Asianet Suvarna News Asianet Suvarna News

Life Partner: ಇಷ್ಟವಿಲ್ಲದ ಸಂಗಾತಿ ಜೊತೆ ಏಗೋದ್ ಹೇಗೆ?

ಯೋಗದಲ್ಲಿದ್ದಿದ್ದಕ್ಕೇ ಸಿಕ್ಕಿದ್ದು ಅಂದ್ಮೇಲೆ ಜೊತೆಗೆ ಏಗ್ಲೇಬೇಕು. ಇಷ್ಟವಿಲ್ಲದ ಸಂಗಾತಿಯೊಂದಿಗಿನ ಬದುಕನ್ನ ಸಹ್ಯವಾಗಿಸಿಕೊಳ್ಳೋಕೆ, ಆ ಮೂಲಕ ಇಷ್ಟದ ಹಾದಿಗೆ ತರೋಕೆ ಪ್ರಯತ್ನ ಹಾಕಬೇಕು. ಏಕೆಂದರೆ, ವಿವಾಹದ ನಂತರ ಎದುರಾಗುವ ಸಮಸ್ಯೆಗಳಿಗೆಲ್ಲ ಡೈವೋರ್ಸ್ ಪರಿಹಾರವಲ್ಲ. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರತ್ತೆ. ಅದೇನೆಂದು ಕಂಡುಕೊಂಡು ಮುಂದೆ ಹೆಜ್ಜೆ ಇಡೋದೇ ಜಾಣತನ. 

How to deal with a spouse you don't like SKR
Author
Bangalore, First Published Nov 23, 2021, 5:46 PM IST
  • Facebook
  • Twitter
  • Whatsapp

ನಿಮ್ಮದು ಲವ್ ಮ್ಯಾರೇಜಾದ್ರೂ (love marriage) ಆಗಿರ್ಲಿ, ಆರೇಂಜ್ಡ್ ಮ್ಯಾರೇಜೇ ಆಗಿರ್ಲಿ- ಎಲ್ಲರೂ ಕಾಲ ಕಳೆದಂತೆ ಬದಲಾಗುತ್ತಾರೆ. ಅನುಭವಗಳ ಆಧಾರದಲ್ಲಿ ನಮಗೇ ಗೊತ್ತಿಲ್ಲದೆ ನಾವು ಬೇರೆಯದೇ ವ್ಯಕ್ತಿಯಾಗಿ ಬಿಟ್ಟಿರುತ್ತೇವೆ. ಈ ಬದಲಾವಣೆ ಸರ್ವೇಸಾಮಾನ್ಯವಾದರೂ ಇದರಿಂದ ವಿವಾಹ ಜೀವನದಲ್ಲಿ ಸಮಸ್ಯೆಗಳು ಆರಂಭವಾಗಬಹುದು. ನೀನೀಗ ಬಹಳ ಬದಲಾಗಿದ್ದಿ ಎಂದು ಶುರುವಾಗುವ ದೂರುಗಳು ಜೊತೆಗಿರುವವರನ್ನು ದ್ವೇಷಿಸುವ ಮಟ್ಟಕ್ಕೆ ಬೆಳೆಯಬಹುದು. ಇಲ್ಲವೇ ಶುರುವಿನಿಂದಲೇ ಸಂಗಾತಿ ತನ್ನಿಷ್ಟದಂತಿಲ್ಲ ಎನಿಸಿ ಅವರ ಬಗ್ಗೆ ಅಸಡ್ಡೆ ಮೂಡಿರಬಹುದು. ಹಾಗಂಥ ಇದಕ್ಕೆಲ್ಲ ಡೈವೋರ್ಸ್ (Divorce) ಪರಿಹಾರವಲ್ಲ. ಏಕೆಂದರೆ ಡೈವೋರ್ಸ್ ಬಹಳಷ್ಟು ಬಾರಿ ಸಮಸ್ಯೆ ನಿಭಾಯಿಸುವುದಕ್ಕಿಂತ ಬದುಕನ್ನು ಜಟಿಲಗೊಳಿಸುವುದೇ ಹೆಚ್ಚು. 
ಬದಲಿಗೆ ಪರಿಸ್ಥಿತಿ ನಿಭಾಯಿಸುವ ಜಾಣತನ ಬೆಳೆಸಿಕೊಂಡು, ಪರಿಹಾರದ ದಾರಿಗಳಲ್ಲಿ ಹೆಜ್ಜೆ ಇಡುವುದರಿಂದ ಬಹಳಷ್ಟು ಸಂಸಾರಗಳಲ್ಲಿ ಸಂತೋಷ ತುಂಬುತ್ತದೆ. ನೀವೂ ಕೂಡಾ ಇಷ್ಟವಿಲ್ಲದ ಸಂಗಾತಿಯೊಡನೆ ದಿನ ದೂಡುತ್ತಿದ್ದೀರಾದರೆ, ಖುಷಿಯಿಂದ ಓಡುವ ದಿನಗಳನ್ನು ನೋಡಲು ಹೀಗೆ ಮಾಡಿ ನೋಡಿ. 

