ಬಿಜೆಪಿ ನೋಟಿಸ್‌ಗೆ ಉತ್ತರ ಕೊಡಲ್ಲ: ಮತ್ತೊಮ್ಮೆ ರೇಣುಕಾಚಾರ್ಯ ಗುಟುರು
ಬಿಜೆಪಿ ಶಿಸ್ತು ಸಮಿತಿಯಿಂದ ನೀಡಿರುವ ನೋಟಿಸ್‌ಗೆ ಯಾವುದೇ ಕಾರಣಕ್ಕೂ ನಾನು ಉತ್ತರ ಕೊಡುವುದಿಲ್ಲ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೊಮ್ಮೆ ಹೇಳಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ.
ದಾವಣಗೆರೆ (ಜು.13): ಬಿಜೆಪಿ ಶಿಸ್ತು ಸಮಿತಿಯಿಂದ ನೀಡಿರುವ ನೋಟಿಸ್‌ಗೆ ಯಾವುದೇ ಕಾರಣಕ್ಕೂ ನಾನು ಉತ್ತರ ಕೊಡುವುದಿಲ್ಲ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೊಮ್ಮೆ ಹೇಳಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಪಕ್ಷದಿಂದ ನೀಡಲಾಗಿರುವ ನೋಟಿಸ್‌ಗೆ ಉತ್ತರವನ್ನೂ ಕೊಡುವುದಿಲ್ಲ. ಜತೆಗೆ, ನಾನು ಬಿಜೆಪಿಯನ್ನೂ ಬಿಡುವುದಿಲ್ಲ, ಕಾಂಗ್ರೆಸ್ ಸೇರುವುದೂ ಇಲ್ಲ ಎಂದು ಸುದ್ದಿಗಾರರರಿಗೆ ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕ್ಷೇತ್ರಾದ್ಯಂತ, ಎಲ್ಲಾ ತಾಲೂಕಿನಿಂದಲೂ ಮುಖಂಡರಿಂದ ನನಗೆ ಒತ್ತಡವಿದ್ದು, ನಾಮಕೆವಸ್ತೆಗೆ ಟಿಕೆಟ್ ಕೇಳುತ್ತಿಲ್ಲ. ನಾನೂ ಪ್ರಬಲ ಆಕಾಂಕ್ಷಿಯಾಗಿದ್ದು, ಈ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ, ವಿಪಕ್ಷ ನಾಯಕರು ಮತ್ತು ರಾಜ್ಯಾಧ್ಯಕ್ಷರ ಸ್ಥಾನದ ಆಯ್ಕೆ ಸಾಕಷ್ಟುವಿಳಂಬವಾಗಿರುವುದು ನಿಜ. ಆದಷ್ಟು ಬೇಗ ಈ ಎರಡೂ ಸ್ಥಾನಗಳಿಗೆ ಸೂಕ್ತರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ವಿದ್ಯುತ್ ದರ ಏರಿಕೆಗೆ ಕಾರಣ ಯಾರು?: ವಿಧಾನಸಭೆಯಲ್ಲಿ ವಾಗ್ವಾದ
ಪಕ್ಷ ಕಟ್ಟಿ ಬೆಳೆಸಿದ್ದು ಬಿಎಸ್‌ವೈ: ‘ಕೆಲವರು ಯಡಿಯೂರಪ್ಪ, ರೇಣುಕಾಚಾರ್ಯನ ಹೆಗಲ ಮೇಲೆ ಬಂದೂಕು ಇರಿಸಿ ಗುಂಡು ಹೊಡೆಯುತ್ತಿದ್ದಾರೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡಲ್ಲ. ಅವರು ಯಾವತ್ತೂ ಸಹ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಮಾತನಾಡಬೇಡಿ ಎನ್ನುತ್ತಾರೆ. ಬಿಎಸ್‌ವೈಗೆ ಸಂಘ ಪರಿವಾರದ ಹಿನ್ನೆಲೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿಬೆಳೆಸಿದ್ದು ಬಿಎಸ್‌ವೈ. ಇವರ ಜತೆಗೆ ಅನಂತಕುಮಾರ್. ಇಂದು ಪಕ್ಷದಲ್ಲಿ ಇರುವ ಯಾರೂ ಪಕ್ಷ ಕಟ್ಟಿಬೆಳೆಸಿಲ್ಲ ಎಂದು ಹಿಂದೆ ಹೇಳಿದ್ದೆ. ಇಂದೂ ಹೇಳುತ್ತೇನೆ. ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಪಕ್ಷದಲ್ಲೇ ಇರುತ್ತೇನೆ’ ಎಂದರು.
ಅಧ್ಯಕ್ಷರು ಕೇಳಲೇ ಇಲ್ಲ: ‘ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು ಎಂದು ರಾಜ್ಯಾಧ್ಯಕ್ಷರಿಗೆ ಹೇಳಿದೆ. ಆದರೆ, ಅವರು ಕೇಳಲಿಲ್ಲ. ಸರ್ಕಾರ ಮತ್ತು ಪಕ್ಷದ ತಪ್ಪು ನಿರ್ಧಾರಗಳಿಂದ ಒಳ ಮೀಸಲಾತಿಯಿಂದ 40-50 ಮಂದಿ ಸೋತರು. ಹೊಸಮುಖಗಳಿಗೆ ಅವಕಾಶ ನೀಡಿದ್ದು, ವ್ಯವಸ್ಥಿತವಾಗಿ ಹಿರಿಯ ಮುಖಂಡರನ್ನು ಕಡಗಣಿಸಿದ್ದು ಹೀನಾಯ ಸ್ಥಿತಿಗೆ ಕಾರಣ. ಯಡಿಯೂರಪ್ಪ ಅವರಿಗೆ ಅಪಮಾನ, ಅವಮಾನ ಮಾಡಿದರೆ ಸುಮ್ಮನಿರಲ್ಲ ಎಂದು ಹೇಳಿದ್ದೇನೆ’ ಎಂದು ಹೇಳಿದರು..
ಹೈಟೆಕ್ ಆಗಲಿದೆ ಬಡವರ ಫೈವ್ ಸ್ಟಾರ್ ಇಂದಿರಾ ಕ್ಯಾಂಟೀನ್: ಶೀಘ್ರವೇ ಮೆನು ಬದಲಾವಣೆ
ಕಾಂಗ್ರೆಸ್ ಸೇರಲ್ಲ: ಹಿರಿಯರಾದ ಕಾಂಗ್ರೆಸ್ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಜೊತೆಗೆ ರಾಜಕೀಯ ಹೊರತುಪಡಿಸಿ ಉತ್ತಮ ಒಡನಾಟವಿದೆ. ನಾನು ಈಗಲೂ ನಮ್ಮ ಪಕ್ಷದಲ್ಲೇ ಇದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನಮ್ಮ ಪಕ್ಷವೇ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು ರೇಣುಕಾಚಾರ್ಯ ಇದೇ ವೇಳೆ ಸ್ಪಷ್ಟಪಡಿಸಿದರು.