ಹಾಲು ಕುಡಿದು ಸುಮ್ಮನೆ ಮಲಗೊಲ್ಲ, ಈ ಕೆಲಸ ಮಾಡುತ್ತೆ ನಿಮ್ಮ ಬೆಕ್ಕು!
ಜಾಕ್ ಎಂಬ ಬೆಕ್ಕು ಚೌಹಾಣ್ ಕುಟುಂಬದ ಪ್ರೀತಿಯ ಸಾಕುಪ್ರಾಣಿ. ಆದರೆ, ಇದು ಹಾಲು ಕುಡಿದು ಸುಮ್ಮನೆ ಮಲಗುವುದಿಲ್ಲ, ಈ ಕೆಲಸವನ್ನೂ ಮಾಡುತ್ತದೆ..
ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳು ಹೆಚ್ಚು ವಿಧೇಯ ಅಂತ ತೋರಿಸೋ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಮತ್ತೊಂದು ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮನೆಯ ಒಡತಿ ಬಂದಾಗ ಮನೆಯ ಬಾಗಿಲ ಚಿಲಕವನ್ನು ತೆಗೆಯುವ ಬೆಕ್ಕಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಬೆಕ್ಕು ಈ ವಿಡಿಯೋದಲ್ಲಿ ಸ್ಟಾರ್ ಪಟ್ಟಿಯನ್ನೂ ಪಡೆದುಕೊಂಡಿದೆ.
ಗಾಜಿಯಾಬಾದ್‌ನ ಇಂದ್ರಪುರದ ಬಿಟ್ಟು ಮತ್ತು ಶಬಾನಾ ಚೌಹಾಣ್ ಅವರ ಪ್ರೀತಿಯ ಬೆಕ್ಕು ಜಾಕ್. ಮನೆಯ ಲಾಕ್ ಮಾಡಿದ ಬಾಗಿಲನ್ನ ಅಚ್ಚರಿ ಮೂಡಿಸುವ ರೀತಿಯಲ್ಲಿ ತೆರೆಯುತ್ತದೆ. ಎರಡು ವರ್ಷಗಳ ಹಿಂದೆ ಚೌಹಾಣ್ ಕುಟುಂಬ ಬುಲಂದ್‌ಶಹರ್‌ನಿಂದ ಜಾಕ್‌ನನ್ನ ದತ್ತು ತೆಗೆದುಕೊಂಡಿತ್ತು. ಸಾಕು ಪ್ರಾಣಿಗಳನ್ನ ತುಂಬಾ ಪ್ರೀತಿಸುವ ಚೌಹಾಣ್ ಕುಟುಂಬದ ಸದಸ್ಯನಾಗಿ ಜಾಕ್ ಬೇಗನೆ ಹೊಂದಿಕೊಂಡಿದೆ. ಈಗ ನಮ್ಮ ಕುಟುಂಬದ ಒಬ್ಬ ಸದಸ್ಯನಂತೆ ಜಾಕ್ ವರ್ತಿಸುತ್ತಾನೆ ಎಂದು ಅವರ ಕುಟುಂಬ ಸದಸ್ಯರು ಹೇಳುತ್ತಾರೆ.
ಒಂದು ದಿನ ಮಗನನ್ನ ಮನೆಯಲ್ಲಿ ಬಿಟ್ಟು ಹೊರಗೆ ಹೋದ ಬಿಟ್ಟು ಮತ್ತು ಅವರ ಪತ್ನಿ ಶಬಾನಾ ವಾಪಸ್ ಬರುವುದಕ್ಕೆ ತುಂಬಾ ತಡವಾಗುತ್ತದೆ. ಆಗ ಮಗ ಮನೆಯಲ್ಲಿ ನಿದ್ದೆ ಮಾಡುತ್ತಿದ್ದನು. ಮನೆಯ ಹೊರಗೆ ಬಂದಿದ್ದ ಬಿಟ್ಟು ಹಾಗೂ ಆತನ ಪತ್ನಿ ಎಷ್ಟೇ ಬಾಗಿಲು ಬಡಿದರೂ ಮಗ ಎದ್ದು ಬಂದು ಬಾಗಿಲನ್ನು ತೆರೆಯಲಿಲ್ಲ. ಆಗ ಮನೆಯಲ್ಲಿ ಸಾಕಿದ್ದ ಬೆಕ್ಕು ಜಾಕ್ ಬಾಗಿಲ ಬಳಿ ಬಂದಿ ಮಿಯಾಂವ್... ಎಂದಿತು. ಆಗ ಬೆಕ್ಕಿಗೆ ಬೋಲ್ಟ್ ತೆಗೆಯುವಂತೆ ನಾವು ಸೂಚಿಸಿದೆವು.
ಆಗ ಬೆಕ್ಕು ಮೇಲಕ್ಕೆ ಜಿಗಿದು ಬಾಗಿಲಿಗೆ ಹಾಕಿದ್ದ ಬೋಲ್ಟ್ ಅನ್ನು ಕೆಳಗೆ ಎಳೆದು ಬಾಗಿಲನ್ನು ತೆರೆಯುವಲ್ಲಿ ಯಶಸ್ವಿ ಆಯಿತು. ಆ ದಿನ ನಾವು ಸಂತಸದಿಂದ ಬೆಕ್ಕಿನ ಕಾರ್ಯವನ್ನು ಶ್ಲಾಘಿಸಿ ಅದಕ್ಕೆ ಮುದ್ದು ಮಾಡಿದೆವು. ಇದಾದ ನಂತರ ಮರುದಿನ ಹಲವು ಬಾರಿ ಜಾಕ್ ಬಾಗಿಲನ್ನ ತೆರೆಯುವುದಕ್ಕೆ ಸಹಾಯ ಮಾಡಿತು. ಆ ನಂತರ, ಜಾಕ್ ಬೆಕ್ಕಿನ ವಿಶೇಷ ಕೌಶಲ್ಯ ಮನೆಯವರಿಗೆ ಗೊತ್ತಾಯಿತು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತೀಯ ಹಸುಗಳ ಸಗಣಿಗೆ ವಿದೇಶದಿಂದ ಬೇಡಿಕೆ; ₹50ಗೆ ಒಂದು ಕೆಜಿ!
ಜಾಕ್‌ನ ಕೌಶಲ್ಯ ನೋಡಿ ಆಶ್ಚರ್ಯಚಕಿತರಾದ ಮನೆಯವರು, ಒಮ್ಮೆ ಜಾಕ್ ಬಾಗಿಲು ತೆರೆಯುವುದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಇದೀಗ ಬೆಕ್ಕು ಬಾಗಿಲಿನ ಬೋಲ್ಟ್ ತೆರೆಯುವ ವಿಡಿಯೋ ವೈರಲ್ ಆಗಿದೆ. ಬೆಕ್ಕಿನ ಬುದ್ಧಿಶಕ್ತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಜಾಕ್ ನಮ್ಮ ಕುಟುಂಬದ ಅತ್ಯಂತ ವಿಧೇಯ ಸದಸ್ಯ ಅಂತ ಬೆಕ್ಕಿನ ಒಡತಿ ಶಬಾನಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು?: ಪ್ರಾಣಿಗಳು ಸತ್ತರೆ ಮರಣೋತ್ತರ ಪರೀಕ್ಷೆ ಹೇಗೆ?