ಫಿಟ್ನೆಸ್ ಫ್ರೀಕ್ ನೀತಾ ಅಂಬಾನಿ, ಮಕ್ಕಳ ಶೈಕ್ಷಣಿಕ ವಿದ್ಯಾರ್ಹತೆ ಏನು?

ಮುಖೇಶ್ ಅಂಬಾನಿ ಮತ್ತವರ ಕುಟುಂಬದ ಬಗ್ಗೆ ಆಗಾಗೆ ಮೀಡಿಯಾದಲ್ಲಿ ತಿಳಿಯುತ್ತಿರುತ್ತೇವೆ. ಅವರ ಮನೆ ಸಮಾರಂಭಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಇದೀಗ, ಅವರ ಕುಟುಂಬದ ಸದಸ್ಯರ ಶೈಕ್ಷಣಿಕ ಅರ್ಹತೆಗಳನ್ನೂ ತಿಳಿದುಕೊಳ್ಳಿ.

Know about education qualification of Mukhesh Ambani family

ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದ ಸದಸ್ಯರು ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಅನಂತ್ ಅಂಬಾನಿ ಎಂಗೇಜ್ ಮೆಂಟ್ ಕಾರ್ಯಕ್ರಮದ ಬಗ್ಗೆ ಸುದ್ದಿಯಾಗಿತ್ತು. ಅವರು ಧರಿಸಿದ್ದ ಡ್ರೆಸ್, ಅಲಂಕಾರಿಕ ವಸ್ತುಗಳ ಬಗ್ಗೆಯೂ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ, ಇತ್ತೀಚಿನವರೆಗೂ ಅಂಬಾನಿ ಕುಟುಂಬದ ಸದಸ್ಯರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಹೆಚ್ಚು ಸುದ್ದಿಯಾಗಿರಲಿಲ್ಲ. ಅಂಬಾನಿ ಕುಟುಂಬದ ಆಸ್ತಿಪಾಸ್ತಿ, ಸಮಾರಂಭಗಳಲ್ಲಿ ಅವರ ಉಡುಗೆ-ತೊಡುಗೆಗಳು ಸೇರಿದಂತೆ ಹಲವು ಅಂಶಗಳ ಸುತ್ತ ಮಾತ್ರ ಸುದ್ದಿಯಾಗಿದ್ದು ಹೆಚ್ಚು. ಅಂಬಾನಿ ಕುಟುಂಬದ ಅತಿ ಕಿರಿಯ ಹಾಗೂ ಇತ್ತೀಚೆಗೆ ರಾಧಿಕಾ ಮರ್ಚೆಂಟ್ ಜತೆ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಅನಂತ್ ಅಂಬಾನಿ ಸೇರಿದಂತೆ ಕುಟುಂಬದ ಎಲ್ಲರೂ ಅತ್ಯುತ್ತಮ ಎನ್ನಿಸುವ ಶೈಕ್ಷಣಿಕ ಅರ್ಹತೆ ಗಳಿಸಿದ್ದಾರೆ. ಎಲ್ಲರೂ ವಿದೇಶಗಳ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ್ದಾರೆ. ನಿಮಗೆ ಗೊತ್ತಿರಲಿ, ನಮ್ಮ ದೇಶದ ಅತಿ ಶ್ರೀಮಂತರಿಗೆ ವಿದೇಶಗಳಲ್ಲಿ ಶಿಕ್ಷಣ ಮಾಡುವುದು ಸುರಕ್ಷತೆ ಹಾಗೂ ಇತರ ಕೆಲವು ದೃಷ್ಟಿಯಿಂದ ಸುಲಭ. ನಮ್ಮ ದೇಶಗಳ ಕಾಲೇಜುಗಳಲ್ಲಾದರೆ ಅವರಿಗೆ ವಿಶೇಷ ಮನ್ನಣೆ ದೊರೆತು ಉಳಿದ ಎಲ್ಲ ಸಾಮಾನ್ಯ ವಿದ್ಯಾರ್ಥಿಗಳಂತೆ ಸಹಜವಾಗಿರಲು ಸಾಧ್ಯವಾಗದೆ ಇರಬಹುದು. ಆದರೆ, ವಿದೇಶಗಳ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಗುರುತಿಸುವವರಿಲ್ಲದೆ ನಿರಾಳವಾಗಿರಬಹುದು.
ಮುಖೇಶ್ ಅಂಬಾನಿ (Mukhesh Ambani) ಕುಟುಂಬದ ಕಿರಿಯ (Younger) ಅನಂತ್ ಅಂಬಾನಿ ರೋಡ್ ದ್ವೀಪದ (Rhode Island) ಬ್ರೌನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.  ಹಿರಿಯ ಸಹೋದರ ಆಕಾಶ್ ಅಂಬಾನಿ ಅಮೆರಿಕದ ಬ್ರೌನ್ ವಿವಿಯಲ್ಲಿ (Brown University) ಅರ್ಥಶಾಸ್ತ್ರವನ್ನು (Economics) ಮೇಜರ್ ಆಗಿ ಓದಿದ್ದಾರೆ. ಮುಖೇಶ್ ಅಂಬಾನಿಯ ಮಗಳು ಇಶಾ (Isha) ಅಂಬಾನಿ, ಅಮೆರಿಕದ ಯೇಲ್ (Yale) ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ (Psychology) ಪದವಿ ಪಡೆದಿದ್ದಾರೆ. 

