ಪಾತಾಳ ಲೋಕದ ಬಗ್ಗೆ ನೀವು ಸಾಕಷ್ಟು ಕೇಳಿರುತ್ತೀರಿ. ಅದೆಷ್ಟೋ ಪೌರಾಣಿಕ ಕತೆಗಳಲ್ಲಿ ಪಾತಾಳ ಲೋಕದ್ದೇ ಪ್ರಪಂಚ. ಈ ಭೂಮಿಯಲ್ಲೂ ಪಾತಾಳ ಲೋಕವಿದೆ. ಅಲ್ಲಿ ನೆಲದ ಕೆಳಗೆ ಮನೆ ಮಾಡಿಕೊಂಡು ಜನರು ಬದುಕುತ್ತಿದ್ದಾರೆ. ಹೀಗ್ಯಾಕೆ ಇಲ್ಲಿನ ಜನ ಅಂತೀರಾ? ಯಾಕೆ ಅಲ್ಲಿನ ಜನ ಭೂಮಿಯ ಕೆಳಗೆ ಮನೆ ಮಾಡಿ ಜೀವಿಸುತ್ತಾರೆ, ಎಂದು ಕೇಳಿದರೆ ನೀವು ಶಾಕ್ ಆಗುತ್ತೀರಿ. 

ಆಫ್ರಿಕಾದ ಟ್ಯುನೀಷಿಯಾದ ಡಜ್‌ಬೆಲ್ ದಾಹರ ಪ್ರಾಂತ್ಯವೇ ಇಂಥದ್ದೊಂದು ವಿಶೇಷ ಊರು. ಇಲ್ಲಿ ಈಗಲೂ ಜನರು ಹಲವು ವರ್ಷಗಳ ಹಿಂದಿನ ಜನರಂತೆಯೇ ಭೂಮಿಯ ಕೆಳಗೆ ಮನೆ ಮಾಡಿ ವಾಸಿಸುತ್ತಾರೆ. ಈ ಅಂಡರ್ ಗ್ರೌಂಡ್ ನಗರದ ಹೆಸರು ಟಿಜ್ಮ. 

ಕೆಬಲ್ ಸ್ಪೀಯನ್- ಕಾಂಬೋಡಿಯಾದಲ್ಲಿದೆ ಸಾವಿರ ಲಿಂಗಗಳ ನದಿ!

100 ವರ್ಷಗಳ ಹಿಂದಿನ ಈ ಮನೆಯಲ್ಲಿ ಇಂದಿಗೂ ಜನ ವಾಸಿಸುತ್ತಾರೆ. ಹಾಗಂತ ಇವರ ಜೀವನವೂ ಕಡು ಬಡತನದಿಂದೇನೂ ಇಲ್ಲ. ಈ ಅಂಡರ್ ಗ್ರೌಂಡ್ ಮನೆಯೊಳಗೇ ಎಲ್ಲಾ ರೀತಿಯ ವ್ಯವಸ್ಥೆಯೂ ಇದೆ. ಇವರ ತೋಟ, ಕೃಷಿ ಅಲ್ಲೇ ಇರುವುದರಿಂದ ಅಲ್ಲೇ ಮನೆ ಮಾಡಿಕೊಂಡು, ವಾಸಿಸುತ್ತಿದ್ದಾರೆ. ಹೆಚ್ಚಿನವರು ಈ ನಗರವನ್ನು ಬಿಟ್ಟು ಸಿಟಿಗೆ ಹೋಗಿ ನೆಲೆಸಿದ್ದಾರೆ. 

ಅಂಡರ್ ಗ್ರೌಂಡಿನಲ್ಲಿ ವಾಸಿಸುವವರು ತಮಗೆ ನಮ್ಮ ಭೂಮಿ ಮತ್ತು ಇಲ್ಲಿನ ಸಂಸ್ಕೃತಿ ತುಂಬಾ ಇಷ್ಟ. ಆದುದರಿಂದ ನಾವು ಈ ಊರನ್ನು ಬಿಟ್ಟು ಹೋಗೋದಿಲ್ಲ ಎಂದು ಹೇಳಿದ್ದಾರೆ. ಈ ಸುಂದರ ಗ್ರಾಮವನ್ನು ನೋಡಲು ದೂರ ದೂರ ಊರುಗಳಿಂದ ಪ್ರವಾಸಿಗರೂ ಬರುತ್ತಾರೆ. 

ಭೂಮಿ ಮೇಲೆ ಇಂಥ ಸ್ಥಳಗಳಿವೆ ಅಂದ್ರೆ ನೀವು ನಂಬೋಲ್ಲ!

ಇಲ್ಲಿ ಜನರು ಅಂಡರ್ ಗ್ರೌಂಡ್‌ನಲ್ಲಿ ಮನೆ ಮಾಡಲು ಮುಖ್ಯ ಕಾರಣ ಇಲ್ಲಿ ಹೆಚ್ಚು ಬಿಸಿ ಗಾಳಿ ಬೀಸುತ್ತದೆ. ಈ ಬಿಸಿಯಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜನ ಮಣ್ಣಿನ ಮನೆಯಲ್ಲಿ ವಾಸಿಸುತ್ತಾರೆ. ಇಲ್ಲವೇ ಈ ರೀತಿಯಾಗಿ ಅಂಡರ್ ಗ್ರೌಂಡ್‌ನಲ್ಲಿಯೇ ವಾಸಿಸುತ್ತಾರೆ.