ಚಿತ್ರ ವಿಮರ್ಶೆ: ನರಗುಂದ ಬಂಡಾಯ
ನರಗುಂದ ಎಂಬ ಹೆಸರು ಕೇಳಿದ ತಕ್ಷಣ ಅಲ್ಲಿನ ಬಂಡಾಯದ ದನಿ, ರೈತ ಹೋರಾಟದ ಇತಿಹಾಸ ಕಣ್ಣ ಮುಂದೆ ಬರುತ್ತದೆ. 1980ರಲ್ಲಿ ಧಾರವಾಡದ ನರಗುಂದ, ನವಲಗುಂದ ಸುತ್ತಮುತ್ತಲೂ ನಡೆದ ರೈತರ ಬಂಡಾಯಕ್ಕೆ ಒಂದು ಸರಕಾರವನ್ನೇ ಉರುಳಿಸುವ ಶಕ್ತಿ ಇತ್ತು. ಹಾಗಾಗಿಯೇ ರಾಜ್ಯದ ರೈತ ಹೋರಾಟದ ಇತಿಹಾಸದಲ್ಲಿ ನರಗುಂದ ಬಂಡಾಯಕ್ಕೆ ವಿಶೇಷ ಸ್ಥಾನ.
ಕೆಂಡಪ್ರದಿ
ಇದೆಲ್ಲಾ ಇಲ್ಲಿಯವರೆಗೂ ಇತಿಹಾಸದ ಪುಟಗಳಲ್ಲಿ, ಬಯಲುಸೀಮೆ ನಾಡಿನ ಮಂದಿಯ ಬಾಯಿಯಲ್ಲಿ ದಾಖಲಾಗಿತ್ತು. ಈಗ ಸ್ಯಾಂಡಲ್‌ವುಡ್‌ಗೆ ಸಿನಿಮಾ ಆಗಿಯೂ ಬಂದಿದೆ. ಅದು ನಿರ್ಮಾಪಕ ಶೇಖರ್ ಯಲಗಾವಿ, ಸಿದ್ದೇಶ್ ಮತ್ತು ನಿರ್ದೇಶಕ ನಾಗೇಂದ್ರ ಮಾಗಡಿ ಜಂಟಿ ಪ್ರಯತ್ನದಿಂದ.
ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಮಾಡುವವರಿಗೆ ಒಂದಷ್ಟುಅನುಕೂಲಗಳು ಇದ್ದರೂ ಸವಾಲು ಹೆಚ್ಚಾಗಿಯೇ ಇರುತ್ತದೆ. ಆ ಸವಾಲನ್ನು ದಾಟುವಲ್ಲಿ ನಿರ್ದೇಶಕರು ಸಕ್ಸಸ್ ಆಗಿದ್ದಾರೆ. ನರಗುಂದ ಬಂಡಾಯದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ವೀರ ರೈತನನ್ನು ನಾಯಕನಾಗಿ ಇಟ್ಟುಕೊಂಡು ಅವನ ಸುತ್ತಲೇ ಸಿನಿಮಾ ಸಾಗುತ್ತದೆ. ಪ್ರಾರಂಭದಲ್ಲಿ ಪ್ರೀತಿ, ದ್ವೇಷಗಳು ಇದ್ದರೂ ಚಿತ್ರ ಮುಂದೆ ಸಾಗಿದಂತೆ ಅವುಗಳ ತೀವ್ರತೆ ಕಡಿಮೆಯಾಗುತ್ತದೆ. ಸರಕಾರ ಡ್ಯಾಂ ಕಟ್ಟಿಸಿಕೊಟ್ಟದ್ದಕ್ಕೆ ಬದಲಾಗಿ ರೈತರಿಗೆ ಹೊರೆಯಾಗುವಷ್ಟುಕರ ವಿಧಿಸಿ ಅದನ್ನು ಕಟ್ಟಲೇಬೇಕು ಎಂದು ಕಟ್ಟಪ್ಪಣೆ ಮಾಡಿದಾಗ ಬೇರೆ ದಾರಿ ಕಾಣದೇ ಬಂಡಾಯ ಸಾರುತ್ತಾರೆ. ಹೀಗೆ ಬಂಡಾಯವೇ ಮೂಲ ಬಂಡವಾಳವಾಗಿರುವ ಚಿತ್ರದ ಕಡೆಯ ಹದಿನೈದು ನಿಮಿಷಗಳು ಪ್ರೇಕ್ಷಕನೆದೆಯಲ್ಲಿ ಕಾತರ ಹುಟ್ಟಿಸುತ್ತದೆ. ಮನದಲ್ಲಿಯೇ ರೈತನ ಪರವಾಗಿ ಜೈಕಾರ ಹಾಕುವಂತೆ ಮಾಡುತ್ತದೆ. ನಾವೇ ಆರಿಸಿ ಕಳುಹಿಸಿದ ಪ್ರಭುಗಳು, ನಮ್ಮ ಸೇವೆಗೆಂದೇ ಇರುವ ಅಧಿಕಾರಿಗಳು ಹೇಗೆ ಕ್ರೂರಿಗಳಾಗಿ ಹಿಂಸೆ ನೀಡಿದ್ದರು ಎಂದು ಗೊತ್ತಾಗುತ್ತದೆ.
ನರಗುಂದದಲ್ಲಿ ಮೋಹಕ ಶುಭಾ ಪೂಂಜ, ಕಾಯಕಯೋಗಿ ರಕ್ಷಾ ಹೋರಾಟ!
ಹೀಗೆ ಸಾಗುವ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಇವರೆಲ್ಲರ ಸ್ಕ್ರೀನ್ ಪ್ರಸೆನ್ಸ್ ಕಡಿಮೆ ಇದ್ದರೂ ಬಂಡಾಯದ ಕಿಚ್ಚಿಗೆ ತಮ್ಮ ಕೊಡುಗೆ ಕೊಟ್ಟು ಹೋಗುತ್ತಾರೆ. ಶುಭಪೂಂಜಾ, ರಕ್‌್ಷ ಚಿತ್ರವನ್ನು ಆವರಿಸಿಕೊಳ್ಳುತ್ತಾ ಹೋಗುತ್ತಾರೆ. ಕಲಾವಿದರ ಆಯ್ಕೆ, ಪಾತ್ರ ಪೋಷಣೆಯಲ್ಲಿ ನಿರ್ದೇಶಕ ನಾಗೇಂದ್ರ ಮಾಗಡಿ ಕುಶಲತೆ ಮರೆದಿದ್ದರೂ ಚಿತ್ರಕ್ಕೆ ಬೇಕಿದ್ದ ಮತ್ತಷ್ಟುಬಿಗಿಯನ್ನು ಅವರು ತಂದುಕೊಡುವಲ್ಲಿ ಎಡವಿದ್ದಾರೆ.
ತಾರಾಗಣ: ರಕ್ಷಿತ್, ಶುಭಾಪೂಂಜಾ, ಅವಿನಾಶ್, ಭವ್ಯ, ನೀನಾಸಂ ಅಶ್ವತ್್ಥ, ಸುನಂದ, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಮೂಗು ಸುರೇಶ್
ನಿರ್ದೇಶನ: ನಾಗೇಂದ್ರ ಮಾಗಡಿ
ನಿರ್ಮಾಣ: ಶೇಖರ್ ಯಲಗಾವಿ, ಸಿದ್ದೇಶ್
ಸಂಗೀತ: ಯಶೋವರ್ಧನ್