Viral News: 6 ವರ್ಷದ ಪೊರನ ಟೈಂ ಟೇಬಲ್ ವೈರಲ್

ವಿದ್ಯಾರ್ಥಿಗಳು, ವಿದ್ಯಾಭ್ಯಾಸಕ್ಕೆ ಒಂದರ್ಧ ಗಂಟೆಯಾದ್ರೂ ಮೀಸಲಿಡಬೇಕು. ಆದ್ರೆ ಈ ಬಾಲಕ ಮಾಡಿದ ಟೈಂ ಟೇಬಲ್ ನಲ್ಲಿ ಸ್ಟಡಿ ಟೈಂ ಹುಡುಕಬೇಕು. ಫೈಟಿಂಗ್ ಗೆ  ಅತಿ ಹೆಚ್ಚು ಸಮಯ ನೀಡಿರುವ ಈತನ ಟೈಂ ಟೇಬಲ್ ವಿಶೇಷವಾಗಿದೆ. 
 

Six Year Old Student Time Table Goes Viral

ಶಿಸ್ತಿನ ಜೀವನ ನಡೆಸಲು ಟೈಂ ಟೇಬಲ್ ಅವಶ್ಯಕ. ಸಾಮಾನ್ಯ ಜನರು ಕೂಡ ಟೈಂ ಟೇಬಲ್ ಮಾಡಿಕೊಂಡು ಅದರಂತೆ ನಡೆದ್ರೆ ಜೀವನ ಸರಾಗವಾಗಿ ಸಾಗುತ್ತೆ. ಅದ್ರಲ್ಲೂ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಇಡೀ ದಿನದ ವೇಳಾಪಟ್ಟಿ ಮಾಡಿಕೊಂಡ್ರೆ ಒಳ್ಳೆಯದು. ಟೈಮ್ ಟೇಬಲ್ ಅನ್ನು ಅನುಸರಿಸುವ ಅಭ್ಯಾಸವನ್ನು ಬಾಲ್ಯದಿಂದಲೂ ಅಳವಡಿಸಿಕೊಂಡ್ರೆ ಅದ್ರಿಂದ ಲಾಭ ಹೆಚ್ಚು. ಸಣ್ಣ ಮಕ್ಕಳು ಕೂಡ ಶಿಕ್ಷಕರ ಮಾತಿಗೆ ಪ್ರೇರಣೆಗೊಂಡು ಟೈಂ ಟೇಬಲ್ ಮಾಡಿಕೊಳ್ತಾರೆ. ಆದ್ರೆ ಅದ್ರಂತೆ ನಡೆಯೋದು ಬಹುತೇಕರಿಗೆ ಕಷ್ಟ.  

ದಿನದಲ್ಲಿ ಯಾವೆಲ್ಲ ಸಬ್ಜೆಕ್ಟ್ (Subject) ಓದಬೇಕು ಎನ್ನುವ ಟೈಂ ಟೇಬಲ್ (Time Table) ಸಾಮಾನ್ಯ. ಅದನ್ನು ಪರೀಕ್ಷೆ ಹತ್ತಿರ ಬರ್ತಿದ್ದಂತೆ ವಿದ್ಯಾರ್ಥಿಗಳು ಸಿದ್ಧಮಾಡ್ತಾರೆ. ಆದ್ರೆ ದಿನಪೂರ್ತಿ ಯಾವೆಲ್ಲ ಕೆಲಸ ಮಾಡ್ಬೇಕು ಎಂಬ ಟೈಂ ಟೇಬಲ್ ವಿಶೇಷವಾಗಿರುತ್ತದೆ. ಅದ್ರಲ್ಲಿ ಓದಿಗೆ, ಜ್ಞಾನ ವೃದ್ಧಿಗೆ ಎಷ್ಟು ಸಮಯ ಮೀಸಲಿಡ್ತಾರೆ ಎಂಬುದೂ ಮುಖ್ಯವಾಗುತ್ತದೆ. ಆದ್ರೆ ಇಲ್ಲೊಬ್ಬ ಬಾಲಕ ಸಿದ್ಧಪಡಿಸಿದ ಟೈಂ ಟೇಬಲ್ ಅದ್ಭುತವಾಗಿದೆ. ಅದನ್ನು ನೋಡಿದ ನೆಟ್ಟಿಗರು, ನೀನೇ ಸುಖಿ ಎಂದು ಹೇಳ್ತಿದ್ದಾರೆ.  

ಪ್ರವಾಹದಲ್ಲಿ ಕೊಚ್ಚಿ ಹೋದ ಕಾರಿನಿಂದ ಮಹಿಳೆಯ ರಕ್ಷಣೆ,ಬೆಚ್ಚಿ ಬೀಳಿಸುವ ವಿಡಿಯೋ!

