ಕೊಡಗು ರಾಜ್ಯವನ್ನು ಆಳಿದ ವೀರ ರಾಜೇಂದ್ರನ ನಾಮಾಂಕಿತ ವೀರಾಜಪೇಟೆ. ಈ ಕ್ಷೇತ್ರ ಕಳೆದ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಆರಂಭದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿ ತನ್ನ ಪ್ರಭಾವ ಬೀರಿತ್ತು. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸತತವಾಗಿ ಜಯಗಳಿಸುತ್ತಾ ಬಂದಿದ್ದರು. ಆದರೆ ಈಗ ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿದೆ.

ವಿಘ್ನೇಶ ಎಂ. ಭೂತನಕಾಡು

ಮಡಿಕೇರಿ (ಏ.15) : ಕೊಡಗು ರಾಜ್ಯವನ್ನು ಆಳಿದ ವೀರ ರಾಜೇಂದ್ರನ ನಾಮಾಂಕಿತ ವೀರಾಜಪೇಟೆ. ಈ ಕ್ಷೇತ್ರ ಕಳೆದ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಆರಂಭದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿ ತನ್ನ ಪ್ರಭಾವ ಬೀರಿತ್ತು. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸತತವಾಗಿ ಜಯಗಳಿಸುತ್ತಾ ಬಂದಿದ್ದರು. ಆದರೆ ಈಗ ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿದೆ.

ವಿರಾಜಪೇಟೆ ಕ್ಷೇತ್ರ(Virajapete assembly constituency) ಅಸ್ಥಿತ್ವಕ್ಕೆ ಬಂದಲ್ಲಿಂದ ಮೂರು ಬಾರಿ ಪುನರ್‌ ವಿಂಗಡಣೆಯಾಗಿರುವುದು ವಿಶೇಷ.

ಕೊಡಗಿನ ಎರಡು ಕ್ಷೇತ್ರಕ್ಕೆ ಅಳೆದು ತೂಗಿ ಟಿಕೆಟ್ ನೀಡಿದ ಕಾಂಗ್ರೆಸ್‌ ಗೆ ಬಂಡಾಯದ ಬಿಸಿ!

ಕೊಡಗು ರಾಜ್ಯ 1956ರಲ್ಲಿ ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಳ್ಳುವ ಮೊದಲು ವೀರಾಜಪೇಟೆ ಕ್ಷೇತ್ರ ಹರಿದು ಹಂಚಿಹೋಗಿತ್ತು. 1956ರ ನಂತರ ಈ ಕ್ಷೇತ್ರ ಮಡಿಕೇರಿ ವರೆಗೂ ವ್ಯಾಪಿಸಿ ವಿಶಾಲವಾಗಿತ್ತು. 1962ರಲ್ಲಿ ಈ ಕ್ಷೇತ್ರ ಮತ್ತೆ ಪುನರ್‌ ವಿಂಗಡಣೆಗೊಂಡು ವೀರಾಜಪೇಟೆ ತಾಲೂಕಿಗೆ ಸೀಮಿತವಾಯಿತು. ಜೊತೆಗೆ ಬುಡಕಟ್ಟು ಜನಾಂಗ ಹೆಚ್ಚಿರುವುದ್ದರಿಂದ ಪರಿಶಿಷ್ಟಪಂಗಡಕ್ಕೆ ಮೀಸಲಾಗಿತ್ತು. ನಂತರ 2008ರಲ್ಲಿ ಮತ್ತೆ ಪುನರ್‌ ವಿಂಗಡಣೆಗೊಂಡು ಮಡಿಕೇರಿ ತಾಲೂಕಿನ ಅರ್ಧ ಭಾಗ ಸೇರಿ ಮತ್ತಷ್ಟುಹಿಗ್ಗಿಕೊಂಡಿತ್ತು. ಈ ಸಂದರ್ಭ 46 ವರ್ಷಗಳ ಮೀಸಲಾತಿಯ ಸಂಕೋಲೆಯಿಂದ ಬಿಡಿಸಿಕೊಂಡು ಸಾಮಾನ್ಯ ಕ್ಷೇತ್ರವಾಗಿ ರೂಪುಗೊಂಡಿತು.

ವಿಶೇಷ ಎಂದರೆ ಅಸ್ಥಿತ್ವಕ್ಕೆ ಬಂದಲ್ಲಿಂದ ಎರಡು ಬಾರಿ ಸಚಿವರನ್ನು, ಉಪ ಸ್ಪೀಕರ್‌, ಸ್ಪೀಕರ್‌ ಹುದ್ದೆಯನ್ನು ಅಲಂಕರಿಸಿದೆ. ಆದರೆ ಇಲ್ಲಿ ಶಾಸಕರಾಗಿ ಆರಿಸಿ ಬಂದ ಸುಮಾ ವಸಂತ್‌, ಬಸವರಾಜು, ಕೆ.ಜಿ. ಬೋಪಯ್ಯ ಕ್ಷೇತ್ರದ ಹೊರಗಿನವರಾಗಿದ್ದಾರೆ.

