ಈ ಶಾಲೆಗೆ ಬರೋ ಮಕ್ಕಳು ಹಣ ನೀಡ್ಬೇಕಾಗಿಲ್ಲ.. ಪ್ಲಾಸ್ಟಿಕ್ ಬಾಟಲಿ ತಂದ್ರೆ ಸಾಕು!

ಲಕ್ಷಾಂತರ ಶುಲ್ಕ ನೀಡಿದ್ರೂ ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡದ ಶಾಲೆಗಳ ಮಧ್ಯೆ ಈ ಶಾಲೆ ಮಾದರಿಯಾಗಿದೆ. ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆ ಪರಿಸರ ರಕ್ಷಣೆ, ಜೀವನ ನಿರ್ವಹಣೆ ಪಾಠ ಕಲಿಸುತ್ತಿದೆ. 
 

This School In Assam Doesnt Charge Money As Fees But Instead Takes Plastic Bottles To Educate The Kids roo

ಹೆಗಲ ಮೇಲೆ ಶಾಲಾ ಬ್ಯಾಗ್, ಕೈನಲ್ಲೊಂದು ಪ್ಲಾಸ್ಟಿಕ್ ತುಂಬಿದ ಬಾಟಲ್ ಅಥವಾ ಚೀಲ… ಶಾಲೆ ಮುಂದೆ ಮಕ್ಕಳ ಸಾಲು.. ಗಂಟೆ ಬಾರಿಸ್ತಾ ಇದ್ದಂತೆ ಮುಗುಳು ನಗ್ತಾ ಶಾಲೆಗೆ ಹೋಗುವ ಮಕ್ಕಳು.. ಇದು ಅಸ್ಸಾಂ ಶಾಲೆಯೊಂದರ ನೋಟ. 

ನಮ್ಮ ಪರಿಸರ ಪ್ಲಾಸ್ಟಿಕ್ (Plastic) ನಿಂದ ತುಂಬಿ ಹೋಗಿದೆ. ಅದು ಮಣ್ಣಿನಲ್ಲಿ ಕರಗದ ಕಾರಣ, ರೀ ಸೈಕ್ಲಿಂಗ್ ಮಾಡದೆ ಬೇರೆ ದಾರಿಯಿಲ್ಲ. ಪ್ಲಾಸ್ಟಿಕ್ ಬಾಟಲಿಯಲ್ಲಿ ಎಣ್ಣೆ ಕವರ್, ಹಾಲಿನ ಕವರ್, ಚಿಪ್ಸ್ ಕವರ್ ಗಳನ್ನು ತುಂಬಿ ಕಸಕ್ಕೆ ಹಾಕಿದ್ರೆ ಅದು ನಮ್ಮ ಪರಿಸರ ರಕ್ಷಣೆಯಲ್ಲಿ ನೆರವಾಗಬಹುದು. ಇದೇ ಪಾಲಿಸಿಯನ್ನು ಅಸ್ಸಾಂ ಶಾಲೆ ಪಾಲನೆ ಮಾಡ್ತಿದೆ. ಅಸ್ಸಾಂನಲ್ಲಿರುವ ಈ ಶಾಲೆಗೆ ಹೋಗಲು ಶುಲ್ಕ ನೀಡ್ಬೇಕಾಗಿಲ್ಲ. ಶೂನ್ಯ ಶುಲ್ಕ (Fee) ದೊಂದಿಗೆ ನಿಮ್ಮ ಮಕ್ಕಳಿಗೆ ಶಾಲಾ ಪ್ರವೇಶ ಸಿಗುತ್ತದೆ. ಶಾಲೆಯಲ್ಲಿ ಬರೀ ಪಠ್ಯ ಪುಸ್ತಕದಲ್ಲಿರುವ ವಿಷ್ಯವನ್ನು ಮಾತ್ರವಲ್ಲ ಮಕ್ಕಳು ಮುಂದೆ ತಮ್ಮ ಜೀವನ ನಡೆಸಲು ಅಗತ್ಯವಿರುವ ಹೊಲಿಗೆ, ಗಾರ್ಡನಿಂಗ್ ಸೇರಿದಂತೆ ಅನೇಕ ವಿಷ್ಯಗಳನ್ನು ಕಲಿಸಲಾಗುತ್ತದೆ. ನಾವಿಂದು ಅಸ್ಸಾಂ ಶಾಲೆಯ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಕೇವಲ 2ನೇ ಪ್ರಯತ್ನದಲ್ಲಿ UPSC ಪರೀಕ್ಷೆ ಪಾಸಾಗಿ IAS ಆದ ಸಾಮಾನ್ಯ ಗೃಹಿಣಿ ಇವರು

