ಚಾಮರಾಜನಗರ: ಹೆಣ್ಣು ಭ್ರೂಣ ಹತ್ಯೆ ತಡೆಗೆ ಕನ್ಯಾಕುಮಾರಿಯಿಂದ ದೆಹಲಿಗೆ ಯುವಕನ ಪಾದಯಾತ್ರೆ
ದಾವಣಗೆರೆ ಜಿಲ್ಲೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಈ ಜಕ್ಕಳ್ಳಿ ಎಂಬ ಯುವಕ ಹೊಸತೊಂದು ಕ್ರಾಂತಿಗೆ ಮುಂದಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಹಾಗೂ ಪತ್ತೆ ಹಚ್ಚುವುದನ್ನ ತಪ್ಪಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ತಾಯಿಯ ಹೊಟ್ಟೆಯಲ್ಲಿರುವ ಬ್ರೂಟಕ್ಕೂ ಡಿಜಿಟಲ್ ಕೋಡ್ ನೀಡಬೇಕೆಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು ಕನ್ಯಾ ಕುಮಾರಿಯಿಂದ ದೆಹಲಿಯವರೆಗೆ ಪಾದ ಯಾತ್ರೆಯನ್ನ ಕೈಗೊಂಡಿದ್ದಾರೆ.
ವರದಿ- ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಅ.08): ಸರ್ಕಾರಗಳು ಅದೆಷ್ಟೇ ಬೊಬ್ಬೆ ಹೊಡ್ರು ನಮ್ಮ ಜನಗಳಿಗೆ ಮಾತ್ರ ಬುದ್ದಿ ಬರುವ ಹಾಗೆ ಕಾಣ್ತಾಯಿಲ್ಲ. ಹೆಣ್ಣು ಭ್ರೂಣ ಪತ್ತೆ ಹಚ್ಚುವುದು ಹತ್ಯೆ ಮಾಡುವುದು ನಿಷಿದ್ಧವೆಂದು ಕಾನೂನು ತಂದ್ರು ಜನ ಮಾತ್ರ ಕ್ಯಾರೆ ಅಂತಿಲ್ಲ. ಭ್ರೂಣ ಹತ್ಯೆಗೆ ಕಡಿವಾಣ ಹಾಕ್ಬೇಕೆಂದು ಹೊನ್ನಾಳಿಯ ಯುವಕನೊರ್ವ ಹೊಸ ಸಾಹಸಕ್ಕೆ ಕೈ ಹಾಕಿದ್ದಾನೆ ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.
ಟ್ರ್ಯಾಕ್ ಪ್ಯಾಂಟ್ ಟಿ ಶರ್ಟ್ ಹಾಕಿಕೊಂಡು ಪಾದಯಾತ್ರೆಗೆ ಸಿದ್ದವಾಗಿರೊ ವ್ಯಕ್ತಿ.. ಗೂಡ್ಸ್ ಗಾಡಿಯಲ್ಲಿ ಅಡಿಗೆ ಮಾಡುವುದಕ್ಕೆ ಸುಸ್ತಾದಾಗ ವಿಶ್ರಮಿಸೋದಕ್ಕೆ ಬೆಡ್ ನ ವ್ಯವಸ್ಥೆ ತಮ್ಮ ಕಾರಿನ ಮೇಲೆ ಜಾಗೃತಿ ಮೂಡಿಸುವ ಸ್ಟಿಕ್ಕರಿಂಗ್.. ಈ ಎಲ್ಲಾ ದೃಶ್ಯ ಕಣ್ಣಿಗೆ ಕಂಡಿದ್ದು ಚಾಮರಾಜನಗರದ ಪ್ರವಾಸಿ ಮಂದಿರದ ಬಳಿ. ಹೌದು ದಾವಣಗೆರೆ ಜಿಲ್ಲೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಈ ಜಕ್ಕಳ್ಳಿ ಎಂಬ ಯುವಕ ಹೊಸತೊಂದು ಕ್ರಾಂತಿಗೆ ಮುಂದಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಹಾಗೂ ಪತ್ತೆ ಹಚ್ಚುವುದನ್ನ ತಪ್ಪಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾನೆ. ತಾಯಿಯ ಹೊಟ್ಟೆಯಲ್ಲಿರುವ ಬ್ರೂಟಕ್ಕೂ ಡಿಜಿಟಲ್ ಕೋಡ್ ನೀಡಬೇಕೆಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು ಕನ್ಯಾ ಕುಮಾರಿಯಿಂದ ದೆಹಲಿಯವರೆಗೆ ಪಾದ ಯಾತ್ರೆಯನ್ನ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಸಫಾರಿ ಬಳಿಕ ಬಂಡೀಪುರದ ಚಿತ್ರಣವೇ ಬದಲು: ಪ್ರವಾಸಿಗರಿಗೆ ಸಿಗ್ತಿದೆ 1 ಕೋಟಿ ರೂ. ಇನ್ಶೂರೆನ್ಸ್..!
