ನಿಮ್ಮ ಅಂದದ ಮನೆಗೆ ರೂಫಿಂಗ್ ಶೀಟ್ ಆಯ್ಕೆ ಹೇಗೆ? ಇಲ್ಲಿದೆ ಟಿಪ್ಸ್

ಮನೆಗೆ ರೂಫಿಂಗ್ ಶೀಟ್ ಅಥವಾ ಚಾವಣಿ ಹಾಳೆ ಹಾಕಿಸಿಕೊಳ್ಳುವ ಮುನ್ನ ಎಚ್ಚರ ವಹಿಸಿವುದು ಅಗತ್ಯ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ, ಡಿಸ್ಕೌಂಟ್ ಸೇರಿದಂತೆ ಹಲವು ಆಫರ್‌ಗಳಲ್ಲಿ ರೂಫಿಂಗ್ ಶೀಟ್ ಖರೀದಿಸಿ ತಲೆ ಮೇಲೆ ಕೈಹೊತ್ತುಕೊಳ್ಳುವ ಬದಲು ಖರೀದಿಗೆ ಮುನ್ನ ಜಾಗರೂಕರಾಗಿದ್ದರೆ ಒಳಿತು. ನಿಮ್ಮ ಆಯ್ಕೆ ಹಾಗೂ ಅಗತ್ಯಕ್ಕೆ ತಕ್ಕೆ ರೂಫಿಂಗ್ ಶೀಟ್ ಕುರಿತ ಸಂಪೂರ್ಣ ವಿವರ ಇಲ್ಲಿದೆ. 

How to choose roofing sheets for your home here is  the details

ಮಾರುಕಟ್ಟೆಯಲ್ಲಿ ಸಿಗುವ ಯಾವುದಾದರೊಂದು  ರೂಫಿಂಗ್ ಶೀಟ್ ಆಯ್ಕೆ ಮಾಡುವ ಯೋಚನೆ ನಿಮಗಿದ್ದರೆ, ಅದು ತಪ್ಪು ಅನ್ನೋದು ರೂಫಿಂಗ್ ತಜ್ಞರ ಮಾತು. ಎಲ್ಲಾ ರೂಫಿಂಗ್ ಶೀಟ್ ಒಂದೇ ಗುಣಮಟ್ಟ ಹೊಂದಿರುವುದಿಲ್ಲ. ರೂಫಿಂಗ್  ಶೀಟ್ ಪದೇ ಪದೇ ಬದಲಾಯಿಸುವಂತಿರಬಾರದು.  ಸದ್ಯ ರೂಫ್ ಟೈಲ್ಸ್, ಸ್ಲೇಟ್ಸ್ ಹಾಗೂ ಫ್ಲಾಟ್ ರೂಫ್ ಹೆಚ್ಚು ಜನಪ್ರಿಯವಾಗಿದೆ.

ಶಾಕ್ ಪ್ರೂಫ್ ಮನೆ ನಿರ್ಮಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

ರೂಫ್ ಶೀಟ್‌ಗಳು ಹೆಚ್ಚು ಕಾಲ ಬಾಳಿಕೆ ಬರಬೇಕು ಎಂದರೇ ತಯಾರಿಕೆಯಲ್ಲಿ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಿರಬೇಕು. ನಿಮ್ಮ ಮನೆ ಛಾವಣಿ, ಟೆರೆಸ್ ಮೇಲ್ಬಾಗ, ಗ್ಯಾರೇಜ್, ಪಾರ್ಕಿಂಗ್ ಸ್ಥ ಸೇರಿದಂತೆ ಹಲವು ಕಡಗಳಲ್ಲಿ ಬಳಕೆ ಮಾಡುವ ರೂಫಿಂಗ್ ಶೀಟ್, ಮಳೆ, ಬಿಸಿಲು ಸೇರಿದಂತೆ ಎಲ್ಲಾ ವಾತಾವರಣವನ್ನು ಸಶಕ್ತವಾಗಿ ಎದುರಿಸವಂತಿರಬೇಕು. ಸದ್ಯ ನಾಲ್ಕ ವಿದದ ರೂಫಿಂಗ್ ಶೀಟ್ ಹೆಚ್ಚು ಚಾಲ್ತಿಯಲ್ಲಿದೆ.

