Asianet Suvarna News Asianet Suvarna News

Knowledge News: ಎಸ್ಕಲೇಟರ್ ಪಕ್ಕದಲ್ಲಿ ಬ್ರಷ್ ಇರೋದು ಶೂಸ್ ಕ್ಲೀನ್ ಮಾಡಿ ಕೊಳ್ಲಿಕ್ಕಾ?

ಎಸ್ಕಲೇಟರ್ ಏರ್ತಿದ್ದಂತೆ ಅಕ್ಕಪಕ್ಕ ಇರುವ ಬ್ರಷ್ ನಲ್ಲಿ ಶೂ ಕ್ಲೀನ್ ಮಾಡ್ತೇವೆ. ಇಲ್ಲವೆ ಅದನ್ನು ತುಳಿತೇವೆ. ಆದ್ರೆ ಈ ಬ್ರಷ್ ಪ್ರಯೋಜನವೇನು? ಅದು ಹೇಗೆ ಕೆಲಸ ಮಾಡುತ್ತೆ ಎಂಬುದು ಅನೇಕರಿಗೆ ತಿಳಿದೇ ಇಲ್ಲ. 
 

Why Does Escalator Have Brush Strip Safety Feature
Author
First Published Aug 25, 2022, 3:30 PM IST | Last Updated Aug 25, 2022, 3:30 PM IST

ಈಗ ಮೆಟ್ಟಿಲುಗಳನ್ನು ಹತ್ತಿ ಹೋಗುವ ತಾಪತ್ರಯವಿಲ್ಲ. ಲಿಫ್ಟ್ ಇಲ್ಲವೆ ಎಸ್ಕಲೇಟರ್ ಕಾಮನ್ ಆಗಿದೆ. ಬಹುತೇಕ ಮಾಲ್ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಎಸ್ಕಲೇಟರ್ ಬಳಕೆ ಮಾಡಲಾಗುತ್ತದೆ. ಅದನ್ನು ಎಚ್ಚರಿಕೆಯಿಂದ ಹತ್ತುವುದು ಬಹಳ ಮುಖ್ಯ. ಸ್ವಲ್ಪ ಕಾಲು ಎಡವಿದರೆ ಅಪಾಯ ಸಂಭವಿಸುವ ಸಾಧ್ಯತೆಯಿರುತ್ತದೆ. ದೇಶದಲ್ಲಿ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಆದ್ರೆ ನಮ್ಮ ನಡೆದಾಡುವ ಕೆಲಸವನ್ನು ಇದು ಸುಲಭಗೊಳಿಸಿದೆ. ಇದೇ ಕಾರಣಕ್ಕೆ ಎಲ್ಲ ಕಡೆ ಎಸ್ಕಲೇಟರ್ ಬಳಕೆ ಹೆಚ್ಚಾಗಿದೆ. ಈ ಎಸ್ಕಲೇಟರ್ ಬಗ್ಗೆ ಅನೇಕರಿಗೆ ಸರಿಯಾಗಿ ತಿಳಿದಿಲ್ಲ. 

ಎಸ್ಕಲೇಟರ್ (Escalator) ಇತಿಹಾಸ : ಎಸ್ಕಲೇಟರ್ ಅನ್ನು 1859 ರಲ್ಲಿ ನಾಥನ್ ಏಮ್ಸ್ (Nathan Ames) ಕಂಡುಹಿಡಿದರು. ಎಸ್ಕಲೇಟರ್ ಎನ್ನುವುದು ನಿರಂತರ ಚಾಲನೆಯಲ್ಲಿರುವ ಬೆಲ್ಟ್ (Belt ) ನಿಂದ ಸಂಪರ್ಕಿಸಲಾದ ಹಂತಗಳನ್ನು ಒಳಗೊಂಡಿರುವ ಏಣಿಯಾಗಿದೆ. ಇದು ಕನ್ವೇಯರ್ ಪ್ರಕಾರದ ಸಾರಿಗೆ ಸಾಧನವಾಗಿದ್ದು, ಇದರಲ್ಲಿ ಮೋಟಾರೀಕೃತ ಸೆಟ್ ಅನ್ನು ಅಂತ್ಯವಿಲ್ಲದ ಬೆಲ್ಟ್ ನಂತೆ ಜೋಡಿಸಲಾಗಿದೆ.ಅದು ನಿರಂತರವಾಗಿ ಏರುತ್ತದೆ ಅಥವಾ ಇಳಿಯುತ್ತದೆ.  

