Domestic Violence ಹೆಂಡತಿ ಪ್ರಾಣ ಹಿಂಡುತಿ.. ಕಾಟಕ್ಕೆ ಪರಿಹಾರ ಇಲೈತಿ!
* ಕಾಟ ಕೊಡುವ ಪತ್ನಿ ವಿರುದ್ಧ ಪತಿ ದೂರು ದಾಖಲಿಸಬಹುದು
*ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯದ ಅಭಿಪ್ರಾಯ
* ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಅಡಿ ಗಂಡನಿಗೂ ಪರಿಹಾರ ಇದೆ
ಜಮ್ಮು ಮತ್ತು ಕಾಶ್ಮೀರ(ಡಿ. 09) ಕೌಟುಂಬಿಕ ದೌರ್ಜನ್ಯದಿಂದ(Domestic Violence) ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಅಡಿಯಲ್ಲಿ ಪತ್ನಿ(Wife) ವಿರುದ್ಧ ಪತಿ (Husband)ಸಹ ದೂರು ದಾಖಲಿಸಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಯಾಲಯ ಹೇಳಿದೆ.
ಕೌಟುಂಬಿಕ ದೌರ್ಜನ್ಯ ಹೆಂಗಸರ ಮೇಲೆ ಮಾತ್ರ ಆಗುತ್ತದೆಯಾ? ಇದಕ್ಕೆ ಸರಳವಾಗಿ ಉತ್ತರಿಸಲು ಸಾಧ್ಯವಿಲ್ಲ. ಗಂಡ ಎಂದರೆ ಪ್ರತಿ ದಿನ ಹೆಂಡತಿಯಿಂದ ಬಡಿಸಿಕೊಳ್ಳುವವ ಎಂಬ ವಕ್ರತುಂಡೋಕ್ತಿಯೂ ಬಹಳ ಫೇಮಸ್. ಹೆಂಡತಿ ಪ್ರಾಣ ಹಿಂಡುತಿ ... ಈ ವಿಚಾರ ಸ್ಟಾಂಡ್ ಅಪ್ ಕಾಮಿಡಿಯನ್ ಗಳಿಗೆ ಬಹಳ ಅಚ್ಚು ಮೆಚ್ಚು. ಮಹಿಳೆಯರ ಹಕ್ಕು ಕಾಪಾಡುವುದಕ್ಕೆ ಅನೇಕ ಕಾನೂನು ಇದೆ. ಮಹಿಳೆಯರಿಗೆ ಕಾನೂನು ರಕ್ಷಣೆ ಇದೆ ಅದೆ ಪುರುಷರಿಗೆ. ಈ ವಿಷಯವನ್ನೇ ಆಧರಿಸಿ ಸಾಕಷ್ಟು ಸಿನಿಮಾಗಳು ತಯಾರಾಗಿವೆ.
ಜಮ್ಮು ಮತ್ತು ಕಾಶ್ಮೀರದ ನ್ಯಾಯಾಲಯ ಹೇಳಿರುವ ಮಹತ್ವದ ಮಾತನ್ನು ಕೇಳಲೇಬೇಕು. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಅಡಿಯಲ್ಲಿ ಪತ್ನಿಯ ವಿರುದ್ಧ ಪತಿಯೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯ ಈ ಮಾತು ಹೇಳಿದೆ.
Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ
ಜ್ಯುಡಿಶಿಯಲ್ ಮಾಜಿಸ್ಟ್ರೇಟ್ ರೇಣು ದೋಗ್ರಾ ಗುಪ್ತಾ ಪ್ರಕರಣವೊಂದರ ವಿಚಾರಣೆ ವೇಳೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಸೆಕ್ಷನ್ 12 ರ ಅನ್ವಯ ಗಂಡ ಸಹ ಹೆಂಡತಿಯ ವಿರುದ್ಧ ದೂರು ನೀಡಿ ನ್ಯಾಯ ಪಡೆದುಕೊಳ್ಳಲು ಅವಕಾಶ ಇದೆ ಎಂದಿದ್ದಾರೆ.
