Asianet Suvarna News Asianet Suvarna News

ಮಗಳ ಇಂಗ್ಲಿಷ್‌ಗೆ ಕಾಲೆಳೆದ ತಂದೆ; ಎಕ್ಸ್‌ನಲ್ಲಿ ಮೆಚ್ಚುಗೆ ಗಳಿಸಿತು ಈ ಅಪ್ಪನ ಹಾಸ್ಯಪ್ರಜ್ಞೆ

ಟ್ವಿಟ್ಟರ್ ಎಕ್ಸ್‌ನಲ್ಲಿ ಈ ಯುವತಿ ಹಂಚಿಕೊಂಡ ತನ್ನ ತಂದೆಯೊಂದಿಗಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಬಹಳ ತಮಾಷೆಯಾಗಿದೆ. ಇದು ಬಹಳಷ್ಟು ಎಕ್ಸ್ ಬಳಕೆದಾರರಲ್ಲಿ ನಗು ತರಿಸಿದೆ. 

Dads hilarious WhatsApp exchange with daughter leaves netizens laughing skr
Author
First Published Jan 10, 2024, 6:50 PM IST

ಅನ್ವಿ ಎಂಬ ಹುಡುಗಿಯೊಬ್ಬಳು ತನ್ನ ತಂದೆಯೊಂದಿಗೆ ಮಾಡಿದ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟನ್ನು ಟ್ವಿಟ್ಟರ್ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ತಂದೆ ಮಗಳ ಸಂಭಾಷಣೆ ಟ್ವಿಟ್ಟಿಗರಿಗೆ ತಮಾಷೆ ಎನಿಸಿದೆ. 

ಸ್ಕ್ರೀನ್‌ಶಾಟ್ ಹಂಚಿಕೊಳ್ಳುವಾಗ 'ನನ್ನ ತಂದೆಗೆ ಏನಾಗಿದೆ?' ಎಂದಾಕೆ ಬರೆದಿದ್ದಾಳೆ. ಸ್ಕ್ರೀನ್‌ಶಾಟ್‌ನಲ್ಲಿ ತಂದೆಯು ತನ್ನ ಮಗಳ ಇಂಗ್ಲಿಷ್ ಅನ್ನು ಸರಿಪಡಿಸುವುದನ್ನು ಮತ್ತು ಅವಳ ಶಿಕ್ಷಣಕ್ಕಾಗಿ ಹಣ ವ್ಯರ್ಥ ಮಾಡಿದ್ದಕ್ಕಾಗಿ ತಮಾಷೆಯಾಗಿ ಅವಳನ್ನು ಟ್ರೋಲ್ ಮಾಡುವುದನ್ನು ಕಾಣಬಹುದು.

ತಂದೆ ಮತ್ತು ಮಗಳ ನಡುವೆ WhatsApp ಚಾಟ್ ಹೀಗಿದೆ..

"ನನ್ನ ತಂದೆಗೆ ಏನಾಗಿದೆ?" ಸ್ಕ್ರೀನ್‌ಶಾಟ್ ಹಂಚಿಕೊಳ್ಳುವಾಗ ಎಕ್ಸ್ ಬಳಕೆದಾರ ಅನ್ವಿ ಬರೆದಿದ್ದಾರೆ. ಹಣವನ್ನು ಠೇವಣಿ ಇಟ್ಟಿರುವುದಾಗಿ ಆಕೆಯ ತಂದೆ ತಿಳಿಸುವುದರೊಂದಿಗೆ ಸಂಭಾಷಣೆ ಪ್ರಾರಂಭವಾಗುತ್ತದೆ. ಆಕೆಯ ಖಾತೆಯಲ್ಲಿ 40,000 ರೂ. ಹಾಕಿದ್ದಾಗಿ ಹೇಳಿದ ಅವರು ದೃಢೀಕರಣವನ್ನು ಕೇಳಿದರು. ಇದಕ್ಕೆ ಅನ್ವಿ, 'ಯೆಸ್, ಫೌಂಡ್' ಎಂದು ಉತ್ತರಿಸಿದರು. ಅವಳ ಗ್ರಾಮರನ್ನು ಸರಿಪಡಿಸುತ್ತಾ ತಂದೆಯು 'ರಿಸೀವ್ಡ್' ಎಂದು ಹೇಳಿದರು. ಮುಂದುವರಿದು, 'ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತು ನನ್ನ ಹಣವನ್ನು ವ್ಯರ್ಥ ಮಾಡಿದ್ದೀ' ಎಂದಿದ್ದಾರೆ. ಅಷ್ಟೇ ಅಲ್ಲ, ಅದನ್ನು ತಮಾಷೆಯ ಇಮೋಜಿಗಳನ್ನು ಬಳಸಿ ನಗುತ್ತಾ ಹೇಳಿದ್ದಾರೆ.

ಇಲ್ಲಿದೆ ಸ್ಕ್ರೀನ್‌ಶಾಟ್

 

ಈ ಟ್ವೀಟ್ ಅನ್ನು ಜನವರಿ 6ರಂದು ಹಂಚಿಕೊಂಡಾಗಿನಿಂದ 9.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅನೇಕರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ತಂದೆಯ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ್ದಾರೆ.

ಇಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ಪರಿಶೀಲಿಸಿ:
'ನಿಮ್ಮ ತಂದೆ ಸಖತ್ ಕೂಲ್' ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಈ ಭಾರತೀಯ ದಾನ ಕೊಟ್ಟಿದ್ದು ಬರೋಬ್ಬರಿ 8,29,734 ಕೋಟಿ ರೂ.ಗಳನ್ನು!

ಮತ್ತೊಬ್ಬರು, 'ನನ್ನ ತಂದೆ ಒಮ್ಮೆ ನನ್ನ ಖಾತೆಯಲ್ಲಿ ಠೇವಣಿ ಮಾಡಿದ ಗರಿಷ್ಠ ಮೊತ್ತ 5 ಸಾವಿರ! ಅದೃಷ್ಟದ ಹುಡುಗಿ ನೀವು' ಎಂದಿದ್ದಾರೆ. ಮಗದೊಬ್ಬರು ಅಂಕಲ್ ಕೂಲೆಸ್ಟ್ ಎಂದಿದ್ದರೆ, ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಇನ್ನೊಬ್ಬರು ಹೇಳಿದ್ದಾರೆ. 

ಇನ್ನೊಬ್ಬ ಎಕ್ಸ್ ಬಳಕೆದಾರರು 'ನನ್ನ ತಂದೆಯೇನಾದರೂ ಹೀಗೆ ಹೇಳಿದ್ದರೆ ನಾನು ಹಾರ್ಪಿಕ್ ಕುಡಿಯುತ್ತಿದ್ದೆ' ಎಂದು ಅನ್ವಿಯ ಕಾಲೆಳೆದಿದ್ದಾರೆ. 

Follow Us:
Download App:
  • android
  • ios