ಆರು ವರ್ಷದ ಮಗುವಿನ ಟೈಂ ಟೇಬಲ್ ಹೇಗಿದೆ ಗೊತ್ತಾ? : @Laiiiibaaaa ಟ್ವಿಟರ್ ಬಳಕೆದಾರರು ಬಾಲಕನ ಟೈಮ್ ಟೇಬಲ್ ಪೋಸ್ಟ್ ಮಾಡಿದ್ದಾರೆ. 6 ವರ್ಷದ ಬಾಲಕ ಈ ಟೈಂ ಟೇಬಲ್ ಸಿದ್ಧಪಡಿಸಿದ್ದಾನೆ. ಇದನ್ನು ನೋಡಿದ ಜನರು ನಗ್ತಿದ್ದಾರೆ. ಟೈಮ್ ಟೇಬಲ್ ನಲ್ಲಿ  ಅಧ್ಯಯನ ಮಾಡಲು 15 ನಿಮಿಷ ಮೀಸಲಿಟ್ಟರೆ ಸ್ನಾನ ಮಾಡಲು 30 ನಿಮಿಷ ಮೀಸಲಿಟ್ಟಿದ್ದಾನೆ. ಬಾಲಕನ ಸೋದರ ಸಂಬಂಧಿ ಈ ಟೈಂ ಟೇಬಲ್ ಪೋಸ್ಟ್ ಮಾಡಿದ್ದಾರೆ. ಟ್ವಿಟರ್ (Twitter) ಪೋಸ್ಟ್ ಪ್ರಕಾರ ಆರು ವರ್ಷದ ಬಾಲಕನ ಹೆಸರು ಮೋಹಿದ್. ಆರು ವರ್ಷದ ಕಸಿನ್ ಈ ಟೈಂ ಟೇಬಲ್ ಸಿದ್ಧಪಡಿಸಿದ್ದಾನೆ. ಕೇವಲ 15 ನಿಮಿಷ ಅಧ್ಯಯನಕ್ಕೆ ಮೀಸಲಿಟ್ಟಿದ್ದಾನೆ ಎಂದು ಶಿರ್ಷಿಕೆ ಹಾಕಲಾಗಿದೆ. 

ಟ್ವೀಟರ್ ಪೋಸ್ಟ್ ಪ್ರಕಾರ, ಮೋಹಿದ್, ಬೆಳಿಗ್ಗೆ 9 ಗಂಟೆಗೆ ಏಳ್ತಾನೆ. ವಾಶ್ ರೂಮಿಗೆ ಅರ್ಧ ಗಂಟೆ, ಬ್ರೇಕ್ ಫಾಸ್ಟ್ ಗೆ ಅರ್ಧ ಗಂಟೆ. ಟಿವಿ ನೋಡೋಕೆ ಒಂದು ಗಂಟೆ ಸಮಯ. ವಿಶೇಷವೆಂದ್ರೆ ಮೊಹಿದ್ ಫೈಟಿಂಗ್ ಗೆ ಮೂರು ಗಂಟೆ ತೆಗೆದಿಟ್ಟಿದ್ದಾನೆ. ಇನ್ನು ವಿದ್ಯಾಭ್ಯಾಸಕ್ಕೆ 15 ನಿಮಿಷ ನೀಡಿದ ಬಾಲಕ, ಮಧ್ಯಾಹ್ನದ ನಿದ್ರೆಗೆ ಸಮಯ ಕೊಟ್ಟಿದ್ದಾನೆ. ಮಾವಿನ ಹಣ್ಣು ತಿನ್ನೋಕೆ ಅರ್ಧ ಗಂಟೆ ಮೀಸಲಿಟ್ಟ ಬಾಲಕ ರಾತ್ರಿ 9 ಗಂಟೆಗೆ ನಿದ್ರೆಗೆ ಜಾರುತ್ತಾನಂತೆ. 

ಕಷ್ಟಪಟ್ಟು ಪತ್ನಿಯನ್ನು ಓದಿಸಿದ ಗಂಡ, ಸರ್ಕಾರಿ ಕೆಲ್ಸ ಸಿಗ್ತಿದ್ದಂತೆ ಗಂಡನನ್ನೇ ಜೈಲಿಗೆ ಕಳಿಸಿದ್ಲು ಹೆಂಡ್ತಿ!

ವೈರಲ್ ಆದ ಟ್ವಿಟರ್ : ಈ ಟ್ವೀಟ್ 1.2 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. 17 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ನೂರಾರು ಕಾಮೆಂಟ್‌ ಇದಕ್ಕೆ ಸಿಕ್ಕಿದೆ. ರೆಡ್ ಕಾರ್ ಆಟಕ್ಕೆ ಸಂಜೆ 5. 15ರಿಂದ 7 ಗಂಟೆ ಮೀಸಲಿಟ್ಟಿದ್ದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹಾಗೆ ಚೀಸ್ ಗೆ ಮೊಹಿದ್ ಟೈಂ ನೀಡಿರೋದನ್ನು ನೋಡಿದ ನೆಟ್ಟಿಗರು ಇದು ಲೇಸ್ ಮತ್ತು ಜ್ಯೂಸ್ ಸಮಯ ಎಂದಿದ್ದಾರೆ.  ಈತನ ಟೈಂ ಟೇಬಲ್ ಹಾಗೂ ಪ್ರಾಮಾಣಿಕತೆಗೆ ಮೆಚ್ಚಿದ್ದೇವೆ ಅಂತಾ ಇನ್ನು ಕೆಲ ಟ್ವಿಟರ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಸುಳ್ಳು, ಆರು ವರ್ಷದ ಬಾಲಕ ಇದನ್ನು ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಚಿಕ್ಕ ಮಕ್ಕಳಿಗೆ ಇಷ್ಟು ಸ್ಪಷ್ಟ ಸ್ಪೆಲಿಂಗ್ ಬರಲು ಸಾಧ್ಯವಿಲ್ಲ ಹಾಗೇ ಟೈಂ ಅವರಿಗೆ ತಿಳಿಯೋದಿಲ್ಲ ಎನ್ನುತ್ತಾರೆ ಕೆಲ ನೆಟ್ಟಿಗರು. 
 

Latest Videos
Follow Us:
Download App:
  • android
  • ios