ಬಾವಿಯಲ್ಲಿ ಮುಳುಗಿದ ಮಕ್ಕಳನ್ನು ಮೇಲಕ್ಕೆ ಎತ್ತಬಹುದು, ಮೊಬೈಲ್‌ನಲ್ಲಿ ಮುಳುಗಿದವರನ್ನಲ್ಲ!
ಇಂದು ಮಕ್ಕಳು ಊಟವನ್ನು ಬೇಕಾದರೂ ಬಿಡುತ್ತಾರೆ. ಆದರೆ ಮೊಬೈಲನ್ನು ಮಾತ್ರ ಬಿಡುವುದಿಲ್ಲ ಎಂಬುದು ಪ್ರತಿಯೊಬ್ಬ ಪೋಷಕರ ಅಳಲು. ಊಟ ಮಾಡುವಾಗಲೂ ಮೊಬೈಲ್ ಮಕ್ಕಳ ಕೈ ನಲ್ಲಿ ಇರಲೇಬೇಕು, ಇಲ್ಲದಿದ್ದರೆ ಮಕ್ಕಳಿಗೆ ಊಟ ಮಾಡಿಸುವ ಪೋಷಕರ ಕೆಲಸ ಯಾವತ್ತೂ ಮುಗಿಯುವುದೇ ಇಲ್ಲ..
ಸೋಷಿಯಲ್ ಮೀಡಿಯಾ (Social Medai) ಎಂಬುದೊಂದು ಮಾಯಾ ಜಗತ್ತು. ಇಲ್ಲಿ ಯಾವ ಫೋಟೋ, ಯಾವ ವಿಡಿಯೋ, ಯಾವ ಘಟನೆ ಅದ್ಯಾವಾಗ ವೈರಲ್ ಆಗುತ್ತೆ ಎಂಬುದನ್ನು ಹೇಳೋದೇ ಕಷ್ಟ. ಸಡನ್ನಾಗಿ ಯಾರೋ ಹಳ್ಳಿ ಹಕ್ಕಿಯ ಹಾಡು ಇದ್ದಕ್ಕಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತ್ಯಕ್ಷವಾಗಿ ಅವರು ಮಹಾನ್ ಸೆಲೆಬ್ರಿಟಿ ಆಗಿಬಿಡುತ್ತಾರೆ. ಯಾವುದೋ ಒಂದು ಫೋಟೋ ಲಕ್ಷಗಟ್ಟಲೆ ಶೇರ್ ಆಗಿ ಸಾವಿರಾರು ಜನರ ಅದರ ಬಗ್ಗೆಯೇ ಚರ್ಚೆ ಮಾಡುವಂತಾಗುತ್ತದೆ. ಇನ್ನೂ ಹಲವು ಮತ್ತೆ ಮತ್ತೆ ನೋಡುವಂತಾಗಿ ಮುಖದಲ್ಲಿ ಬೇಡವೆಂದರೂ ನಗು ಉಕ್ಕಿಸುತ್ತದೆ.
ಇದೀಗ ಅಂಥದ್ದೇ ಒಂದು ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಯಾರದೋ ಸ್ಟೇಟಸ್‌ನಿಂದ (WhatAapp) ಬಂದಿರುವ ಈ ಮೆಸೇಜ್ ಈಗ ಅದೆಷ್ಟು ಜನಪ್ರಿಯತೆ ಪಡೆಯುತ್ತಿದೆ ಎಂದರೆ, ಜನರು ಅದನ್ನು ಸಾಕಷ್ಟು ಶೇರ್ ಮಾಡುತ್ತಿದ್ದಾರೆ. ತಮ್ಮ ಸ್ನೇಹಿತರೊಟ್ಟಿಗೆ ಈ ಬಗ್ಗೆ ಮಾತು, ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಮಕ್ಕಳು, ಮಧ್ಯ ವಯಸ್ಕರು ಹಾಗೂ ಮುದುಕರು ಎಂಬ ಭೇದಭಾವವಿಲ್ಲದೇ ಈ ಬಗ್ಗೆ ಮಾತನಾಡಿ ಮಜಾ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಅದೇನು? ಅದೊಂದು ಮೊಬೈಲ್ ಕುರಿತಾದ 'ಫೋಟೋ ಟೆಕ್ಸ್ಟ್'.