ಮೆಟಲ್ ರೂಫ್ ಶೀಟ್ ಅಥವಾ ಲೋಹದ ಚಾವಣಿ  ಹಾಳೆ:
ಮನೆ ಮೇಲ್ಛಾವಣಿ, ಬಿಲ್ಡಿಂಗ್ ಮೇಲ್ಬಾಗ, ಟೆರೆಸ್ ಮೇಲೆ, ಗ್ಯಾರೇಜ್ ಸೇರಿದಂತೆ ಯಾವುದೇ ಭಾಗದಲ್ಲಿ ಮೆಟಲ್ ರೂಫ್ ಶೀಟ್ ಅತ್ಯುತ್ತಮ ಆಯ್ಕೆ. ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವ ಹಾಗೂ ಹೆಚ್ಚು ಬಾಳಿಕೆ ಬರುವ ಗುಣಟ್ಟ ಮೆಟಲ್ ರೂಫ್‌ಶೀಟ್‌ಗೆ ಇದೆ. ಮಟೆಲ್ ರೂಫ್ ಶೀಟ್‌ಗಳನ್ನು ತುಂಡರಿಸುವುದು ಅಥವಾ ವಸ್ತುಗಳಿಂದ  ಹಾನಿ ಮಾಡುವುದು ಕಷ್ಟ. ಇನ್ನು ಈ ರೂಫ್ ಶೀಟ್ ಕಡಿಮೆ ತೂಕ ಹೊಂದಿರುವ ಕಾರಣ ಅಳವಡಿಕೆ, ಸಾಗಾಣಿಕೆ ಕೂಡ ಸುಲಭ.

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಮೆಟಲ್ ರೂಫ್ ಶೀಟ್ ಇತರ ರೂಫಿಂಗ್ ಶೀಟ್‌ಗೆ ಹೋಲಿಸಿದರೆ ಬೆಲೆ ಕಡಿಮೆ. ಇನ್ನು ಇದೇ ಮೆಟಲ್ ಶೀಟ್‌ಗೆ ಪಾಲಿಸ್ಟರ್ ಅಥವಾ ಪ್ಲಾಸ್ಟಿಕ್ ಕೋಟಿಂಗ್ ಮಾಡಿದ್ದರೆ ಇದರ ಬಣ್ಣ ಕೂಡ ಕಳೆಗುಂದುವುದಿಲ್ಲ. ಇಷ್ಟವಾದ ಬಣ್ಣಗಳಲ್ಲಿ ಮೆಟಲ್ ರೂಫಿಂಗ್ ಶೀಟ್  ಕೋಟಿಂಗ್ ಮಾಡಿಸಿಕೊಳ್ಳಬಹುದು. ಇಷ್ಟೇ ಅಲ್ಲ ಲೈಟಿಂಗ್ ಕೂಡ ಸುಲಭವಾಗಿ ಮಾಡಿಕೊಳ್ಳಬಹುದು.

