ಕೆಳಗೆ ಬಿದ್ದಿದ್ದು ತಿಂದ್ರೆ ಪರ್ವಾಗಿಲ್ವಾ?
ಮಕ್ಕಳು ಅವಾಗಿಯೇ ಊಟ ಮಾಡಿದರೆ ಚೆಂದ. ಆದರೆ, ಮೈ-ಕೈ ಮೇಲೆ ಬೀಳಿಸಿಕೊಂಡು ತಿಂದರೆ ಕೊಳಕು ಎನಿಸುತ್ತದೆ. ಅದರಲ್ಲಿಯೂ ಕೆಳಗೆ ಬಿದ್ದ ಆಹಾರ ತಿನ್ನುತ್ತವೆ ಎಂದು ಬ್ಲೇಮ್ ಮಾಡುತ್ತೇವೆ. ಅಷ್ಟಕ್ಕೂ ಕೆಳಗೆ ಬಿದ್ದ ಆಹಾರವನ್ನು ಮಕ್ಕಳು ತಿಂದರೆ ಓಕೆನಾ?
ಅದನ್ನು ತಿನ್ನಬೇಡ...ಕೊಳಕು - ಗಲೀಜು..' ಎಂದೆಲ್ಲ ಹೇಳಿ ಮಕ್ಕಳನ್ನು ಪೋಷಕರು ಬೆಳೆಸುತ್ತಾರೆ. ಇಷ್ಟೇ ಕ್ವಾಂಟಿಟಿ, ಇಂಥದ್ದೇ ಆಹಾರ ತಿನ್ನಬೇಕೆಂದು ಮಕ್ಕಳಿಗೆ ರಿಸ್ಟ್ರಿಕ್ಟ್ ಮಾಡುವುದಂತೂ ಕಾಮನ್. ಅವಕ್ಕೆ ಬೇಕಾದ ಆಹಾರವನ್ನು, ಅವರಿಷ್ಟದಂತೆ ತಿನ್ನಲು ಪೋಷಕರು ಸ್ವಾತಂತ್ರ್ಯವೇ ನೀಡುವುದಿಲ್ಲ. ಅಂಥದ್ದೊಂದು ಫ್ರೀಡಮ್ ಮಕ್ಕಳಿಗೆ ಅಗತ್ಯವೆನ್ನುವುದೂ ಬಹುತೇಕ ಪೋಷಕರ ಗಮನಕ್ಕೆ ಬಂದಿರುವುದಿಲ್ಲ.
- ಇನ್ನು ಮಕ್ಕಳು ಬಿದ್ದ ತರಕಾರಿ ತಿನ್ನುವುದಿಲ್ಲ. ಆದರೆ ಚಾಕೋಲೇಟ್ ಬಿದ್ದರೆ ತಕ್ಷಣ ಕೈ ಹಾಕಿ ತೆಗೆದುಕೊಳ್ಳುತ್ತದೆ. ಯಾರಾದರೂ ಪ್ರಶ್ನಿಸಿದರೆ 5 ಸೇಕೆಂಡ್ ರೂಲ್ ಎಂದು ಹೇಳಿ ಜಾರಿಕೊಳ್ಳುವುದು. ಆಹಾರ ಪದಾರ್ಥಗಳು ಕೆಳಗೆ ಬಿದ್ದಿದ್ದರೂ, ಅದನ್ನು ತಿಂದರೆ ಅದನ್ನು 5 ಸೆಕೆಂಡ್ ರೂಲ್ ಎನ್ನುತ್ತಾರೆ.
ಸುಟ್ಟಿದ್ದನ್ನು ತಿಂದರೆ ಬರಬಹುದು ಕ್ಯಾನ್ಸರ್...!
ಸಂಶೋಧನೆಯೊಂದರಲ್ಲಿ ಇದನ್ನು ಪ್ರೂವ್ ಮಾಡಲು ಒಂದು ಹುಡುಗಿಯ ಕೈಯಿಂದ ಆಹಾರ ಬಿಳುವಂತೆ ಮಾಡಲಾಗಿತ್ತು. ಆಹಾರ ಪದಾರ್ಥ ಬಿದ್ದು ನೆಲದ ಮೇಲೆ ಬ್ಯಾಕ್ಟಿರೀಯಾಗಳೂ ಇರುವಂತೆ ನೋಡಿಕೊಳ್ಳಲಾಗಿತ್ತು. ಆಹಾರ ಬಿದ್ದ ಕ್ಷಣದಿಂದ ಆಹಾರಕ್ಕೆ ಎಷ್ಟು ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುತ್ತದೆ ಎಂಬುದನ್ನೂ ಪರೀಕ್ಷಿಸಲಾಯಿತು. 5 ಸೆಕೆಂಡ್‌ವರೆಗೂ ಯಾವುದೇ ಹಾನಿಯಾಗದ ಕಾರಣ ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಅಪಾಯವಿಲ್ಲವೆಂಬುದನ್ನು ಪತ್ತೆ ಹಚ್ಚಲಾಯಿತು. ಇದನ್ನೇ 5 ಸೆಕೆಂಡ್ ರೂಲ್ ಎನ್ನುತ್ತಾರೆ.
ಹಣ್ಣು, ತರಕಾರಿ ಮೇಲಿನ ಬಿಲ್ ಕೋಡನ್ನು ಇಗ್ನೋರ್ ಮಾಡ್ಬೇಡಿ!
ಆದರೆ, ಕೆಲವೊಮ್ಮ ನೆಲದ ಮೇಲೆ ಎಷ್ಟು ಬ್ಯಾಕ್ಟೀರಿಯಾಗಳಿವೆ ಎಂಬುದರ ಮೇಲೆ ಕೆಳಗೆ ಬಿದ್ದ ಆಹಾರವನ್ನು ಸೇವಿಸುವುದು ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ನಿರ್ಧರಿಸುವುದು ಒಳ್ಳೆಯದು.