ಅಸ್ಸಾಂನಲ್ಲಿದೆ ಉಚಿತ ಸ್ಕೂಲ್ : ಮಕ್ಕಳಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ಶಿಕ್ಷಣ ನೀಡ್ತಿರುವ ಶಾಲೆ ಅಸ್ಸಾಂನ ಪಮೋಹಿಯ ಪ್ರಾಚೀನ ಕಾಡಿನಲ್ಲಿದೆ. ಬಿದಿರಿನ ಹುಲ್ಲುಗಳ ಮೇಲ್ಚಾವಣಿ ಹೊಂದಿರುವ ಈ ಶಾಲೆಗೆ ಮಕ್ಕಳು ಅಡ್ಮಿಷನ್ ಪಡೆಯಬೇಕೆಂದ್ರೆ 25 ಪ್ಲಾಸ್ಟಿಕ್ ಬಾಟಲಿಯನ್ನು ತರಬೇಕು. ಈ ಪ್ಲಾಸ್ಟಿಕ್ ಬಾಟಲಿಯಲ್ಲಿ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತುಂಬಿಸಿಕೊಂಡು ಬರಬೇಕು. ವಾರಕ್ಕೆ 25 ಬಾಟಲಿಯನ್ನು ಮಕ್ಕಳು ತರಬೇಕಾಗುತ್ತದೆ.

ಈ ಶಾಲೆ ಶುರುವಾಗಿದ್ದು ಹೇಗೆ? : ಈ ಶಾಲೆಯ ಸಂಸ್ಥಾಪಕರು  ಪರ್ಮಿತಾ ಹಾಗೂ ಮಾಜಿನ್. ಈ ಶಾಲೆ ಹೆಸರು ಅಕ್ಷರ್. ಇಲ್ಲಿ ಶಾಲೆಯೊಂದನ್ನು ಶುರು ಮಾಡಬೇಕು ಎಂಬ ಆಲೋಚನೆ ಬಂದಾಗ ಇವರಿಬ್ಬರು ಇಲ್ಲಿನ ಸಮಸ್ಯೆಯನ್ನು ಅರಿತರು. ಇಲ್ಲಿ ಸಾಮಾಜಿಕ ಹಾಗೂ ಪರಿಸರ ಸಮಸ್ಯೆ ಇರುವುದು ಇವರ ಗಮನಕ್ಕೆ ಬಂದಿತ್ತು. ಜನರು ಚಳಿಗಾಲದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಸುಟ್ಟು ಅದ್ರಿಂದ ಮೈ ಬಿಸಿ ಮಾಡಿಕೊಳ್ತಿದ್ದರು. ಆದ್ರೆ ಈ ಪ್ಲಾಸ್ಟಿಕ್ ಹೊಗೆ ಇಡೀ ಪರಿಸರವನ್ನು ಹಾಳು ಮಾಡ್ತಾಯಿತ್ತು. ಇದನ್ನು ಗಮನಿಸಿದ ಸಂಸ್ಥಾಪಕರು, ಜೂನ್ 2016ರಲ್ಲಿ ಈ ಶಾಲೆಯನ್ನು ಶುರು ಮಾಡಿದ್ರು. ಶಾಲೆಗೆ ಬರುವ ಪ್ರತಿಯೊಂದು ಮಕ್ಕಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಾಟಲಿಯಲ್ಲಿ ತುಂಬಿ ತರಬೇಕಾಗುತ್ತದೆ.        