ಪ್ಲಾಸ್ಟಿಕ್ ರೂಫ್ ಶೀಟ್: 
ಮೆಟರ್ ರೂಫ್ ಶೀಟ್‌ಗೆ ಹೋಲಿಸಿದರೆ ಪ್ಲಾಸ್ಟಿಕ್ ರೂಫ್ ಶೀಟ್ ಕಡಿಮೆ ಗಾತ್ರ ಹೊಂದಿದೆ. ಗಾರ್ಡನ್ ಶೆಡ್,  ತಾತ್ಕಾಲಿಕ ಬಿಲ್ಡಿಂಗ್, ಸೇರಿದಂತೆ ಸಣ್ಣ ಗಾತ್ರದ ಮೇಲ್ಚಾವಣಿ ಹಾಕುವ ಯೋಜನೆ ನಿಮ್ಮದಾಗಿದ್ದರೆ ಪ್ಲಾಸ್ಟಿಕ್ ರೂಫ್ ಶೀಟ್ ಉತ್ತಮ. ಆದರೆ ಪ್ಲಾಸ್ಟಿಕ್ ರೂಫ್ ಶೀಟ್ ಆಯ್ಕೆ ಮಾಡಿಕೊಳ್ಳುವಾಗ ಕೆಲ ಅಂಶಗಳನ್ನು ಗಮನದಲ್ಲಿಡಬೇಕು.

ನಿಮ್ಮ ಮೇಲ್ಚಾವಣಿಗೆ ಕಡಿಮೆ ತೂಕದ ರೂಫ್ ಶೀಟ್ ಅಗತ್ಯವಿದ್ದರೆ ಲೈಟ್‌ವೇಟ್  ಪ್ಲಾಸ್ಟಿಕ್ ರೂಫ್ ಶೀಟ್ ಲಭ್ಯವಿದೆ. ಆದರೆ ಈ ರೂಫ್ ಶೀಟ್ ಬಾಳಿಕೆ ಕಡಿಮೆ. ಆದರೆ ಹೆಚ್ಚಿನ ಬಾಳಿಕೆಯ ಪ್ಲಾಸ್ಟಿಕ್ ರೂಫ್ ಶೀಟ್‌ಗಳು ತೂಕ ಹೊಂದಿರುತ್ತೆ. ಜೊತೆಗೆ ಬೆಲೆಯೂ ಕೊಂಚ ಹೆಚ್ಚಿರುತ್ತದೆ. ಪ್ಲಾಸ್ಟಿಕ್ ರೂಫ್ ಶೀಟ್‌ಗಳನ್ನು ಮೆಟಲ್ ಶೀಟ್ ಅಥವಾ ಪಾಲಿಕಾರ್ಬೋನೇಟ್ ಶೀಟ್‌ಗಳಿಗೆ ಹೋಲಿಸುವುದು ಸೂಕ್ತವಲ್ಲ.

ಪಾಲಿಕಾರ್ಬೋನೇಟ್ ರೂಫ್ ಶೀಟ್:
ಕಾರು ಪಾರ್ಕಿಂಗ್, ಸಾಕು ಪ್ರಾಣಿಗಳಿಗಾಗಿ, ಹಕ್ಕಿಗಳಿಗಾಗಿ ಸಣ್ಣ ಚಾವಣಿ ವ್ಯವಸ್ಥೆ ಅಥವಾ ಪಂಜರ  ಮಾಡುವ ನಿರ್ಧಾರ ನಿಮ್ಮದಾಗಿದ್ದರೆ ಪಾಲಿಕಾರ್ಬೋನೇಟ್ ರೂಫ್ ಶೀಟ್ ಉತ್ತಮ. ಯಾವುದೇ ವಾತಾವರಣಕ್ಕೂ ಪಾಲಿಕಾರ್ಬೋನೇಟ್ ರೂಫ್ ಶೀಟ್ ಸಾಟಿಇಲ್ಲದ ಬಾಳಿಕೆ ನೀಡಲಿದೆ. ಪಾಲಿಕಾರ್ಬೋನೇಟ್ ರೂಫ್ ಶೀಟ್‌ಗಳನ್ನು ಹೆಚ್ಚಿನ ಪ್ರಭಾವದ ಪಾಲಿಪ್ರೋಪಿಲಿನ್ ಬಳಲಿ ತಯಾರಿಸಲಾಗುತ್ತದೆ.  ಇದು ಕಡಿಮೆ ತೂಕ ಹಾಗೂ ಹೆಚ್ಚು ಕಾಲ ಬಾಳಿಕೆ ಬರಲಿದೆ.  ಈ ಶೀಟ್‍‌ಗಳನ್ನು ಚಾಕೂ ಮೂಲಕ ಸುಭವಾಗಿ ಕಟ್ ಮಾಡಹುದು.