ಮುಖೇಶ್ ಮತ್ತು ನೀತಾ ಓದಿದ್ದೆಷ್ಟು ಗೊತ್ತಾ?
ಮುಖೇಶ್ ಅಂಬಾನಿ ಕೂಡ ಶಿಕ್ಷಣದಲ್ಲಿ ಹಿಂದೆ ಬಿದ್ದವರಲ್ಲ. ಮುಂಬೈನ ಕೆಮಿಕಲ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ (Degree) ಪಡೆದಿದ್ದಾರೆ. ಮುಖೇಶ್ ಅವರ ಪತ್ನಿ ನೀತಾ (Neeta) ಅಂಬಾನಿ, ಮುಂಬೈನ ನಾರ್ಸಿ ಮಾಂಜಿ ಕಾಲೇಜ್ ಆಫ್ ಕಾಮರ್ಸ್ ಮತ್ತು ಇಕನಾಮಿಕ್ಸ್ ಸಂಸ್ಥೆಯಲ್ಲಿ ಕಾಮರ್ಸ್ (Commerce) ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇನ್ನು, ಆಕಾಶ್ ಅಂಬಾನಿ ಪತ್ನಿ ಶ್ಲೋಕ ಮೆಹ್ತಾ (Shloka Mehta), ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಆಂಡ್ ಪಾಲಿಟಿಕಲ್ ಸೈನ್ಸ್ (Political Science) ಸಂಸ್ಥೆಯಲ್ಲಿ ಪದವಿ ಪಡೆದಿದ್ದಾರೆ. 

ಸೆಲಬ್ರಿಟಿಗಳು ತಮ್ಮ ಮಕ್ಕಳ ಮುಖ ತೋರಿಸದೆ ಹಾರ್ಟ್ ಎಮೋಜಿ ಹಾಕೋದು ಯಾಕೆ ?

ಇಶಾ ಅಂಬಾನಿ ಪತಿ ಆನಂದ್ ಪಿರಾಮಲ್ (Anand Piramal) ಅವರು ಪೆನ್ಸಿಲ್ವೇನಿಯಾ ವಿವಿಯಿಂದ ಪದವಿ ಪಡೆದಿದ್ದಾರೆ ಹಾಗೂ ಬೋಸ್ಟನ್ ನಲ್ಲಿರುವ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ (Harward Bussiness School) ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಅನಂತ್ ಅಂಬಾನಿ ಎಂಗೇಜ್ ಮೆಂಟ್ ಆಗಿರುವ ರಾಧಿಕಾ ಮರ್ಚೆಂಟ್ ಕೂಡ ಶಿಕ್ಷಣದಲ್ಲಿ ಕಡಿಮೆ ಏನಿಲ್ಲ. ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಪದವಿ ಹೊಂದಿದ್ದಾರೆ. 

ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮಿಂಚಿದ ಸ್ಟಾರ್ ನಟ-ನಟಿಯರು!

ಕೌಟುಂಬಿಕ ವ್ಯವಹಾರಕ್ಕೆ ಆದ್ಯತೆ
ಎಷ್ಟೇ ಅತ್ಯುನ್ನತ ಶಿಕ್ಷಣ (Education) ಪಡೆದರೂ ಇವರು ಸ್ವಂತ ಉದ್ಯಮಕ್ಕೆ ಆದ್ಯತೆ ನೀಡುತ್ತಾರೆ. ಕುಟುಂಬ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ವಿವಿಧ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವುದಕ್ಕೆ ಆದ್ಯತೆ ನೀಡುತ್ತಾರೆ. ಕಿರಿಯ ಮಗ ಅನಂತ್ ಅಂಬಾನಿ ಜಿಯೋ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. 2020ರಲ್ಲಿ ತಂದೆಯ ಜಿಯೋ ಸಂಸ್ಥೆಗೆ ಹೆಚ್ಚುವರಿ ನಿರ್ದೇಶಕರಾಗಿ ಸೇರಿಕೊಂಡಿದ್ದಾರೆ. 
 

Latest Videos
Follow Us:
Download App:
  • android
  • ios