Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಪತ್ತೆ: ಹೈಅಲರ್ಟ್ ಆದ ಆರೋಗ್ಯ ಇಲಾಖೆ

ಝೀಕಾ ವೈರಸ್ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ 69 ಕಡೆಗಳಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದರು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ 6 ಕಡೆಗಳಲ್ಲಿ ಕೀಟಶಾಸ್ತ್ರಜ್ಞರಿಂದ ಸೊಳ್ಳೆಗಳ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಸೊಳ್ಳೆಗಳಲ್ಲಿ ಝೀಕಾ ವೈರಸ್ ಇರುವುದು ಪತ್ತೆಯಾಗಿದ್ದು, ಇದೀಗ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. 

Zika Virus Found in Chikkaballapur grg
Author
First Published Nov 1, 2023, 11:02 PM IST

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಬಳ್ಳಾಪುರ(ನ.01):  ಕೇರಳ ಬೆನ್ನಲ್ಲೇ ಝೀಕಾ ವೈರಸ್ ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸೊಳ್ಳೆಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗರ್ಭಿಣಿಯರು ಮತ್ತು ಜ್ವರದಿಂದ ಬಳಲುತ್ತಿದ್ದವರ ರಕ್ತವನ್ನು ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ.

ಝೀಕಾ ವೈರಸ್ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ 69 ಕಡೆಗಳಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಪರೀಕ್ಷೆ ನಡೆಸಿದ್ದರು. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ 6 ಕಡೆಗಳಲ್ಲಿ ಕೀಟಶಾಸ್ತ್ರಜ್ಞರಿಂದ ಸೊಳ್ಳೆಗಳ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಸೊಳ್ಳೆಗಳಲ್ಲಿ ಝೀಕಾ ವೈರಸ್ ಇರುವುದು ಪತ್ತೆಯಾಗಿದ್ದು, ಇದೀಗ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಮುಂಜಾಗ್ರತ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು   ತಲಕಾಯಲಬೆಟ್ಟ ವ್ಯಾಪ್ತಿಯ 5 ಕಿ.ಮೀ. ಸುತ್ತಮುತ್ತಲ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಬರ ಪರಿಹಾರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್

ರಕ್ತದ ಮಾದರಿ ಲ್ಯಾಬ್ಗೆ ರವಾನೆ-  ಝೀಕಾ ವೈರಸ್  ಭೀತಿಯ ಮಧ್ಯೆ  ತಲಕಾಯಲಬೆಟ್ಟದಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳಲ್ಲಿ ಝೀಕಾ ವೈರಸ್ ಇರುವುದು ದೃಢಪಡಿಸಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ  ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ತಲಕಾಯಲಬೆಟ್ಟದಿಂದ 5 ಕಿ.ಮೀ. ವ್ಯಾಪ್ತಿಯ ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಜ್ವರದಿಂದ ಬಳಲುತ್ತಿದ್ದ  ಏಳು ಮಂದಿ ಹಾಗೂ  30 ಮಂದಿ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಇವರೆಲ್ಲರ ರಕ್ತವನ್ನು ಪಡೆದು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಗರ್ಭಿಣಿಯರಿಗೆ ಹೆಚ್ಚು ಮಾರಕ ತರಿಸಲಿರೋ ಝೀಕಾ

