ತೆಲಂಗಾಣ(ಡಿ. 06)  ಹೈದರಾಬಾದ್ ಎನ್ ಕೌಂಟರ್ ವಿಚಾರದಲ್ಲಿ ತೆಲಂಗಾಣ ಹೈ ಕೋರ್ಟ್ ಮಹತ್ವದ ಆದೇಶ ನೀಡಿದೆ. ಎನ್ ಕೌಂಟರ್‌ ಗೆ ಒಳಗಾದ ಆರೋಪಿಗಳ ಶವಗಳನ್ನು ಆಸ್ಪತ್ರೆಯ ಶವಾಗಾರದಲ್ಲೇ ಇರಿಸಬೇಕು ಎಂದು ತಿಳಿಸಿದೆ.

ಮೆಹಬೂಬ್ ನಗರದ ಆಸ್ಪತ್ರೆಯ ಶವಾಗಾರದಲ್ಲಿಯೇ ಶವಗಳನ್ನು ಇಡಿ. ಅವರ ಕುಟುಂಬಗಳಿಗೆ ಶವ ಹಸ್ತಾಂತರ ಮಾಡುವುದು ಬೇಡ ಎಂದು ತಿಳಿಸಿದೆ. ಸೈಬರಾಬಾದ್ ಪೊಲೀಸರಿಗೆ ಸೂಚನೆ ನೀಡಿದ್ದು ವಿಧಿ-ವಿಜ್ಞಾನ ತಜ್ಞರ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಬೇಕು. ಶವ ಪರೀಕ್ಷೆ ವಿಡಿಯೋ ಸಲ್ಲಿಕೆ ಮಾಡಬೇಕು ಎಂದು ತಿಳಿಸಿದೆ.

ಎನ್ ಕೌಂಟರ್ ವಿಚಾರದಲ್ಲಿ ಉಪೇಂದ್ರ ಸೂಪರ್ ಪ್ರಶ್ನೆ

ಡಿಸೆಂಬರ್ 9 ರ ವರೆಗೂ ಅಂತ್ಯಕ್ರಿಯೆ ಇಲ್ಲ. ಡಿಸೆಂಬರ್ 9 ರಂದು ಬೆಳಗ್ಗೆ 10.30ಕ್ಕೆ  ಈ ಪ್ರಕರಣದ ವಿಚಾರಣೆ ನಡೆಯಲಿದೆ. ಮಹಿಳಾ ಸಂಘಗಳು ಹೈಕೋರ್ಟ್ ನಲ್ಲಿ ಎನ್ ಕೌಂಟರ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. 

ಹೈದರಾಬಾದ್ ನಲ್ಲಿ ನಡೆದಿದ್ದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಆರೋಪಿಗಳನ್ನು ಮರುಸೃಷ್ಟಿಗೆ  ಎಂದು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ ಅವರು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದರು. ಆ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದರು.