ಪಂಜಾಬಿ ವಧು ಕೈಯಲ್ಲಿ ಚೂಡಾ ಮತ್ತು ಕಲೀರೆ ಯಾಕೆ ಧರಿಸುತ್ತಾರೆ ಅನ್ನೋ ಪ್ರಶ್ನೆ ನಿಮ್ಮ ತಲೆಯಲ್ಲೂ ಬಂದಿರಬಹುದು ಆಲ್ವಾ? ಅದಕ್ಕೆ ಉತ್ತರ ಇಲ್ಲಿದೆ... 

ಪಂಜಾಬಿ ಮದುವೆ ಮತ್ತು ವಧು ಎಂದ ಕೂಡಲೇ ನೆನಪಾಗುವುದು ಕೈ ತುಂಬಾ ಧರಿಸಿರುವ ಕೆಂಪು ಮತ್ತು ಬಿಳಿ ಬಳೆಗಳು ಹಾಗೂ ಕೈಯಲ್ಲಿ ನೇತಾಡುತ್ತಿರುವ ಚಿನ್ನದ ಬಣ್ಣದ ಕಲೀರೆ. ಸಂಪ್ರದಾಯಿಕವಾಗಿ ಧರಿಸುವ ಈ ಬಳೆಯನ್ನು ಈಗ ಎಲ್ಲರೂ ಧರಿಸುತ್ತಾರೆ. ಆದರೆ ಇದನ್ನು ಯಾಕೆ ಧರಿಸುತ್ತಾರೆ ಅನ್ನೋ ಮಾಹಿತಿ  ಇಲ್ಲಿದೆ... 

ಕೈಗಳಿಗೆ ಬಳೆ ಏಕೆ ಧರಿಸಬೇಕು?

ಮದುವೆ ಸಮಯದಲ್ಲಿ ವಧುವಿಗೆ ಹಸಿರು ಅಥವಾ ಕೆಂಪು ಬಳೆ ತೊಡುವುದು ಶುಭ. ಮೆಹಂದಿ ಹಾಕಿದ ಕೈಗಳಿಗೆ  ಚೂಡಾ -ಕಲೀರೆ ಧರಿಸಿದರೆ ಇನ್ನು ಸುಂದರವಾಗಿ ಕಾಣುತ್ತದೆ. ಪಂಜಾಬಿ ಮದುವೆಗಳಲ್ಲಿಯೂ ಚೂಡಾ -ಕಲೀರೆ ಧರಿಸುವ ಒಂದು ಸಂಪ್ರದಾಯವೇ ಇದೆ. ಪಂಜಾಬಿ ವಧುವಿನ ಮಾವ ಅವರಿಗಾಗಿ ಚೂಡಾ ತೆಗೆದುಕೊಂಡು ಬರುತ್ತಾರೆ. ಅದರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ 21 ಬಳೆಗಳಿರುತ್ತವೆ. ವಧು ಪೂರ್ತಿಯಾಗಿ ತಯಾರಾಗಿ - ಮಂಟಪದಲ್ಲಿ ವರನ ಪಕ್ಕ ಕುಳಿತುಕೊಳ್ಳುವವರೆಗೂ ಆ ಚೂಡವನ್ನು ನೋಡುವಂತಿಲ್ಲ. 

ವಧು ಚೂಡಾ ಧರಿಸುವ ಸಂಪ್ರದಾಯವೂ ಇಂಟ್ರೆಸ್ಟಿಂಗ್ ಆಗಿದೆ. ವಧುವಿಗೆ ಚೂಡಾ ಧರಿಸುವ ಮುನ್ನ ಮದುವೆಯ ಒಂದು ರಾತ್ರಿ ಮುನ್ನ ಹಾಲಿನಲ್ಲಿ ಚೂಡವನ್ನು ಹಾಕಿಡುತ್ತಾರೆ. ನಂತರ ಮದುವೆ ದಿನ ಮಂಟಪದಲ್ಲಿ ಅವನ್ನು ವಧುವಿಗೆ ನೀಡಲಾಗುತ್ತದೆ. ಆ ಸಮಯದಲ್ಲಿ ವಧುವಿನ ಕಣ್ಣನ್ನು ಮುಚ್ಚಲಾಗುತ್ತದೆ. ಆಕೆಯ ದೃಷ್ಟಿಯೇ ಬಳೆಯ ಮೇಲೆ ಬೀಳಬಾರದೆಂದು.

ಮದುವೆಯ ಸಮಯದಲ್ಲಿ ಚೂಡಾ ಧರಿಸುವುದರಿಂದ ಇದು ಶುಭ ಸಂಕೇತವಾಗಿದೆ ಅಲ್ಲದೆ ಮದುವೆಯ ಒಂದು ಮುಖ್ಯ ಕುರುಹು ಆಗಿರುತ್ತದೆ. ಪಂಜಾಬಿ ಸಂಪ್ರದಾಯದ ಪ್ರಕಾರ ಸುಮಾರು ಒಂದು ವರ್ಷದವರೆಗೆ ಈ ಚೂಡವನ್ನು ಧರಿಸಲೇಬೇಕು ಎನ್ನುತ್ತಾರೆ. ಇಂದು 40 ದಿನಗಳವರೆಗೆ ಮಾತ್ರ ಧರಿಸುತ್ತಾರೆ. 

ಫ್ಯಾಷನ್ ಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