Asianet Suvarna News Asianet Suvarna News

The Critic Short Film Review: ಹೊಸತನದೊಂದಿಗೆ ದಾಪುಗಾಲಿಟ್ಟ 'ದ ಕ್ರಿಟಿಕ್'

ಕನ್ನಡದಲ್ಲಿ ಈಗಾಗಲೇ ಹಲವು ಸೃಜನಾತ್ಮಕ ಕಿರುಚಿತ್ರಗಳು ತೆರೆಕಂಡಿವೆ. ಅದರಲ್ಲೂ ಸಮಾಜದಲ್ಲಿ ದಿನನಿತ್ಯ ನಡೆಯುವ ಆಗು ಹೋಗುಗಳನ್ನೇ ಅಸ್ತ್ರವಾಗಿಸಿಕೊಂಡು ವಿಭಿನ್ನ ಕಥಾ ಹಂದರದೊಂದಿಗೆ ತೆರೆಕಂಡ 'ದ ಕ್ರಿಟಿಕ್' ಕಿರುಚಿತ್ರ ಕುತೂಹಲಭರಿತವಾಗಿ  ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ.
 

TS Nagabharana Acted The Critic a Must Watch Short Film gvd
Author
Bangalore, First Published Jan 30, 2022, 8:01 AM IST

ಕನ್ನಡದಲ್ಲಿ ಈಗಾಗಲೇ ಹಲವು ಸೃಜನಾತ್ಮಕ ಕಿರುಚಿತ್ರಗಳು ತೆರೆಕಂಡಿವೆ. ಅದರಲ್ಲೂ ಸಮಾಜದಲ್ಲಿ ದಿನನಿತ್ಯ ನಡೆಯುವ ಆಗು ಹೋಗುಗಳನ್ನೇ ಅಸ್ತ್ರವಾಗಿಸಿಕೊಂಡು ವಿಭಿನ್ನ ಕಥಾ ಹಂದರದೊಂದಿಗೆ ತೆರೆಕಂಡ 'ದ ಕ್ರಿಟಿಕ್' (The Critic) ಕಿರುಚಿತ್ರ ಕುತೂಹಲಭರಿತವಾಗಿ  ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ.

'ಹರಿವು', 'ನಾತಿಚರಾಮಿ', 'ಆಕ್ಟ್ 1978' ಮುಂತಾದ ಅದ್ಭುತ ಚಿತ್ರಗಳನ್ನು ಸ್ಯಾಂಡಲ್‌ವುಡ್‌ಗೆ ಕೊಟ್ಟ ರಾಷ್ಟ್ರ ಪ್ರಶಸ್ತಿ ವಿಜೇತ ಯುವ ನಿರ್ದೇಶಕ ಮಂಸೋರೆಯವರು (Mansore) ಪತ್ರಕರ್ತ ಬಿ.ಎಂ. ಬಶೀರ್ (BM Basheer) ಅವರ ಕಥೆಯನ್ನಾಧರಿಸಿ ಈ ಕಿರುಚಿತ್ರ ನಿರ್ದೇಶನ ಮಾಡಿದ್ದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಈಗಾಗಲೇ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಡಿದ್ದಾರೆ.
          
ಅಹಂಕಾರಿ ಹಿರಿಯ ಸಾಹಿತಿಯೊಬ್ಬನ ಸುತ್ತ ಸುತ್ತುವ ಕಥೆಯು ಅಂಬೇಡ್ಕರ್ ಭಾವಚಿತ್ರದ ಮೂಲಕ ಪ್ರಾರಂಭವಾಗುತ್ತದೆ. ತಾನೊಬ್ಬ ದೊಡ್ಡ ಸಾಹಿತ್ಯ ವಿಮರ್ಶಕನೆಂದು ಬೀಗುತ್ತಾ ಮಾತನಾಡುವ  ಹಿರಿಯ ವಿಮರ್ಶಕ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ. ದೊಡ್ಡದಾದ ಪುಸ್ತಕ ಲೋಕದ ನಡುವೆ ಚಿತ್ರಿಕರಣಗೊಂಡ  ಚಿತ್ರದಲ್ಲಿ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳ ಬರಹಗಾರರಾಗಿದ್ದಾರೆ ಎಂದು ಟೀಕಿಸುವ ವಿಮರ್ಶಕರು ಮುಂದೆ ತಾವೇನು ಮಾಡುತ್ತಾರೆ ಎಂಬುದು ಈ ಚಿತ್ರದ ತಿರುಳಾಗಿದೆ.

