ಕೀಟ ಬಾಧೆ ತಪ್ಪಿಸಲು ಈ 8 ಗಿಡಗಳು ನಿಮ್ಮ ಮನೆಯಲ್ಲಿರಲಿ.

ಮನೆಯಲ್ಲಿ ಸೊಳ್ಳೆಗಳು, ನೊಣಗಳು, ಜೇಡಗಳು ಸೇರಿ ಅನೇಕ ಕೀಟಗಳು ಕಿರಿಕಿರಿ ಉಂಟು ಮಾಡುತ್ತವೆ. ಕೀಟ ನಿವಾರಕ ಸಸ್ಯಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಮನೆಯಂಗಳದಲ್ಲಿ ಅಥವಾ ಮನೆಯ ಒಳಗೆ ಕೆಲ ಕೀಟ ನಿವಾರಕ ಗಿಡಗಳಿದ್ದರೆ ಕೀಟಗಳ ಕಾಟಕ್ಕೆ ಗುಡ್ ಬೈ ಹೇಳಬಹುದು.

Plants that keep bugs away let them have at your home

ಮಳೆಗಾಲದಲ್ಲಿ ಸಾಮನ್ಯವಾಗಿ ಕೀಟಗಳ ಕಿರಿಕಿರಿ ಹೆಚ್ಚಾಗಿರುತ್ತದೆ. ಸೊಳ್ಳೆಗಳು, ನೊಣಗಳು, ಜೇಡಗಳು ಸೇರಿ ಅನೇಕ ಕೀಟಗಳು ಮನೆಯ ಅತಿಥಿಯಾಗಿ ಉಳಿಯುತ್ತವೆ. ಇವುಗಳಿಂದ ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗಗಳು ಬರುತ್ತವೆ. ಕೀಟ ನಿವಾರಕ ಅಥವಾ ಕೀಟ ವಿಕರ್ಷಕ ಸಸ್ಯಗಳು ಈ ಸಮಸ್ಯೆಯನ್ನು ನಿವಾರಿಸಲು ಉತ್ತಮ ಮಾರ್ಗವಾಗಿವೆ. ಕೆಲ ಸಸ್ಯಗಳು ಕೀಟಗಳಿಗೆ ಗೇಟ್ ಪಾಸ್ ಕೊಡುತ್ತವೆ. ಕೀಟಗಳನ್ನು ದೂರವಿಡುವ ಅನೇಕ ಸಸ್ಯಗಳಿವೆ. ಇವುಗಳು ಕೀಟಬಾಧೆಯನ್ನು ಹೋಗಲಾಡಿಸುವುದಲ್ಲದೇ, ಮನೆಯ ಅಂದವನ್ನು ಹೆಚ್ಚಿಸುತ್ತವೆ. ಅವುಗಳ ಮಾಹಿತಿ ಇಲ್ಲಿದೆ.

ತುಳಸಿ
ಸಾಮಾನ್ಯವಾಗಿ ತುಳಸಿಯಲ್ಲಿ (Tulsi) ಔಷಧಿಯ ಗುಣಗಳಿದ್ದು, ಇದರಿಂದ ಹಲವು ಪ್ರಯೋಜನಗಳಿವೆ. ಇದು ಎಸ್ಟ್ರಾಗೋಲ್, ಸಿಟ್ರೊನೆಲ್ಲಾಲ್, ಲಿಮೋನೆನ್ ಮತ್ತು ನೆರೋಲಿಡಾಲ್ ಅಂಶಗಳನ್ನು ಒಳಗೊಂಡಿದೆ. ಇದು ಸೊಳ್ಳೆಗಳು (Mosquitoes), ಪತಂಗಗಳು ಮತ್ತು ನೊಣಗಳಂತಹ ಕೀಟಗಳನ್ನು ಓಡಿಸಲು ಸಹಾಯಕವಾಗಿದೆ. ಕೀಟಗಳಿಂದ ದೂರವಿರಲು ತುಳಸಿಯ ಎಲೆಗಳನ್ನು ಪುಡಿಮಾಡಿ ಮತ್ತು ನಿಮ್ಮ ಚರ್ಮದ ಮೇಲೆ ಉಜ್ಜಿಕೊಳ್ಳಬಹುದು. ಇನ್ನು ತುಳಸಿಯನ್ನು ಕೀಟ ನಿವಾರಕ ಸ್ಪ್ರೇ ಮಾಡಲು ಸಹ ಬಳಸಬಹುದು.