ಅಷ್ಟೊಂದು ಸತ್ಯವಂತರಾಗ್ಬೇಡಿ ಆ್ಯಂಕರ್ ಅನುಶ್ರೀ; ಈ ಕಾಮೆಂಟ್‌ಗೆ ಅವ್ರನ್ನ ಸುಮ್ನೆ ಬಿಡಲ್ಲ ಬಿಡಿ!
ಹೌದು, ಮಕ್ಕಳ ಬಗ್ಗೆ, ಮೊಬೈಲ್ (Mobile) ಬಗ್ಗೆ ಮೆಸೇಜ್ ಒಂದು ಹಲವರ ಮೊಬೈಲ್‌ಗಳಲ್ಲಿ, ವಾಟ್ಸ್‌ಅಪ್ ಸ್ಟೇಟಸ್ ಗಳಲ್ಲಿ ಓಡಾಡುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿದೆ. ಅದರಲ್ಲಿ 'ಬಾವಿಯಲ್ಲಿ ಮುಳುಗಿದ ಮಕ್ಕಳನ್ನು ಮೇಲಕ್ಕೆತ್ತಬಹುದು.. ಆದರೆ, ಮೊಬೈಲಿನಲ್ಲಿ ಮುಳುಗಿದ ಮಕ್ಕಳನ್ನು ಎತ್ತಲು ಸಾಧ್ಯವೇ ಇಲ್ಲ.. Take Care..' ಎಂದು ಬರೆದಿದ್ದು, 'ತಾಯಿಯೊಬ್ಬಳು ಮೊಬೈಲ್ ಒಳಕ್ಕೆ ಬಿದ್ದಿರುವ ಮಕ್ಕಳನ್ನು ಎತ್ತಲು ಪ್ರಯತ್ನಿಸುತ್ತಿರುವ ವ್ಯಂಗಚಿತ್ರವೊಂದು ರಾರಾಜಿಸುತ್ತಿದೆ. ಅದನ್ನು ನೋಡಿದ ಯಾರಾಗಾದರೂ ಒಮ್ಮೆ ನಗು ಉಕ್ಕಿ ಬರುತ್ತದೆ. ಅಷ್ಟು ಫನ್ನಿಯಾಗಿದೆ ಈ ಮೆಸೇಜ್!
ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್?
ರಿಯಾಲಿಟಿ ಎಂದರೆ, ಇಂದು ಮಕ್ಕಳು ಊಟವನ್ನು ಬೇಕಾದರೂ ಬಿಡುತ್ತಾರೆ. ಆದರೆ ಮೊಬೈಲನ್ನು ಮಾತ್ರ ಬಿಡುವುದಿಲ್ಲ ಎಂಬುದು ಪ್ರತಿಯೊಬ್ಬ ಪೋಷಕರ ಅಳಲು. ಊಟ ಮಾಡುವಾಗಲೂ ಮೊಬೈಲ್ ಮಕ್ಕಳ ಕೈ ನಲ್ಲಿ ಇರಲೇಬೇಕು, ಇಲ್ಲದಿದ್ದರೆ ಮಕ್ಕಳಿಗೆ ಊಟ ಮಾಡಿಸುವ ಪೋಷಕರ ಕೆಲಸ ಯಾವತ್ತೂ ಮುಗಿಯುವುದೇ ಇಲ್ಲ ಎಂಬುದು ಬಹುತೇಕ ಪೇರೇಂಟ್ಸ್ ಕಂಪ್ಲೇಂಟ್! ಇದು ಸತ್ಯ ಸಂಗತಿ ಕೂಡ ಎಂಬುದು ಹೆಚ್ಚಿನವರ ಸ್ವಂತ ಅನುಭವ ಸಹ ಆಗಿದೆ.
ಬೆಂಕಿ ತನಿಷಾಗೆ 'ಪೋರ್ನ್ ಮೂವಿ'ನಲ್ಲಿ ನಟಿಸ್ತೀರಾ ಅಂತ ಕೇಳಿ ಹಿಗ್ಗಾಮುಗ್ಗಾ ಉಗಿಸ್ಕೊಂಡ!
