ಬಿಜೆಪಿಗರ ಹತ್ಯೆಗೆ ಮಹಾರಾಷ್ಟ್ರ ಗೂಂಡಾಗಳಿಗೆ ಸುಪಾರಿ: ಎಂಎಲ್‌ಸಿ ರವಿಕುಮಾರ್‌ ಗಂಭೀರ ಆರೋಪ

ಆಂದೋಲಾ ಸ್ಚಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ್‌, ಮಣಿಕಂಠ ರಾಠೋಡ ಕೊಲೆಗೆ ಸಂಚು ರೂಪಿಸಿ ಮಹಾರಾಷ್ಟ್ರ ಮೂಲದ ಗೂಂಡಾಗಳಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಎಂಎಲ್‌ಸಿ ರವಿಕುಮಾರ್‌ ಆರೋಪಿಸಿದ್ದಾರೆ.

Maharashtra goons were given supari for killing BJP workers Says MLC Ravikumar gvd

ಬೀದರ್‌ (ಡಿ.30): ಆಂದೋಲಾ ಸ್ಚಾಮೀಜಿ, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಮುಖಂಡರಾದ ಚಂದು ಪಾಟೀಲ್‌, ಮಣಿಕಂಠ ರಾಠೋಡ ಕೊಲೆಗೆ ಸಂಚು ರೂಪಿಸಿ ಮಹಾರಾಷ್ಟ್ರ ಮೂಲದ ಗೂಂಡಾಗಳಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಎಂಎಲ್‌ಸಿ ರವಿಕುಮಾರ್‌ ಆರೋಪಿಸಿದ್ದಾರೆ. ಮೃತ ಸಚಿನ್‌ ಪಂಚಾಳ ಅವರ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್‌ ಗ್ರಾಮದ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು, ಈ ಪ್ರಕರಣ ಕಿಂಗ್‌ ಪಿನ್‌ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡುವವರೆಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಟೆಂಡರ್‌ ಕೊಡಿಸುವುದಾಗಿ ಹೇಳಿ ಸಚಿನ್‌ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಕಲಬುರಗಿಗೆ ಬಂದ ಮೇಲೆ ಒಂದು ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಚಿನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ದೂರು ಸ್ವೀಕರಿಸದೆ ಗಾಂಧಿ ಗಂಜ್‌ ಪೊಲೀಸ್ ಠಾಣೆಯಲ್ಲಿ 3 ತಾಸು ಕುಟುಂಬಸ್ಥರನ್ನು ಕೂಡಿಸಿಕೊಂಡಿದ್ದಾರೆ. ಧನ್ನೂರು ಪೊಲೀಸ್‌ ಠಾಣೆ ಪಿಎಸ್‌ಐ ಕೂಡ ಸ್ಪಂದಿಸಿಲ್ಲ. ಸಚಿನ್‌ ಕೊಲೆಗೆ ಕಾರಣವಾಗಿರುವ ಈ ಎರಡೂ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸಚಿನ್‌ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ₹117 ಕೋಟಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಹಗರಣ: ಎನ್.ರವಿಕುಮಾರ್

‘ಬಿವೈವಿ ನೇತೃತ್ವದಲ್ಲಿ ಕಲಬುರಗಿಗೆ ಬರ್ತೀವಿ’: ಇವತ್ತಿನಿಂದ ಪ್ರಿಯಾಂಕ್‌ ಖರ್ಗೆ ಸುಪಾರಿ ಖರ್ಗೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಪಾದಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಜನ ರೋಸಿ ಹೋಗಿದಾರೆ, ಪ್ರಿಯಾಂಕ್‌ ಏನೇ ಮಾಡಿದರೂ ಬಾಯಿ ಬಿಚ್ಚಬಾರದಂತೆ. ನಾವೆಲ್ಲ ಈಗ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಕಲಬುರಗಿಗೆ ಬರ್ತೇವೆ ಎಂದು ಎಚ್ಚರಿಸಿದರು. ಸಚಿನ್‌ ಸಾವಿನ ಪ್ರಕರಣದ ಹಿಂದೆ ಇರುವ ಸಚಿವ ಪ್ರಿಯಾಂಕ್‌ ಖರ್ಗೆ ತಕ್ಷಣ ರಾಜೀನಾಮೆ ಕೊಡಬೇಕು ಎಂದ ಅವರು, ಡೆತ್‌ ನೋಟಲ್ಲಿ ಪ್ರಿಯಾಂಕ್‌ ಖರ್ಗೆ ಹೆಸರು ಬಂದಿದ್ದಕ್ಕೆ ಪೊಲೀಸರು ದೂರು ತೆಗೆದುಕೊಂಡಿಲ್ಲ. ಪೊಲೀಸರು ಮನಸ್ಸು ಮಾಡಿದರೆ ಸಚಿನ್‌ ಜೀವ ಉಳಿಸಬಹುದಿತ್ತು ಎಂದರು.