ಎಸ್ಕಲೇಟರ್ ನಲ್ಲಿ ಬ್ರಷ್ : ಎಸ್ಕಲೇಟರ್‌ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ನಮಗಿರಬೇಕು. ಅದ್ರ ಬಳಕೆ ಜ್ಞಾನ ಈಗ ತಿಳಿದಿರುವುದು ಅನಿವಾರ್ಯ. ಎಸ್ಕಲೇಟರ್ ಅಕ್ಕಪಕ್ಕ ಹಾಕಿರುವ ಬ್ರಷ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಎಸ್ಕಲೇಟರ್‌ ಅಕ್ಕಪಕ್ಕ ಬ್ರಷ್ ಏಕೆ ಹಾಕಲಾಗಿದೆ ಅಂತಾ ಕೇಳಿದ್ರೆ ಕೆಲವರು ಎಸ್ಕಲೇಟರ್‌ ಸ್ವಚ್ಛಗೊಳಿಸಲು ಎನ್ನುತ್ತಾರೆ. ಮತ್ತೆ ಕೆಲವರು ಈ ಬ್ರಷ್ ಸಹಾಯದಿಂದ ತಮ್ಮ ಶೂ ಕ್ಲೀನ್ ಮಾಡೋದನ್ನು ನೀವು ನೋಡಿರಬಹುದು. ಆದ್ರೆ ಈ ಯಾವುದೇ ಕಾರಣಕ್ಕೂ ಎಸ್ಕಲೇಟರ್‌ ಗೆ ಬ್ರಷ್ ಹಾಕಿರುವುದಿಲ್ಲ. ಎಸ್ಕಲೇಟರ್‌ಗಳು ಹಳದಿ ಗಡಿಯ ಬಳಿ ಬ್ರಷ್‌ಗಳನ್ನು ಹೊಂದಿವೆ. ಈ ಹಳದಿ ಬಣ್ಣ ಎಂದರೆ ಎಸ್ಕಲೇಟರ್ ಹತ್ತುವಾಗ ನಿಮ್ಮ ಪಾದವನ್ನು ಈ ಗುರುತಿನಿಂದ ದೂರವಿಡಬೇಕು. ಈಗ ಬ್ರಷ್‌ನ ಕಾರ್ಯವೇನು ಎಂದು ಅರ್ಥಮಾಡಿಕೊಳ್ಳೋಣ.

General Knowledge : ನೀವು ಕುಳಿತುಕೊಳ್ಳುವ ಭಂಗಿ ಹೇಳುತ್ತೆ ನಿಮ್ಮ ಸ್ವಭಾವ

ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಏಕೆ ಇದೆ? : ಗೋಡೆ ಮತ್ತು ಬದಿಯ ನಡುವಿನ ಅಂತರವನ್ನು ತುಂಬುವ ಉದ್ದೇಶದಿಂದ ಎಸ್ಕಲೇಟರ್‌ನ ಬದಿಯಲ್ಲಿ  ಬ್ರಷ್ ಹಾಕಲಾಗುತ್ತದೆ. ಎಸ್ಕಲೇಟರ್ ಒಳಗೆ ಏನಾದರೂ ಸಿಕ್ಕಿಹಾಕಿಕೊಂಡರೆ ಎಸ್ಕಲೇಟರ್ ಹಾಳಾಗುವ ಭಯವಿರುತ್ತದೆ. ಆದ್ರೆ ಎಸ್ಕಲೇಟರ್‌ನ ಬದಿಯಲ್ಲಿರುವ ಈ ಬ್ರಷ್‌ ಯಾವುದೇ ವಸ್ತು ಒಳಗೆ ಹೋಗದಂತೆ ತಡೆಯುತ್ತದೆ. ಶೂ ಲೇಸ್, ಸ್ಕಾರ್ಪ್ ಸೇರಿದಂತೆ ಯಾವುದೇ ಸಣ್ಣ ವಸ್ತು ಕೂಡ ಎಸ್ಕಲೇಟರ್ ಈ ಗ್ಯಾಪ್ ನಲ್ಲಿ ಒಳಗೆ ಹೋಗದಂತೆ ತಡೆಯುತ್ತದೆ.  