ಯಾವುದೇ ಮಕ್ಕಳು ಮಲಗಿರುವಾಗ ಬಿಟ್ಟರೆ ಕೈನಲ್ಲಿ ಎಲ್ಲಾ ವೇಳೆಯಲ್ಲಿ ಮೊಬೈಲ್ ಹಿಡಿದೇ ಇರುತ್ತಾರೆ ಎನ್ನಬಹುದು. ಅಥವಾ, ಅವರಿಗೆ ಊಟ ಮಾಡಿಸಲು, ಮಲಗಿಸಲು, ಅವರು ತಮ್ಮ ಮಾತುಕೇಳುವಂತೆ ಮಾಡಲು ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎನ್ನಬಹುದು. ಅಥವಾ, ಮೊಬೈಲ್ ಕೊಡದಿದ್ದರೆ ರಂಪಾಟ ಮಾಡಿ ಮಕ್ಕಳೇ ಪೋಷಕರಿಗೆ ಮೊಬೈಲ್ ಕೊಡುವಂತೆ ಅಭ್ಯಾಸ ಮಾಡಿಸಿದ್ದಾರೆ ಅಂತಲೂ ಹೇಳಬಹುದು. ಎರಡೂ ಸತ್ಯವೇ, ಆದರೆ ಯಾರ ಪಾಲಿಗೆ ಯಾವುದು ಸತ್ಯ ಎಂಬುದರಲ್ಲಷ್ಟೇ ವ್ಯತ್ಯಾಸ ಇದೆ, ಅದನ್ನುನೀವೇ ನಿಮ್ಮ ಅನುಭವದ ಮೂಲಕ ಅರ್ಥ ಮಾಡಿಕೊಳ್ಳಿ!
ರವಿಚಂದ್ರನ್ ತಬ್ಬಿಕೊಂಡ ಅನುಶ್ರೀ, ಹುಟ್ಟುಹಬ್ಬದಂದು ಮಗಳಾಗಿಬಿಟ್ರಾ ಅಂತಿದಾರಲ್ಲ!
ಒಟ್ಟಿನಲ್ಲಿ, ಮೊಬೈಲ್ ಎಂಬ ಮಾಯಾ ಜಗತ್ತು ಇಂದು ಮಕ್ಕಳಿಗೆ ಅನಿವಾರ್ಯ ಸಾಧನವಾಗಿದೆ. ಬಯಲಿನಲ್ಲಿ, ಮನೆಯಲ್ಲಿ ಆಟ ಆಡಬೇಕಾದ ಮಕ್ಕಳು ಮೊಬೈಲಿನಲ್ಲಿ ಆಟ ಆಡುತ್ತಾರೆ. ಮೊಬೈಲಿನಲ್ಲೇ ಬೆಟ್ಟಗುಡ್ಡಗಳನ್ನು, ನದಿ-ಸಮುದ್ರ-ಸಾಗರಗಳನ್ನು ನೋಡಿ ಅದೆಲ್ಲಾ ತಮಗೆ ಗೊತ್ತು ಎನ್ನತೊಡಗಿವೆ. ಹಿಮಾಲಯ ಪರ್ವತವನ್ನು ಕೊನೆಗೆ ಅಮೆರಕಾವನ್ನೂ ನಾನು ನೋಡಿದ್ದೇನೆ, ಮೊಬೈಲಿನಲ್ಲಿ ಎನ್ನುವ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಅಂದಹಾಗೆ, ಈ 'ಮಕ್ಕಳು ಮತ್ತು ಮೊಬೈಲ್' ಸ್ಟೋರಿ ಬರೆಯುತ್ತಾ ಹೋದರೆ 'ಮುಗಿಯದ ಕಥೆ'. ಈಗ ಇಷ್ಟು ಸಾಕು, ಏನಂತೀರಾ..?!
ರವಿಚಂದ್ರನ್ 'ರಾಮಾಚಾರಿ'ಗೆ ಡೇಟ್ಸ್ ಕೊಡದೇ ಸತಾಯಿಸಿದ್ದರೇ ಮಾಲಾಶ್ರೀ?