ಲ್ಯಾವೆಂಡರ್ (Lavender)
ಕೀಟನಾಶಕ ಸಸ್ಯಗಳಲ್ಲಿ ಲ್ಯಾವೆಂಡರ್‌ (Lavender)ಕೂಡ ಒಂದು. ಇದು ಸೊಳ್ಳೆ ಸೇರಿದಂತೆ ಅನೇಕ ಕೀಟಗಳನ್ನು ಓಡಿಸುವ ನಿಟ್ಟಿನಲ್ಲಿ ಒಂದು ಚಮತ್ಕಾರಿಕ ಸಸ್ಯವಾಗಿದೆ. ಇದರಿಂದ ರಾಸಾಯನಿಕಗಳಿಂದ ಮುಕ್ತವಾಗಿರುವ ಸೊಳ್ಳೆ ನಿವಾರಕ ದ್ರಾವಣವನ್ನು ಪಡೆಯಬಹುದು. ಲ್ಯಾವೆಂಡರ್‌ ಸಸಿಯಿಂದ ಪಡೆದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಅದನ್ನು ನೇರವಾಗಿ ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು. ಸೊಳ್ಳೆಗಳನ್ನು ದೂರವಿರಿಸಲು, ಲ್ಯಾವೆಂಡರ್‌ ಸಸಿಯಿಂದ ಪಡೆದ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳಬಹುದು. ಇದರಿಂದ ಕೀಟಗಳ (Insects)ಕಾಟದಿಂದ ಮುಕ್ತಿ ಪಡೆಯಬಹುದು.

ನಿಮ್ಮ ಲಿವರ್ ಜೋಪಾನ: ಕಲ್ಮಶರಹಿತ ಯಕೃತ್’ಗಾಗಿ ಈ ಆಹಾರ ಸೇವನೆ ಅತಿ ಮುಖ್ಯ

ಸಿಟ್ರೊನೆಲ್ಲಾ
ಸಿಟ್ರೊನೆಲ್ಲಾ (Citronella) ಸಸ್ಯ ಮನೆಯಲ್ಲಿದ್ದರೆ ಸೊಳ್ಳೆಗಳು, ನೊಣಗಳು (Flies) ಹಾಗೂ ಇರುವೆಗಳು ಬರುವುದಿಲ್ಲ. ಇದರ ವಾಸನೆಗೆ ಕೀಟಗಳು ಓಡಿ ಹೋಗುತ್ತವೆ. ಈ ಸಸ್ಯವನ್ನು ಕಾಳಜಿ ವಹಿಸುವುದು ತುಂಬಾ ಸುಲಭ. ಉಷ್ಣವಲಯದ ಹವಾಮಾನದಲ್ಲಿ ಮಾತ್ರ ಸಿಟ್ರೊನೆಲ್ಲಾ ಅರಳುತ್ತದೆ. ಆ ಪರಿಸರವನ್ನು ನೀಡಲು ಸಮರ್ಥರಾದರೆ, ಪುಟ್ಟ ಹೂವುಗಳನ್ನು ಕೂಡ ನೀವು ಪಡೆಯಬಹುದು.

ಥೈಮ್ 
ಥೈಮ್ (Thyme)ಸಸ್ಯವು ಕೀಟನಾಶಕ್ಕೆ ಅತ್ಯಂತ ಸಹಾಯಕವಾಗಿದ್ದು, ಇದು ಶುಷ್ಕ, ಕಲ್ಲಿನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹೀಗಾಗಿ ತೋಟದಲ್ಲಿ ಮನೆ ಸುತ್ತಮುತ್ತ ಕೀಟಗಳಿಂದ ದೂರವಿಡಲು ಥೈಮ್  ಬೆಳಸಬಹುದು.

