Micromax IN Note 2 ಭಾರತದಲ್ಲಿ ಜನವರಿ 25ರಂದು ಬಿಡುಗಡೆ: ಏನೆಲ್ಲಾ ವಿಶೇಷತೆ ಇದೆ?

Micromax IN Note 2 ಅನ್ನು ಭಾರತದಲ್ಲಿ ಜನವರಿ 25 ರಂದು ಬಿಡುಗಡೆ ಮಾಡಲಾಗುವುದು. ಇದು MediaTek Helio G95 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.

Micromax IN Note 2 India launch set for January 25 will have a punch hole display mnj

Tech Desk: ಭಾರತೀಯ ಸ್ಮಾರ್ಟ್‌ಫೋನ್ ತಯಾರಕ ಮೈಕ್ರೋಮ್ಯಾಕ್ಸ್ ಜನವರಿ 25 ರಂದು ಇನ್ ನೋಟ್ 2 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಂಪನಿಯು ಇತ್ತೀಚೆಗೆ ಸ್ಮಾರ್ಟ್‌ಫೋನ್‌ನ ವಿನ್ಯಾಸವನ್ನು ಪ್ರದರ್ಶಿಸುವ ಕಿರು ಟೀಸರ್ ವೀಡಿಯೊವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ಮೈಕ್ರೊಮ್ಯಾಕ್ಸ್ ಇನ್ ನೋಟ್ 2‌, ಮೂರು ಬದಿಗಳಲ್ಲಿ ಕಿರಿದಾದ ಬೆಜೆಲ್‌ಗಳೊಂದಿಗೆ ಪಂಚ್-ಹೋಲ್ ಡಿಸ್ಪ್ಲೇ ಮತ್ತು ಬೆರಗುಗೊಳಿಸುವ ಗ್ಲಾಸ್ ಫಿನಿಶ್ ಅನ್ನು ಹೊಂದಿರುತ್ತದೆ ಎಂದು ಟೀಸರ್ ಬಹಿರಂಗಪಡಿಸಿದೆ. ಮೈಕ್ರೋಮ್ಯಾಕ್ಸ್ ಇನ್ ನೋಟ್ 450 nits ನ ಗರಿಷ್ಠ ಹೊಳಪು ಮತ್ತು 21:9 ಆಕಾರ ಅನುಪಾತದೊಂದಿಗೆ 16.43-ಇಂಚಿನ Full HD+ AMOLED ಡಿಸ್ಪ್ಲೇಯನ್ನು  ಹೊಂದಿದೆ.

ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮತ್ತು ಕೆಲವು ಆಫ್‌ಲೈನ್ ಮರುಮಾರಾಟಗಾರರ ಬಳಿ ಖರೀದಿಗೆ ಮಾತ್ರ ಲಭ್ಯವಿರುತ್ತದೆ. ಮೈಕ್ರೋಮ್ಯಾಕ್ಸ್ ಇನ್ ನೋಟ್ 2 ನಲ್ಲಿ 5000 mAh ಬ್ಯಾಟರಿ ಜೊತೆಗೆ 30W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಅಳವಡಿಸಲಾಗಿದೆ. ಇದು ಡೆಡಿಕೆಟೆಡ್ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರುತ್ತದೆ, ಜೊತೆಗೆ ಟೈಪ್-ಸಿ ಪೋರ್ಟ್ ಮತ್ತು ಹಿಂಭಾಗದಲ್ಲಿ ಸ್ಪೀಕರ್ ಗ್ರಿಲ್ ಇದೆ. 

ಇದನ್ನೂ ಓದಿVivo Y75 5G ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಗಣರಾಜ್ಯೋತ್ಸವದಂದು ಬಿಡುಗಡೆ?

48 ಮೆಗಾಪಿಕ್ಸೆಲ್ ಕ್ಯಾಮೆರಾ: ಇನ್ ನೋಟ್ 2 ನಲ್ಲಿನ ಹಿಂಬದಿಯ ಕ್ಯಾಮರಾ ಮಾಡ್ಯೂಲ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಒಳಗೊಂಡಂತೆ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಇನ್‌ ನೋಟ್‌ 2, 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡುತ್ತದೆ. ಹಿಂದಿನ ಕ್ಯಾಮೆರಾ ಸೆಟಪ್ Samsung Galaxy S21 ಕ್ಯಾಮೆರಾ ಮಾಡ್ಯೂಲ್ ರೀತಿಯಲ್ಲೇ ಇದೆ. 

 

 

ಸಾಧನವು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ 95 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ. ಇದು 6GB ಮತ್ತು 8GB RAM ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ. ಹ್ಯಾಂಡ್ಸೆಟ್ ಎರಡು ಶೇಖರಣಾ ರೂಪಾಂತರಗಳಲ್ಲಿ ಲಭ್ಯವಿರುತ್ತದೆ; 64GB ಮತ್ತು 128GB. ಮುಂಬರುವ IN Note 2 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಅನ್ನು ರನ್ ಮಾಡುತ್ತದೆ. ಸ್ಮಾರ್ಟ್ಫೋನ್ ಹೊಸ Brown ಬಣ್ಣ ಹಾಗೂ glossy colour ವೇರಿಯಂಟ್‌ ಜತೆಗೆ ಲಭ್ಯವಿರುತ್ತದೆ.

ಇದನ್ನೂ ಓದಿ: Digital India Sale ಗಣರಾಜ್ಯೋತ್ಸವಕ್ಕೆ ಡಿಜಿಟಲ್ ಇಂಡಿಯಾ ಸೇಲ್ ಕೂಡುಗೆ ಘೋಷಿಸಿದ ರಿಲಯನ್ಸ್ !

ಇನ್‌ ನೋಟ್ 1 ಮತ್ತು ಇನ್ 1b: 2021ರಲ್ಲಿ ಮೈಕ್ರೋಮ್ಯಾಕ್ಸ್ ಇನ್‌ ನೋಟ್ 1 ಮತ್ತು ಇನ್ 1b ಅನ್ನು ಅನಾವರಣಗೊಳಿಸಿತ್ತು, 48MP AI ಕ್ವಾಡ್ ಕ್ಯಾಮೆರಾದೊಂದಿಗೆ IN Note 1, MediaTek Helio G85 ಗೇಮಿಂಗ್ ಪ್ರೊಸೆಸರ್, 6.67-ಇಂಚಿನ ಡಿಸ್ಪ್ಲೇ ಜತೆಗೆ ರೂ. 10,999ರಲ್ಲಿ ಬಿಡುಗಡೆ ಮಾಡಲಾಗಿತ್ತು. MediaTek Helio G35 ಪ್ರೊಸೆಸರ್‌ನೊಂದಿಗೆ IN Note 1B ಅನ್ನು ರೂ 6999 ನಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬರುವ IN Note 2 IN Note 1 ರ ಉತ್ತರಾಧಿಕಾರಿಯಾಗಲಿದೆ

Latest Videos
Follow Us:
Download App:
  • android
  • ios