Asianet Suvarna News Asianet Suvarna News

ಟಿಪ್ಪು ಜಯಂತಿ: ಕೊಡಗಿನಲ್ಲಿ 3 ದಿನ ನಿಷೇಧಾಜ್ಞೆ ಜಾರಿ..!

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕೊಡಗು ಬಂದ್ ಹಿನ್ನಲೆಯಲ್ಲಿ ಮುಂಜಾಗ್ರತಾವಾಗಿ ಜಿಲ್ಲೆಯಲ್ಲಿ 3 ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಯಾವಾಗಿನಿಂದ ಯಾವಾಗ?

Tiipu Jayanti section 144 clamped in Kodagu from Nov 9 to nov 11th
Author
Bengaluru, First Published Nov 8, 2018, 8:53 PM IST

ಕೊಡಗು, [ನ.08]: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಶನಿವಾರ ಕೊಡಗು ಬಂದ್ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇದೇ ಶುಕ್ರವಾರ [ನ.09] ಸಂಜೆ 6 ರಿಂದ ಭಾನುವಾರ [ನ.11] ಬೆಳಗ್ಗೆ 6ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಟಿಪ್ಪು ಜಯಂತಿ ಆಚರಣೆ ಕುರಿತು ಇಂದು [ಗುರುವಾರ] ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ.ಸುಮನಾ ಡಿ ಪನ್ನೇಕರ್, ಕೊಡಗು ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ಹಾಗೂ ವಿರಾಜಪೇಟೆಗಳಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ.

ಟಿಪ್ಪು ಜಯಂತಿ ವೇಳೆ ಬಾಲ ಬಿಚ್ಚಿದ್ರೆ ನಿರ್ದಾಕ್ಷಿಣ್ಯ ಕ್ರಮ

ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆಯಿಂದ ಕಿಡಿಗೇಡಿಗಳು ಬಾರದಂತೆ 10 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಇವುಗಳು ಈಗಾಗಲೇ ಬುಧವಾರದಿಂದ ಕಾರ್ಯಚರಣೆ ನಡೆಸುತ್ತಿವೆ. ಇದಲ್ಲದೇ ಆಂತರಿಕ ತಪಾಸಣೆಗಾಗಿ 30 ಚೆಕ್ ಪೋಸ್ಟ್‍ಗಳನ್ನು ಆರಂಭಿಸಲಾಗಿದ್ದು, ಇವುಗಳು ಇಂದಿನಿಂದ ಕಾರ್ಯಾರಂಭ ಮಾಡಿವೆ ಎಂದು ಹೇಳಿದರು.

ಈಗಾಗಲೇ ಜಿಲ್ಲೆಯಾದ್ಯಂತ 10 ಕೆಎಸ್ಆರ್‌ಪಿ ತುಕಡಿ, ಒಂದು ವಜ್ರ ಪಡೆ ಕಾರ್ಯ ನಿರ್ವಹಿಸುತ್ತಿದೆ. ಭದ್ರತೆಗಾಗಿ ಒಟ್ಟು 2 ಸಾವಿರ ಪೊಲೀಸರು ನಿಯೋಜನೆಗೊಂಡಿದ್ದಾರೆ. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ, ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು.

ವಿವಾದಾತ್ಮಕ ನಾಯಕನ ಜಯಂತಿ ಬೇಕಾ?

ಈಗಾಗಲೇ ಬಂದ್‍ಗೆ ಕರೆ ಕೊಟ್ಟಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಬಲವಂತವಾಗಿ ಬಂದ್ ಮಾಡಿಸಿದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆ 6 ರಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

Follow Us:
Download App:
  • android
  • ios