ವಿಶ್ವ ನಂ.3 ಶ್ರೇಯಾಂಕಿತ ಕ್ರಿಸ್ಟಿಯನ್ನು ಹೊರದಬ್ಬಿದ ಲಕ್ಷ್ಯ ಸೇನ್..! ಒಲಿಂಪಿಕ್ಸ್ ಪದಕದತ್ತ ದಾಪುಗಾಲು

ಗ್ರೂಪ್ 'ಎಲ್' ಹಂತದ ಮಹತ್ವದ ಪಂದ್ಯದಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಪಂದ್ಯ ಗೆಲ್ಲುವ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದರು. 50 ನಿಮಿಷಗಳ ಕಾಲ ನಡೆದ ರೋಚಕ ಕಾದಾಟದಲ್ಲಿ ಲಕ್ಷ್ಯ ಸೇನ್ ಭರ್ಜರಿ ಗೆಲುವು ಸಾಧಿಸಿ ನಾಕೌಟ್ ಹಂತಕ್ಕೇರಿದ್ದಾರೆ

Paris Olympics Lakshya Sen storms into pre quarters after stunning Jonatan Christie kvn

ಪ್ಯಾರಿಸ್: ಭಾರತದ ಪ್ರತಿಭಾನ್ವಿಯ ಶಟ್ಲರ್ ಲಕ್ಷ್ಯ ಸೇನ್, ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರೂಪ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿಶ್ವ 3ನೇ ಶ್ರೇಯಾಂಕಿತ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ಎದುರು ರೋಚಕ ಜಯ ಸಾಧಿಸುವ ಮೂಲಕ ಚೊಚ್ಚಲ ಒಲಿಂಪಿಕ್ ಪದಕ ಗೆಲ್ಲುವತ್ತ ಲಕ್ಷ್ಯ ಹೆಜ್ಜೆ ಹಾಕಿದ್ದಾರೆ.

ಗ್ರೂಪ್ 'ಎಲ್' ಹಂತದ ಮಹತ್ವದ ಪಂದ್ಯದಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ಪಂದ್ಯ ಗೆಲ್ಲುವ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದರು. 50 ನಿಮಿಷಗಳ ಕಾಲ ನಡೆದ ರೋಚಕ ಕಾದಾಟದಲ್ಲಿ ಲಕ್ಷ್ಯ ಸೇನ್ 21-18, 21-12 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಗ್ರಶ್ರೇಯಾಂಕಿತ ಆಟಗಾರ ಎದುರು ಪ್ರಾಬಲ್ಯ ಮೆರೆಯುವಲ್ಲಿ ಲಕ್ಷ್ಯ ಸೇನ್ ಯಶಸ್ವಿಯಾದರು. 

2018ರ ಏಷ್ಯನ್ ಗೇಮ್ಸ್‌ ಚಿನ್ನದ ಪದಕ ವಿಜೇತ ಜೋನಾಥನ್ ಕ್ರಿಸ್ಟಿ ಮೊದಲ ಗೇಮ್‌ನಲ್ಲಿ 8-2ರ ಮುನ್ನಡೆ ಕಾಯ್ದುಕೊಂಡಿದ್ದರು. ಇದಾದ ಬಳಿಕ ಅದ್ಭುತ ಕಮ್‌ಬ್ಯಾಕ್ ಮಾಡಿದ 22 ವರ್ಷದ ಲಕ್ಷ್ಯ ಆಕರ್ಷಕ ಸ್ಮ್ಯಾಷ್ ಹಾಗೂ ಅದ್ಬುತ್ ಡಿಫೆನ್ಸ್‌ ಸ್ಕಿಲ್ ಮೂಲಕ ಮೊದಲ ಗೇಮ್‌ನಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನು ಎರಡನೇ ಗೇಮ್‌ನಲ್ಲಿ ಆತ್ಮವಿಶ್ವಾಸದಿಂದ ಬೀಗಿದ ಲಕ್ಷ್ಯ ಸೇನ್, ಆರಂಭದಿಂದಲೇ ಹಿಡಿತ ಸಾಧಿಸುವ ಮೂಲಕ ಭರ್ಜರಿಯಾಗಿಯೇ ಗೇಮ್ ತಮ್ಮದಾಗಿಸಿಕೊಂಡರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ನೆಚ್ಚಿನ ಶಟ್ಲರ್ ಆಗಿದ್ದ ಜೋನಾಥನ್ ಕ್ರಿಸ್ಟಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

ಸೆಲ್ಯೂಟ್ ನಾದಾ..! ಪ್ಯಾರಿಸ್ ಒಲಿಂಪಿಕ್ಸ್‌ ಫೆನ್ಸಿಂಗ್‌ನಲ್ಲಿ 7 ತಿಂಗಳ ಗರ್ಭಿಣಿ ಸ್ಪರ್ಧೆ!

ಇದೀಗ ಲಕ್ಷ್ಯ ಸೇನ್, 2016ರ ಒಲಿಂಪಿಕ್ಸ್‌ ಬಳಿಕ ನಾಕೌಟ್ ಹಂತಕ್ಕೇರಿದ ಎರಡನೇ ಭಾರತೀಯ ಪುರುಷ ಶಟ್ಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ನಾಕೌಟ್ ಹಂತ ಪ್ರವೇಶಿಸಿದ್ದರು. 

ಈ ಮೊದಲು ಆಲ್‌ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲೂ ಜೋನಾಥನ್ ಕ್ರಿಸ್ಟಿ ಹಾಗೂ ಲಕ್ಷ್ಯ ಸೇನ್ ಮುಖಾಮುಖಿಯಾಗಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಕ್ರಿಸ್ಟಿ, ಲಕ್ಷ್ಯ ಸೇನ್‌ಗೆ ಸೋಲುಣಿಸಿದ್ದರು. ಇದೀಗ ಆ ಸೋಲಿಗೆ ಲಕ್ಷ್ಯ ಸೇನ್ ಪ್ರತಿಷ್ಠಿತ ಒಲಿಂಪಿಕ್ಸ್ ಟೂರ್ನಿಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮನು ಭಾಕರ್‌ಗೆ ಇದೆ ಹ್ಯಾಟ್ರಿಕ್‌ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ..! ಇನ್ನೊಂದು ಸ್ಪರ್ಧೆಗೆ ಕ್ಷಣಗಣನೆ

ಮತ್ತೊಂದೆಡೆ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ನಾಕೌಟ್‌ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ. ಸಿಂಧು ಈಸ್ಟೋನಿಯಾದ ಕ್ರಿಸ್ಟಿನ್ ಕೂಬ ಎದುರು 21-5, 21-10 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಅಂತಿಮ 16ರ ಘಟ್ಟ ಪ್ರವೇಶಿಸಿದರು.

Latest Videos
Follow Us:
Download App:
  • android
  • ios