ತೇಲುವ ಕಂಬ, ನಾಗ ಲಿಂಗ.... ಶಿಲ್ಪ ಕಲೆಯನ್ನೇ ತುಂಬಿಕೊಂಡಿರುವ ನಯನ ಮನೋಹರ ಮಂದಿರ ಲೇಪಾಕ್ಷಿ!

ದೇಶದಲ್ಲಿ ರೌರಾಣಿಕ ಹಿನ್ನೆಲೆಯುಳ್ಳ ಸಾವಿರಾರು ದೇವಾಲಯಗಳಿವೆ. ಅವುಗಳಲ್ಲಿ ಒಂದು ಲೇಪಾಕ್ಷಿ. ಸೀತಾಮಾತೆ, ಶಿವ ಪಾರ್ವತಿಯರ ಕಥೆಯನ್ನು ಜೊತೆಗೆ ವಿಸ್ಮಯಗಳನ್ನು ಹೇಳುವ ಈ ಸುಂದರ ಮನೋಹರ ತಾಣದ ಬಗ್ಗೆ ನೀವು ತಿಳಿಯಲೇಬೇಕು. 

About The Land of Legends Lepakshi Temple Andhra Pradesh

ಎಲ್ಲಿ ನೋಡಿದರೆ ಅಲ್ಲಿ ಶಿಲ್ಪಕಲೆಗಳ ಅದ್ಭುತ ಲೋಕ, ದೈವೀಕತೆ ಭರಿಸುವ ವೀರಭದ್ರ ಸ್ವಾಮಿ ದೇವಾಲಯ, ಬೃಹತ್ ಶಿವಲಿಂಗದ ಹಿಂದೆ ನಿಂತಿರುವ ಏಳು ಹೆಡೆ ನಾಗ ಇರುವ ನಾಗಲಿಂಗ, ಸೀತಾಮಾತೆಯ ಪಾದದ ಗುರುತು, 

ಶಿವ - ಪಾರ್ವತೀ ಮದುವೆಗಾಗಿ ನಿಮರ್ಮಾಣವಾದ ಕಲ್ಯಾಣ ಮಂಟಪ ಇವೆಲ್ಲಾ ಸೇರಿ ಒಂದು ಅದ್ಭುತ ಲೋಕವನ್ನು ಸೃಷ್ಟಿ ಮಾಡಿದ ತಾಣ ಅಂದರೆ ಅದು ಲೇಪಾಕ್ಷಿ. 

ಲೇಪಾಕ್ಷಿ ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಹಿ೦ದೂಪುರ್ ನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಬೆ೦ಗಳೂರು ನಗರದಿ೦ದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ಸುಂದರ ದೇವಾಲಯಕ್ಕೆ ನೀವು ಭೇಟಿ ನೀಡಿದರೆ ಪುರಾಣದ ಹಲವಾರು ವಿಷಯಗಳು ನಿಮಗೆ ತಿಳಿಯುತ್ತವೆ. 

ಈ ಊರಿನ ಮನೆ, ಅಂಗಡಿಗೆ ಇಲ್ಲ ಬೀಗ!

ಈ ಹೆಸರೇಕೆ ಬಂತು?