ಪಾಸಿಟಿವ್ ನೋಡಿ
ಯಾರೂ ಪರ್ಫೆಕ್ಟ್ ಆಗಿರೋಕೆ ಸಾಧ್ಯವಿಲ್ಲ. ಎಲ್ಲರಲ್ಲೂ ಒಂದಿಷ್ಟು ಪ್ಲಸ್ಸು, ಮೈನಸ್ಸು ಇದ್ದೇ ಇರುತ್ತದೆ. ಇಷ್ಟು ದಿನ ನಿಮ್ಮ ಸಂಗಾತಿಯ (Spouse) ಕೆಟ್ಟ ಗುಣಗಳನ್ನೆಲ್ಲ ಸಾಕಷ್ಟು ಪಟ್ಟಿ ಮಾಡಿದ್ದೀರಿ. ಈಗೊಂದು ವಾರ, ಅದೆಲ್ಲವನ್ನು ಪ್ರಯತ್ನಪೂರ್ವಕವಾಗಿ ಕಡೆಗಣಿಸಿ, ಅವರ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿ. ಹೀಗೆ ಏಳು ದಿನದ ಕಾಲ ಅವರಲ್ಲಿ ಕಾಣೋ ಪ್ರತಿ ಒಳ್ಳೆ ಅಂಶಗಳನ್ನೂ ನೋಟ್‌ಬುಕ್‌ನಲ್ಲಿ ಬರೆದಿಡಿ. 

Matrimonial Ad :ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್

ಮಾತನಾಡಿ (communicate)
ಯಾವುದೇ ಸಮಸ್ಯೆಗೂ ಪರಿಹಾರ ನೀಡಬಲ್ಲ ಶಕ್ತಿ ಮಾತಿಗಿದೆ. ಅದರಲ್ಲೂ ಸಂಬಂಧವೊಂದನ್ನು ಬೆಸೆಯುವ ಅಥವಾ ಬ್ರೇಕ್ ಮಾಡುವ ಕೆಲಸವೆರಡನ್ನೂ ಮಾತು ಮಾಡಬಲ್ಲದು. ಅದಕ್ಕೇ ಹೆಚ್ಚು ಯೋಚಿಸುವ ಬದಲು ನಿಮ್ಮ ಸಂಗಾತಿಯೊಡನೆ ಮಾತಿಗಿಳಿಯಿರಿ. ಅವರಲ್ಲಿ ನಿಮಗೇನು ಇಷ್ಟವಾಗುತ್ತಿಲ್ಲವೆಂಬುದನ್ನು ನೇರವಾಗಿ ತಿಳಿಸಿ. ಅವರು ಹೇಗಿದ್ದರೆ ಚೆನ್ನಾಗಿರುತ್ತದೆ ಎಂದೂ ಹೇಳಿ. ನಿಮ್ಮ ಸಂಗಾತಿಯಲ್ಲಿ ನಿಮಗೇನು ಇಷ್ಟವಾಗುತ್ತಿಲ್ಲ ಅನ್ನೋದನ್ನ ನೀವಲ್ಲದೆ ಮತ್ಯಾರು ತಾನೇ ಹೇಳಲಾದೀತು? ಬಹುಷಃ ಅವರಿಗೆ ತಮ್ಮ ತಪ್ಪು ಅರಿವಿಲ್ಲದಿರಬಹುದು. ಅಥವಾ ನಿಮಗಾಗಿ ತಮ್ಮನ್ನು ಬದಲಾಯಿಸಿಕೊಳ್ಳಲು ಸಿದ್ಧರಿರಬಹುದು. 

