Asianet Suvarna News Asianet Suvarna News

ಮಕ್ಕಳು ಯಾವಾಗ್ಲೂ ಭಯ ಅಂತಾರ, ಕಾನ್ಫಿಡೆನ್ಸ್ ಹೆಚ್ಚಿಸೋಕೆ ಇಲ್ಲಿದೆ ಸಿಂಪಲ್ ಟಿಪ್ಸ್‌

ಮಕ್ಕಳ ಆತ್ಮವಿಶ್ವಾಸ ತುಂಬಾ ಕಡಿಮೆಯಿರುತ್ತದೆ. ಹೆತ್ತವರು ಎಷ್ಟೇ ಪ್ರೋತ್ಸಾಹ ನೀಡಿದರೂ ಮಕ್ಕಳು ಅಪರಿಚಿತರನ್ನು ಕಂಡಾಗ ಭಯಪಡುತ್ತಾರೆ. ನಿಮ್ಮ ಮಕ್ಕಳು ಸಹ ಇದೇ ರೀತಿ ಮಾಡ್ತಾರಾ..ಹಾಗಿದ್ರೆ ಮಕ್ಕಳ ಕಾನ್ಫಿಡೆನ್ಸ್ ಹೆಚ್ಚಿಸೋಕೆ ಈ ಸಿಂಪಲ್ ಟಿಪ್ಸ್ ಯೂಸ್ ಮಾಡಿ.

Parenting tips, ways to boost confidence in your children Vin
Author
First Published Mar 2, 2024, 3:50 PM IST

ಅನೇಕ ಮಕ್ಕಳು ತಮ್ಮಲ್ಲಿ ಪ್ರತಿಭೆ ಇದ್ದರೂ ಅದನ್ನು ಎಲ್ಲರ ಮುಂದೆ ತೋರಿಸಲು ಹೆದರುತ್ತಾರೆ. ಯಾಕೆಂದರೆ ಮಕ್ಕಳ ಆತ್ಮವಿಶ್ವಾಸ ತುಂಬಾ ಕಡಿಮೆಯಿರುತ್ತದೆ. ಸ್ಟೇಜ್ ಫಿಯರ್ ಇರುತ್ತದೆ. ಹೆತ್ತವರು ಎಷ್ಟೇ ಪ್ರೋತ್ಸಾಹ ನೀಡಿದರೂ ಮಕ್ಕಳು ಅಪರಿಚಿತರನ್ನು ಕಂಡಾಗ ಭಯಪಡುತ್ತಾರೆ. ನಿಮ್ಮ ಮಕ್ಕಳ ಸಹ ಇದೇ ರೀತಿ ಮಾಡ್ತಾರಾ..ಮನೆಯಲ್ಲಿ ಚುರುಕಾಗಿದ್ರೂ ಸಾರ್ವಜನಿಕವಾಗಿದ್ದಾಗ ಭಯ ಭಯ ಅಂತ ಹಿಂದೆ ನಿಲ್ತಾರಾ..ಹಾಗಿದ್ರೆ ಮಕ್ಕಳ ಕಾನ್ಫಿಡೆನ್ಸ್ ಹೆಚ್ಚಿಸೋಕೆ ಈ ಸಿಂಪಲ್ ಟಿಪ್ಸ್ ಯೂಸ್ ಮಾಡಿ.

ಇತರ ಮಕ್ಕಳಿಗೆ ಹೋಲಿಸದಿರಿ
ಮಕ್ಕಳ ಕಾನ್ಫಿಡೆನ್ಸ್ ಹೆಚ್ಚಿಸುವ ಮುಖ್ಯ ಅಂಶವೆಂದರೆ ಮಕ್ಕಳನ್ನು ಮತ್ತೊಬ್ಬರಿಗೆ ಹೋಲಿಸುವುದನ್ನು ನಿಲ್ಲಿಸಬೇಕು. ಎಲ್ಲಾ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಎಲ್ಲರೂ ವಿಭಿನ್ನವಾಗಿರುತ್ತಾರೆ. ಹೀಗಾಗಿ ಆಗಾಗ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡುವುದರಿಂದ.. ಮಕ್ಕಳ ಆತ್ಮವಿಶ್ವಾಸದ ಮಟ್ಟವು ಕಡಿಮೆಯಾಗುತ್ತದೆ. 

ಮಕ್ಕಳನ್ನು ಮನೇಲಿ ಒಂಟಿಯಾಗಿ ಬಿಟ್ಟು ಹೋಗೋ ಮುನ್ನ ಈ ವಿಚಾರ ಗಮನದಲ್ಲಿರಲಿ
 
ಮುಕ್ತ ಸಂವಹನ ಅಗತ್ಯ

ಮಕ್ಕಳೊಂದಿಗೆ ಯಾವಾಗ ಮುಕ್ತವಾಗಿ ಸಂವಹನ ನಡೆಸುವುದು ಮುಖ್ಯ. ಇದರಿಂದ ಅವರು ತಮ್ಮ ಮನಸ್ಸಿನಲ್ಲಿರುವ ಯಾವುದೇ ವಿಷಯವನ್ನು ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಆಗ ಮಾತ್ರ, ಎಲ್ಲದಕ್ಕೂ ಹೆದರದೆ ಆತ್ಮವಿಶ್ವಾಸದಿಂದ ಇರಲು ಕಲಿಯುತ್ತಾರೆ.