ಸೀತಾಮಾತೆಯನ್ನು ರಾವಣನು ಅಪಹರಿಸಿ ಆಕಾಶ ಮಾರ್ಗದಲ್ಲಿ ಸಾಗಿಸುತ್ತಿದ್ದಾಗ, ಮಾರ್ಗಮಧ್ಯೆ ಜಟಾಯು ಪಕ್ಷಿಯು ರಾವಣನಿ೦ದ ಸೀತಾಮಾತೆಯನ್ನು ಬಿಡಿಸುವುದಕ್ಕಾಗಿ ರಾವಣನೊಡನೆ ಕಾದಾಟಕ್ಕಿಳಿಯಿತು. ಈ ಕಾದಾಟದಲ್ಲಿ ತೀವ್ರವಾಗಿ ಗಾಯಗೊ೦ಡ ಜಟಾಯು ಹಾರಲಾರದೆ ಇದೇ ಸ್ಥಳದಲ್ಲಿ ನೆಲಕ್ಕೆ ಬಿದ್ದಿತು. ಸೀತಾಮಾತೆಯನ್ನು ಅನ್ವೇಷಿಸುತ್ತಾ ಶ್ರೀ ರಾಮಚ೦ದ್ರನು ಅದೇ ಮಾರ್ಗದಲ್ಲಿ ಆಗಮಿಸಿದಾಗ, ಗಾಯಗೊ೦ಡು ನರಳುತ್ತಾ ಬಿದ್ದಿದ್ದ ಜಟಾಯುವನ್ನು ಶ್ರೀ ರಾಮ ನೋಡುತ್ತಾನೆ. ಆಗ ಶ್ರೀ ರಾಮನ ಬಾಯಿಯಿ೦ದ 'ಲೇ ಪಕ್ಷಿ' ಎ೦ಬ ಉದ್ಘಾರವು ಹೊರಬ೦ದಿತು. ಇಲ್ಲಿನ ಸ್ಥಳೀಯ ಭಾಷೆಯ ಪ್ರಕಾರ ಇದರ ಅರ್ಥವು 'ಎದ್ದೇಳು ಪಕ್ಷಿಯೇ' ಎ೦ದಾಗಿರುತ್ತದೆ. ನಂತರ ಇಲ್ಲಿಗೆ ಲೇಪಾಕ್ಷಿ ಎಂಬ ಹೆಸರು ಬಂತು. 

ಮತ್ತೇನಿದೆ ಇಲ್ಲಿ?

ವೀರಭದ್ರ ಸ್ವಾಮಿ ದೇವಸ್ಥಾನ: ಆ೦ಧ್ರಪ್ರದೇಶದ ಸುಪ್ರಸಿದ್ಧ ದೇವಸ್ಥಾನವಾಗಿರುವ ವೀರಭದ್ರ ದೇವಸ್ಥಾನವೂ ಲೇಪಾಕ್ಷಿಯಷ್ಟೇ ಪ್ರಸಿದ್ದಿ ಪಡೆದಿದೆ. ಈ ದೇವಸ್ಥಾನದಲ್ಲಿ ಸ್ಥಳೀಯ ದೇವತೆಯಾಗಿರುವ ವೀರಭದ್ರ ಸ್ವಾಮಿಯನ್ನು ಸ್ಥಳೀಯರು ಆರಾಧಿಸುತ್ತಾರೆ.  

ಸೀತೆಯ ಪದದ ಗುರುತು: ಇಲ್ಲಿ 8 ಅಡಿ ಉದ್ದದ ಪಾದದ ಗುರುತು ಇದೆ. ಇದು ಸೀತಾ ಮಾತೆಯ ಪಾದದ ಗುರುತು ಎಂದು ನಂಬಲಾಗಿದೆ. ಯಾವುದೋ ಮೂಲದಿಂದ ಬಂದ ನೀರು ಇಲ್ಲಿ ಯಾವಾಗಲೂ ಇರುತ್ತದೆ.  ಇದನ್ನ ನೋಡಲು ಇಂದಿಗೂ ಜನರು ಉತ್ಸಾಹದಿಂದ ಇಲ್ಲಿ ಬರುತ್ತಾರೆ. 

ರಾಜಸ್ಥಾನದಲ್ಲೊಂದು ಕುಲ್ಧಾರಾವೆಂಬ ಶಾಪಗ್ರಸ್ಥ ತಾಣ...!