90ರ ದಶಕದ ವರೆಗೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದುದ್ದನ್ನು ನುಚ್ಚು ನೂರು ಮಾಡಿದ್ದು, ಶ್ರೀರಾಮ ಮಂದಿರ ನಿರ್ಮಾಣದ ಇಟ್ಟಿಗೆ ಸಂಗ್ರಹ ರಥ. ಕ್ಷೇತ್ರದಲ್ಲಿ ರಥ ಸಂಚರಿಸುತ್ತಿದ್ದಂತೆ ಕಾಂಗ್ರೆಸ್‌ ಅದರ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾದರೆ ರಥದಲ್ಲಿ ಕಮಲ ಅರಳಿತು.

ಎರಡು ಬಾರಿ ಗೆದ್ದು ಸಚಿವರಾಗಿ ವೀರಾಜಪೇಟೆ ಕ್ಷೇತ್ರದ ಇಂದಿರಾ ಗಾಂಧಿ ಎಂದೇ ಖ್ಯಾತಿ ಪಡೆದಿದ್ದ ಕಾಂಗ್ರೆಸ್‌ನ ಸುಮಾ ವಸಂತ್‌(Suma vasanth) ಅವರನ್ನು ಮತದಾರರು ಮನೆಗೆ ಕಳಿಸಿದರು. ಮೈಸೂರು ಭಾಗದಿಂದ ವಲಸೆ ಬಂದಿದ್ದ ಬಿಜೆಪಿಯ ಎಚ್‌.ಡಿ. ಬಸವರಾಜು(HD Basavaraju) ಗದ್ದುಗೆ ಏರಿದರು. 1999ರಲ್ಲಿ ಬಂದ ಎಸ್‌.ಎಂ. ಕೃಷ್ಣ(SM Krishna) ಅವರ ಪಾಂಚ್ಯಜನ್ಯ ರಥದ ಅಡಿಗೆ ಸಿಲುಕಿದ ಕಮಲ ಹೋಳಾಗಿ ‘ಕೈ’ ಮೇಲಾಯಿತು. ಸುಮಾವಸಂತ್‌ ಮತ್ತೆ ಸಚಿವರಾದರು. 2004ರಲ್ಲಿ ವಾಜಪೇಯಿ ಅಬ್ಬರದ ನಡುವೆ ಮತ್ತೆ ಬಸವರಾಜು ಜಯಗಳಿಸಿದ್ದರು. ಸುಮಾ ವಸಂತ್‌ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲೇ ಇಲ್ಲ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಗೊಂಡು ಸಾಮಾನ್ಯ ಕ್ಷೇತ್ರವಾದಂತೆ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದ ಬಿಜೆಪಿಯ ಕೆ.ಜಿ. ಬೋಪಯ್ಯ ಇತ್ತ ಕಡೆ ಲಗ್ಗೆ ಹಾಕಿದರು. ಈ ಸಂದರ್ಭ ಕಾಂಗ್ರೆಸ್‌ನಿಂದ ವೀಣಾ ಅಚ್ಚಯ್ಯ, ತೆನೆ ಹೊತ್ತು ಬಂದ ಕ್ಷೇತ್ರದವರೇ ಆದ ಅರುಣ್‌ ಮಾಚಯ್ಯರಿಗೆ ಮತದಾರರು ಮಣೆ ಹಾಕಲಿಲ್ಲ. ಈ ಅವಧಿಯಲ್ಲಿ ಕೆ.ಜಿ. ಬೋಪಯ್ಯ ಉಪ ಸ್ಪೀಕರ್‌, ಸ್ಪೀಕರ್‌ ಪಟ್ಟಅಲಂಕರಿಸಿದ್ದರು.

ಪುನರ್‌ ವಿಂಗಡನೆ ಬಳಿಕ ಕ್ಷೇತ್ರದಲ್ಲಿ ಕೊಡವರೇ ಹೆಚ್ಚಿದ್ದರೂ ಸ್ಪರ್ಧಿಸಿದ ಕೊಡವ ಅಭ್ಯರ್ಥಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅರೆಭಾಷೆ ಗೌಡ ಸಮುದಾಯದ ಬೋಪಯ್ಯ ಸತತವಾಗಿ ಗೆಲವು ಸಾಧಿಸಿದರು. ಬೋಪಯ್ಯ ಈ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸ್ಪರ್ಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನಿಂದ ಎ.ಎಸ್‌. ಪೊನ್ನಣ್ಣ ಕಣಕ್ಕೆ ಇಳಿದಿದ್ದು, ಈ ಬಾರಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆರ್‍ ಇರುವುದು ಖಚಿತ.

