ಹೊಂದಿರುತ್ತೇವೋ, ಆದರೆ ಸಾಮಾಜಿಕ ಕಾರಣಕ್ಕೆ ಅವರ ಜೊತೆಗೆ ಲೈಂಗಿಕ ಕ್ರಿಯೆ ನಡೆಸೋದು ಸಾಧ್ಯವಾಗೋದಿಲ್ಲವೋ ಅಂಥವರ ಜೊತೆಗಿರೋ ಡ್ರೀಮ್ ಗಳು ಬೀಳುತ್ತದೆ. 
ಬಹಳಷ್ಟು ಜನರಿಗೆ ಸ್ಟ್ರೇಂಜರ್ಸ್ ಜೊತೆಗೆ ಅಂದರೆ ಅಪರಿಚಿತರ ಜೊತೆಗೆ ಸೆಕ್ಸ್ ಮಾಡುವ ಅನುಭವವಾಗಬಹುದು. 

ಸಂಗಾತಿಯೊಂದಿಗೆ ಹೀಗ್ ನಡಕೊಂಡ್ರೆ ಸಂಬಂಧ ಸುಲಭ, ಸುಂದರ 

ಆದರೆ ಸೆಕ್ಸ್ ಡ್ರೀಮ್ ಗಳನ್ನು ವಿಶ್ಲೇಷಿಸುವವರು ಹೇಳುವ ಮಾತು ಅಚ್ಚರಿ ಮೂಡಿಸುತ್ತದೆ. ಅವರ ಪ್ರಕಾರ, ಕನಸಲ್ಲಿ ಸಂಭವಿಸೋದನ್ನು ಎಷ್ಟೋ ಸಲ ಕಾಮ ಅಂತ ಅಂದುಕೊಂಡು ಬಿಟ್ಟಿರುತ್ತೇವೆ. ಅದು ಕಾಮದಂತೇ ಕಂಡರೂ ಅದು ಸಂಭೋಗವೇ ಆಗಿರಬೇಕಿಲ್ಲ. ಸೆಕ್ಸ್ ಮಾಡೋ ಕನಸು ಬಿದ್ದರೆ ಅದು ದೈಹಿಕವಾಗಿ ಆಗಿರೋದಿಲ್ಲ. ಅಲ್ಲಿ ದೇಹಗಳು ನಿಮಗೆ ಕಾಣಲ್ಲ. ಆದರೆ ಮಾನಸಿಕ ಆನಂದ ಸೆಕ್ಸ್ ನಲ್ಲಿ ಸಿಗುವ ಥರದ್ದಿರಬಹುದು. ಹೆಚ್ಚಾಗಿ ಸೆಕ್ಸ್ ಡ್ರೀಮ್ ದೇಹ ಬಯಸುವ ಸುಖದ ಬಗ್ಗೆ ಇರಲ್ಲ. ಮಾನಸಿಕ ಅವಶ್ಯಕತೆ ಬಗ್ಗೆ ಇರುತ್ತೆ. ಒಬ್ಬ ವ್ಯಕ್ತಿ ಕನಸಲ್ಲಿ ಬಂದರೆ ಆ ವ್ಯಕ್ತಿ ನಿಮಗೆ ಇಷ್ಟ ಆಗಿದ್ದಾನೆ ಅಂತಲ್ಲ. ಆ ವ್ಯಕ್ತಿಯ ಯಾವುದೋ ಒಂದು ಗುಣವನ್ನು ನಿಮ್ಮ ಗುಣದ ಜೊತೆಗೆ ಸಮೀಕರಿಸಲು ನೀವು ಇಷ್ಟ ಪಡುತ್ತಿದ್ದೀರಿ ಅಂತ ಅರ್ಥ ಆಗುತ್ತೆ. ನೆನೆಸದೇ ಇದ್ದ ಬಾಯ್ ಫ್ರೆಂಡ್ ಜೊತೆಗೆ ಸೆಕ್ಸ್ ಮಾಡುವ ಹಾಗೆ ಅವಳಿಗೆ ಕನಸು ಬಿತ್ತು ಅಂತಾದರೆ ಇವಳು ನಿರೀಕ್ಷಿಸುವ ಯಾವುದೋ ಗುಣ ಅವಳ ಎಕ್ಸ್ ಬಾಯ್ ಫ್ರೆಂಡ್ ಹತ್ತಿರ ಇದ್ದಿರಬಹುದು. ಆ ಗುಣವನ್ನು ತನ್ನೊಳಗೆ ಸೇರಿಕೊಳ್ಳಬೇಕು ಎಂಬ ಯೋಚನೆ ಸುಪ್ತ ಮನಸ್ಸಿನಲ್ಲಿ ಇದ್ದಿರಬಹುದು. ಅದಕ್ಕೆ ಆತನ ಜೊತೆಗೆ ಸೆಕ್ಸ್ ಮಾಡುವಂಥಾ ಕನಸು ಬಿದ್ದಿರಬಹುದು. 

#FeelFree: ಹಸ್ತ ಮೈಥುನದಿಂದ ನಾನು ಪ್ರೆಗ್ನೆಂಟ್‌ ಆಗಿರಬಹುದಾ? 

"

ನಿಮ್ಮ ಬಾಸ್ ಜೊತೆಗೆ ಸೆಕ್ಸ್ ಮಾಡುವಂತೆ ನಿಮಗೆ ಕನಸು ಬಿದ್ದರೂ ನೀವು ಭಯ ಪಡಬೇಕಿತ್ತು. ದೊಡ್ಡ ಅಪರಾಧವಾಯಿತು ಅಂತ ಪಾಪಪ್ರಜ್ಞೆಯಲ್ಲಿ ನರಳಬೇಕಿಲ್ಲ. ನೀವು ಕೆರಿಯರ್‌ನಲ್ಲಿ ಅವರಂತಾಗಲು ಇಷ್ಟಪಟ್ಟರೂ ನಿಮಗೆ ಆ ಬಗೆಯ ಕನಸು ಬೀಳುವ ಸಾಧ್ಯತೆ ಇದೆ. ಜೊತೆಗೆ ಅವರ ಯಾವುದೋ ಗುಣ ನಿಮ್ಮನ್ನು ತೀವ್ರವಾಗಿ ಸೆಳೆದಿದ್ದರೂ ಹೀಗಾಗಬಹುದು. ಇದೆಲ್ಲ ಅಲ್ಲದೆಯೂ ಕಾಮದ ಬಗೆಯನ್ನು ಪದೇ ಪದೇ ಅದುಮಿಟ್ಟರೆ ಅದು ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.