ಎಸ್ಕಲೇಟರ್‌ನ ಬದಿಯಲ್ಲಿರುವ ಬ್ರಷ್‌ನ ಕಾರ್ಯವೇನು? : ಎಸ್ಕಲೇಟರ್ ಮೇಲೆ ಪ್ರತಿ ದಿನ ನೂರಾರು ಜನರು ಓಡಾಡ್ತಿರುತ್ತಾರೆ. ಧೂಳಿನ ಕಣದಿಂದ ಹಿಡಿದು ಅನೇಕ ವಸ್ತುಗಳು ಬೀಳುವ ಸಾಧ್ಯತೆಯಿರುತ್ತದೆ. ಅದನ್ನು ಒಳಗೆ ಹೋಗದಂತೆ ಎಸ್ಕಲೇಟರ್ ತಡೆಯುತ್ತದೆ. ಬ್ರಷ್, ವಸ್ತುಗಳನ್ನು ಬೇರೆಡೆ ತಿರುಗಿಸುತ್ತದೆ. ಅದನ್ನು ಒಳಗೆ ಬಿಡುವುದಿಲ್ಲ. 

ಯಾಕೆ ಸಾವಿರ ಪದಕ್ಕೆ K ಎಂದು ಬಳಸ್ತಾರೆ ಗೊತ್ತಾ?

ಎಸ್ಕಲೇಟರ್ ಬದಿಯಲ್ಲಿರುವ ಬ್ರಷ್ ಹೇಗೆ ರಕ್ಷಿಸುತ್ತದೆ? : ಎಸ್ಕಲೇಟರ್ ಬದಿಯಲ್ಲಿ ಅಳವಡಿಸಲಾಗಿರುವ ಈ ಬ್ರಷ್ ನಮ್ಮ ಜೀವವನ್ನೂ ಉಳಿಸುತ್ತದೆ. ನಾವು ಎಸ್ಕಲೇಟರ್ ಅನ್ನು ಹತ್ತಿದಾಗ, ನಮ್ಮ ಕಾಲುಗಳು, ಸ್ಕಾರ್ಫ್ ಅಥವಾ ಬಟ್ಟೆಯ ಯಾವುದೇ ಭಾಗವು ಅದರಲ್ಲಿ ಸಿಲುಕಿಕೊಳ್ಳಬಹುದು. ಇದ್ರಿಂದಾಗಿ ನಮಗೆ ಗಂಭೀರ ಗಾಯವಾಗುವ ಸಾಧ್ಯತೆಯಿದೆ. ಆದರೆ ಎಸ್ಕಲೇಟರ್‌ನಲ್ಲಿರುವ ಬ್ರಷ್‌ ಈ ಅಪಾಯವನ್ನು ತಪ್ಪಿಸುತ್ತದೆ. ನಮ್ಮನ್ನು ಸುರಕ್ಷಿತವಾಗಿಡುತ್ತದೆ. ನಮ್ಮ ಕಾಲು ಬ್ರಷ್ ಬಳಿ ಹೋದ್ರೆ ಅದು ನಮಗೆ ಎಚ್ಚರಿಕೆ ಸೂಚಕವಾಗಿ ಕೆಲಸ ಮಾಡುತ್ತದೆ. ಎಸ್ಕಲೇಟರ್ ಬಳಸುವಾಗ,ಅನೇಕ ಜನರು ಈ ಬ್ರಷ್‌ನಿಂದ ಶೂಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಇದನ್ನು ಅಪ್ಪಿತಪ್ಪಿಯೂ ಮಾಡಬಾರದು.  ಏಕೆಂದರೆ ಇದು ಹಾನಿಯನ್ನುಂಟುಮಾಡುವ ಸಾಧ್ಯತೆಯಿರುತ್ತದೆ. 
 

Latest Videos
Follow Us:
Download App:
  • android
  • ios