ಪಾಲಿಕಾರ್ಬೋನೇಟ್ ರೂಫ್ ಶೀಟ್ ಪಿಹೆಚ್ ನ್ಯೂಟ್ರಲ್‌ನಿಂದ ಡಿಸೈನ್ ಮಾಡಲಾಗಿದೆ. ಹೀಗಾಗಿ ಮಳೆ, ಬಿಸಿಲು, ಎಣ್ಣೆ, ಕೆಮಿಕಲ್ಸ್‌ ಬಿದ್ದರೂ ಯಾವುದೇ ಸಮಸ್ಯೆ ಇಲ್ಲ. ಯುವಿ ಪ್ರೊಟೆಕ್ಷನ್, ಬೆಂಕಿ ನಿವಾರಕ, ನಾಶಕಾರಿ ಪ್ರತಿರೋಧಕಗಳು, ವಿರೋಧಿ ಸ್ಥಿರ ವಿಘಟಕಗಳಿಂದ ಪಾಲಿಕಾರ್ಬೋನೇಟ್ ರೂಫ್ ಶೀಟ್‌ಗೆ ಯಾವುದೇ ಸಮಸ್ಯೆ ಇಲ್ಲ. 

ಕರೊಗೇಟೆಡ್ ರೂಫ್ ಶೀಟ್:
ರೂಫ್ ಶೀಟ್‌ಗಳಲ್ಲಿ ಅಂತಿಮ ವಿಧ ಕರೋಗೆಟೆಡ್ ರೂಫ್ ಶೀಟ್, ಕೃಷಿ ಸಂಬಂಧಿತ ಬಿಲ್ಡಿಂಗ್‌ಗಳಿಗೆ ಹೆಚ್ಚು ಬಳಕೆ ಮಾಡುತ್ತಾರೆ. ಎಲ್ಲಾ ವಾತಾವರಣದಲ್ಲಿ ಬಳಕೆ ಮಾಡಬಹುದಾದ ವಿಶ್ವಾಸತೆಯನ್ನು ಕರೋಗೆಟೆಡ್ ರೂಫ್ ಶೀಟ್ ಹೊಂದಿದೆ. ಪಿವಿಸಿ ಪ್ಲಾಸ್ಟಿಸೊಲ್‌ನಿಂದ ತಯಾರಿಸುವ ಕರೊಗೇಟೆಡ್ ರೂಫ್ ಶೀಟ್ ಕಳೆಗುಂದುವುದಿಲ್ಲ ಹಾಗೂ ಗೀಟುಗಳು ಬೀಳುವುದಿಲ್ಲ.

ಕರೋಗೆಟೆಡ್ ರೂಫ್ ಶೀಟ್ ನಿರ್ವಹಣೆ ವೆಚ್ಚ ಕಡಿಮೆ. ಕಾರಣ 5 ರಿಂದ 10 ವರ್ಷಕ್ಕೊಮ್ಮೆ ನಿರ್ವಹಣೆ ಮಾಡಿದರೆ ಸಾಕು. ಎರಡು ಕರೋಗೆಟೆಡ್ ಶೀಟ್‌ಗಳನ್ನು ಉಚ್ಚಿದರೆ ಗೀಟುಗಳು ಬೀಳಲಿದೆ. ಆದರೆ ಶೀಟ್ ಮೇಲೆ ಗೀಟು, ಸ್ಕ್ರಾಚ್ ಇದ್ದರೆ ಹೋಗಿಸಲು ಮಾರುಕಟ್ಟೆಯಲ್ಲಿ ಪೈಂಟ್ ಲಭ್ಯವಿದೆ. 

Latest Videos
Follow Us:
Download App:
  • android
  • ios