ಕಾಂಗ್ರೆಸ್‌ಸ್ಸಿಗರು ನಮ್ಮ ಶಾಸಕರ ಮನೆ ಬಾಗಿಲು ಕಾಯೋದು ಬೇಡ, ನಾನೇ ಎಲ್ಲರನ್ನೂ ಕಳಿಸ್ತೇನೆ: ಎಚ್.ಡಿ. ಕುಮಾರಸ್ವಾಮಿ
ಕಾಂಗ್ರೆಸ್ ಶಾಸಕರು ನಮ್ಮ (ಜೆಡಿಎಸ್) ಶಾಸಕರ ಮನೆ ಬಾಗಿಲ ಮುಂದೆ ಕಾಯೋದು ಬೇಡ, ಒಳ್ಳೆಯ ಕೆಲಸ ಮಾಡಿದ್ರೆ ನಾನೇ ಎಲ್ಲರನ್ನು ಕಳಿಸ್ತೇನೆ ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದ್ದಾರೆ.
ರಾಮನಗರ (ನ.06): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಪ್ರತಿನಿತ್ಯ ನೀವು ಬನ್ನಿ ನೀವು ಬನ್ನಿ.. ಅಂತ ಎಲ್ಲರನ್ನೂ ಕರಿತಿದಾರೆ. ನಿನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಕನಿಷ್ಠ 50 ಜನರನ್ನಾದರೂ ಪಕ್ಷಕ್ಕೆ ಕರೆತರಬೇಕು ಎಂದು ಮುಖ್ಯಮಂತ್ರಿಗಳೇ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಹೀಗಾಗಿ ಪ್ರತಿನಿತ್ಯ ಕಾಂಗ್ರೆಸ್‌ನವರು ನಮ್ಮ ಶಾಸಕರ ಮನೆ ಬಾಗಿಲು ಕಾಯೋದು ಬೇಡ. ಅವರು ಒಳ್ಳೆಯ ಕೆಲಸ ಮಾಡಿದ್ರೆ, ನಾನೇ ಎಲ್ಲರನ್ನೂ ಕಳಿಸಿಕೊಡ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ಬೆಂಬಲವಿದೆ ಎಂದು ನಾನು ವ್ಯಂಗ್ಯವನ್ನು ಮಾಡಿದ್ದೇನೆ. ಅವರು ದಿನ ನೀವು ಬನ್ನಿ.. ನೀವು ಬನ್ನಿ ಅಂತ ಎಲ್ಲರನ್ನೂ ಕರಿತಾ ಇದಾರೆ. ನಿನ್ನೆ ಮುಖ್ಯಮಂತ್ರಿಗಳೆ ಹೇಳಿದ್ದಾರಲ್ವಾ.? ಕನಿಷ್ಠ 50 ಜನನನ್ನಾದ್ರು ಪಕ್ಷ ಕರೆ ತರಬೇಕು ಅಂತ ಅವರ ಪಕ್ಷದ ಶಾಸಕರಿಗೆ ಹೇಳಿದ್ದಾರೆ. ಹೀಗಾಗಿ, ಪ್ರತಿ ನಿತ್ಯ ನಮ್ಮ ಶಾಸಕರ ಮನೆ ಮುಂದೆ ಯಾಕೆ ಹೋಗ್ತೀರಾ. ಒಳ್ಳೆ ಕೆಲಸ ಮಾಡ್ತೀರಾ ಅಂದ್ರೆ ಎಲ್ಲರನ್ನು ಕಳುಹಿಸುತ್ತೇನೆ ಕರೆದುಕೊಂಡು ಹೋಗಿ ಅಂತ ಹೇಳಿದ್ದೀನಿ ಎಂದರು.
