Asianet Suvarna News Asianet Suvarna News

ಒಂದೇ ರಾತ್ರಿಯಲ್ಲಿ ಈ ಬಾರ್‌ ಡಾನ್ಸರ್‌ ಮೇಲೆ ಸುರಿದಿದ್ದು 90 ಲಕ್ಷ ರೂಪಾಯಿ!

ಆಕೆ ಅಂತಿಂಥ ಬಾರ್‌ ಡಾನ್ಸರ್‌ ಅಲ್ಲ. ಒಂದು ಕಾಲದಲ್ಲಿ ವಿಶ್ವದ ಶ್ರೀಮಂತ ಬಾರ್‌ ಡಾನ್ಸರ್‌. ಎಲ್ಲಿಯವರೆಗೆ ಈಕೆಯ ಹವಾ ಇತ್ತೆಂದರೆ, ಒಂದೇ ರಾತ್ರಿಯಲ್ಲಿ ಕುಖ್ಯಾತ ವ್ಯಕ್ತಿಯೊಬ್ಬ ಈಕೆಯ ಮೇಲೆ 90 ಲಕ್ಷ ರೂಪಾಯಿ ಸುರಿದಿದ್ದ.

Meet Tarannum Khan India Richest Dance Bar Girl Abdul Karim Telgi spent 90 lakh in Single Day san
Author
First Published Feb 9, 2024, 8:24 PM IST

ಈಕೆ ಅತಿಂಥ ಬಾರ್‌ ಡಾನ್ಸರ್‌ ಅಲ್ಲ. ಮುಂಬೈನ ಪ್ರಖ್ಯಾತ ಬಾರ್‌ ಡಾನ್ಸರ್‌. ಇಂದು ಬಹುತೇಕ ದೇಶದ ಯಾವ ಭಾಗದಲ್ಲೂ ಬಾರ್‌ ಡಾನ್ಸರ್‌ಗಳಾಗಲಿ, ಡಾನ್ಸ್‌ ಬಾರ್‌ಗಳಾಗಲಿ ಕಾಣ ಸಿಗುವುದಿಲ್ಲ. ಮುಂಬೈನ ಕೆಲವೊಂದು ಪ್ರದೇಶಗಳನ್ನು ಬಿಟ್ಟರೆ, ಮತ್ಯಾವ ಕಡೆಗಳಲ್ಲೂ ಇದು ಕಾಣಸಿಗೋದಿಲ್ಲ. ಆದರೆ, ತರನ್ನುಮ್ ಖಾನ್ (Tarannum Khan) ಎನ್ನುವ ಹೆಸರು ಕೇಳಿದಾಗ ನಿಮಗೆ ಅಚ್ಚರಿಯಾಗಲೇಬೇಕು. ಹೌದು ಒಂದು ಕಾಲದಲ್ಲಿ ಮುಂಬೈನಲ್ಲಿ ಡಾನ್ಸ್‌ಬಾರ್‌ಗಳ ಹವಾ ಹೇಗಿತ್ತೆಂದರೆ, ರಾತ್ರಿ ಮುಗಿಯುವವರೆಗೂ ಹುಡುಗಿಯರು ಅಲ್ಲಿ ಕುಣಿಯುತ್ತಿದ್ದರು. ಬಾರ್‌ನಲ್ಲಿ ಮದ್ಯ ಹೀರುತ್ತಾ ಇವರ ಡಾನ್ಸ್‌ ನೋಡುತ್ತಿದ್ದರು ಇವರುಗಳ ಮೇಲೆ ನೋಟುಗಳ ಸುರಿಮಳೆ ಮಾಡುತ್ತಿದ್ದರು. ಇಂಥದ್ದೇ ಸಮಯದಲ್ಲಿ ಸಖತ್‌ ಫೇಮಸ್‌ ಆದ ಬಾರ್‌ ಗರ್ಲ್‌ ಹೆಸರು ತರನ್ನುಮ್‌ ಖಾನ್‌. ಬಾರ್‌ ಡಾನ್ಸರ್‌ ಆಗಿದ್ದುಕೊಂಡೇ ಈಕೆ ಸಂಪಾದಿಸಿದ ಹಣ ಲೆಕ್ಕವಿಲ್ಲದಷ್ಟು. ಈಕೆಯ ಮೇಲೆ ಐಟಿ ದಾಳಿ ಕೂಡ ಆಗಿತ್ತೆಂದರೆ, ಈಕೆಯಲ್ಲಿದ್ದ ಹಣ ಎಷ್ಟು ಅನ್ನೋದು ಊಹೆ ಮಾಡಬಹುದು. ಬಾರ್‌ ಡಾನ್ಸರ್‌ ಆಗಿ ಈಕೆಯ ಉತ್ತಂಗದ ದಿನದಲ್ಲಿ ಕುಖ್ಯಾತ ವ್ಯಕ್ತಿಯೊಬ್ಬ ಈಕೆಯ ಮೇಲೆ ಒಂದಲ್ಲ ಎರಡಲ್ಲ ಬರೋಬ್ಬರಿ 90 ಲಕ್ಷ ರೂಪಾಯಿಗಳನ್ನು ಒಂದೇ ರಾತ್ರಿಯಲ್ಲಿ ಸುರಿದು ಬಿಟ್ಟಿದ್ದ. ವಿಶ್ವದ ಶ್ರೀಮಂತ ಬಾರ್‌ ಡಾನ್ಸರ್‌ ತರನ್ನುಮ್‌ ಕೌರ್‌ನ ವಿವರ ಇಲ್ಲಿದೆ.

