Asianet Suvarna News Asianet Suvarna News

ಕಂಚಿನ ಪದಕದ ಪಂದ್ಯವನ್ನು ರಾಜ್ಯಮಟ್ಟದ ಪಂದ್ಯವೆಂದು ಭಾವಿಸಿ ಆಡಿದೆ: ಅಮನ್‌ ಶೆರಾವತ್‌

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಅಮನ್ ಶೆರಾವತ್, ತವರಿಗೆ ಬಂದಿಳಿಯುತ್ತಿದ್ದಂತೆಯೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Just thought of it as any State level game Wrestler Aman Sehrawat on his Olympic bronze medal match kvn
Author
First Published Aug 14, 2024, 12:15 PM IST | Last Updated Aug 14, 2024, 12:15 PM IST

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನ ಕುಸ್ತಿ ಪುರುಷರ 57 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಶೆರಾವತ್‌ ಮಂಗಳವಾರ ತವರಿಗೆ ವಾಪಸಾದರು. ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಬಳಿಕ ತಾವು ಅಭ್ಯಾಸ ನಡೆಸುವ ಛತ್ರಸಾಲ್‌ ಕ್ರೀಡಾಂಗಣದಲ್ಲಿ ಅಮನ್‌ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮನ್‌, ಕಂಚಿನ ಪದಕದ ಪಂದ್ಯವನ್ನು ರಾಜ್ಯಮಟ್ಟದ ಪಂದ್ಯವೆಂದು ಭಾವಿಸಿ ಆಡಿದ್ದಾಗಿ ಹೇಳಿದರು. 

‘ಸೆಮಿಫೈನಲ್‌ನ ಆರಂಭದಲ್ಲೇ ನಾನು ಸುಲಭವಾಗಿ 6 ಅಂಕ ಬಿಟ್ಟುಕೊಟ್ಟೆ. ಒಲಿಂಪಿಕ್ಸ್‌ ಪಂದ್ಯದಲ್ಲಿ ಈ ರೀತಿಯ ಹಿನ್ನಡೆಯಾಯಿತು ಎಂದು ಮನಸಿಗೆ ನೋವಾಯಿತು. ಆದರೆ ಕಂಚಿನ ಪದಕದ ಪಂದ್ಯವನ್ನು ನಾನು ರಾಜ್ಯ ಮಟ್ಟದ ಪಂದ್ಯವೆಂದು ಭಾವಿಸಿ ಆಡಿದೆ. ಹೀಗಾಗಿ ಯಾವುದೇ ಒತ್ತಡಕ್ಕೆ ನಾನು ಸಿಲುಕಲಿಲ್ಲ’ ಎಂದರು. ಇದೇ ವೇಳೆ 2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಗುರಿ’ ಎಂದು 21 ವರ್ಷದ ಅಮನ್‌ ಭರವಸೆ ವ್ಯಕ್ತಪಡಿಸಿದರು.

"ಕೇಳಿ ಶಾಕ್ ಆಯ್ತು..!" ಒಲಿಂಪಿಕ್ಸ್ ಸಿದ್ಧತೆಗೆ ನನಗೆ ಕೇಂದ್ರ ₹1.5 ಕೋಟಿ ಕೊಟ್ಟಿಲ್ಲ: ಅಶ್ವಿನಿ ಪೊನ್ನಪ್ಪ ಕಿಡಿ

ಪ್ಯಾರಿಸ್‌ ಗೇಮ್ಸ್‌ನಲ್ಲಿ 132 ಒಲಿಂಪಿಕ್‌, 38 ವಿಶ್ವ ದಾಖಲೆ!

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್‌ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಒಟ್ಟು 132 ಒಲಿಂಪಿಕ್‌ ಹಾಗೂ 38 ವಿಶ್ವ ದಾಖಲೆಗಳು ನಿರ್ಮಾಣಗೊಂಡಿವೆ ಎಂದು ಕ್ರೀಡಾಕೂಟದ ಅಧಿಕೃತ ಸಮಯ ದಾಖಲು (ಟೈಂ ಕೀಪಿಂಗ್‌) ಪ್ರಾಯೋಜಕರಾದ ಒಮೆಗಾ ಸಂಸ್ಥೆ ಮಾಹಿತಿ ನೀಡಿದೆ. 

ಸ್ವಿಜರ್‌ಲೆಂಡ್‌ ಮೂಲದ ಒಮೆಗಾ ಸಂಸ್ಥೆಯು, ಪ್ಯಾರಿಸ್‌ ಗೇಮ್ಸ್‌ನಲ್ಲಿ ಸಮಯ ದಾಖಲು ಮಾಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡಿದ್ದಾಗಿ ತಿಳಿಸಿದ್ದು, 550 ಸಿಬ್ಬಂದಿ, 350 ಟನ್‌ ತೂಕದ ಉಪಕರಣಗಳನ್ನು ಬಳಕೆ ಮಾಡಿದ್ದಾಗಿ ತಿಳಿಸಿದೆ. 

ಪುರುಷರ 100 ಮೀ. ಓಟದ ವಿಜೇತರನ್ನು ನಿರ್ಧರಿಸಲು ಫೋಟೋ ಫಿನಿಶ್‌ ಕ್ಯಾಮೆರಾವನ್ನು ಬಳಸಲಾಯಿತು. ಈ ಕ್ಯಾಮೆರಾ ಓಟ ಮುಕ್ತಾಯಗೊಳ್ಳುವ ಗೆರೆ ಬಳಿ ಪ್ರತಿ ಸೆಕೆಂಡ್‌ಗೆ 40000 ಫೋಟೋಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದೆ ಎಂದು ಒಮೆಗಾ ಸಂಸ್ಥೆ ತಿಳಿಸಿದೆ.

ಸಚಿನ್, ಸೆಹ್ವಾಗ್, ಯುವಿ ಆಟ ಕಣ್ತುಂಬಿಕೊಳ್ಳಲು ರೆಡಿಯಾಗಿ; ಅಭಿಮಾನಿಗಳಿಗೆ ಬಿಸಿಸಿಐ ಗುಡ್‌ ನ್ಯೂಸ್..?

ಒಲಿಂಪಿಕ್‌ ಪದಕ ಗೆದ್ದ ಭಾರತೀಯರಿಗೆ ಗೋಲ್ಡಿ ಸಂಸ್ಥೆ ಉಚಿತ ಸೌರ ಶಕ್ತಿ ಪ್ಯಾನೆಲ್‌

ಸೂರತ್‌: ಗುಜರಾತ್‌ನ ಸೂರತ್‌ ಮೂಲದ ಗೋಲ್ಡಿ ಸೋಲಾರ್‌ ಸಂಸ್ಥೆಯು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ಮನೆಗಳಿಗೆ ಉಚಿತ ಸೌರ ಶಕ್ತಿ ಉತ್ಪಾದನಾ ಪ್ಯಾನೆಲ್‌ಗಳನ್ನು ನೀಡುವುದಾಗಿ ಘೋಷಿಸಿದೆ. ಆ ಮೂಲಕ ಪದಕ ವಿಜೇತರನ್ನು ವಿಶೇಷವಾಗಿ ಗೌರವಿಸುವುದಾಗಿ ಸಂಸ್ಥೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ಯಾರಿಸ್‌ ಗೇಮ್ಸ್‌ನಲ್ಲಿ ಭಾರತ 1 ಬೆಳ್ಳಿ, 5 ಕಂಚಿನ ಪದಕವನ್ನು ಗೆದ್ದಿದೆ.
 

Latest Videos
Follow Us:
Download App:
  • android
  • ios