ಕೊಡಗಿನ ಅಭ್ಯರ್ಥಿಗಳ ಆಯ್ಕೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ!

ವಿರಾಜಪೇಟೆ ಕ್ಷೇತ್ರದ ಚುನಾವಣಾ ಇತಿಹಾಸ

  • ಚುನಾವಣೆ ನಡೆದ ವರ್ಷ 1962
  • ಎ.ಪಿ. ಅಪ್ಪಣ್ಣ ಕಾಂಗ್ರೆಸ್‌ 15,292(ಗೆಲುವು)
  • ಚೆಕ್ಕೇರ ಬಿ ಮುತ್ತಣ್ಣ ಪಕ್ಷೇತರ 6,973
  • ಐ.ಆರ್‌. ಅಸ್ರನಾ ಸಿಪಿಐ 3,658
  • ಸಿ.ಎಂ. ಭೀಮಯ್ಯ ಎಸ್‌ಡಬ್ಲ್ಯೂಎ 3,496
  • ಎನ್‌.ಎಸ್‌. ನಾಣಯ್ಯ ಜೆಎಸ್‌ 832
  • ಒಟ್ಟು ಮತಗಳು - 30,251

1967

  • ಎನ್‌.ಎಲ್‌. ನಾಯ್‌್ಕ ಬಿಜೆಎಸ್‌(ಗೆಲುವು) 14,444
  • ಎ.ಎನ್‌. ಬೆಳ್ಳಿ ಕಾಂಗ್ರೆಸ್‌ 13,128
  • ಒಟ್ಟು ಮತಗಳು - 27,572

1972

  • ಜಿ.ಕೆ. ಸುಬ್ಬಯ್ಯ ಕಾಂಗ್ರೆಸ್‌ 20,023(ಗೆಲುವು)
  • ಎನ್‌. ಲೋಕಯ್ಯ ನಾಯ್‌್ಕ ಬಿಜೆಎಸ್‌ 10,866
  • ಎಂ.ಕೆ. ನಾರಾಯಣ ಪಕ್ಷೇತರ 537
  • ಒಟ್ಟು ಮತಗಳು - 31,426

1978

  • ಜಿ.ಕೆ. ಸುಬ್ಬಯ್ಯ ಕಾಂಗ್ರೆಸ್‌(ಐ) 25,309(ಗೆಲುವು)
  • ಪಣಿಯರವರ ಪಿ. ಚೋಮ ಜೆಎನ್‌ಪಿ 23,040
  • ಎನ್‌. ಲೋಕಯ್ಯ ನಾಯ್‌್ಕ ಪಕ್ಷೇತರ 2,258
  • ಜೇನುಕುರುಬರ ಅಣ್ಣಯ್ಯ ಅಪ್ಪು ಕಾಂಗ್ರೆಸ್‌ 1,601
  • ಒಟ್ಟು ಮತಗಳು - 52,208

1983

  • ಜಿ.ಕೆ. ಸುಬ್ಬಯ್ಯ ಕಾಂಗ್ರೆಸ್‌ 22,581(ಗೆಲುವು)
  • ಪಣಿಯರವರ ಪಿ. ಚೋಮ ಬಿಜೆಪಿ 14,009
  • ಎಚ್‌.ಟಿ. ದೇವರಾಜು ಪಕ್ಷೇತರ 4,938
  • ಒಟ್ಟು ಮತಗಳು - 41,528

1985

  • ಸುಮಾ ವಸಂತ್‌ ಕಾಂಗ್ರೆಸ್‌ 26,716(ಗೆಲುವು)
  • ಎಚ್‌.ಡಿ. ರಾಜನ್‌ ಜೆಎನ್‌ಪಿ 18,496
  • ಎ.ಇ. ಅಪ್ಪಣ್ಣ ರಾವ್‌ ಬಿಜೆಪಿ 3,449
  • ಒಟ್ಟು ಮತಗಳು - 48,661

1989

  • ಸುಮಾ ವಸಂತ್‌ ಕಾಂಗ್ರೆಸ್‌ 32,124(ಕಾಂಗ್ರೆಸ್‌)
  • ಜಿ.ಎಸ್‌. ಪುಷ್ಕರ ಜೆಡಿ 16,872
  • ಪಿ.ಪಿ. ಚೋಮ ಬಿಜೆಪಿ 6,416
  • ಎಚ್‌.ಟಿ. ದೇವರಾಜು ಜೆಎನ್‌ಪಿ 4,203
  • ರಂಗಸ್ವಾಮಿ ಪಕ್ಷೇತರ 294
  • ಒಟ್ಟು ಮತಗಳು 59,909