ಸರ್ಕಾರದ ನಡೆ ನೋಡಿ ಬಿಜೆಪಿ ಮುಂದಿನ ನಿರ್ಧಾರ: ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಬಿಜೆಪಿ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ನ್ಯಾಯಾಂಗ ತನಿಖೆಗೆ ಮನವಿ ಮಾಡಿದೆ. ಹೀಗಾಗಿ ಸರ್ಕಾರದ ನಡೆ ನೋಡಿಕೊಂಡು ಬಿಜೆಪಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ರವಿ ಕುಮಾರ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಎರಡು ಬಣಗಳು ಪ್ರತ್ಯೇಕವಾಗಿ ವಕ್ಫ್‌ ಹೋರಾಟ ಕೈಗೊತ್ತಿಕೊಳ್ಳುವ ಬಗ್ಗೆ ಸಭೆ ನಡೆಸಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ವಿಚಾರವನ್ನು ಕೆಲವೇ ದಿನಗಳಲ್ಲಿ ವರಿಷ್ಠರು ಬಗೆಹರಿಸುತ್ತಾರೆ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಅಂಬೇಡ್ಕರ್ ನಿಗಮದಲ್ಲೂ 200 ಕೋಟಿ ಅಕ್ರಮ: ಎನ್.ರವಿಕುಮಾರ್‌

ಗಾಂಧಿ ವಿಚಾರಕ್ಕೂ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೂ ಯಾವುದೇ ಸಂಬಂಧವೇ ಇಲ್ಲ. ಕಾಂಗ್ರೆಸ್‌ ತನ್ನ ಅಸ್ತಿತ್ವಕ್ಕಾಗಿ ಅಧಿವೇಶನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಮಹಾತ್ಮಾಗಾಂಧಿ ಅಸಲಿ, ಈಗಿನವರು ನಕಲಿ ವಿಚಾರವಾದಿಗಳು, ಆಗಿನವರು ಅಸಲಿ ವಿಚಾರವಾದಿಗಳು. ಇದರ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಅಹಿಂಸೆ, ಸ್ವದೇಶಿ, ಗೋಹತ್ಯೆ ನಿಷೇಧ, ಸ್ವಚ್ಛ ಭಾರತ ಮುಂತಾದ ಗಾಂಧಿ ವಿಚಾರಗಳನ್ನು ಗಾಳಿಗೆ ತೂರಿದ ಕಾಂಗ್ರೆಸ್‌ಗೆ ಅವುಗಳ ಬಗ್ಗೆ ಚರ್ಚಿಸಲು ನೈತಿಕತೆ ಇಲ್ಲ. ಬೆಳಗಾವಿಯ ಆಗಿನ ಕಾಂಗ್ರೆಸ್‌ ಅಧಿವೇಶನಕ್ಕೆ ಕಾಂಗ್ರೆಸೇತರರೂ ಆಗಮಿಸಿದ್ದರು. ಅದು ಕಾಂಗ್ರೆಸ್‌ ಪಕ್ಷದ ಸ್ವತ್ತಲ್ಲದ ಕಾರಣ ಈ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಬೇಕಿತ್ತು. ಅದು ಬಿಟ್ಟು ಕಾಂಗ್ರೆಸ್‌ ಶತಮಾನೋತ್ಸವ ಸಂಭ್ರಮ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

Latest Videos
Follow Us:
Download App:
  • android
  • ios