ಈಕೆಯ ಬದುಕು ಬದಲಿಸಿದ್ದು ಮುಂಬೈ ಗಲಭೆ: ತರನ್ನುಮ್‌ ಖಾನ್‌ನ ತಂದೆ ಮುಂಬೈನ ಅಂಧೇರಿ ಪ್ರದೇಶದ ನಿವಾಸಿ. ಬದುಕು ಸಾಗಿಸಲು ಇದ್ದಿದ್ದು ಸಣ್ಣ ಅಂಗಡಿ. ತರನ್ನುಮ್ ಅವರ ಕುಟುಂಬದಲ್ಲಿ ಅವರ ಸಹೋದರ ಮತ್ತು ಸಹೋದರಿ ಸೇರಿದಂತೆ ಒಟ್ಟು 6 ಜನರಿದ್ದರು. ಆದರೆ, ಪುಟ್ಟ ಅಂಗಡಿಯಿಂದ ಬರುತ್ತಿದ್ದ ಆದಾಯ 6 ಜನರ ಕುಟುಂಬವನ್ನು ನಿಭಾಯಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಇದರ ನಡುವೆ 1992ರಲ್ಲಿ ನಡೆದ ಮುಂಬೈನ ಕೋಮುಗಲಭೆಯಲ್ಲಿ ತರನ್ನುಮ್‌ ಅವರ ಮನೆ ಮತ್ತು ಅಂಗಡಿ ಲೂಟಿಯಾಯಿತು. ಇಡೀ ಕುಟುಂಬದ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು. ಇಡೀ ಕುಟುಂಬ ಬೀದಿಗೆ ಬಂದಿದ್ದು ಮಾತ್ರವಲ್ಲದೆ, ಪರಿಹಾರ ಶಿಬಿರದಲ್ಲಿ ದಿನ ದೂಡುವ ಸಮಯ ಬಂದಿತು. ಇದರ ಆಘಾತದಲ್ಲಿಯೇ ಆಕೆಯ ತಂದೆಗೆ ಹೃದಯಾಘಾತವಾಗಿ ತೀರಿ ಹೋದರು. ಮನೆಯ ಆರ್ಥಿಕ ಪರಿಸ್ಥಿತಿ ನೋಡಿದ ತರನ್ನುಮ್‌, ಬಾರ್‌ನಲ್ಲಿ ಡಾನ್ಸರ್‌ ಆಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಒಂದೇ ರಾತ್ರಿಯಲ್ಲಿ ಸಿಕ್ಕಿತ್ತು 90 ಲಕ್ಷ: ಮುಂಬೈನ ದೀಪಾ ಬಾರ್‌ನಲ್ಲಿ ಡಾನ್ಸರ್‌ ಆಗಿ ಕೆಲಸ ಮಾಡಿದ್ದ ತರುನ್ನುಮ್‌ ತನ್ನ ಅತೀವ ಸೌಂದರ್ಯದ ಕಾರಣಕ್ಕಾಗಿಯೇ ಸಿಕ್ಕಾಪಟ್ಟೆ ಫೇಮಸ್‌ ಆಗಿಬಿಟ್ಟಿದ್ದರು. ಆಕೆಯ ಡಾನ್ಸ್‌ ಬದಲಿಗೆ ಆಕೆಯನ್ನು ನೋಡಿದರೆ ಸಾಕು ಎನ್ನುವ ನಿಟ್ಟಿನಲ್ಲಿ ದೂರದೂರುಗಳಿಂದ ದೀಪಾ ಬಾರ್‌ಗೆ ಬರಲು ಆರಂಭಿಸಿದ್ದರು. ತರನ್ನುಮ್‌ ವೇದಿಕೆಯ ಮೇಲೆ ಡಾನ್ಸ್‌ ಮಾಡಲು ಬಂದರೆ, ಕೆಲವೇ ಸೆಕೆಂಡ್‌ಗಳಲ್ಲಿ ಲಕ್ಷಗಟ್ಟಲೆ ಹಣ ಆಕೆಯ ಕಾಲಡಿಯಲ್ಲಿ ಬಿದ್ದಿರುತ್ತಿತ್ತು. ತನ್ನ 16ನೇ ವಯಸ್ಸಿನಲ್ಲಿ ಬಾರ್‌ ಡಾನ್ಸರ್‌ ವೃತ್ತಿ ಆರಂಭಿಸಿದ್ದ ತರನ್ನುಮ್‌ ಕೆಲವೇ ದಿನಗಳಲ್ಲಿ ಮುಂಬೈನ ಮಿಲಿಯನೇರ್‌ ಬಾರ್‌ ಡಾನ್ಸರ್‌ಗಳ ಪೈಕಿ ಒಬ್ಬರಾಗಿದ್ದರು.