ನೆರೆಯ ರಾಜ್ಯ ಕೇರಳಕ್ಕೆ ಹೊಲಿಕೆ ಮಾಡಿ ಕೊಂಡರೆ ನಮ್ಮ ರಾಜ್ಯದ ಗಂಡು ಹೆಣ್ಣು ಸಮಪಾತವನ್ನ ಕಲೆ ಹಾಕಿದ್ರೆ ನೂರು ಜನಕ್ಕೆ ಶೇಕಡ 92 ರಷ್ಟು ಮಾತ್ರ ಹೆಣ್ಣುಗಳ ಸಂಖ್ಯೆಯಿದೆ. ಹೆಣ್ಣೂ ಬ್ರೂಣವನ್ನ ಪತ್ತೆ ಹಚ್ಚುವುದು ತಾಯಿಯ ಹೊಟ್ಟೆಯಲ್ಲೇ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಿವೆ ಹಾಗಾಗಿ ಗರ್ಭಧಾರಣೆ ಮಾಡಿದ ತಾಯಿಯ ಹೊಟ್ಟೆಯಲ್ಲಿರುವ ಬ್ರೂಣಕ್ಕೂ ಒಂದು ಡಿಜಿಟಲ್ ಕೋಡ್ ನೀಡಿದ್ರೆ ಹೆಣ್ಣೂ ಬ್ರೂಣ ಹತ್ಯೆ ತಡೆಯ ಬಹುದಾಗಿದೆ. ಪ್ರಧಾನಿ ಮೋದಿಯವರ ಈ ಡಿಜಿಟಲ್ ಕೋಡ್ ವಿಚಾರವನ್ನ ಪ್ರಸ್ಥಾಪಿಸಲು ಹಾಗೂ ದೇಶಾದ್ಯಂತ ಈ ಕಾನೂನು ತಂದ್ರೆ ಹೆಣ್ಣು ಬ್ರೂಣ ಹತ್ಯೆಗೆ ಬ್ರೇಕ್ ಹಾಕ ಬಹುದಾಗಿದೆ ಹಾಗಾಗಿ ಕನ್ಯಾಕುಮಾರಿಯಿಂದ ದೆಹಲಿಯವರ್ಗೂ ಜಕ್ಕಳ್ಳಿಯವರು ಪಾದಯಾತ್ರೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಸೆಳೆಯಲು ಮುಂದಾಗಿದ್ದಾರೆ.
ಅದೇನೆ ಹೇಳಿ ಇನ್ನು ಕೂಡ ಸ್ಕ್ಯಾನಿಂಗ್ ನಡೆಸುವ ವೇಳೆ ಲಿಂಗ ಪತ್ತೆ ಹಚ್ಚುವುದು ಒಂದು ವೇಳೆ ಹೆಣ್ಣಾಗಿದ್ರೆ ಅದನ್ನ ಅಭಾಷನ್ ಮಾಡಿಸುವ ಕೆಲಸ ಎಗ್ಗಿಲ್ಲದೆ ಸಾಗುತ್ತಿದೆ. ಇದೆಲ್ಲದಕ್ಕೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬ್ರೇಕ್ ಹಾಕಲೇ ಬೇಕಿದೆ. ಇಲ್ದೆ ಹೋದ್ರೆ ಮುಂಬರುವ ದಿನಗಳಲ್ಲಿ ಮದ್ವೆಯಾಗಲು ಹೆಣ್ಣು ಸಿಗದೆ ಮತ್ತಷ್ಟು ಪರದಾಡುವ ಪರಿಸ್ಥಿತಿ ಎದುರಾಗಲಿರುವುದಂತು ಪಕ್ಕಾ ಆಗಿದೆ.