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕುರಿತಾದ 5 ಅತ್ಯುತ್ತಮ ಬಾಲಿವುಡ್ ಚಲನಚಿತ್ರಗಳು ಇಲ್ಲಿವೆ

ಆರಂಭದಲ್ಲಿ ಜನರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದರು. ಮಕ್ಕಳು ಸೇರಿದಂತೆ ಇಲ್ಲಿನ ಜನರು ಕಲ್ಲು ಕ್ವಾರೆಗೆ ಕೆಲಸಕ್ಕೆ ಹೋಗ್ತಿದ್ದರು. ಅವರಿಗೆ ದಿನಕ್ಕೆ 150 – 200 ರೂಪಾಯಿ ಸಿಗ್ತಿತ್ತು. ಮಕ್ಕಳಿಗೆ ಪಠ್ಯದ ಜೊತೆಗೆ ಮುಂದಿನ ಜೀವನ ನಿರ್ವಹಣೆಗೆ ಅಗತ್ಯವಿರುವ ಕೌಶಲ್ಯವನ್ನು ವಿನ್ಯಾಸಗೊಳಿಸಿ ನಂತ್ರ ಶಾಲೆಯನ್ನು ಆರಂಭಿಸಲಾಯ್ತು.

ಇಲ್ಲಿನ ದೊಡ್ಡ ಮಕ್ಕಳು ಸಣ್ಣ ಮಕ್ಕಳಿಗೆ ಕಲಿಸುತ್ತಾರೆ. ಸಣ್ಣ ಮಕ್ಕಳು, ದೊಡ್ಡವರಿಗೆ ಆಟಿಕೆ ಕರೆನ್ಸಿ ನೀಡ್ತಾರೆ. ಮಕ್ಕಳು ಇದನ್ನು ಬಳಸಿಕೊಂಡು ತಿಂಡಿ, ಬಟ್ಟೆ, ಬೂಟ್ ಖರೀದಿ ಮಾಡಬಹುದು. ಆನ್ಲೈನ್ ನಲ್ಲಿ ಅವರು ವಸ್ತುಗಳನ್ನು ಖರೀದಿ ಮಾಡಲು ಬಯಸಿದ್ರೆ ಅದನ್ನು ಶಾಲೆ ಆಡಳಿತ ಮಂಡಳಿ ನೋಡಿಕೊಳ್ಳುತ್ತದೆ. ಆಟಿಕೆ ಕರೆನ್ಸಿಯನ್ನು ಅಸಲಿ ಕರೆನ್ಸಿಯಾಗಿ ಬದಲಿಸಿ ಅಮೇಜಾನ್ ನಿಂದ ವಸ್ತುಗಳನ್ನು ಆರ್ಡರ್ ಮಾಡಲಾಗುತ್ತದೆ.

ಬರೀ ಇಷ್ಟೇ ಅಲ್ಲ ಶಾಲೆ ಮಕ್ಕಳಿಗೆ ಪ್ಲಾಸ್ಟಿಕ್ ಸುಡದಂತೆ ಶಿಕ್ಷಣ ನೀಡಲಾಗುತ್ತದೆ. ಕೇವಲ 20 ಮಕ್ಕಳಿಂದ ಆರಂಭವಾದ ಶಾಲೆ ಇಂದು 4ರಿಂದ 15 ವರ್ಷದೊಳಗಿನ 100ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಪ್ಲಾಸ್ಟಿಕ್ ಮರುಬಳಕೆ ಮಾಡುವುದನ್ನು ಈ ಶಾಲೆಯಲ್ಲಿ ಕಲಿಸಲಾಗುತ್ತಿದೆ. ಮಕ್ಕಳು ಕಲೆಕ್ಟ್ ಮಾಡಿದ ಪ್ಲಾಸ್ಟಿಕ್ ಬಳಸಿ ಬ್ರಿಕ್ಸ್, ರೋಡ್, ಟಾಯ್ಲೆಟ್, ಗಾರ್ಡನ್ ಕುಂಡ ಸೇರಿದಂತೆ ಅನೇಕ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ. ಮಕ್ಕಳಿಗೆ ಭಾಷೆ, ಮರದ ಕೆಲಸ, ಹೊಲಿಗೆ ಸೇರಿದಂತೆ ಅನೇಕ ವಿಷ್ಯಗಳನ್ನು ಕಲಿಸಲಾಗುತ್ತದೆ. 
 

Latest Videos
Follow Us:
Download App:
  • android
  • ios