ಅಪೋಲೋಗೆ ದಾಖಲಾಗಿದ್ದ ಜೆಡಿಎಸ್‌ ನಾಯಕ ಡಿಸ್ಚಾರ್ಜ್

ಎದೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ  ಜೆಡಿಎಸ್ ನಾಯಕ ವೈ ಎಸ್‌ವಿ ದತ್ತಾ ಡಿಸ್ಚಾರ್ಜ್ ಆಗಿದ್ದಾರೆ.

JDS Leader YSV Datta Discharge from hospital Benglauru

ಬೆಂಗಳೂರು[ಜ.24]  ಎದೆ ನೋವಿನ ಕಾರಣ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ  ಜೆಡಿಎಸ್ ನಾಯಕ ವೈ ಎಸ್‌ವಿ ದತ್ತಾ ಡಿಸ್ಚಾರ್ಜ್ ಆದ ನಂತರ ಮಾಧ್ಯಮಗಳೊಂದಿಗೆ ಮಾತನ್ನಾಡಿದ್ದಾರೆ. 

ಐದು ತಿಂಗಳಿನಿಂದ ಎದೆ ನೋವು ಬರ್ತಿತ್ತು. ಹಾಗಾಗಿ ಮೊನ್ನೆ ಆಸ್ಪತ್ರೆಗೆ ಬಂದು ದಾಖಲಾಗಿದ್ದೆ. ವೈದ್ಯರು ಆಂಜಿಯೋಗ್ರಾಮ್  ಮಾಡಿದ್ದರು. ಹೃದಯದ ಕವಲುನಾಳದಲ್ಲಿ ರಕ್ತ ಪರಿಚಲನೆ ಆಗ್ತಿರಲಿಲ್ಲ. ಪರೀಕ್ಷೆ ಬಳಿಕ ಬ್ಲಾಕೇಜ್ ತೆಗೆದು ಒಂದು ಸ್ಟೆಂಟ್ ಅಳವಡಿಸಿದ್ದಾರೆ. ಡಾಕ್ಟರ್  ಶ್ರೀನಿವಾಸ್ ನೇತೃತ್ವದ ತಂಡ  ಆರೈಕೆ ನೀಡಿತು ಎಂದು ತಿಳಿಸಿದರು.

ಗೌಡರ ಕಡೆಯಿಂದ ದತ್ತಾಗೆ ದೊಡ್ಡ ಹುದ್ದೆ

ಈಗ ಅರಾಮಾಗಿದ್ದೀನಿ ಯಾವುದೇ ಸಮಸ್ಯೆ ಇಲ್ಲ. ಮೊನ್ನೆ ದಾಖಲಾಗಿದ್ದೆ ಇಂದು ಡಿಸ್ಚಾರ್ಜ್ ಆಗ್ತಿದ್ದೇನೆ.ಇನ್ನು ಹತ್ತು ವರ್ಷ ಯಾವುದೇ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ. ಪ್ರಚಾರ ಸಮೀತಿಯ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕವನ್ನು ದೇವೆಗೌಡರನ್ನು ಭೇಟಿ ಮಾಡಿ ತಿಳಿಸ್ತೀನಿ. ಪಕ್ಷದ ಕಾರ್ಯಚಟುವಟಿಕೆಗಳ ಭಾಗಿಯಾಗಲು ಯಾವುದೇ ಸಮಸ್ಯೆ ಇಲ್ಲ  ಎಂದು ದತ್ತಾ ತಿಳಿಸಿದರು.

Latest Videos
Follow Us:
Download App:
  • android
  • ios