ಸೇಫ್‌ ಭಾವನೆ ಮೂಡಿಸಬೇಕು
ಮಕ್ಕಳಲ್ಲಿ ಸುರಕ್ಷಿತವಾಗಿದ್ದೇವೆ ಅನ್ನೋ ಭಾವನೆಯನ್ನು ಮೂಡಿಸುವುದು ಮುಖ್ಯ. ಅವರಿಗೆ ಬೆನ್ನೆಲುಬಾಗಿ ನಾವಿದ್ದೇವೆ ಅನ್ನೋ ಭರವಸೆಯನ್ನು ನೀಡಿದಾಗ ಮಕ್ಕಳು ತುಂಬಾ ಆತ್ಮವಿಶ್ವಾಸದಿಂದ ಇರುತ್ತಾರೆ. ಅಂತಹ ವಾತಾವರಣ ನಿರ್ಮಿಸಲು ಪೋಷಕರು ಪ್ರಯತ್ನಿಸಬೇಕು.

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ
ಮಕ್ಕಳು ಸೃಜನಾತ್ಮಕವಾಗಿ ಏನನ್ನಾದರೂ ಮಾಡಿದಾಗ, ಅದನ್ನು ಟೀಕಿಸುವ ಬದಲು ವಾಹ್ ಎಂದು ಹೇಳುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಾರ್ವಜನಿಕವಾಗಿ ಇನ್ನಷ್ಟು ಕಾನ್ಫಿಡೆನ್ಸ್ ಆಗಿ ಇರಲು ನೆರವಾಗುತ್ತದೆ.

ಮಕ್ಕಳು ತಪ್ಪು ಮಾಡಿದಾಗ ಕಿರುಚಾಡ್ಬೇಡಿ, ಪರಿಸ್ಥಿತಿ ನಿಭಾಯಿಸಲು ಹೀಗ್ಮಾಡಿ

ಸಮಸ್ಯೆ ಬಗೆಹರಿಸಲು ಕಲಿಸಿ
ಮಕ್ಕಳಿಗೆ ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಕಲಿಸಬೇಕು. ಅಗತ್ಯವಿದ್ದಾಗ ನೀವು ಸಹ ಅವರಿಗೆ ಸಹಾಯ ಮಾಡಬೇಕು. ನೀವು ಏನು ಬೇಕಾದರೂ ಮಾಡಬಹುದು.. ಆ ಸಾಮರ್ಥ್ಯ ನಿಮ್ಮಲ್ಲಿದೆ ಎಂಬುದಾಗಿ ಪ್ರತಿ ನಿಮಿಷವೂ ಅವರನ್ನು ಬೂಸ್ಟ್ ಮಾಡುತ್ತಿರಬೇಕು.

ಪೋಷಕರು ಪಾಸಿಟಿವ್ ಆಗಿರಬೇಕು
ಮೊದಲನೆಯದಾಗಿ, ಪೋಷಕರು ಸಕಾರಾತ್ಮಕವಾಗಿರಬೇಕು. ತಂದೆ-ತಾಯಿಯಲ್ಲಿ ಸಕಾರಾತ್ಮಕತೆ ಇದ್ದರೆ ಮಕ್ಕಳಲ್ಲೂ ಆ ಸಕಾರಾತ್ಮಕತೆ ಬೆಳೆಯುತ್ತದೆ. ಕಡಿಮೆ ಅಂಕಗಳಿಗೆ ಬೈಯಬೇಡಿ, ಮಕ್ಕಳ ಶಾಲಾ ಕಾರ್ಯಕ್ರಮದಲ್ಲಿ ಕಳಪೆ ಪ್ರದರ್ಶನ ನೀಡಿದಾಗ ಟೀಕಿಸಬೇಡಿ.

ತಪ್ಪಾದಾಗ ಮಕ್ಕಳನ್ನು ಶಿಕ್ಷಿಸದಿರಿ
ಏನಾದರೂ ಸಾಧಿಸದಿದ್ದರೆ ಮನೆಯಲ್ಲಿ ತಂದೆ-ತಾಯಿ ಶಿಕ್ಷೆ ಕೊಡುತ್ತಾರೆ ಎಂಬ ಭಯ ಅವರಲ್ಲಿ ಬೇಡ. ಅಂತಹ ಭಯವಿದ್ದರೆ, ಮಕ್ಕಳ ಆತ್ಮವಿಶ್ವಾಸದ ಮಟ್ಟ ಕುಸಿಯುತ್ತದೆ. ಹಾಗಾಗಿ ಅವರನ್ನು ಶಿಕ್ಷಿಸದೆ ಪ್ರೀತಿಯಿಂದ ಮುಂದೆ ಸಾಗುವಂತೆ ಪ್ರೋತ್ಸಾಹಿಸಬೇಕು. 

Follow Us:
Download App:
  • android
  • ios