ಹಿರಾಲ್ ಪಿ ಹರ್ಸೋರಾ ಮತ್ತು ಕುಸುಮ್ ನರೋತ್ತಮದಾಸ್ ಹರ್ಸೋರಾ ಹಾಗೂ ಮೊಹಮ್ಮದ್ ಝಾಕಿರ್ ಪ್ರಕರಣದಲ್ಲಿ ಇಂಥ ಮಾತನ್ನು ಹೇಳಿದ್ದಾರೆ. ಇದೇ ಕಾರಣಕ್ಕೆ ಪತ್ನಿ ವಿರುದ್ಧ ನೋಟಿಸ್ ಹೊರಡಿಸಲಾಗಿದೆ. ಪತಿ ಪರ ವಕೀಲ ಮೀನಾಕ್ಷಿ ಸ್ಲಾಥಿಯಾ ವಾದ ಮಂಡಿಸಿದ್ದರು.
ಪತಿಯನ್ನೇ ಕೊಂದಳು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಪತಿ ಸಾವನ್ನಪ್ಪಿದ್ದು, ಅತ್ತೆ, ಮಾವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸೇರಿದ್ದ ಪ್ರಕರಣ ಕೆಆರ್ ಪೇಟೆಯಿಂದ ವರದಿಯಾಗಿತ್ತು.
ಗ್ರಾಮದ ನಾಗಮಣಿ ಪತಿ ನಾಗರಾಜು(50) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮಾವ ವೆಂಕಟೇಗೌಡ(70), ಅತ್ತೆ ಕುಳ್ಳಮ್ಮ (60) ತಲೆಗೆ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದರು.
ತುರಿಯೋ ಮಣೆಯಿಂದ ಗಂಡ, ಅತ್ತೆ-ಮಾವನ ಮೇಲೆ ಭೀಕರ ಹಲ್ಲೆ, ಪತಿ ಮೇಲೆ ಕಾದ ಎಣ್ಣೆ ಎರಚಿ ಪತ್ನಿಯಿಂದ ಹಲ್ಲೆ ಈ ರೀತಿಯ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ನಟಿ ಪೂನಂ ಪಾಂಡೆ ತಮ್ಮ ಪತಿ ಸ್ಯಾಮ್ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಬಾಲಿವುಡ್ ಮತ್ತು ಓಟಿಟಿ ಮಾದರಿಯಲ್ಲಿ ಅನೇಕ ಸಿನಿಮಾಗಳು ಇದೆ ಕತೆ ಆಧರಿಸಿ ಬಂದವು. ಮಹಿಳೆಯರು ತಮ್ಮ ಪರವಾಗಿ ಇರುವ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರವನ್ನೇ ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿ ಒಂದು ಬಗೆಯ ಟ್ರೆಂಡ್ ಸೃಷ್ಟಿಸಿದ್ದವು. ಇನ್ನು ಕಚೇರಿಗಳಲ್ಲಿಯೂ ಪುರುಷರ ಮೇಲೆ ಸುಳ್ಳು ಕೇಸು ದಾಖಲಿಸಿದ ಪ್ರಕರಣಗಳು ಅಲ್ಲಲ್ಲಿ ವರದಿಯಾದ ದಾಖಲೆಗಳು ಇವೆ.
ಇಟಲಿ ಪುರಾಣ: ಮನೆಯಲ್ಲಿ ವಾಸ ಮಾಡುವುದಕ್ಕಿಂತ ನನ್ನನ್ನು ಜೈಲಿಗೆ ಹಾಕಿ.. ಜೈಲೇ ಸೇಫ್ ಪ್ಲೇಸ್ ಎಂದು ಪೊಲೀಸರ ಬಳಿ ಇಟಲಿಯ ವ್ಯಕ್ತಿಯೊಬ್ಬ ಮೊರೆ ಇಟ್ಟಿದ್ದ. ಪ್ರತಿಯೊಂದು ವಿಷಯಕ್ಕೂ ಪತ್ನಿ ಸಿಟ್ಟು ಮಾಡಿಕೊಳ್ಳುತ್ತಾಳೆ. ಸಿಡುಕು ತೋರಿಸುತ್ತಾಳೆ. ಜೀವನವೇ ಸಾಕಾಗಿ ಹೋಗಿದೆ ಎಂದು ಕಣ್ಣೀರು ಹಾಕಿದ್ದ. ವರ್ಕ್ ಫ್ರಾಂ ಹೋಂ ಆರಂಭವಾದ ಮೇಲೆ ಸಂಬಂಧಗಳಲ್ಲಿಯೂ ಹೆಚ್ಚಿನ ಬಿರುಕು ಕಾಣಿಸಿಕೊಂಡ ಪ್ರಕರಣಗಳು ವರದಿಯಾಗುತ್ತಲೇ ಇವೆ.