ನಂದಿ ವಿಗ್ರಹ: ವೀರಭದ್ರ ದೇವಸ್ಥಾನಕ್ಕೆ ಅತೀ ಸನಿಹದಲ್ಲಿಯೇ ಸುಂದರವಾದ ಬೃಹತ್ ನಂದಿ ವಿಗ್ರಹವಿದೆ.  ಈ ವಿಗ್ರಹದ ಗಾತ್ರ 4.5 ಮೀಟರ್‌ಗಳಷ್ಟು ಎತ್ತರ ಹಾಗೂ 8.23 ಮೀಟರ್‌ಗಳಷ್ಟು ಅಗಲವಾಗಿದ್ದು, ಈ ನ೦ದಿ ವಿಗ್ರಹವು ಭಾರತ ದೇಶದ ಅತೀ ದೊಡ್ಡದಾದ ನ೦ದಿಯ ವಿಗ್ರಹವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಗಾಳಿಯಲ್ಲಿ ತೇಲುತ್ತೆ ಕಂಬ: ಈ ಸ್ತಂಭ ಇಲ್ಲಿಯ ಪ್ರಮುಖ ಆಕರ್ಷಣೆ. ಇದನ್ನು ವಿಸ್ಮಯ ಎಂದೇ ಹೇಳಬಹುದು. ಇದು ಯಾವುದೇ ಆಧಾರವಿಲ್ಲದೆ ನಿಂತಿದೆ. ಇದನ್ನು ಹೇಗೆ ರಚಿಸಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ಯಾವ ತಂತ್ರಜ್ಞಾನದಿಂದ ಇದು ಸಾಧ್ಯವಾಗಿದೆಯೆಂದು ಸಹ ತಿಳಿಯಲು ಸಾಧ್ಯವಾಗಿಲ್ಲ.ಈ ಕಂಬದ ಕೆಳಗಿನಿಂದ ಬಟ್ಟೆ, ಪೇಪರ್ ಅನ್ನು ಸುಲಭವಾಗಿ ನಾಲ್ಕು ಕಡೆಯಿಂದಲೂ ಹಾಕಿ ತೆಗೆಯಬಹುದು. 

ನಾಗಲಿಂಗ: ದೇವಾಯದ ಹೊರ ಭಾಗ ಬೃಹತ್ ನಾಗಲಿಂಗವಿದೆ. ಇದನ್ನು ಬಹಳ ಕಡಿಮೆ ಸಮಯದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಏಳು ಹೆಡೆಯ ನಾಗವು ಶಿವಲಿಂಗವನ್ನು ಸುತ್ತಿದೆ. ಇದನ್ನು ನೋಡಿದರೆ ಒಂದು ಕ್ಷಣ ಭಯಾನಕವಾಗಿ, ಹಾಗೂ ಮೈ ರೋಮಾಂಚನವಾಗುವಂತೆ ಕಾಣಿಸುತ್ತದೆ. ಅಂತಹ ಸುಂದರ ಕಲಾಕೃತಿ ಇದು. 

ಮನೋಕಾಮನೆ ಈಡೇರಿಸೋ ಸಂತಾನೇಶ್ವರ ಮಹಾದೇವ...

ಕಲ್ಯಾಣ ಮಂಟಪ: ಶಿವ ಮತ್ತು ಪಾರ್ವತಿ ದೇವಿ ಕಲ್ಯಾಣ ಮಹೋತ್ಸವಕ್ಕಾಗಿ ಮಂಟಪವೊಂದನ್ನು ರಚಿಸಲು ರಾಜರು ಮುಂದಾದರು. ಆದರೆ ಕಾರಣಾಂತರಗಳಿಂದ ಮಂಟಪವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. 

ಇನ್ನು ಕೆಲವರು ಹೇಳುವಂತೆ ಈ ಸ್ಥಳದಲ್ಲಿಯೇ ಶಿವ ಮತ್ತು ಪಾರ್ವತಿಯ ಮದುವೆ ನಡೆದಿದೆ. ಆದರೆ ಮೂಲ ಕತೆ ಏನೆಂದು ಸರಿಯಾಗಿ ಮಾಹಿತಿ ಇಲ್ಲ. 

Latest Videos
Follow Us:
Download App:
  • android
  • ios