ಪುದಿನಾ
ಪುದಿನಾ ಕೂಡ ಮತ್ತೊಂದು ಕೀಟ ನಿವಾರಕ ಸಸ್ಯವಾಗಿದೆ. ಪುದಿನಾ (Mint) ವಾಸನೆಯು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಇದರ ಎಲೆಗಳಲ್ಲಿ ಕಂಡುಬರುವ ಆರೊಮ್ಯಾಟಿಕ್ ಗುಣಲಕ್ಷಣಗಳು ಕಾಂಡಗಳು ಮತ್ತು ಹೂವುಗಳಲ್ಲಿಯೂ ಇರುತ್ತವೆ. ಇವು ಕೀಟನಾಶಕ್ಕೆ ಸಹಾಯಕವಾಗುತ್ತವೆ. ಪುದಿನಾವನ್ನು ನೆಲಕ್ಕಿಂತ ಹೆಚ್ಚಾಗಿ ಮಡಕೆಗಳಲ್ಲಿ ಉತ್ತಮವಾಗಿ ಬೆಳೆಯಲಾಗುತ್ತದೆ ಏಕೆಂದರೆ ಇದು ಹರಡುತ್ತದೆ, ಹಾಗಾಗಿ ಇದನ್ನು ಕುಂಡಗಳಲ್ಲಿ ಬೆಳಸಿ.

ತೆಂಗಿನ ನೀರು ಕುಡಿದ್ರೆ ಸಾಕು ಅಸಿಡಿಟಿ ಬಗ್ಗೆ ಚಿಂತೆ ಬೇಕಿಲ್ಲ

ಲಾರೆಲ್
ಲಾರೆಲ್ (Laurel)ಕೀಟ ನಿವಾರಕ ಸಸ್ಯಗಳಲ್ಲಿ ಒಂದು. ಇದು ಜಿರಳೆಗಳನ್ನು ಓಡಿಸಲು ಸಹಾಯಕಾರಿ. ಇದರ ಸುವಾಸನೆಯು ವಿಶಿಷ್ಟವಾಗಿದ್ದು, ಇದು ಕೀಟಗಳನ್ನು ದೂರವಿರಿಸುತ್ತದೆ. ಇದರ ಕಾಳಜಿ ವಹಿಸುವುದು ತುಂಬಾ ಸುಲಭ. ಇದನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿರಬಹುದು.

ಮಲ್ಲಿಗೆ 
ಮಲ್ಲಿಗೆಯು (jasmine) ಅತ್ಯುತ್ತಮ ಕೀಟ ನಿವಾರಕ ಸಸ್ಯಗಳಲ್ಲಿ ಒಂದು. ಇದು ಎಲೆಗಳು ಮತ್ತು ಹೂವುಗಳಿಂದ ಆವರಿಸುತ್ತದೆ. ಇದರ ಪರಿಮಳವು ಕೀಟಗಳನ್ನು ದೂರ ಮಾಡುತ್ತದೆ.

ಚೆಂಡು ಹೂವಿನ ಸಸ್ಯ
ಚೆಂಡು ಅತ್ಯಂತ ಪ್ರಸಿದ್ಧವಾದ ಕೀಟ-ನಿವಾರಕ ಸಸ್ಯಗಳಲ್ಲಿ ಒಂದು. ಇದು ಸುಲಭವಾಗಿ ಬೆಳೆಯುವ ವಾರ್ಷಿಕ ಹೂವಿನ (flower)ಗಿಡ. ಇದು ಸಾಮಾನ್ಯ ಕೀಟಗಳ ಜೊತೆ ಗಿಡಹೇನುಗಳು, ಥ್ರೈಪ್ಸ್ , ಬಿಳಿನೊಣಗಳು, ಮೆಕ್ಸಿಕನ್ ಬೀನ್ ಜೀರುಂಡೆಗಳನ್ನು (beetle)ತೊಡಗಿಸಲು ಸಹ ಸಹಕಾರಿಯಾಗಿದೆ. ಇದನ್ನು ಕುಂಡಗಳಲ್ಲಿ ಬೆಳೆಸಿ, ಮನೆಯ ಒಳಾಂಗಣದಲ್ಲಿ ಅಥವಾ ಮನೆಯ ಪ್ರವೇಶದ್ವಾರದ ಬಳಿ ಇರಿಸಿದರೆ ಉತ್ತಮ.

Latest Videos
Follow Us:
Download App:
  • android
  • ios