ಝೀಕಾ ಎನ್ನುವುದು ವೈರಸ್‌ನಿಂದ ಹರಡುವ ಸೋಂಕು. ಇದು ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ತೋರಲಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಣಾಂತಿಕ ರೋಗವಾಗಿ ಬದಲಾಗುತ್ತದೆ. ಝೀಕಾ ಸ್ವತಃ ಮಾರಣಾಂತಿಕವಲ್ಲದಿದ್ದರೂ ಅಪಾಯ ತಂದೊಡ್ಡಲಿದೆ. ಈ ರೋಗದ ಲಕ್ಷಣಗಳು ಒಂದು ವಾರದೊಳಗೆ ಕಣ್ಮರೆಯಾಗುತ್ತವೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಹೀಗಾಗಿ ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ ವೈದ್ಯರು.  ಸೋಂಕಿತ ಹೆಣ್ಣು ಈಡಿಯಸ್ ಎಗಿಫ್ಟಿ ಮತ್ತು ಈಡಿಯಸ್ ಅಲ್ಬೋಪಿಕ್ಟಸ್ ಸೊಳ್ಳೆಗಳಿಂದ ಜೀಕಾ ವೈರಸ್ ಮನುಷ್ಯನಿಗೆ ಹರಡುತ್ತದೆ. ಸೊಳ್ಳೆಯು ಸೋಂಕಿತ ವ್ಯಕ್ತಿಯನ್ನು ಕಚ್ಚಿದ ನಂತರ, ಝೀಕಾ ವೈರಸ್ ಸೊಳ್ಳೆಯ ವ್ಯವಸ್ಥೆಯನ್ನು ಪ್ರವೇಶಿಸುತ್ತದೆ, ಅದರ ದೇಹದಲ್ಲಿ ಪುನರಾವರ್ತಿಸುತ್ತದೆ ಮತ್ತು ಅದರ ಲಾಲಾರಸ ಗ್ರಂಥಿಗಳಿಗೆ ಹರಡುತ್ತದೆ. ಈ ವೈರಸ್ ಸೊಳ್ಳೆಯಲ್ಲಿ ಎಂಟರಿಂದ ಹತ್ತು ದಿನಗಳವರೆಗೆ ಕಾವುಕೊಡುತ್ತದೆ. ಅಂತಹ ಸೊಳ್ಳೆ ಕಚ್ಚಿದಾಗ ವೈರಸ್ ವ್ಯಕ್ತಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ ನಂತರ ವ್ಯಕ್ತಿಯಲ್ಲಿ ಝೀಕಾ ವೈರಸ್‌ನ ಕಾವು ಕಾಲಾವಯು ಸುಮಾರು ಮೂರರಿಂದ 12 ದಿನಗಳವರೆಗೆ ಇರುತ್ತದೆ.

ಮಹಾಕಾವ್ಯ ರಚನೆ ಮೂಲಕ ಆದಿಕವಿಯಾದ ವಾಲ್ಮೀಕಿ: ಸಚಿವ ಎಂ.ಸಿ.ಸುಧಾಕರ್

ಈ ಸೋಂಕಿಗೆ ಔಷಧಿ ಇಲ್ಲ

ಝೀಕಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧಿ  ಇಲ್ಲ.  ವಿಜ್ಞಾನಿಗಳು ದೀರ್ಘಕಾಲದವರೆಗೆ ವೈರಸ್ ಹಾನಿಕರವಲ್ಲ ಅಂತ ಭಾವಿಸಿದ್ದರು,ಸದ್ಯ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ನಿಮ್ಮ ವೈದ್ಯರು ಜ್ವರ ಕಡಿಮೆ ಮಾಡುವವರು ಮತ್ತು ವಾಂತಿ ಮತ್ತು ದದ್ದುಗಳಿಗೆ ಔಷಧಿಗಳನ್ನು ಸೂಚಿಸಬಹುದು. ಸದ್ಯ ಝೀಕಾ ವೈರಸ್ ತಡೆಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ ಮನುಷ್ಯರಲ್ಲಿ ಝೀಕಾ ವೈರಸ್ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಗರ್ಭಿಣಿಯರ ಮತ್ತು ಜ್ವರ ಪೀಡಿತರ ಒಟ್ಟು 37 ಮಂದಿಯ ರಕ್ತದ ಮಾದರಿಗಳನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಝೀಕಾ ವೈರಸ್ ಕಂಡುಬಂದ ತಲಕಾಯಲಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 

Follow Us:
Download App:
  • android
  • ios