ಮೋದಿ 48 ಕಡೆ ಹೋದಲ್ಲೆಲ್ಲಾ ಬಿಜೆಪಿ ಸೋತಿದ್ದರಿಂದ ರಾಜಕೀಯ ಆರೋಪ ಮಾಡ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ರಾಜಕೀಯ ಲೆಕ್ಕಾಚಾರಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿದ ಸಿಎಂ: ಮುಖ್ಯಮಂತ್ರಿಯ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಏನ್ಮಾಡಿದ್ರು? ಆ ಮೀಟಿಂಗ್ ನಲ್ಲಿ ಏನು ಚರ್ಚೆ ಆಗಿದೆ ಗೊತ್ತಾ.. ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್, ಬಿಜೆಪಿಯವರನ್ನ ಕಾಂಗ್ರೆಸ್ ಗೆ ಕರೆತರುವ ಬಗ್ಗೆ ಚರ್ಚೆ ಆಗಿದೆ. ಅವರಿಗೆ ನಾಡಿನ ಜನತೆ ಬಗ್ಗೆ ಚರ್ಚೆ ಮಾಡೋದಕ್ಕೆ ಮೀಟಿಂಗ್ ಮಾಡಿಲ್ಲ. ಕೇವಲ ರಾಜಕೀಯಕ್ಕೆ ಮೀಟಿಂಗ್ ಮಾಡಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲಲು ಮೀಟಿಂಗ್ ಮಾಡಿದ್ದಾರೆ. ಅವರಿಗೆ ರೈತರ ಸಮಸ್ಯೆ ಗಳು ಬೇಕಿಲ್ಲ. ತಮ್ಮ ಖುರ್ಚಿ ಉಳಿಸಿಕೊಳ್ಳುವ ಹಾಗೂ ರಾಜಕೀಯ ಮಾಡುವುದೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.
ಸರ್ಕಾರದ ವೈಫಲ್ಯದಿಂದಲೇ ಅಧಿಕಾರಿಗಳ ಹತ್ಯೆಯಾಗ್ತಿದೆ: ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ರಕ್ಷಣೆ ಇಲ್ಲ. ರಾಜ್ಯದ ಹಿರಿಯ ಅಧಿಕಾರಿಯನ್ನ ಮೆನೆಗೆ ಹೋಗಿ ಹತ್ಯೆ ಮಾಡಿದ್ದಾರೆ. ಇಂತಹ ಉದ್ಧಟತನ ತೋರುವ ಕೆಲಸ ಆಗ್ತಿದೆ. ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ. ಇಂತಹ ವಾತಾವರಣ ಇದ್ರೆ ಯಾವ ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ. ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳಿಗೆ ಯಾವುದೇ ಲಂಗುಲಗಾಮು ಇಲ್ಲ. ಗೃಹ ಇಲಾಖೆ ವೈಫಲ್ಯ ಎದ್ದು ಕಾಣ್ತಿದೆ. ಯಾವಯಾವ ಭಾಗದಲ್ಲಿ ಏನೇನು ನಡೆಯುತ್ತೆ ಅಂತ ಪೊಲೀಸ್ ಇಲಾಖೆಗೆ ಮಾಹಿತಿ ಇರುತ್ತದೆ. ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇಲ್ಲ. ವರ್ಗಾವಣೆ ಮಾಡಿ ಹಣವಸೂಲಿ ಮಾಡ್ತಾ ನಿಂತಿದ್ರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರಾ? ಸರ್ಕಾರದ ನಡೆಯಿಂದಲೇ ಇಂತಹ ಘಟನೆ ಜರುಗುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕದ ಜನತೆಗೆ ಉಚಿತ ವಿದ್ಯುತ್ ಯೂನಿಟ್‌ಗಳ ಮಿತಿ ಹೆಚ್ಚಿಸಿದ ಸರ್ಕಾರ! ಯಾರಿಗೆಲ್ಲಾ ಅನ್ವಯ ಗೊತ್ತಾ?
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದನ್ನ ಕಾಂಗ್ರೆಸ್ ಅವರು ಹೇಳಬೇಕು. ಲೋಕ ಸಭೆ ಚುನಾವಣೆ ಆದ ಮೇಲೆ ಬಿಜೆಪಿ- ಜೆಡಿಎಸ್ ಈ ರಾಜ್ಯದಲ್ಲಿ ಇರೋದೆ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಮೊನ್ನೆ ಹೇಳಿದ್ದಾರೆ. ಆದರೆ, ಈಗ ನಾನು ಪ್ರಿಯಾಂಕಾ ಖರ್ಗೆ ಹೇಳಲು ಭಯಸುತ್ತೇನೆ. ಪಾರ್ಲಿಮೆಂಟ್ ಚುನಾವಣೆ ಆದ ಮೇಲೆ ಈ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ಇರುತ್ತಾ ಯೋಚನೆ ಮಾಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.