1994

  • ಎಚ್‌.ಡಿ. ಬಸವರಾಜು ಬಿಜೆಪಿ 21,790(ಗೆಲವು)
  • ಸುಮಾ ವಸಂತ್‌ ಕಾಂಗ್ರೆಸ್‌ 20,009
  • ಕೆ.ಬಿ. ಶಾಂತಪ್ಪ ಜೆಡಿ 16,693
  • ಪಿ.ಎಸ್‌. ಮೋಟಯ್ಯ ಕೆಸಿಪಿ 2,141
  • ಬಂಗಾರಸ್ವಾಮಿ 122
  • ಒಟ್ಟು ಮತಗಳು - 60,755

1999

  • ಸುಮಾ ವಸಂತ್‌ ಕಾಂಗ್ರೆಸ್‌ 29,136(ಗೆಲುವು)
  • ಎಂ.ಡಿ. ಬಸವರಾಜು ಬಿಜೆಪಿ 24,867
  • ಕೆ.ಬಿ. ಶಾಂತಪ್ಪ ಜೆಡಿಎಸ್‌ 4,271
  • ಜಿ.ಎಸ್‌. ಪುಷ್ಕರ ಪಕ್ಷೇತರ 669
  • ಜೆ.ಪಿ. ರಾಜು ಬಿಎಸ್‌ಪಿ 567
  • ಒಟ್ಟು ಮತಗಳು - 59,510

2004

  • ಎಚ್‌.ಡಿ. ಬಸವರಾಜು ಬಿಜೆಪಿ 35,550(ಗೆಲುವು)
  • ಸುಮಾ ವಸಂತ್‌ ಕಾಂಗ್ರೆಸ್‌ 27,484
  • ಪಿ.ಎಸ್‌. ಮುತ್ತ ಜೆಡಿಎಸ್‌ 6,023
  • ಒಟ್ಟು ಮತಗಳು - 69,057

2008

  • ಕೆ.ಜಿ. ಬೋಪಯ್ಯ ಬಿಜೆಪಿ 48,605(ಗೆಲುವು)
  • ವೀಣಾ ಅಚ್ಚಯ್ಯ ಕಾಂಗ್ರೆಸ್‌ 33,532
  • ಸಿ.ಎಸ್‌. ಅರುಣ್‌ ಮಾಚಯ್ಯ ಜೆಡಿಎಸ್‌ 29,920
  • ಅಚ್ಚಪಂಡ ಗಿರಿ ಉತ್ತಪ್ಪ ಎಸ್‌ಪಿ 2,464
  • ಕುಂಞ ಅಬ್ದುಲ್ಲ ಕೆ.ಎಂ ಬಿಎಸ್‌ಪಿ 1,825
  • ಒಟ್ಟು ಮತಗಳು - 1,16,345

2013

  • ಕೆ.ಜಿ. ಬೋಪಯ್ಯ ಬಿಜೆಪಿ 67,250(ಗೆಲವು)
  • ಬಿದ್ದಾಟಂಡ ಪ್ರದೀಪ್‌ ಕಾಂಗ್ರೆಸ್‌ 63,836
  • ದಂಬೆಕೋಡಿ ಮಾದಪ್ಪ ಜೆಡಿಎಸ್‌ 5,880
  • ವಿಜಯ್‌ಸಿಂಗ್‌ ಪಕ್ಷೇತರ 2,140
  • ಎಂ.ಎನ್‌. ಅಯ್ಯಪ್ಪ ಬಿಎಸ್‌ಆರ್‌ಸಿಪಿ 972
  • ಒಟ್ಟು ಮತಗಳು - 1,42,377

2018

  • ಕೆ.ಜಿ. ಬೋಪಯ್ಯ ಬಿಜೆಪಿ 77,944
  • ಅರುಣ್‌ ಮಾಚಯ್ಯ ಕಾಂಗ್ರೆಸ್‌ 64,591
  • ಸಂಕೇತ್‌ ಪೂವಯ್ಯ ಜೆಡಿಎಸ್‌ 11,224
  • ಎಚ್‌.ಡಿ. ಬಸವರಾಜು ಎಂಇಪಿ 1,015
  • ಎಂ.ಕೆ. ನಂಜಪ್ಪ ಪಕ್ಷೇತರ 666
  • ಎಚ್‌.ಡಿ. ದೊಡ್ಡಯ್ಯ ಪಕ್ಷೇತರ 599
  • ಚಿತ್ರ : ವಿರಾಜಪೇಟೆ ಮ್ಯಾಪ್‌ : ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