ಏಕಾಂತ
ವಿವಾಹವಾದ ಮೇಲೆ ನೀವಿಬ್ಬರೇ ಕಳೆಯುವ ಕ್ಷಣಗಳೆಲ್ಲವೂ ಅಮೂಲ್ಯವಾದವೇ. ಸಾಧ್ಯವಾದಷ್ಟು ಇಬ್ಬರೇ ಒಟ್ಟಿಗಿರಲು ಪ್ರಯತ್ನಿಸಿ. ಟ್ರಿಪ್ ಹೋಗುವುದು, ಕನಿಷ್ಠ ಪಕ್ಷ ಒಟ್ಟಿಗೇ ವಾಕ್ ಹೋಗುವುದು, ಲಂಚ್ ಡೇಟ್, ಮೂವಿಗೆ ಹೋಗುವುದು... ಇದು ಸ್ಟ್ರೆಸ್  (stress) ಕಡಿಮೆ ಮಾಡಿ ನಿಮ್ಮಿಬ್ಬರ ಮನಸ್ಸನ್ನೂ ಹೆಚ್ಚು ಕ್ಲಿಯರ್ ಮಾಡುತ್ತದೆ. ಅಲ್ಲದೆ  ಇಬ್ಬರಿಗೂ ಮನಸು ಬಿಚ್ಚಿ ಮಾತನಾಡಲು ಅವಕಾಶ ನೀಡುತ್ತದೆ. 

Yes Its LOVE : ಅವ್ರನ್ನ ನೋಡ್ತಿದ್ದಂಗೆ ಹೀಗೆಲ್ಲಾ ಆಗ್ತಿದೆ ಅಂದ್ರೆ ನಿಮಗೆ LOVE ಆಗಿದೆ

ದೂರಬೇಡಿ
ಬ್ಲೇಮ್ ಗೇಮ್ (blame game) ಯಾವತ್ತಿಗೂ ಒಳ್ಳೆಯದಲ್ಲ. ಅದರಿಂದ ಪ್ರಯೋಜನವೂ ಇಲ್ಲ. ಇಬ್ಬರೂ ತಪ್ಪನ್ನು ಮಾಡಿರುತ್ತೀರಿ. ಅವರವರ ತಪ್ಪು ಅವರಿಗೆ ತಿಳಿಯುತ್ತಿರುವುದಿಲ್ಲವಷ್ಟೇ. ಅಥವಾ ಉದ್ದೇಶ ತಿಳಿದಿರುವುದಿಲ್ಲ. ಹೀಗಾಗಿ ಮಾತನಾಡುವಾಗ ದೂರುವ ಬದಲು, ನನಗೆ ನಿನ್ನ ಇಂಥ ವರ್ತನೆಗಳು ಹಿಡಿಸುವುದಿಲ್ಲ ಎಂದರೆ ಸಾಕು. ಅದು ಬಿಟ್ಟು ದೂರುವುದರಲ್ಲಿ ತೊಡಗಿದರೆ ಆ ಮಾತುಗಳು ಜೀವನಪರ್ಯಂತ ಮನಸ್ಸಿನಲ್ಲಿ ಕುಳಿತುಬಿಡುತ್ತವೆ. ಈ ಸಂದರ್ಭದಲ್ಲಿ ನಿಮ್ಮ ತಪ್ಪುಗಳೂ ನಿಮಗರಿವಿದ್ದರೆ ಅವನ್ನು ಒಪ್ಪಿಕೊಂಡುಬಿಡಿ. ಇಬ್ಬರೂ ಸೇರಿ ಸಂಬಂಧವನ್ನು ಸರಿ ಮಾಡಿಕೊಳ್ಳುವ ಮಾತುಗಳನ್ನಾಡಿಕೊಳ್ಳುವುದು ಬೆಸ್ಟ್. 

ಕೌನ್ಸೆಲಿಂಗ್ (Counselling)
ಕಪಲ್ಸ್ ಥೆರಪಿ ಈಗಂತೂ ಸಾಮಾನ್ಯ ವಿಷಯ. ಮುಜುಗರ ಪಟ್ಟುಕೊಳ್ಳಲು ಏನೂ ಇಲ್ಲ. ನಿಮ್ಮಿಬ್ಬರಿಗೂ ಎಲ್ಲಿ ಸಂಬಂಧ ಹಳಿ ತಪ್ಪುತ್ತಿದೆ ಎಂದೇ ತಿಳಿದಿಲ್ಲದಿರಬಹುದು. ಅಂಥ ಸಂದರ್ಭದಲ್ಲಿ ಕೌನ್ಸೆಲರ್ ನಿಮ್ಮ ನೆರವಿಗೆ ಬರುತ್ತಾರೆ. ಥೆರಪಿ ಖಂಡಿತವಾಗಲೂ ನಿಮ್ಮಿಬ್ಬರ ನಡುವಿನ ಸಮಸ್ಯೆಗಳನ್ನು ಪರಿಹರಿಸಿ ಸಾಮರಸ್ಯ ತರುವುದು. ಇಷ್ಟಕ್ಕೂ ಕೊನೆಯಲ್ಲಿ ಬೇಕಾಗಿರೋದು ಹ್ಯಾಪಿ ಎಂಡಿಂಗ್ ಅಷ್ಟೇ ಅಲ್ಲವೇ?
 

Follow Us:
Download App:
  • android
  • ios