DNA Film Review: ಸೆಂಟಿಮೆಂಟಿಗೆ ಮಾಡರ್ನ್ ಟಚ್

ಹೀಗೆ ಸಾಗುವ ಕಥೆಯಲ್ಲಿ ಲೇಖಕಿ ತನ್ನ ಪುಸ್ತಕ  ವಿಮರ್ಶೆಗಾಗಿ ಅಭಿಮಾನದಿಂದ ಆತನ ಬಳಿ ಬರುತ್ತಾಳೆ. ತನ್ನ ಪುಸ್ತಕದ ಬಗೆಗೆ ಪರಿಚಯಿಸುತ್ತಾ ಅವರಿಬ್ಬರ ನಡುವೆ ಸಂವಹನ ನಡೆಯುತ್ತದೆ. ಸ್ವಲ್ಪ ಗಂಭೀರದಿಂದ ಆರಂಭವಾಗುವ ಈ ಸನ್ನಿವೇಶದಲ್ಲಿ ಲೇಖಕಿ ತನ್ನ ಪುಸ್ತಕವನ್ನು ವಿಮರ್ಶಕನ ಮುಂದಿಟ್ಟಾಗ ಕಥೆಯು ಶಾಂತತೆಯಲ್ಲಿ ಮುಂದುವರಿಯುತ್ತದೆ. ಆಕೆ ತಮ್ಮ ಪುಸ್ತಕದ ಬಗೆಗೆ ಅನಿಸಿಕೆ ವಿಮರ್ಶೆಗಳನ್ನು ಬರೆದುಕೊಡುವಂತೆ ವಿನಂತಿಸಿದಾಗ ವಿಮರ್ಶಕರು ಸ್ವಲ್ಪ ಕಾಲಾವಕಾಶ ಕೇಳುತ್ತಾರೆ. 

ಆಕೆ ಅಲ್ಲಿಂದ ತೆರಳಿದಾಗ ಟೇಬಲ್ ಮೇಲಿಟ್ಟಿದ್ದ ವಿಮರ್ಶಕರ ಹಣ ಕಾಣದಿದ್ದಾಗ ಆತನ  ಮನಸ್ಸಿನಲ್ಲಿ ಆಕೆ ಕಳ್ಳಿ  ಎಂಬ ಸ್ಥಾನ  ಪಡೆಯುತ್ತಾಳೆ. ಹೀಗೆ ಕುತೂಹಲ ಭರಿತವಾಗಿ ಸಾಗುವ ಕಥೆಯ ಅಂತ್ಯದಲ್ಲಿ ಆಕೆಯನ್ನು ಮತ್ತೆ ತನ್ನ ಸಾಹಿತ್ಯ ಭಂಡಾರಕ್ಕೆ ಕರೆಸಿ ಆಕೆಯ ಪುಸ್ತಕದ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿ ಕೊನೆಗೆ ಹಣದ ಬಗೆಗೆ ಕೇಳುತ್ತಾನೆ. ಹೆಚ್ಚು ಮುಖ ಭಾವಣೆಗಳಲ್ಲೇ ಸಾಗುವ ಕಥೆಯಲ್ಲಿ ಆಕೆ ಏನೂ ಹೇಳದೆ ತಾನು ಕೊಟ್ಟ ಪುಸ್ತಕ ಮರಳಿಸುವಂತೆ ಕೇಳುತ್ತಾಳೆ. 

