ಐಟಿ ಉದ್ಯೋಗಿಗಳಿಗೆ, ಉತ್ತಮ ಸಂಬಳವಿದ್ದರೂ ಮದುವೆಯಾಗುವುದು ಕಷ್ಟಕರವಾಗಿದೆ. ವಧು-ಪೋಷಕರ ಬೇಡಿಕೆಗಳು ಹೆಚ್ಚಿವೆ. ಲಕ್ಷಾಂತರ ಸಂಬಳ, ಕಾರು-ಮನೆ ಇದ್ದರಷ್ಟೇ ಮದುವೆಗೆ ಒಪ್ಪಿಗೆ ಸಿಗುತ್ತಿದೆ. ಈ ಸಮಸ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಯುವಕರ ಆರ್ಥಿಕ ಒತ್ತಡದ ಬಗ್ಗೆ ಚಿಂತೆ ವ್ಯಕ್ತವಾಗಿದೆ. ಹೆಚ್ಚುತ್ತಿರುವ ನಿರೀಕ್ಷೆಗಳು ಮದುವೆಯನ್ನು ವ್ಯಾಪಾರೀಕರಣಗೊಳಿಸುತ್ತಿವೆ ಎಂಬ ವಿಮರ್ಶೆ ಕೇಳಿಬರುತ್ತಿದೆ.

ಮದುವೆ (Marriage)ಯಾಗೋದು ಈಗ ಸುಲಭವಲ್ಲ. ಒಳ್ಳೆ ಸಂಬಳ (salary), ಮನೆ, ಕಾರು ಸೇರಿದಂತೆ ಐಷಾರಾಮಿ ಸೌಲಭ್ಯಗಳಿದ್ರೂ ಮದುವೆ ಆಗೋದು ಕಷ್ಟ. ಮಗ ಇಂಜಿನಿಯರ್ (Engineer), ಮಗ ಡಾಕ್ಟರ್ ಅಂತ ಪಾಲಕರು ಮದುವೆ ಮಾಡಲು ಮುಂದಾದ್ರೂ ಹೆಣ್ಣು ಸಿಗೋದಿಲ್ಲ. ವಧುವಿನ ಜೊತೆ ವಧುವಿನ ಪಾಲಕರ ಬೇಡಿಕೆ ಬೆಟ್ಟದಷ್ಟಿರುತ್ತದೆ. ವ್ಯಕ್ತಿಯೊಬ್ಬರು ಐಟಿಯಲ್ಲಿ ಕೆಲಸ ಮಾಡೋರಿಗೆ ಹುಡುಗಿ ಸಿಗ್ತಿಲ್ಲ ಎಂಬ ಚರ್ಚಾಸ್ಪದ ವಿಷ್ಯದ ಬಗ್ಗೆ ಸೋಶಿಯಲ್ ಮೀಡಿಯಾ (Social Media)ದಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. 

ಐಟಿ ವಲಯ (IT Sector )ದಲ್ಲಿ ಉದ್ಯೋಗದ ಸಂಖ್ಯೆ ಹೆಚ್ಚಿದೆ. ಇಂಜಿನಿಯರಿಂಗ್ ಮಾಡುವವರ ಸಂಖ್ಯೆ ಕೂಡ ಅಷೇ ಹೆಚ್ಚಿದೆ. ಸಾಮಾನ್ಯವಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಳ ಕೂಡ ಜಾಸ್ತಿ. ಆದ್ರೆ ಅವರಿಗೆ ಬರ್ತಿರೋ ಸಂಬಳ ಮದುವೆಗೆ ಸಾಲ್ತಿಲ್ಲ. ಕೆಲಸ ಸಿಕ್ಕ ಕೆಲ ವರ್ಷಗಳ ಕಾಲ ಸಂಬಳ ಕಡಿಮೆ ಇರೋದು ಸಹಜ. ಈ ವಾಸ್ತವನ್ನು ಒಪ್ಪಿಕೊಳ್ಳದ ವಧು ಪಾಲಕರು ಮದುವೆ ಮಾಡಲು ಮುಂದೆ ಬರೋದಿಲ್ಲ. ಅವರಿಗೆ ಅಳಿಯ ಎಷ್ಟು ಒಳ್ಳೆಯವನು ಎಂಬುದಕ್ಕಿಂತ ಅಳಿಯನ ಸಂಬಳ ಎಷ್ಟು ಎಂಬುದು ಮುಖ್ಯವಾಗ್ತಿದೆ. ಅಳಿಯ ಲಕ್ಷ, ಎರಡು ಲಕ್ಷದ ಮೇಲೆ ಸಂಬಳ ತಂದ್ರೆ ಸೆಟಲ್ ಆಗಿದ್ದಾನೆ ಎಂದರ್ಥ. ಇದ್ರ ಜೊತೆ ಕಾರು, ಮನೆ ಇರ್ಲೇಬೇಕು. ಈ ಸತ್ಯವನ್ನು ಹೂಡಿಕೆದಾರರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊಸ ಇಂಜಿನಿಯರ್ ಗಳ ಆರ್ಥಿಕ ಒತ್ತಡ ಹಾಗೂ ಮದುವೆ ಬಗ್ಗೆ ಅವರು ಬೆಳಕು ಚೆಲ್ಲುವ ಪ್ರಯತ್ನ ನಡೆಸಿದ್ದಾರೆ. 