The Telgi Story ರಿಲೀಸ್​: 30 ಸಾವಿರ ಕೋಟಿ ಗುಳುಂ ಮಾಡಿದ ಪತಿ- ಪೂರ್ತಿ ಆಸ್ತಿ ದಾನ ಮಾಡಲು ಸಿದ್ಧಳಾದ ಪತ್ನಿ!

ಅದಲ್ಲದೆ, ಆ ದಿನಗಳಲ್ಲಿ ಅತ್ಯಂತ ಸುಂದರ ಬಾರ್‌ ಡಾನ್ಸರ್‌ಗಳ ಲಿಸ್ಟ್‌ನಲ್ಲಿ ಇವರ ಹೆಸರೇ ಮೊದಲಿರುತ್ತಿತ್ತು. ಮುಂಬೈ ಪೊಲೀಸ್‌ ಮೂಲಗಳ ಪ್ರಕಾರ, ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ಲಾಲ್‌ ತೆಲಗಿ, ತರನ್ನುಮ್‌ನ ಸೌಂದರ್ಯಕ್ಕೆ ಎಷ್ಟು ಮಾರುಹೋಗಿದ್ದನೆಂದರೆ, ಒಂದೇ ರಾತ್ರಿ ಈಕೆಯ ಮೇಲೆ ಆತ 90 ಲಕ್ಷ ರೂಪಾಯಿ ಸುರಿದಿದ್ದ. ಈ ಸುದ್ದಿ ಮುಂಬೈನಲ್ಲಿ ಕ್ಷಣ ಮಾತ್ರದಲ್ಲಿ ಸಂಚಾರವಾಗಿಬಿಟ್ಟತು. ಕೊನೆಗೆ ಕರೀಂ ಲಾಲ್‌ ತೆಲಗಿಯ ಪತನಕ್ಕೆ ಮೂಲವಾಗಿ ಇದೇ ಪ್ರಕರಣ ಕಾರಣವಾಗಿದ್ದು ವಿಪರ್ಯಾಸ!.

ದೇಶ ಕಂಡ ಬಹುದೊಡ್ಡ ಹಗರಣದ ರೂವಾರಿ ಕರ್ನಾಟಕದವ, ಹಣ್ಣು ವ್ಯಾಪಾರಿ ಬಹುಕೋಟಿ ದಂಧೆಗಿಳಿದ ಕಥೆ

Follow Us:
Download App:
  • android
  • ios