ಇದರಿಂದ ಕ್ರೋಧಗೊಂಡ ವಿಮರ್ಶಕ ಪುಸ್ತಕವನ್ನು ನೆಲಕ್ಕೆಸೆಯುತ್ತಾನೆ. ಆಗ ಪುಸ್ತಕದ ಒಳಗಿಟ್ಟ ಆತನ ಹಣ ಕೆಳಗೆ ಬೀಳುತ್ತದೆ. ಹೀಗೆ ಕೊನೆಗೆ ಆತನೇ ಕಳ್ಳನ ಸ್ಥಾನದಲ್ಲಿರುತ್ತಾನೆ. ಚಿತ್ರ ಅಂತ್ಯಗೊಂಡಾಗ ವಿಮರ್ಶಕನ ಆತ್ಮವಲೋಕನ ಶೀರ್ಷಿಕೆಯ ಒಳಾರ್ಥವನ್ನು ಸರಿದೂಗಿಸುತ್ತದೆ. ಕಥೆಯ ಪ್ರಾರಂಭದಲ್ಲಿ ಹೊಸ ಹುಡುಗರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ ಎನ್ನುವ ವಿಮರ್ಶಕನ ಡೈಲಾಗ್ ಕೊನೆಯಲ್ಲಿ ಆತನ ಆತ್ಮವಿಮರ್ಶನೆಗೆ ಮುನ್ನುಡಿಯಾಗುತ್ತದೆ.

Ombatthane Dikku Film Review: ಸಿರಿತನ ಕನಸಿಗೆ ಬೇಟೆಗಾರನ ಬಾಣ

ಇನ್ನು ಸತ್ಯ ಹೆಗ್ಡೆ (Satya Hegde Studios) ಬ್ಯಾನರ್ಸ್ ನಡಿಯಲ್ಲಿ ಮೂಡಿ ಬಂದಿರುವ ಚಿತ್ರವು ಗುರುಪ್ರಸಾದ್ ನಾರ್ನಾಡ್ ಕ್ಯಾಮರಾ ಕಣ್ಣಲ್ಲಿ ಅದ್ಬುತವಾಗಿ ಸೆರೆಗೊಂಡಿರುವ ಚಿತ್ರಕ್ಕೆ ಶಿಲ್ಪ ಹೆಗಡೆ ಬಂಡವಾಳ ಹೂಡಿದ್ದಾರೆ. ಜೊತೆಗೆ ಶ್ರೀನಿವಾಸ್ ಕಲಾಲ್ ಚಿತ್ರದ ಸಂಕಲನ ನಿರ್ವಹಿಸಿದ್ದು, ರವಿ ಹಿತೇಮತ್, ವೀರೇಂದ್ರ ಮಲ್ಲಣ್ಣ, ಸರವನ ಕುಮಾರ್, ಸಂತೋಷ್ ತೆಂಕರ್, ರಾಕೇಶ್ ಮುಂತಾದವರು ನಿರ್ದೇಶನ ಸಂಗೀತ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಎರಡು ಪಾತ್ರಗಳ ನಡುವೆ ನಡೆವ ಸನ್ನಿವೇಶದಲ್ಲಿ ಸಾಹಿತಿಯಾಗಿ ಹಿರಿಯ  ಕಲಾವಿದ ನಿರ್ದೇಶಕ ಟಿ.ಎಸ್.ನಾಗಾಭರಣ (TS Nagabharana) ಪಾತ್ರಕ್ಕೆ ಜೀವ ತುಂಬುವುದರ ಜೊತೆಗೆ ವಿಮರ್ಶಕನ ಪಾತ್ರ ಪ್ರೇಕ್ಷಕನ ಮನಸ್ಸಿನೊಳಗೆ ಉಳಿಯುವಂತೆ ಮಾಡಿದ್ದಾರೆ. ಇನ್ನು ಯುವ ಲೇಖಕಿಯ ಪಾತ್ರದಲ್ಲಿ ಹಾಡುಗಾರ್ತಿ ಚಲನಚಿತ್ರ ಕಲಾವಿದೆ ಉಮಾ.ವೈ.ಜಿ. (Uma YG) ತಮ್ಮ ನೈಜ ಅಭಿನಯದ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ.

ದಿವ್ಯಶ್ರೀ ರೈ ತ್ಯಾಗರಾಜನಗರ.
ವಿವೇಕಾನಂದ ಕಾಲೇಜು ಪುತ್ತೂರು.

Follow Us:
Download App:
  • android
  • ios