ವಯಸ್ಸಾದ ಮಹಿಳೆಯರಿಗ್ಯಾಕೆ ತಮಗಿಂತ ಸಣ್ಣ ವಯಸ್ಸಿನ ಪುರುಷ ಇಷ್ಟ ಆಗ್ತಾನೆ?

ವಿನೀತ್ ಎಂಬ ಉದ್ಯಮಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮದುವೆ ಮಾತುಕತೆ ಸಮಯದಲ್ಲಿ ವರನಿಂದ ಸಂಬಳ ನಿರೀಕ್ಷೆ ಹುಚ್ಚುತನವಾಗಿದೆ. ಐಟಿ ವಲಯದಲ್ಲಿರುವ ಉದ್ಯೋಗಿಗಳು ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ರೂ ಅದು ಲೆಕ್ಕಕ್ಕಿಲ್ಲ. ಪೋಷಕರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ವಿನೀತ್ ಬರೆದಿದ್ದಾರೆ. 28 ವರ್ಷದ ಯುವಕನೊಬ್ಬ ಒಂದು ಅಥವಾ ಎರಡು ಲಕ್ಷ ರೂಪಾಯಿ ಸಂಬಳದ ಜೊತೆ ಕಾರು ಮತ್ತು ಸ್ವಂತ ಮನೆ ಹೊಂದಲು ಹೇಗೆ ಸಾಧ್ಯ? ನೀವೆಲ್ಲ ನಿವೃತ್ತಿ ಟೈಂನಲ್ಲಿ ಇದನ್ನು ಗಳಿಸಿದ್ರಿ ಎಂದು ವಿನೀತ್ ಪೋಸ್ಟ್ ನಲ್ಲಿ ಬರೆದಿದ್ದಾರೆ. 

Wife Habits : ಪತ್ನಿಯ 5 ಅಭ್ಯಾಸಗಳು ಗಂಡನಿಗೆ ನರಕ

ಈ ಪೋಸ್ಟ್ ಮಿಲಿಯನ್ ವೀವ್ಸ್ ಪಡೆದಿದೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಭಾರತದಲ್ಲಿ ವಿವಾಹದ ಪರಿಸ್ಥಿತಿ ನಿಜವಾಗಿಯೂ ಕಷ್ಟಕರವಾಗುತ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಬೆಂಗಳೂರಿನಂತಹ ಮೆಟ್ರೋ ನಗರದಲ್ಲಿ ಒಂದು ಲಕ್ಷ ಸಂಬಳ ಎಲ್ಲಿ ಸಾಕಾಗುತ್ತದೆ. ಮಕ್ಕಳಿಲ್ಲದ ದಂಪತಿಗೆ 60 ಸಾವಿರ ಸಂಬಳ ಬಂದ್ರೂ ಜೀವನ ಕಷ್ಟ ಎಂದು ಇನ್ನೊಬ್ಬರು ಬರೆದಿದ್ದಾರೆ. ಉತ್ತಮ ಸಂಬಳಕ್ಕೆ ಕಾಯುವ ಜನರು 30 ರಿಂದ 35 ವರ್ಷದಲ್ಲಿ ಮದುವೆ ಆಗ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ರೆ, ಐಟಿ ಹಬ್‌ನಲ್ಲಿ 1 ಲಕ್ಷ ರೂಪಾಯಿ ಸಂಬಳ ಸಿಗುತ್ತೆ. ಆದ್ರೆ ಒಂದು ಲಕ್ಷದಲ್ಲಿ ಆರಾಮವಾಗಿ ಕುಟುಂಬ ನಡೆಸೋದು ಕಷ್ಟ ಎಂದು ಮತ್ತೊಬ್ಬರು ಬರೆದಿದ್ದಾರೆ. ಮದುವೆ ಈಗ ಬ್ಯುಸಿನೆಸ್ ಆಗಿದೆ. ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ, ಮದುವೆ ಆಗ್ದೆ ಇರೋದೆ ಒಳ್ಳೆಯದು ಎಂಬೆಲ್ಲ ಮಾತುಗಳು ಕೇಳಿ ಬಂದಿವೆ. ಹೆಣ್ಣು ಹೆತ್ತವರ ನಿರೀಕ್ಷೆ ಸಹಜ. ಪುರುಷನಿಗೆ ಸಮನಾಗಿ ಇಲ್ಲವೆ ಹತ್ತಿರವಾಗಿ ಹುಡುಗಿ ಹಣ ಸಂಪಾದನೆ ಮಾಡುವ ಈ ಕಾಲದಲ್ಲಿ ವರ ಅದಕ್ಕಿಂತ ಹೆಚ್ಚು ಗಳಿಸಬೇಕೆಂದು ಪಾಲಕರು ನಿರೀಕ್ಷಿಸುತ್ತಾರೆಂದು ಕೆಲವರು ಹುಡುಗಿ ಹಾಗೂ ಅವರ ಪಾಲಕರ ಪರ ಬ್ಯಾಟ್ ಬೀಸಿದ್ದಾರೆ.

Scroll to load tweet…